ಕೆಎಸ್ಆರ್.ಟಿಸಿ ಘಟಕದಲ್ಲಿ ರಕ್ತದಾನದ ಮೂಲಕ ಹೊಸ ವರ್ಷ ಸಂಭ್ರಮಾಚರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 

ಪುತ್ತೂರು;ಮುಕ್ರಂಪಾಡಿಯಲ್ಲಿರುವ ಕೆಎಸ್ಆರ್ಟಿಸಿ ಘಟಕದಲ್ಲಿ ರಕ್ತದಾನ ಹಮ್ಮಿಕೊಳ್ಳುವ ಮೂಲಕ ಹೊಸ ವರ್ಷವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿದರು.


ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಕೆಎಸ್ಆರ್ಟಿಸಿ ನೌಕರರು ಶ್ರಮ ಜೀವಿಗಳು. ನಮ್ಮ ಶ್ರಮ ಕೆಎಸ್ಆರ್ಟಿಸಿ ಗೆ ಮಾತ್ರವಲ್ಲ. ಇಡೀ ಸಮಾಜಕ್ಕೆ ಸಲ್ಲಿಸಬೇಕು ಎಂಬ ನೆಲೆಯಲ್ಲಿ ರಕ್ತದಾನ ಆಯೋಜಿಸುತ್ತಿರುವುದು ಶ್ಲಾಘಿಸಿದರು. ವೃತ್ತಿಯ ಜೊತೆಗೆ ಸಮಾಜಿಕ ಜವಾಬ್ದಾರಿಯನ್ನು ಅರಿತು ತಮ್ಮ ರಕ್ತವನ್ನು ಸಮಾಜದ ಇತರರ ಜೀವ ಉಳಿಸಲು ಜೀವದಾನ ಮಾಡುತ್ತಿದ್ದಾರೆ. ಹೊಸ ವರ್ಷದ ದಿನವೇ ರಕ್ತದಾನ ಮಾಡಲಾಗುತ್ತಿದ್ದು ಇಡೀ ವರ್ಷ ಆರೋಗ್ಯದ ದಿನವಾಗಲಿ ಎಂದು ಆಶಿಸಿದರು.

 


ಬ್ಲಡ್ ಬ್ಯಾಂಕ್ ನ ವೈದ್ಯಾಧಿಕಾರಿ ಡಾ.ರಾಮಚಂದ್ರ ಭಟ್ ಮಾತನಾಡಿ, ತುರ್ತು ಸಂದರ್ಭದಲ್ಲಿ ಅಗತ್ಯ ವಸ್ತು ರಕ್ತವನ್ನು ದಾನ ಮಾಡುವ ಪುಣ್ಯದ ಕಾರ್ಯವನ್ನು ಪ್ರಥಮ ಬಾರಿಗೆ ಹಮ್ಮಿಕೊಂಡಿರುವುದಕ್ಕೆ ಅಭಿನಂದಿಸಿದರು.


ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಕೆಎಸ್ಆರ್.ಟಿಸಿ ಸಿಬಂದಿಗಳು ಜನರಿಗೆ ಕೇವಲ ಬಸ್ ಸೌಲಭ್ಯ ಕಲ್ಪಿಸುವುದಲ್ಲ. ಜೊತೆಗೆ ಸಾಮಾಜಿಕ ಕಳಕಳಿಯಿಂದ ಜನರಿಗೆ ತುರ್ತು ಸಂದರ್ಭದಲ್ಲಿ ಆವಶ್ಯಕವಾದ ರಕ್ತದಾನ ಮಾಡುವ ಕಾರ್ಯವನ್ನು ಘಟಕ ವ್ಯವಸ್ಥಾಪಕ ಇಸ್ಮಾಯಿಲ್ ಮುತುವರ್ಜಿಯಿಂದ ನಡೆಸಲಾಗುತ್ತಿದೆ ಎಂದರು.


ವಿಭಾಗೀಯ ಸಂಚಲಣಾಧಿಕಾರಿ ಮುರಳಿಧರ ಆಚಾರ್ಯ ಹಾಗೂ ತಾಂತ್ರಿಕ ಶಿಲ್ಪಿ ಆಶಾಲತಾ ಮಾತನಾಡಿ ಶುಭಹಾರೈಸಿದರು. ಗೋಪಾಲಕೃಷ್ಣ ಡಿ.ಪ್ರಾರ್ಥಿಸಿದರು. ಘಟಕ ವ್ಯವಸ್ಥಾಪಕ ಇಸ್ಮಾಯಿಲ್ ಪಿ. ಸ್ವಾಗತಿಸಿದರು. ಮಾಧವ ಶೆಣೈ ಕಾರ್ಯಕ್ರಮ ನಿರೂಪಿಸಿ, ಕಾರ್ಮಿಕ ಕಲ್ಯಾಣ ಅಧಿಕಾರಿ ಪ್ರಕಾಶ್ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.