ಮಕ್ಕಳಿಗೆ ಕೋವಿಡ್‌ ವ್ಯಾಕ್ಸಿನ್

ಗಾಗಲೇ 18 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ಅಭಿಯಾನ 100 ಕೋಟಿ ದಾಟಿದೆ ಹಾಗೂ ಡಿಸೆಂಬರ್ ವೇಳೆಗೆ 200 ಕೋಟಿ ದಾಟಬಹುದು. ಶೇಕಡಾ 30ರಷ್ಟು ಜನರಿಗೆ 2 ಡೋಸ್ ವ್ಯಾಕ್ಸಿನ್ ಸಿಕ್ಕಿದೆ.

Leah Malloy, 6, receives the Pfizer COVID-19 vaccine for children 5 to 11 years from Lurie Children’s hospital registered nurse Jeanne Bailey at Lurie Children’s hospital Friday, Nov. 5, 2021, in Chicago. Health officials hailed shots for kids ages 5 to 11 as a major breakthrough after more than 18 months of illness, hospitalizations, deaths and disrupted education. (AP Photo/Nam Y. Huh)

 

18 ವರ್ಷದ ಒಳಗಿನ ಮಕ್ಕಳಿಗೆ ವ್ಯಾಕ್ಸಿನ್
ಮಕ್ಕಳಲ್ಲಿ ಕೋವಿಡ್ ರೋಗ ತೀವ್ರ ತರಹದ ಪರಿಣಾಮ ಬೀರಿ ಮಾರಣಾಂತಿಕವಾಗುವುದಿಲ್ಲ. ಭಾರತದಲ್ಲಿನ ಸಂಖ್ಯಾಂಶ ಪ್ರಕಾರ 10 ವರ್ಷದ ಒಳಗಿನ ಮಕ್ಕಳಲ್ಲಿ 0.1% ಮಾರಣಾಂತಿಕವಾದರೆ 10-18 ವರ್ಷದ ಮಕ್ಕಳಲ್ಲಿ ಕೇವಲ 0.04% ಮಾರಣಾಂತಿಕವಾಗಬಹುದು.
ಈಗಾಗಲೇ ಶೇ. 60ರಷ್ಟು ಮಕ್ಕಳಲ್ಲಿ ರೋಗ ನಿರೋಧಕ ಪ್ರತಿಕಾಯ ಕಂಡುಬಂದಿದ್ದು ಹೆಚ್ಚಿನವರಲ್ಲಿ ಯಾವುದೇ ರೋಗ ಲಕ್ಷಣ ಕಂಡುಬಂದಿಲ್ಲ, ಇನ್ನು 2 ವರ್ಷದ ಒಳಗಿನ ಮಕ್ಕಳಲ್ಲಿ , ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಲಸಿಕೆ ಕೊಟ್ಟಲ್ಲಿ ಅವರಿಗೆ ರೋಗ ನಿರೋಧಕ ಪ್ರತಿಕಾಯ ವರ್ಗಾವಣೆಯಾಗಲಿದೆ.

ಮಕ್ಕಳಿಗೆ ರೋಗದ ತೀವ್ರತೆ ಯಾಕೆ ಇಲ್ಲ ?
1) ಮಕ್ಕಳಲ್ಲಿ ಈ ವೈರಾಣು ನಮ್ಮ ದೇಹಕ್ಕೆ ಪ್ರವೇಶಿಸಲು ಬೇಕಾದ A.C.E ರಿಸೆಪ್ಟಾರ್ ಕಡಿಮೆ ಇರುವುದರಿಂದ ರೋಗ ಬರುವ ಸಾಧ್ಯತೆ ಕಡಿಮೆ.
2) ಮಕ್ಕಳಲ್ಲಿ ಥೈಮಸ್ ಗ್ರಂಥಿಯು ಕೆಲಸ ಮಾಡುವುದರಿಂದ ಅದರಿಂದ ಉತ್ಪತ್ತಿಯಾಗುವ ಪ್ರತಿಕಾಯ ರೋಗವನ್ನು ತಡೆಗಟ್ಟಬಹುದು.
3) ಮಕ್ಕಳಲ್ಲಿ ವೈರಸ್ ನಿಂದ ಬರುವ ಶೀತ, ಜ್ವರ ಆಗಾಗ ಬರುವುದರಿಂದ ಇದರಿಂದ ಉತ್ಪತ್ತಿಯಾಗುವ ಪ್ರತಿಬಂಧಕ ಶಕ್ತಿ ಈ ವೈರಾಣುವಿನ ತೀವ್ರತೆಯನ್ನು ಕುಗ್ಗಿಸುತ್ತದೆ.
4) ಮಕ್ಕಳ ಶರೀರ ದೊಡ್ಡವರ ಹಾಗೆ ವೈರಾಣುವಿನ ಸೋಂಕಿಗೆ ತೀವ್ರ ತರಹದ ಪ್ರತಿರೋಧ ತೋರದಿರುವುದು.

ಮಕ್ಕಳಿಗೆ ವ್ಯಾಕ್ಸಿನ್ ಅವಶ್ಯವೇ?
1) ಮಕ್ಕಳಲ್ಲಿ ತೀವ್ರ ತರಹದ ರೋಗ ಬಂದಿದ್ದರೆ, ಇವರು ವೈರಾಣುವಿನ ದಾಸ್ತಾನು ಮಳಿಗೆಯಂತೆ ವರ್ತಿಸಿ ಮನೆಯಲ್ಲಿರುವ ವ್ರದ್ಧರಿಗೆ ಹಾಗೂ ಶಾಲಾ ಕಾಲೇಜುಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳಿಗೆ ಈ ವೈರಾಣುವಿನ ಸೋಂಕಿಗೆ ಕಾರಣರಾಗಬಹುದು.
2) ಮಕ್ಕಳಲ್ಲಿ ಸೋಂಕಿನಿಂದ ಈ ವೈರಾಣುವಿನ ರೂಪಾಂತರಿ ಉತ್ಪತ್ತಿಯಾಗಿ (Mutation) ರೋಗದ ತೀವ್ರತೆಗೆ ಕಾರಣವಾಗಬಹುದು.

ಮಕ್ಕಳಿಗೆ ಲಭ್ಯವಿರುವ ವ್ಯಾಕ್ಸಿನ್ ಗಳು
1) ಕೋ ವ್ಯಾಕ್ಸಿನ್ ಇದು ಈಗಾಗಲೇ 18 ವರ್ಷದ ನಂತರದವರಿಗೆ ಕೊಡಲಾಗಿದ್ದು ಸುರಕ್ಷಿತವೆಂದು ಕಂಡುಬಂದಿದೆ.ಹಾಗೂ ರೂಪಾಂತರಿ ವೈರಾಣುವಿಗೆ ಕೂಡಾ ಪ್ರಯೋಜನಕಾರಿ ಎಂದು ತಿಳಿದು ಬಂದಿದೆ. ಈಗಾಗಲೇ ಇದಕ್ಕೆ ಸರ್ಕಾರದ ಅನುಮತಿ 2ರಿಂದ 18 ರ ವಯಸ್ಕರಿಗೆ ದೊರೆತಿದೆ.
2) ಝೈಕೋವ್ ? ಡಿ ಇದು D.N.A.  ವ್ಯಾಕ್ಸಿನ್ ಆಗಿದ್ದು ಈಗಾಗಲೆ 12 ರಿಂದ 18 ವಯಸ್ಸಿನ ಮಕ್ಕಳಿಗೆ ಕೊಡಲು ಅನುಮತಿ ದೊರೆತಿದೆ. ಇದುD.N.A. ವ್ಯಾಕ್ಸಿನ್ ಆದ್ದರಿಂದ ಅಡ್ಡ ಪರಿಣಾಮ ಅತೀ ಕಡಿಮೆ.
3) ಕೊರ್ಬಿವ್ಯಾಕ್ಸ್ (CORBEVAX) ಇದು ವೈರಾಣುವಿನ ಸ್ಪೈಕ್ ಪ್ರೊಟೀನ್ ನಿಂದ ತಯಾರಾದ ವ್ಯಾಕ್ಸಿನ್, ಹೈದರಾಬಾದ್ ನಲ್ಲಿ ತಯಾರಾಗುತ್ತಿದೆ. ಇದು ನವೆಂಬರ್ ಅಂತ್ಯಕ್ಕೆ ಸಿಗುವ ಸಾಧ್ಯತೆ ಇದೆ.5 ವರ್ಷದ ನಂತರದ ಮಕ್ಕಳಿಗೆ ಕೊಡಬಹುದು.
4) ಕೋವೋವ್ಯಾಕ್ಸ್ (ನೋವೋವ್ಯಾಕ್ಸ್) ಇದು ಪೂನಾದ ಸೀರಮ್ ಇನ್ಸ್ಟಿಟ್ಯೂಟ್ ನಲ್ಲಿ ತಯಾರಾಗುತ್ತಿದೆ. ಇದು ಕೂಡಾ ಕೋರ್ಬಿವ್ಯಾಕ್ಸ್ ತರಹ ಸ್ಪೈಕ್ ಪ್ರೊಟಿನ್ ನಿಂದ ತಯಾರಾಗುವ ವ್ಯಾಕ್ಸಿನ್. ಇದನ್ನು 7 ರಿಂದ 11 ವಯಸ್ಸಿನ ಮಕ್ಕಳಿಗೆ ಕೊಡಬಹುದು.

ಮಕ್ಕಳಿಗೆ ಯಾವ ವ್ಯಾಕ್ಸಿನ್ ಸೂಕ್ತ ?
1) ಕೋವ್ಯಾಕ್ಸಿನ್ ಇದು ಮಕ್ಕಳಿಗೆ ಮೊದಲೇ ತುಂಬಿಸಿಟ್ಟ ಸಿರಿಂಜ್ ಮೂಲಕ (Pre filled syringe) ಮಕ್ಕಳಿಗೆ 20 ದಿನದ ಅಂತರದಲ್ಲಿ 2 ಡೋಸ್ ನೀಡಲಾಗುತ್ತದೆ. ಇದು ಈಗಾಗಲೇ 18 ವರ್ಷದ ನಂತರದವರಲ್ಲಿ ಸುರಕ್ಷಿತ ಹಾಗೂ ಪ್ರಯೋಜನಕಾರಿ ಎಂದು ಧೃಢಪಟ್ಟಿದೆ. ಮೊದಲೇ ತುಂಬಿಸಿದ ಸಿರಿಂಜ್ ನಿಂದ , ವ್ಯಾಕ್ಸಿನ್ ನಿಖರ ಡೋಸ್ ಕೊಡಲು ಸಾಧ್ಯ ಹಾಗೂ ವ್ಯಾಕ್ಸಿನ್ ವ್ಯಯವಾಗುವುದನ್ನೂ ತಪ್ಪಿಸಬಹುದು.ಇದರ ವೆಚ್ಚ 1, 200 ಇರಬಹುದು ಹಾಗೂ ಮಕ್ಕಳಿಗೆ 2 ಡೋಸ್ 20 ದಿನದ ಅಂತರದಲ್ಲಿ ಕೊಡುವುದರಿಂದ ಪ್ರತೀಕಾಯದ ಉತ್ಪತ್ತಿ ಬೇಗ ಆಗಬಹುದು. ಇದಕ್ಕೆ ದಾದಿಯರಿಗೆ ತರಬೇತಿ ಅಗತ್ಯವಿಲ್ಲ.ಡೋಸ್ 0.5ml (1/2 ಎಂ.ಎಲ್)
2) ಝೈಕೋವ್- ಡಿ(ZYCOV-D) ಇದು ಕ್ಯಾಡಿಲ್ ಕಂಪೆನಿಯಿಂದ ಅಹ್ಮದಾಬಾದ್ ನಲ್ಲಿ ತಯಾರಾಗುವ ಮೊದಲ ಡಿ.ಎನ್.ಎ (D.N.A) ವ್ಯಾಕ್ಸಿನ್ ಆಗಿದ್ದು ಇದನ್ನು 12 ವರ್ಷದಿಂದ 18 ವರ್ಷದ ವರೆಗಿನ ಮಕ್ಕಳಿಗೆ ನೀಡಲು ಅನುಮತಿ ಸಿಕ್ಕಿದೆ. ಈ ವ್ಯಾಕ್ಸಿನ್ ಶೇ.100 ರಷ್ಟು ಪ್ರತಿರೋಧ ಶಕ್ತಿ ನೀಡಬಲ್ಲದು. ಇದನ್ನು ವಿಶೇಷ ರೀತಿಯ ಜೆಟ್ ಇಂಜಕ್ಷನ್ ಮೂಲಕ ಚರ್ಮದ ಅಡಿಗೆ ವ್ಯಾಕ್ಸಿನ್ ನ್ನು ಸೂಜಿಯ ಸಹಾಯವಿಲ್ಲದೇ ನೀಡಲಾಗುವುದು. ಇದನ್ನು ಕೊಡಲು ವಿಶೇಷ ಫಾರ್ಮಾಜೆಟ್ ಅಪ್ಲಿಕೇಟರ್ ಮತ್ತು ಗನ್ ಅವಶ್ಯಕ ಹಾಗೂ ಇದು ಸುಮಾರು 30,000 ರೂ. ನಷ್ಟು ದುಬಾರಿ. ಈ ಉಪಕರಣದಿಂದ 20,000 ಡೋಸ್ ನೀಡಲು ಸಾಧ್ಯ. ನಂತರ ಹೊಸ ಉಪಕರಣ ಅವಶ್ಯಕ.ಈ ವ್ಯಾಕ್ಸಿನ್ ತೋಳಿಗೆ ಕೊಡಲಾಗುವುದು ಹಾಗೂ 28 ದಿನದ ಅಂತರದಲ್ಲಿ 6 ಡೋಸ್ ನೀಡಲಾಗುವುದು. ಈ ವ್ಯಾಕ್ಸಿನ್ ಕೊಡಲು ತರಬೇತಿ ಅಗತ್ಯ ಹಾಗೂ ಈಗ ತರಬೇತಿ ಕೊಡಲಾಗುತ್ತಿದೆ. ಇದು ಉತ್ತಮ ವ್ಯಾಕ್ಸಿನ್ ಆದರೂ ದುಬಾರಿ ಹಾಗೂ 6 ಡೋಸ್ ಬೇಕಾದ್ದರಿಂದ ರೋಗ ನಿರೋಧಕ ಶಕ್ತಿ ಬರಲು 60 ರಿಂದ 70 ದಿನ ಬೇಕಾಗಬಹುದು. ಇದರ ಈ ಡೋಸಿನ ಅಂದಾಜು ವೆಚ್ಚ 2,000 ಕ್ಕಿಂತಲೂ ಜಾಸ್ತಿ.ಇರಬಹುದೆಂದು ಅಂದಾಜು.

ಒಟ್ಟಿನಲ್ಲಿ ಹೇಳುವುದಾದರೆ ಮಕ್ಕಳಿಗೆ ವ್ಯಾಕ್ಸಿನ್ ಇನ್ನು ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದ್ದು ಸುಮಾರು ಶೇ. 30ರಷ್ಟು ಇರುವ ಮಕ್ಕಳಿಗೆ ಈ ವ್ಯಾಕ್ಸಿನ್ ದೊರಕಲಿದೆ.

ಈ ಲಭ್ಯವಿರುವ ಎರಡೂ ವ್ಯಾಕ್ಸಿನ್ ಗಳಿಗೆ ವಿಶ್ವ ಆರೋಗ್ಯ ಸಂಸ್ಥೆಯ ಮಾನ್ಯತೆ ಇನ್ನೂ ದೊರೆಯದ ಕಾರಣ ವಿದೇಶ ಪ್ರಯಾಣಿಸುವ ಮಕ್ಕಳು ಇನ್ನೂ ಕಾಯಬೇಕಾಗಿದೆ.ಕೋವ್ಯಾಕ್ಸಿನ್ ನ ಅನುಮೋದನೆ ಕೆಲವು ದಿನಗಳಲ್ಲಿ ಸಿಗಲಿದೆ.
ಮಕ್ಕಳಿಗೆ ವ್ಯಾಕ್ಸಿನ್ ಕೊಡುವುದರಿಂದ ಮಕ್ಕಳ ಪೋಷಕರಿಗೆ ಮಕ್ಕಳನ್ನು ಶಾಲಾ ಕಾಲೇಜುಗಳಿಗೆ ಕಳುಹಿಸಲು ಧೈರ್ಯ ಬರಬಹುದು. ಹಾಗೂ ಮಕ್ಕಳಿಗೆ ವ್ಯಾಕ್ಸಿನೇಶನ್ ನಿಂದ ವಯೋವೃದ್ಧರಿಗೆ ರೋಗ ಬರುವುದನ್ನು ತಡೆಗಟ್ಟಬಹುದು ಹಾಗೂ ವೈರಾಣುವಿನ ಪ್ರತಿರೂಪ(MUTATION) ತಪ್ಪಿಸಬಹುದು.

ಮೊದಲ ಹಂತದಲ್ಲಿ ಮಧುಮೇಹ ರೋಗ, ಅತಿಯಾದ ಬೊಜ್ಜು, ಶ್ವಾಸಕೋಶ, ಹೃದಯ, ಲಿವರ್ ಹಾಗೂ ಕಿಡ್ನಿ ಸಂಬಂಧಿ ರೋಗ, H.I.V., , ಕ್ಯಾನ್ಸರ್ ಪೀಡಿತ ಮಕ್ಕಳು ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳಿಗೆ ಲಸಿಕೆ ನೀಡಲಾಗುವುದು. ತದನಂತರ ಆರೋಗ್ಯವಂತ 2 ರಿಂದ 18 ವಯಸ್ಸಿನ ಮಕ್ಕಳಿಗೆ ವ್ಯಾಕ್ಸಿನ್ ನೀಡಲಾಗುವುದು. ಕರ್ನಾಟಕದಲ್ಲಿ ಈ ಮಕ್ಕಳ ಸಂಖ್ಯೆ 1.7 ಕೋಟಿಯಷ್ಟಿದೆ. 

-ಡಾ ಜೆ.ಸಿ.ಅಡಿಗ, ಎಂ.ಡಿ.
ವೈದ್ಯಕೀಯ ತಜ್ಞರು,ಪುತ್ತೂರು

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.