ಮರೀಲು ಸ್ನೇಹನಗರ: ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯಿಂದ 20ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮರೀಲು ಸ್ನೇಹನಗರ ಇಲ್ಲಿನ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಆಶ್ರಯದಲ್ಲಿ 20ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯು ಡಿ.31 ರಂದು ಸಂಜೆ ಮರೀಲು ಸ್ನೇಹನಗರದ ಸಾರ್ವಜನಿಕ ಶ್ರೀ ಮಹಾಲಿಂಗೇಶ್ವರ ಕಟ್ಟೆಯಲ್ಲಿ ಜರಗಿತು.


ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕರಾದ ಕೃಷ್ಣ ಭಟ್‌ರವರ ನೇತೃತ್ವದಲ್ಲಿ ಮಹಾಪೂಜೆಯೊಂದಿಗೆ ಪೂಜಾವಿಧಿ ನೆರವೇರಲ್ಪಟ್ಟಿತು. ಸಂಜೆ ಶಿವಸ್ವರ ಭಜನಾ ತಂಡ ಕುಂಬ್ರ ಇವರಿಂದ ಭಜನೆ, ಬಳಿಕ ವಿಠಲ ನಾಯಕ್ ಕಲ್ಲಡ್ಕ ಇವರಿಂದ ವಿನೂತನ ಶೈಲಿಯ ಕಾರ್ಯಕ್ರಮ `ಗೀತ ಸಾಹಿತ್ಯ ಸಂಭ್ರಮ(ಸಂದೇಶದ ಸಂತೋಷ)’ ಕಾರ್ಯಕ್ರಮವು ನೆರೆದ ಭಕ್ತಾಧಿಗಳನ್ನು ನಗೆಗಡಲಿನಲ್ಲಿ ತೇಲಾಡಿಸಿದರು. ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಗೌರವಾಧ್ಯಕ್ಷ ಭವಾನಿಶಂಕರ, ಅಧ್ಯಕ್ಷ ವಿನೋದ್ ಕುಮಾರ್ ಕೆ, ಉಪಾಧ್ಯಕ್ಷ ರಾಜೇಂದ್ರ ಕೆ.ಮೆಸ್ಕಾಂ, ಕಾರ್ಯದರ್ಶಿ ನವೀನ್ ಕುಮಾರ್ ಕ್ಯಾಂಪ್ಕೋ, ಕೋಶಾಧಿಕಾರಿ ಪೂವಪ್ಪ ದೇವಾಡಿಗ ಕೆಮ್ಮಿಂಜೆ, ಸಹ ಕೋಶಾಧಿಕಾರಿ ಮೋಹನ್ ನಾಯ್ಕ ಮರೀಲು, ಸಮಿತಿ ಸದಸ್ಯರಾದ ಭಾಸ್ಕರ ಮರೀಲು, ಸುರೇಶ್ ಕುಮಾರ್ ಮರೀಲು, ಅನೀಶ್ ಕುಮಾರ್ ಮರೀಲು, ದೀಕ್ಷಿತ್ ಮರೀಲು, ಧನುಷ್ ಮರೀಲು,ಶುಶಾಂತ್ ಮರೀಲು, ಮನೋಜ್ ಮರೀಲು, ಶಿವ ಮರೀಲು, ಕಾರ್ತಿಕ್ ಮರೀಲು, ಮನ್ವಜಿತ್ ಮರೀಲು, ರವೀಶ್ ಕಾಡುಮನೆ, ಸೂರ್‍ಯಕುಮಾರ್ ಕ್ಯಾಂಪ್ಕೋ ಸಹಿತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು.

ಸಾವಿರಕ್ಕೂ ಮಿಕ್ಕಿ ಭಕ್ತಾಧಿಗಳು…
ಸಾರ್ವಜನಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಸಾವಿರಕ್ಕೂ ಮಿಕ್ಕಿ ಭಕ್ತಾಧಿಗಳು ಪಾಲ್ಗೊಂಡಿದ್ದು, ಅನ್ನಪ್ರಸಾದವನ್ನು ಸ್ವೀಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.