ಜಾನಪದ ಕಲಾವಿದ ಚೋಮ ಬೆಟ್ಟಂಪಾಡಿರವರಿಗೆ ಬೆಂಗಳೂರಿನಲ್ಲಿ ‘ಸುವರ್ಣ ಕನ್ನಡಿಗ’ ರಾಜ್ಯ ಪ್ರಶಸ್ತಿ ಪ್ರಧಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕರ್ನಾಟಕ ಪ್ರದೇಶ ಹಿಂದುಳಿದ‌ವರ್ಗಗಳ ಮಹಾ ಒಕ್ಕೂಟ, ಸುವರ್ಣ ಚಾರಿಟೇಬಲ್ ಟ್ರಸ್ಟ್ ಕೊಡಮಾಡುವ ಪ್ರತಿಷ್ಠಿತ ‘ಸುವರ್ಣ ಕನ್ನಡಿಗ’ ರಾಜ್ಯ ಪ್ರಶಸ್ತಿಗೆ ಜಾನಪದ ಕಲಾವಿದ ಚೋಮ ಬೆಟ್ಟಂಪಾಡಿ ರವರು ಆಯ್ಕೆಯಾಗಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸಹಯೋಗದೊಂದಿಗೆ ಡಿ.೩೧ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು.

ಜಾನಪದ ಕಲಾವಿದ ಚೋಮ ಬೆಟ್ಟಂಪಾಡಿರವರು ಪಾಡ್ದನ, ಭೂತಕುಣಿತ, ಮುಖವಾಡ ತಯಾರಿ, ಜನಪದ ಗಾಯನ ಸಹಿತ ಜನಪದ ಲೋಕದಲ್ಲಿ ವಿಶೇಷ ಸಾಧನೆ ಮಾಡಿದವರಾಗಿದ್ದಾರೆ. ಮೂಲತಃ ಕಾಟುಕುಕ್ಕೆ ನಿವಾಸಿಯಾಗಿದ್ದು ಆ ಬಳಿಕ ಅವರ ತಂದೆಯೊಂದಿಗೆ ಬೆಟ್ಟಂಪಾಡಿಯ ಇರ್ದೆಗೆ ಬಂದು ನೆಲೆಸಿ,  ಭೂತ, ನೇಮ, ಆಟಿಕಳೆಂಜ ಮೊದಲಾದ ಜನಪದ ವೇಷಗಳನ್ನು ಧರಿಸುತ್ತಿದ್ದರು.

೧೯೯೩ರಲ್ಲಿ ಕಾಸರಗೋಡಿನ ನಾಡಹಬ್ಬದ ಸಂದರ್ಭದಲ್ಲಿ ಇವರ ಪ್ರತಿಭೆಯನ್ನು ಗುರುತಿಸಿ ‘ ಜಾನಪದ ಕಲಾವಿದ’ ಎಂಬ ಪುರಸ್ಕಾರ ನೀಡಿ ಸನ್ಮಾನಿಸಲಾಗುತ್ತು. ೨೦೦೪ರಲ್ಲಿ ಪುತ್ತೂರು ತಾಲೂಕು ಮಕ್ಕಳ ಪ್ರಥಮ ಸಾಹಿತ್ಯ ಸಮ್ಮೇಳನದಲ್ಲಿ ‘ಜಾನಪದ ಸಾಧಕ’ ಪುರಸ್ಕಾರ ನೀಡಿ ಅಭಿನಂದಿಸಲಾಗಿತ್ತು. ಕರ್ನಾಟಕ ಸರಕಾರ ಹಾಗೂ ಕನ್ನಡ & ಸಂಸ್ಕೃತಿ ಇಲಾಖೆ ವತಿಯಿಂದ ಪುತ್ತೂರಿನಲ್ಲಿ ನಡೆದ ರಂಗ ಸೌರಭ ಕಾರ್ಯಕ್ರಮದಲ್ಲಿ ಇವರನ್ನು ಸನ್ಮಾನಿಸಲಾಗಿತ್ತು. ಇಷ್ಟು ಮಾತ್ರವಲ್ಲದೆ ಇವರ ಪ್ರತಿಭೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಇವರನ್ನು  ಗೌರವಿಸಿತ್ತು.

ಚೋಮ ಬೆಟ್ಟಂಪಾಡಿಯವರು ಪತ್ನಿ ಸುಂದರಿ ಮಕ್ಕಳಾದ ಗಂಗಾಧರ, ಹರೀಶ, ಜನಾರ್ದನ, ಶುಭಕರ, ಪುರುಷೋತ್ತಮ ರವರೊಂದಿಗೆ ಬೆಟ್ಟಂಪಾಡಿಯ ಇರ್ದೆಯಲ್ಲಿ ನೆಲೆಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.