ಸಿಂಹವನ-ಪಂಜಳ: ಆದಿ ಮೊಗೇರ್ಕಳ ದೈವಸ್ಥಾನದಲ್ಲಿ ಶ್ರೀ ಕೊರಗ ತನಿಯ ಅಜ್ಜ ದೈವದ ಪುನಃ ಪ್ರತಿಷ್ಠೆ-ಆಮಂತ್ರಣ ಪತ್ರಿಕೆ ಬಿಡುಗಡೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಡಾ|ಡಿ.ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ಕೊರಗಜ್ಜ ದೈವದ ಮೂಲ ನೆಲೆ ಕುತ್ತಾರುಪದವಿನ ಆಡಳಿತ ಮೊಕ್ತೇಸರ ರವೀಂದ್ರನಾಥ ಪೂಂಜರವರ ಮಾರ್ಗದರ್ಶನದಲ್ಲಿ ಆರ್ಯಾಪು ಗ್ರಾಮದ ಸಿಂಹವನದ ಮಾಯ್ಕಾರ ಕಾರಣಿಕ ಶ್ರೀ ಸ್ವಾಮಿ ಕೊರಗ ತನಿಯ ಮತ್ತು ಶ್ರೀ ಆದಿಬ್ರಹ್ಮ ಮೊಗೇರ್ಕಳ ಕ್ಷೇತ್ರದಲ್ಲಿ `ಶ್ರೀ ಕೊರಗ ತನಿಯ ಅಜ್ಜ ದೈವದ ಪುನಃ ಪ್ರತಿಷ್ಠೆ’ಯು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದ್ದು, ಅಲ್ಲದೆ ಜ್ಞಾನ ಮಂದಾರ ಟ್ರಸ್ಟ್ ಬೆಂಗಳೂರು ಇವರು ಕೊಡಮಾಡುವ ಬಸವಶ್ರೀ ಪ್ರಶಸ್ತಿ ಪ್ರದಾನ ಸಮಾರಂಭವು ಜ.17 ರಂದು ಶ್ರೀ ಕ್ಷೇತ್ರದಲ್ಲಿ ಜರಗಲಿದ್ದು ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಯು ಜ.1 ರಂದು ನೆರವೇರಿತು.

ಶ್ರೀ ಕ್ಷೇತ್ರದ ಗೌರವಾಧ್ಯಕ್ಷರಾದ ಎನ್.ರವೀಂದ್ರ ಶೆಟ್ಟಿ ನುಳಿಯಾಲುರವರು ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಇಲ್ಲಿನ ಪವಿತ್ರ ಜಾಗದಲ್ಲಿ ದೇವಸ್ಥಾನ, ಸನ್ನಿಧಾನ ಕಟ್ಟುವ ಬದಲು ಸಣ್ಣ ಮಟ್ಟಿನ ಮಂದಿರ ಕಟ್ಟಿ ಆರಾಧನೆ ಮಾಡಬೇಕು ಜೋಯಿಷರು ಪ್ರಶ್ನೆ ಚಿಂತನೆ ಸಂದರ್ಭದಲ್ಲಿ ಹೇಳಿದ್ದರು. ಅದಕ್ಕೆ ಪೂರಕವೆಂಬಂತೆ ಮೂವತ್ತು ವರ್ಷಗಳಿಂದ ಈ ಭಾಗದಲ್ಲಿ ಕೊರಗಜ್ಜ ದೈವವನ್ನು ನಂಬಿಕೊಂಡು ಬರುತ್ತಿದ್ದುದರಿಂದ ಇಲ್ಲಿ ಕೊರಗಜ್ಜನ ಆರಾಧನೆ ಮಾಡುವ ಬಗ್ಗೆ ಕಿಂಚಿತ್ತ್ ಪ್ರಯತ್ನ ನಮ್ಮದಾಗಿದೆ. ಈ ಭಾಗದ ಜನರು ಆರ್ಥಿಕ ಪರಿಸ್ಥಿತಿಯಲ್ಲಿ ಬಹಳ ಹಿಂದುಳಿದಿರುವ ಕಾರಣ ಎಲ್ಲರೂ ಸೇರಿಕೊಂಡು ಜನವರಿಯಲ್ಲಿ ಕೊರಗಜ್ಜನ ಪ್ರತಿಷ್ಠಾ ಕಾರ್ಯಕ್ರಮವು ನಡೆಸಲಿದ್ದೇವೆ. ಕಲಿಯುಗದ ದೇವರು ಕೊರಗಜ್ಜ ಎಂದು ಪ್ರಚಲಿತವಾಗಿದೆಯಾದ್ದರಿಂದ ಈ ಭಾಗದಲ್ಲಿ ಯಾವುದೇ ವಿಘ್ನವಿಲ್ಲದೆ ಕೊರಗಜ್ಜನ ಸನ್ನಿಧಾನ ನೆರವೇರುವಂತಾಗಲಿ ಎಂದು ಹೇಳಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸಿ.ಎಸ್ ಚಂದ್ರ ಸಿಂಹವನ, ಉತ್ಸವ ಸಮಿತಿಯ ಅಧ್ಯಕ್ಷ ಮನೋಜ್ ಸಿಂಹವನ, ದೈವದ ಪ್ರಧಾನ ಅರ್ಚಕ ಈಶ್ವರ ಸಿಂಹವನ, ಉತ್ಸವ ಸಮಿತಿಯ ಕಾರ್ಯಾಧ್ಯಕ್ಷ ನಿವೃತ್ತ ಕೆಎಸ್‌ಆರ್‌ಟಿಸಿ ಉದ್ಯೋಗಿ ನಾರಾಯಣ ನಾಕ್ ಪಂಜಳ, ಕೋಶಾಧಿಕಾರಿ ದಿನೇಶ್ ಸಿಂಹವನ, ಪ್ರಮುಖರಾದ ಸುಹಾಸ್ ಸಿಂಹವನ, ರಾಜ ರತ್ನಾಕರ, ಸೂರಜ್ ಸಿಂಹವನ, ಚಂದ್ರಶೇಖರ ಸಿಂಹವನ, ಸುಜೀರ್ ಕುಮಾರ್ ಶೆಟ್ಟಿ ಸಹಿತ ಊರವರು ಉಪಸ್ಥಿತರಿದ್ದರು.

 

ಕೊರಗಜ್ಜನ ಸನ್ನಿಧಿ ಸ್ಥಾಪನೆ ಹಿನ್ನೆಲೆ….
ಸುಮಾರು ೩೦ ವರ್ಷಗಳ ಹಿಂದೆ ಕುರೋವು ಎಂಬವರು ಕೊರಗಜ್ಜ ದೈವವನ್ನು ನಂಬಿಕೊಂಡು ಬರುತ್ತಿದ್ದರು. ತನ್ನ ಜೀವಿತಾವಧಿಯಲ್ಲಿ ಅವರು ಎರಡು ಬಾರಿ ಮೊಗೇರ್ಕಳ ಮತ್ತು ಕೊರಗಜ್ಜ ದೈವಕ್ಕೆ ನೇಮವನ್ನು ಕೊಟ್ಟಿದ್ದರು. ಅವರ ಕಾಲಾನಂತರ ಅವರ ಮಗ ಈಶ್ವರರವರು ದೈವಕ್ಕೆ ತಂಬಿಲ ಸೇವೆ ಕೊಡುತ್ತಾ ಬರುತ್ತಿದ್ದರು. ಕಾಲಕ್ರಮೇಣ ಆರ್ಥಿಕ ಮುಗ್ಗಟ್ಟಿನಿಂದಾಗಿ ಈಶ್ವರರವರಿಗೆ ದೈವಗಳಿಗೆ ತಂಬಿಲ ಸೇವೆ ಕೊಡಲು ಅಸಾಧ್ಯವಾಯಿತು. ಹೀಗಿರುವಾಗ ಈಶ್ವರರವರ ಮನೆಯಲ್ಲಿ ನೆಮ್ಮದಿ ಕಡಿಮೆಯಾಗಿ ಕಷ್ಟಗಳು ಎದುರಾಗಲು ಪ್ರಾರಂಭವಾಯಿತು. ಇದರಿಂದ ನೊಂದ ಅವರು ತನ್ನ ಮನೆಯಲ್ಲಿ ಕೊರಗಜ್ಜನ ಕಲ್ಲು ಪ್ರತಿಷ್ಠಾಪಿಸಿ ನಂಬಲಾರಂಭಿಸಿದರು. ಆಗ ಅವರ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಿತ್ತು. ಈ ಭಾಗದಲ್ಲಿನ ಸಾರ್ವಜನಿಕ ಸತ್ಯನಾರಾಯಣ ಪೂಜಾ ಸಮಿತಿಯವರು ಈ ಸ್ಥಳದಲ್ಲಿ ಪ್ರಶ್ನೆ ಚಿಂತನೆ ನಡೆಸಿ, ಕೊರಗಜ್ಜನ ಸಾನಿಧ್ಯವನ್ನೇ ಜೀರ್ಣೋದ್ಧಾರಗೊಳಿಸಿ ಎನ್ನುವ ದೈವಜ್ಞರ ಸಲಹೆಯಂತೆ ಈಶ್ವರರವರು ಕೊರಗಜ್ಜನ ಸಾನಿಧ್ಯವನ್ನು ಸಾರ್ವಜನಿಕರಿಗೆ ಬಿಟ್ಟುಕೊಡಲು ಒಪ್ಪಿಗೆ ಸೂಚಿಸಿದ್ದರು. ಬಳಿಕ ಈ ಸನ್ನಿಧಿಯ ಜೀರ್ಣೋದ್ಧಾರಕ್ಕೆ ಮುಂದಾಗಿದ್ದು ಅದಕ್ಕಾಗಿ ಸಮಿತಿಯನ್ನೂ ಕೂಡ ರಚಿಸಲಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.