ನೆಲ್ಯಾಡಿ: ನ್ಯೂ ರಾಜಸ್ಥಾನ್ ಗ್ರಾನೈಟ್ಸ್, ಮಾರ್ಬಲ್ಸ್, ಟೈಲ್ಸ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ಬಳಿಯಿರುವ ಶಿಲ್ಪ ಆರ್ಕೇಡ್‌ನಲ್ಲಿ ನ್ಯೂ ರಾಜಸ್ಥಾನ್ ಗ್ರಾನೈಟ್ಸ್, ಮಾರ್ಬಲ್ಸ್ ಮತ್ತು ಟೈಲ್ಸ್‌ಗಳ ಮಾರಾಟ ಮಳಿಗೆ ಜ.1ರಂದು ಶುಭಾರಂಭಗೊಂಡಿತು.

ನೆಲ್ಯಾಡಿ ಸಂತ ಅಲ್ಫೋನ್ಸಾ ಚರ್ಚ್‌ನ ಧರ್ಮಗುರು ರೆ.ಫಾ.ಬಿನೋಯ್ ಜೋಸೆಫ್‌ರವರು ಉದ್ಘಾಟಿಸಿದರು. ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಉದ್ದಿಮೆಗಳೊಂದಿಗೆ ಎಲ್ಲಾ ಜಾತಿ, ಭಾಷೆ, ಮತದ ಜನರು ವ್ಯವಹಾರ ನಡೆಸುತ್ತಾರೆ. ಆದ್ದರಿಂದ ಉದ್ದಿಮೆಗಳು ಊರಿನ ಸಾಮರಸ್ಯಕ್ಕೂ ಕಾರಣವಾಗಿದೆ. ಇಂತಹ ಉದ್ಯಮ, ಸಂಸ್ಥೆಗಳು ಇನ್ನಷ್ಟೂ ಬರಬೇಕು. ಕೃಷಿಯೇತರ ಉದ್ದಿಮೆಗಳಿಂದ ಊರಿನ ಅಭಿವೃದ್ಧಿಯೂ ಆಗಲಿದೆ ಎಂದರು. ಕೆಲವರಲ್ಲಿ ಹಣವಿದ್ದರೂ ಬಂಡವಾಳ ತೊಡಗಿಸಿ ಉದ್ಯಮ ಆರಂಭಿಸುವ ಚಾಲೆಂಜ್ ಇರುವುದಿಲ್ಲ. ‘ನ್ಯೂ ರಾಜಸ್ಥಾನ್’ ಸಂಸ್ಥೆಯ ಮಾಲಕ ಶೈಜುರವರು ಕಠಿಣ ಪರಿಶ್ರಮದಿಂದ ಈ ಹಂತಕ್ಕೆ ಬೆಳೆದಿದ್ದಾರೆ. ಸವಾಲಿನ ರೀತಿಯಲ್ಲಿ ಬಂಡವಾಳ ಹಾಕಿ ನೆಲ್ಯಾಡಿಯಲ್ಲಿ ದೊಡ್ಡ ಮಟ್ಟದ ವ್ಯವಹಾರ ಆರಂಭಿಸಿದ್ದಾರೆ. ಇದರಿಂದ ಇಲ್ಲಿನ ಜನರು ಮಂಗಳೂರು,ಬೆಂಗಳೂರಿನಂತಹ ದೊಡ್ಡ ನಗರಗಳಿಗೆ ಹೋಗುವ ಅವಶ್ಯಕತೆ ಇಲ್ಲ. ತಮಗೆ ಬೇಕಾದ ಮಾದರಿಯ ಗ್ರಾನೈಟ್ಸ್, ಮಾರ್ಬಲ್ಸ್, ಟೈಲ್ಸ್ ಇಲ್ಲಿಯೇ ಪಡೆಯಬಹುದಾಗಿದೆ. ಶೈಜುರವರ ಈ ಉದ್ಯಮ ಯಶಸ್ವಿಯಾಗಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಯಾಗಿದ್ದ ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆ ಸಂಚಾಲಕ ಅಬ್ರಹಾಂ ವರ್ಗೀಸ್‌ರವರು ಮಾತನಾಡಿ, ಹೊಸ ವರ್ಷದ ಮೊದಲ ದಿನವೇ ಶೈಜುರವರು ಉದ್ದಿಮೆ ಆರಂಭಿಸಿದ್ದಾರೆ. ಅವರು ವ್ಯಕ್ತಿಯಾಗಿಯೂ, ವೃತ್ತಿಯಲ್ಲೂ ಬೆಳೆಯಲಿ. ಅವರ ಈ ಉದ್ಯಮ ಯಶಸ್ವಿಯಾಗಿ ಮುನ್ನಡೆಯಲಿ. ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಹೇಳಿ ಶುಭಹಾರೈಸಿದರು. ಇನ್ನೋರ್ವ ಅತಿಥಿ ನಿವೃತ್ತ ಲೆಕ್ಕಪರಿಶೋಧಕ ಎ.ಜೆ.ಜೋಸೆಫ್‌ರವರು ಮಾತನಾಡಿ, ಶೈಜುರವರು ಕಠಿಣ ಪರಿಶ್ರಮಿ. ವಹಿಸಿಕೊಂಡ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸುವವರು. ಅವರಲ್ಲಿ ದೃಢವಾದ ನಂಬಿಕೆಯೂ ಇದೆ. ನೆಲ್ಯಾಡಿಯಲ್ಲಿ ಅವರ ಆರಂಭಿಸಿರುವ ಉದ್ಯಮ ಈ ಊರಿಗೆ ಮುಕುಟವಾಗಿದೆ. ದೇವರ ಅನುಗ್ರಹದಿಂದ ಅವರಿಗೆ ಯಶಸ್ಸು ಸಿಗಲಿ ಎಂದು ಹೇಳಿದರು.

ನೆಲ್ಯಾಡಿ ಮಾತಾ ಲ್ಯಾಬ್‌ನ ಕೆ.ಜೆ.ಜೋಸ್‌ರವರು ಮಾತನಾಡಿ, ಮನೆಗಳಿಗೆ ಅತೀ ಅವಶ್ಯಕವಾಗಿರುವ ಗ್ರಾನೈಟ್, ಮಾರ್ಬಲ್ಸ್, ಟೈಲ್ಸ್‌ಗಳು ನೆಲ್ಯಾಡಿಯಂತಹ ಗ್ರಾಮೀಣ ಪ್ರದೇಶದಲ್ಲಿ ಒಂದೇ ಸೂರಿನಡಿ ದೊರೆಯುವುದರಿಂದ ಈ ಊರಿನ ಜನರು ಬೇರೆ ಕಡೆಗೆ ಹೋಗಬೇಕಾಗಿಲ್ಲ. ಈ ಉದ್ಯಮ ನೆಲ್ಯಾಡಿಗೂ ಗರಿಮೆಯಾಗಿದೆ. ಶೈಜುರವರು ವಿದೇಶಕ್ಕೆ ಹೋಗುವ ಬದಲು ಇಲ್ಲಿಯೇ ಕಠಿಣ ಪರಿಶ್ರಮದಿಂದ ದುಡಿದು ಈಗ ದೊಡ್ಡ ಮಟ್ಟದ ಉದ್ಯಮಿಯಾಗಿದ್ದಾರೆ. ಅವರ ಪತ್ನಿ, ಮಕ್ಕಳು ಅವರಿಗೆ ಬೆಂಬಲ ನೀಡಿದ್ದಾರೆ. ಅವರಿಗೆ ಯಶಸ್ಸು ಸಿಗಲಿ ಎಂದರು.

ಸ್ವಾಗತಿಸಿ ಮಾತನಾಡಿದ ಶಿಲ್ಪ ಆರ್ಕೆಡ್‌ನ ಮಾಲಕ ಶಿವಣ್ಣ ಪಿ.ಹೆಗ್ಡೆಯವರು, ಶೈಜು ಹಾಗೂ ನನ್ನ ನಡುವೆ ೩೦ ವರ್ಷಗಳ ಒಡನಾಟವಿದೆ. ಅವರು ೩೦ ವರ್ಷದ ಹಿಂದೆ ಸಾಮಾನ್ಯ ಮೇಸ್ತ್ರಿಯಾಗಿ ನಾಲ್ಕೈದು ಕೆಲಸಗಾರರೊಂದಿಗೆ ಇಲ್ಲಿಗೆ ಬಂದವರಾಗಿದ್ದಾರೆ. ಕಠಿಣ ಪರಿಶ್ರಮ, ಪ್ರಾಮಾಣಿಕತೆಯಿಂದ ಈ ಹಂತಕ್ಕೆ ಬೆಳೆದಿದ್ದಾರೆ. ಶಿಲ್ಪ ಆರ್ಕೆಡ್‌ನ ಒಂದು ಬದಿಯಲ್ಲಿ ಕಟ್ಟಡಕ್ಕೆ ಬೇಕಾದ ಎಲ್ಲಾ ಸಾಮಾಗ್ರಿಗಳು ಸಿಗಲಿವೆ. ಶೈಜುರವರು ನೆಲ್ಯಾಡಿಯಲ್ಲಿ ಆರಂಭಿಸಿರುವ ಅವರ ಉದ್ಯಮಕ್ಕೆ ಯಶಸ್ಸು ಸಿಗಲಿ ಎಂದು ಹೇಳಿದರು. ಮಾಲಕ ಶೈಜು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾಲಕ ಶೈಜುರವರ ಪತ್ನಿ ಜೆನಿತೋಮಸ್‌ರವರು ವಂದಿಸಿದರು. ಪುತ್ರಿಯರಾದ ಅಲೀನಾ ತೋಮಸ್, ಅಶ್ನಾ ತೋಮಸ್ ಪ್ರಾರ್ಥಿಸಿದರು. ಶೀನಪ್ಪ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಮೇನೇಜರ್ ಶಾಜಿಜೋಸ್ ಸಹಕರಿಸಿದರು.

ಜಿ.ಪಂ.ಮಾಜಿ ಸದಸ್ಯರಾದ ಪಿ.ಪಿ.ವರ್ಗೀಸ್, ಸರ್ವೋತ್ತಮ ಗೌಡ, ಉದ್ಯಮಿ ಕೆ.ಪಿ.ತೋಮಸ್, ನಿವೃತ್ತ ಸೈನಿಕ ಒ.ಜಿ.ನೈನಾನ್, ನಿವೃತ್ತ ಮುಖ್ಯಶಿಕ್ಷಕ ಚಾಕೋ ವರ್ಗೀಸ್, ನೆಲ್ಯಾಡಿ ವರ್ತಕ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ರಫೀಕ್ ಸೀಗಲ್, ಎಪಿಎಂಸಿ ನಿರ್ದೇಶಕ ಕುಶಾಲಪ್ಪ ಗೌಡ ಅನಿಲ ಸೇರಿದಂತೆ ನೆಲ್ಯಾಡಿಯ ವರ್ತಕರು, ವಿವಿಧ ಕ್ಷೇತ್ರಗಳ ಹಲವು ಗಣ್ಯರು ಆಗಮಿಸಿ ನೂತನ ಸಂಸ್ಥೆಗೆ ಶುಭಹಾರೈಸಿದರು.

ಸಮಗ್ರ ದಾಸ್ತಾನು ಮಳಿಗೆ:
‘ನ್ಯೂ ರಾಜಸ್ಥಾನ್’ ಗ್ರಾನೈಟ್ಸ್, ಮಾರ್ಬಲ್ಸ್ ಹಾಗೂ ಟೈಲ್ಸ್‌ಗಳ ನವನವೀನ ಮಾದರಿಯ ಸಮಗ್ರ ದಾಸ್ತಾನು ಮಳಿಗೆಯಾಗಿದೆ. ಇಲ್ಲಿ ಸುಮಾರು ೧೫ ವೆರೈಟಿಯ ಗ್ರಾನೈಟ್ಸ್‌ಗಳಿವೆ. ಗ್ರಾಹಕರಿಗೆ ಬೇಕಾದ ಮಾದರಿಯ, ಬಣ್ಣದ ಗ್ರಾನೈಟ್ಸ್, ಮಾರ್ಬಲ್ಸ್, ಟೈಲ್ಸ್‌ಗಳ ಸಮಗ್ರ ಸಂಗ್ರಹವಿದೆ. ಸೆರಾಮಿಕ್ಸ್, ವೆಟ್ರಿಫೈಡ್ ಟೈಲ್ಸ್, ಎಲ್ಲಾ ತರಹದ ವಾಲ್‌ಟೈಲ್ಸ್, ಫ್ಲೋರ್ ಟೈಲ್ಸ್, ಸ್ಯಾನಿಟರಿವೇರ್ ಮಿತರದಲ್ಲಿ ದೊರೆಯುತ್ತದೆ. ಗ್ರಾಹಕರು ಸಹಕರಿಸುವಂತೆ ಮಾಲಕ ಶೈಜುರವರು ಹೇಳಿದರು.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.