ವಳಕಡಮ: ಶಿಕ್ಷಕಿ ಲಿಲ್ಲಿ ಕಾರ್ಮಿನ್ ವೇಗಸ್‌ರಿಗೆ ಬೀಳ್ಕೊಡುಗೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ರಾಮಕುಂಜ: ಕಳೆದ ಎರಡು ವರ್ಷಗಳಿಂದ ಕೊಯಿಲ ಗ್ರಾಮದ ವಳಕಡಮ ಸರಕಾರಿ ಕಿ.ಪ್ರಾ.ಶಾಲೆಯಲ್ಲಿ ಸಹಶಿಕ್ಷಕಿಯಾಗಿದ್ದು ಡಿ.೩೧ರಂದು ನಿವೃತ್ತರಾದ ಲಿಲ್ಲಿ ಕಾರ್ಮಿನ್ ವೇಗಸ್‌ರವರಿಗೆ ವಿದಾಯ ಸಮಾರಂಭ ಡಿ.31ರಂದು ನಡೆಯಿತು.


ಎಸ್‌ಡಿಎಂಸಿ ಅಧ್ಯಕ್ಷ ರಾಮಣ್ಣ ಗೌಡರವರು ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಡಬ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರೂ ಆದ ದ.ಕ.ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ವಿಮಲ್‌ಕುಮಾರ್‌ರವರು ಮಾತನಾಡಿ, ಶಿಕ್ಷಣ ಇಲಾಖೆಯಲ್ಲಿ 28ವರ್ಷ ಸೇವೆ ಸಲ್ಲಿಸಿದ್ದರೂ ಗ್ರಾಮೀಣ ಪ್ರದೇಶವಾದ ವಳಕಡಮ ಶಾಲೆಯಲ್ಲಿ ಎರಡು ವರ್ಷ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗುವ ಭಾಗ್ಯ ಲಿಲ್ಲಿ ಕಾರ್ಮಿನ್‌ರವರಿಗೆ ಸಿಕ್ಕಿದೆ. ಈ ಅವಧಿಯಲ್ಲಿ ಅವರು ಊರಿನ ಜನರ ಪ್ರಿತಿ, ವಿಶ್ವಾಸಗಳಿಸಿದ್ದಾರೆ. ಊರಿನವರು ಅವರನ್ನು ಅತ್ಯಂತ ಗೌರವದಿಂದ ಬೀಳ್ಕೊಡುವ ಮೂಲಕ ಮಾದರಿ ಆಗಿದ್ದಾರೆ ಎಂದು ಹೇಳಿದರು. ಎಪಿಎಂಸಿ ನಿಕಟಪೂರ್ವ ಸದಸ್ಯ ಶೀನಪ್ಪ ಗೌಡ ವಳಕಡಮ, ಕೊಯಿಲ ಗ್ರಾ.ಪಂ.ಸದಸ್ಯ ಚಂದ್ರಶೇಖರ ಮಾಳ, ಕಡಬ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಬಾಲಕೃಷ್ಣ, ನೂಜಿಬಾಳ್ತಿಲ ಕ್ಲಸ್ಟರ್ ಸಿಆರ್‌ಪಿ ಗೋವಿಂದ ನಾಯ್ಕ್, ಪ್ರಾಥಮಿಕ ಶಾಲಾ ಶಿಕ್ಷಕರ ಜಿಲ್ಲಾ ಸಂಘದ ನಾಮನಿರ್ದೇಶಕ ಉಪಾಧ್ಯಕ್ಷರೂ ಆದ ಆಲಂಕಾರು ಹಿ.ಪ್ರಾ.ಶಾಲಾ ಮುಖ್ಯಶಿಕ್ಷಕ ನಿಂಗರಾಜು, ರಾಮಕುಂಜ ಕ್ಲಸ್ಟರ್ ಸಿಆರ್‌ಪಿ ಮಹೇಶ್ ಎಮ್., ಶಾಂತಿನಗರ ಶಾಲಾ ಶಿಕ್ಷಕ ಪ್ರದೀಪ್ ಬಾಕಿಲ, ಕುಂಡಾಜೆ ಕಿ.ಪ್ರಾ.ಶಾಲೆಯ ಮುಖ್ಯಶಿಕ್ಷಕ ನಾರಾಯಣ ಪಿ.ಎಸ್.ರವರು ಸಂದರ್ಭೋಚಿತವಾಗಿ ಮಾತನಾಡಿ ನಿವೃತ್ತರಿಗೆ ಶುಭಹಾರೈಸಿದರು. ಕೊಯಿಲ ಗ್ರಾ.ಪಂ.ಉಪಾಧ್ಯಕ್ಷೆ ಕಮಲಾಕ್ಷಿ ಪಾಜಳಿಕೆ, ಸದಸ್ಯರಾದ ಸೀತಾರಾಮ ಗೌಡ, ಲತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು.

ಸನ್ಮಾನ ಸ್ವೀಕರಿಸಿದ ನಿವೃತ್ತ ಶಿಕ್ಷಕಿ ಲಿಲ್ಲಿ ಕಾರ್ಮಿನ್ ವೇಗಸ್‌ರವರು ಮಾತನಾಡಿ, ವಳಕಡಮ ಶಾಲೆಯಲ್ಲಿ ಎರಡು ವರ್ಷ ಸೇರಿದಂತೆ ಶಿಕ್ಷಣ ಇಲಾಖೆಯಲ್ಲಿ ಒಟ್ಟು ೨೮ ವರ್ಷ ೫ ತಿಂಗಳುಗಳ ಕಾಲ ಸೇವೆ ಸಲ್ಲಿಸಿದ್ದೇನೆ. ಈ ಅವಧಿಯಲ್ಲಿ ಸಲಹೆ ಸೂಚನೆ ನೀಡಿ ಪ್ರೋತ್ಸಾಹಿಸಿದ ಶಿಕ್ಷಣ ಇಲಾಖೆಯ ಅಧಿಕಾರಿ ವರ್ಗಕ್ಕೆ, ಶಿಕ್ಷಕವೃಂದಕ್ಕೆ, ಶಾಲಾ ಎಸ್‌ಡಿಎಂಸಿಯವರಿಗೆ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಹೇಳಿದರು.

ದೇಣಿಗೆ:
ನಿವೃತ್ತ ಶಿಕ್ಷಕಿ ಲಿಲ್ಲಿ ಕಾರ್ಮಿನ್ ವೇಗಸ್‌ರವರ ಅತ್ತೆ ಸಿಸಿಲಿಯಾ ಸೆರಾವೋರವರು ಶಾಲೆಗೆ ೧೦ ಸಾವಿರ ರೂ.,ದೇಣಿಗೆ ಮತ್ತು ಗಡಿಯಾರ ಕೊಡುಗೆಯಾಗಿ ನೀಡಿದರು.
ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೋಹನದಾಸ್‌ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಮುಖ್ಯಶಿಕ್ಷಕಿ ಸಂಧ್ಯಾ ಕೆ.,ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಗೌರವ ಶಿಕ್ಷಕಿ ಲಾವಣ್ಯ ವಂದಿಸಿದರು. ರಾಮಕುಂಜ ಶಾಲಾ ಶಿಕ್ಷಕ ಅರುಣ್ ಶೇಟ್, ವಳಕಡಮ ಶಾಲಾ ಎಸ್‌ಡಿಎಂಸಿ ಉಪಾಧ್ಯಕ್ಷೆ ಶಾರದಾ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷರಾದ ದಿನೇಶ್ ಗೌಡ, ಆನಂದ ಗೌಡ, ಅಂಗನವಾಡಿ ಕಾರ್ಯಕರ್ತೆ ಸವಿತಾ, ಎಸ್‌ಡಿಎಂಸಿ ಸದಸ್ಯರು, ಪೋಷಕರು, ಊರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಗೆ ಸಿಹಿಯೂಟ ನೀಡಲಾಯಿತು.

ಸನ್ಮಾನ:
ನಿವೃತ್ತರಾದ ಶಿಕ್ಷಕಿ ಲಿಲ್ಲಿ ಕಾರ್ಮಿನ್ ವೇಗಸ್‌ರವರನ್ನು ಶಾಲಾ ಎಸ್‌ಡಿಎಂಸಿ, ಪೋಷಕರು, ಹಿರಿಯ ವಿದ್ಯಾರ್ಥಿ ಸಂಘ, ಶಿಕ್ಷಕವೃಂದದ ವತಿಯಿಂದ ಶಾಲುಹಾಕಿ, ಫಲತಾಂಬೂಲ,ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಇದೇ ವೇಳೆ ಲಿಲ್ಲಿ ಕಾರ್ಮಿನ್ ವೇಗಸ್‌ರವರ ಪತಿ ನಿವೃತ್ತ ಎಎಸ್‌ಐ ವಿಲಿಯಂ ಸೆರಾವೋ ಹಾಗೂ ಅತ್ತೆ ಸಿಸಿಲಿಯಾ ಸೆರವೋರವರಿಗೂ ಶಾಲು ಹಾಕಿ ಗೌರವಿಸಲಾಯಿತು. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು ಇದರ ಕಡಬ ತಾಲೂಕು ಸಮಿತಿ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘ ಕಡಬ ಇದರ ವತಿಯಿಂದ ‘ಗುರುಭ್ಯೋ ನಮ:’ ಕಾರ್ಯಕ್ರಮದಂತೆ ನಿವೃತ್ತ ಶಿಕ್ಷಕಿ ಲಿಲ್ಲಿ ಕಾರ್ಮಿನ್ ವೇಗಸ್‌ರನ್ನು ಸನ್ಮಾನಿಸಲಾಯಿತು. ಗೌರವ ಶಿಕ್ಷಕಿ ಲಾವಣ್ಯ ಸನ್ಮಾನ ಪತ್ರ ವಾಚಿಸಿದರು. ೨೦೨೦ನೇ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ, ಕುಂಡಾಜೆ ಸರಕಾರಿ ಕಿ.ಪ್ರಾ.ಶಾಲಾ ಮುಖ್ಯಗುರು ನಾರಾಯಣ ಪಿ.ಎಸ್.,ರವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.