ಸವಣೂರು ಗ್ರಾ.ಪಂ.ಮೀನು ಮಾರುಕಟ್ಟೆ ಬಹಿರಂಗ ಏಲಂ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಮೀನು ಮಾರುಕಟ್ಟೆ 7 ಲಕ್ಷದ 65 ಸಾವಿರಕ್ಕೆ ಹರಾಜು,ಫಿಶ್ ಮಾರ್ಕೆಟ್‌ನಲ್ಲಿ ಜನವೋ ಜನ..

ಸವಣೂರು : ಸವಣೂರು ಗ್ರಾ.ಪಂ.ನ ಮೀನು ಮಾರುಕಟ್ಟೆ ಬಹಿರಂಗ ಏಲಂ ಗ್ರಾ.ಪಂ.ಸಭಾಂಗಣದಲ್ಲಿ ನಡೆದಿದ್ದು,ಮೀನು ಮಾರುಕಟ್ಟೆ ವರ್ಷವೊಂದಕ್ಕೆ ಗರಿಷ್ಠ 7,65,000ಕ್ಕೆ ಪುತ್ತೂರಿನ ಅಬೂಬಕ್ಕರ್ ಎಂಬವರು ಹರಾಜಿನ ಮೂಲಕ ಪಡೆದುಕೊಂಡಿದ್ದಾರೆ.

ಜ.1ರಿಂದ ವ್ಯಾಪಾರ ಆರಂಭವಾದ ಫಿಶ್ ಮಾರ್ಕೆಟ್‌ಗೆ ಗಣ್ಯರು ಶುಭ ಹಾರೈಸಿದರು. ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಅವರು ಮಾತನಾಡಿ,ಸವಣೂರಿನಲ್ಲಿ ಅಧಿಕೃತ ಮೀನು ಮಾರುಕಟ್ಟೆ ಆರಂಭಗೊಳ್ಳುವ ಮೂಲಕ ಜನತೆಗೆ ತಾಜಾ ಮೀನುಗಳು ದೊರೆಯುವಂತಾಗಿದೆ.ಈ ಮೂಲಕ ಬಹುದಿನಗಳ ಕನಸು ಈಡೇರಿದೆ ಎಂದರು. ಹಿರಿಯ ಸದಸ್ಯ ಅಬ್ದುಲ್ ರಝಾಕ್ ಅವರು ಮಾತನಾಡಿ, ಮಿತದರದಲ್ಲಿ ಸಾರ್ವಜನಿಕರಿಗೆ ಮೀನು ದೊರಕುವಂತಾಗಲಿ ಎಂದರು.

ಗ್ರಾ.ಪಂ.ಅಧ್ಯಕ್ಷೆ ರಾಜೀವಿ ವಿ.ಶೆಟ್ಟಿ ಮಾತನಾಡಿ, ನೂತನ ಮಾರುಕಟ್ಟೆ ನಿರೀಕ್ಷೆಗೂ ಮೀರಿ ಹೆಚ್ಚಿನ ಮೊತ್ತಕ್ಕೆ ಹರಾಜಾಗಿದ್ದು,ಮೀನು ಮಾರುಕಟ್ಟೆ ಗ್ರಾ.ಪಂ.ನ ಆದಾಯ ಹೆಚ್ಚಿಸಿದೆ.ಮಾರುಕಟ್ಟೆಯಲ್ಲಿ ವ್ಯಾಪಾರ ವೃದ್ದಿಯಾಗಿ ಯಶಸ್ಸಾಗಲಿ ಎಂದರು.

ಪಿಡಿಓ ನಾರಾಯಣ ಬಟ್ಟೋಡಿ,ಲೆಕ್ಕ ಸಹಾಯಕ ಎ.ಮನ್ಮಥ ,ಸದಸ್ಯರಾದ ಸತೀಶ್ ಅಂಗಡಿಮೂಲೆ,ತೀರ್ಥರಾಮ ಕೆಡೆಂಜಿ,ಭರತ್ ರೈ,ತಾರಾನಾಥ ,ಹರೀಶ್, ಇಂದಿರಾ ಬೇರಿಕೆ,ಚಂದ್ರಾವತಿ ಸುಣ್ಣಾಜೆ,ಚೇತನಾ,ಮಾಜಿ ಅಧ್ಯಕ್ಷೆ ಇಂದಿರಾ ಬಿ.ಕೆ,ಮಾಜಿ ಸದಸ್ಯ ಸತೀಶ್ ಬಲ್ಯಾಯ,ಸವಣೂರು ಸಿಎ ಬ್ಯಾಂಕ್ ಉಪಾಧ್ಯಕ್ಷ ತಾರಾನಾಥ ಕಾಯರ್ಗ,ಸಿಬಂದಿಗಳಾದ ಪ್ರಮೋದ್,ಯತೀಶ್ ಮೊದಲಾದವರಿದ್ದರು.

ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ನೆಕ್ರಾಜೆ ಸ್ವಾಗತಿಸಿ, ಸದಸ್ಯ ರಫೀಕ್ ಎಂ.ಎ.ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.