ಅಂಬಿಕಾದಲ್ಲಿ ನೀತಿ ಶಿಕ್ಷಣ

0

ಪುತ್ತೂರು: ವಿದ್ಯಾರ್ಥಿ ಜೀವನದಲ್ಲಿ ಒಂದು ನಿರ್ದಿಷ್ಟ ಗುರಿ ಇರಬೇಕು. ಗುರಿ ತಲುಪುವಲ್ಲಿ ಉತ್ತಮ ಗುರುಗಳು, ಏಕಾಗ್ರತೆ, ನಿಯತ್ತು, ಸಮಯ ಪರಿಪಾಲನೆ, ಸ್ವಪ್ರಯತ್ನ, ಹಿತ-ಮಿತ ಆಹಾರ ಇತ್ಯಾದಿ ವಿಚಾರಗಳು ಅತೀ ಆವಶ್ಯಕ. ಇವೆಲ್ಲವನ್ನು ಸರಿಯಾಗಿ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನ ಪಥದಲ್ಲಿ ಅನುಸರಿಸಿಕೊಂಡು ಬಂದಾಗ ನಿರೀಕ್ಷೆಗೂ ಮೀರಿದ ಉತ್ತಮ ಫಲಿತಾಂಶ ತಮ್ಮದಾಗಿ ಜೀವನದಲ್ಲಿ ಯಶಸ್ಸನ್ನು ಗಳಿಸಬಹುದು. ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿಗಳು ಹೇಗಿರಬೇಕು ಎನ್ನುವ ವಿಚಾರವನ್ನು ಪುರಾಣ ಕಥೆಗಳ ಮೂಲಕ, ಸಂಸ್ಕೃತ ಭಾಷೆಯ ಸುಭಾಷಿತಗಳ ಮೂಲಕ ಸಂಪನ್ಮೂಲ ವ್ಯಕ್ತಿ, ಪ್ರಸಿದ್ಧ ವಾಗ್ಮಿ, ಆಂಗ್ಲಭಾಷಾ ಉಪನ್ಯಾಸಕರಾದ ರಾಮಚಂದ್ರ ಭಟ್ ಎನ್ ಕೆ ಹೇಳಿದರು.

ಅವರು ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿಪೂರ್ವ ವಿದ್ಯಾಲಯ, ನೆಲ್ಲಿಕಟ್ಟೆಯ ವಿದ್ಯಾರ್ಥಿಗಳಿಗೆ ನೀತಿ ಶಿಕ್ಷಣ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ನೈತಿಕ ಮೌಲ್ಯಗಳ ಮಹತ್ವವನ್ನು ತಿಳಿಸಿದರು. ಪ್ರಥಮ ಪಿ.ಯು. ವಿದ್ಯಾರ್ಥಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕಿ ಜಯಂತಿ ಅತಿಥಿಗಳನ್ನು ಸ್ವಾಗತಿಸಿ, ಹಿಂದಿ ಉಪನ್ಯಾಸಕಿ ಪುಷ್ಪಲತಾ ಪಿ ವಂದಿಸಿದರು.

LEAVE A REPLY

Please enter your comment!
Please enter your name here