ಫಿಲೋಮಿನಾ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ವಂ|ಡಾ|ಆಂಟನಿ ಪ್ರಕಾಶ್ ಮೊಂತೆರೋ ನೇಮಕ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಪ್ರಾಂಶುಪಾಲರಾಗಿದ್ದ ಪ್ರೊ|ಲಿಯೋ ನೊರೋನ್ಹಾ ಮಡಂತ್ಯಾರು ಕಾಲೇಜಿಗೆ ವರ್ಗಾವಣೆ

ಪುತ್ತೂರು: ಶಿಕ್ಷಣ ಶಿಲ್ಪಿ ಮೊ|ಆಂಟನಿ ಪತ್ರಾವೋರವರಿಂದ ಸ್ಥಾಪಿತಗೊಂಡ ಸಂತ ಫಿಲೋಮಿನಾ ಕಾಲೇಜಿನ ಒಂಭತ್ತನೇ ನೂತನ ಪ್ರಾಂಶುಪಾಲರಾಗಿ ವಂ|ಡಾ|ಆಂಟನಿ ಪ್ರಕಾಶ್ ಮೊಂತೆರೋರವರು ನೇಮಕಗೊಂಡಿದ್ದಾರೆ. ಕಾಲೇಜಿನ ಪ್ರಥಮ ಪ್ರಾಂಶುಪಾಲ ವಂ|ಸೆರಾವೋ, ವಂ|ಹೆನ್ರಿ ಕ್ಯಾಸ್ಟಲಿನೋ, ವಂ|ಜೆ.ಬಿ ಡಿ’ಸೋಜ, ವಂ|ಲಾರೆನ್ಸ್ ಮೆಂಡೋನ್ಸಾ, ವಂ|ಫ್ರೆಡ್ ಮಸ್ಕರೇನ್ಹಸ್, ಡಾ|ಜಾನ್ ಸಿ.ಮಿರಾಂದ, ವಂ|ಎಫ್.ಎಕ್ಸ್ ಗೋಮ್ಸ್, ಪ್ರೊ|ಲಿಯೋ ನೊರೋನ್ಹಾರವರು ಕಾಲೇಜನ್ನು ಮುನ್ನೆಡೆಸಿದ್ದರು.


ನೂತನ ಪ್ರಾಂಶುಪಾಲರಾಗಿ ನೇಮಕಗೊಂಡ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೋರವರನ್ನು ಮಂಗಳೂರು ಧರ್ಮಪ್ರಾಂತ್ಯದ ಕೆಥೋಲಿಕ್ ಶಿಕ್ಷಣ ಮಂಡಳಿ ಅಧ್ಯಕ್ಷರಾದ ಬಿಷಪ್ ಅತಿ.ವಂ|ಡಾ|ಪೀಟರ್ ಪಾವ್ಲ್ ಸಲ್ದಾನ್ಹಾರವರು ನೇಮಿಸಿರುತ್ತಾರೆ. ಕಳೆದ ಹನ್ನೆರಡು ವರ್ಷಗಳಿಂದ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದ ಪ್ರೊ|ಲಿಯೋ ನೊರೊನ್ಹಾರವರು ಮಡಂತ್ಯಾರ್‌ನ ಸೆಕ್ರೆಡ್ ಹಾರ್ಟ್ ಕಾಲೇಜಿಗೆ ಸಹಾಯಕ ಪ್ರಾಧ್ಯಾಪಕರಾಗಿ ವರ್ಗಾವಣೆ ಹೊಂದಿದ್ದು, ಇವರಿಂದ ತೆರವಾದ ಹುದ್ದೆಗೆ ಭೌತಶಾಸ್ತ್ರ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ವಂ|ಡಾ|ಆಂಟನಿ ಪ್ರಕಾಶ್ ಮೊಂತೆರೋರವರು ಪ್ರಾಂಶುಪಾಲರಾಗಿ ನಿಯುಕ್ತಗೊಂಡಿದ್ದಾರೆ. ನೂತನ ಪ್ರಾಂಶುಪಾಲರಾಗಿರುವ ವಂ|ಡಾ|ಆಂಟನಿ ಪ್ರಕಾಶ್ ಮೊಂತೆರೋರವರು ಕಥೋಲಿಕ್ ಶಕ್ಷಣ ಮಂಡಳಿಯ ಜೊತೆ ಕಾರ್ಯದರ್ಶಿ, ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾಗಿರುವ ವಂ|ಜೆರೊಮ್ ಲಾರೆನ್ಸ್ ಮಸ್ಕರೇನ್ಹಸ್‌ರವರಿಂದ ಅಧಿಕಾರ ಸ್ವೀಕರಿಸಿದರು.


ವಂ|ಪ್ರಕಾಶ್ ಮೊಂತೆರೋರವರ ಆರಂಭಿಕ ಶಿಕ್ಷಣ ಉಡುಪಿಯ ಶಿರ್ವದಲ್ಲಿ ಪಡೆದಿದ್ದರು. ಸಂತ ಫಿಲೊಮಿನಾ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಶಿಕ್ಷಣಗೈಯುತ್ತಿದ್ದ ಸಂದರ್ಭದಲ್ಲಿ ಮಂಗಳೂರು ವಿ.ವಿಯಿಂದ ಕಾಲೇಜಿಗೆ ಐದನೇ ರ್‍ಯಾಂಕ್ ಹಾಗೂ ಭೌತಶಾಸ್ತ್ರ ಸ್ನಾತಕೋತ್ತರ ವಿಭಾಗದಲ್ಲಿ ಮಂಗಳೂರು ವಿ.ವಿಯಲ್ಲಿ ಪ್ರಥಮ ರ್‍ಯಾಂಕ್‌ನೊಂದಿಗೆ ಎಂಎಸ್ಸಿ ಪದವಿಯನ್ನು ವಂ|ಪ್ರಕಾಶ್ ಮೊಂತೇರೋರವರು ಗಳಿಸಿರುತ್ತಾರೆ ಅಲ್ಲದೆ ಮಂಗಳೂರು ವಿ.ವಿಯ ಡಾ|ವಿಜಯಕುಮಾರ್‌ರವರ ಮಾರ್ಗದರ್ಶನದಲ್ಲಿ ಸೈದ್ಧಾಂತಿಕಕಣ ಭೌತ ವಿಜ್ಞಾನದಲ್ಲಿ ಸಂಶೋಧನೆ ನಡೆಸಿ ಡಾಕ್ಟರೇಟ್ ಪದವಿಯನ್ನೂ ಅವರು ಪಡೆದುಕೊಂಡಿರುತ್ತಾರೆ. ಮಂಗಳೂರಿನ ಜೆಪ್ಪು ಸೆಮಿನರಿಯಲ್ಲಿ ಧಾರ್ಮಿಕ ಶಿಕ್ಷಣ ಪಡೆದು, ೨೦೦೬ರಲ್ಲಿ ಗುರುದೀಕ್ಷೆಯನ್ನು ಗಳಿಸಿದ ಬಳಿಕ ಬಿಜೈಯ ಸೈಂಟ್ ಕ್ಸೇವಿಯರ್ ಚರ್ಚ್, ತಲಪಾಡಿಯ ಲೇಡಿಚರ್ಚ್ ಮತ್ತು ಪುತ್ತೂರಿನ ಮರೀಲ್ ಚರ್ಚುಗಳಲ್ಲಿಯೂ ಧಾರ್ಮಿಕ ಗುರುಗಳಾಗಿ ಸೇವೆ ಸಲ್ಲಿಸಿರುತ್ತಾರೆ.


ವಂ|ಆಂಟನಿ ಪ್ರಕಾಶ್‌ರವರು ೨೦೧೧ರಲ್ಲಿ ಸಂತ ಫಿಲೋಮಿನಾ ಕಾಲೇಜಿನ ಭೌತಶಾಸ್ತ್ರ ವಿಭಾಗದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ನೇಮಕಗೊಂಡು ಶೈಕ್ಷಣಿಕ ವೃತ್ತಿಜೀವನವನ್ನು ಆರಂಭಿಸಿದರು. ಕಾಲೇಜಿನ ಕ್ಯಾಂಪಸ್ ನಿರ್ದೇಶಕರಾಗಿ ಮತ್ತು ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ನಿರ್ದೇಶಕರಾಗಿಯೂ ಅವರು ಕರ್ತವ್ಯ ನಿರ್ವಹಿಸಿರುತ್ತಾರೆ. ಕೇಂದ್ರ ಸರಕಾರದ ಬೋರ್ಡ್ ಆಫ್ ರೀಸರ್ಚ್ ಇನ್ ನ್ಯೂಕ್ಲಿಯರ್ ಸೈನ್ಸ್ ಇದರ ಅನುದಾನದಲ್ಲಿ ಉನ್ನತ ಸಂಶೋಧನಾ ಪ್ರಾಜೆಕ್ಟನ್ನು ವಂ|ಪ್ರಕಾಶ್ ಮೊಂತೇರೋರವರು ಯಶಸ್ವಿಯಾಗಿ ಮಂಡಿಸಿರುತ್ತಾರೆ. ಇವರ ಹಲವಾರು ಸಂಶೋಧನಾ ಲೇಖನಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾನ್ಯತೆಯ ಸಂಶೋಧನಾ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕರ್ನಾಟಕ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವಿಜಿಎಸ್‌ಟಿ ಯುವ ಸಂಶೋಧಕರಿಗೆ ಸಂಶೋಧನ ಲೇಖನ ಪ್ರಕಟಣೆಗೆ ನೀಡುವ ಪ್ರಶಸ್ತಿಯನ್ನು ವಂ|ಡಾ|ಆಂಟನಿ ಪ್ರಕಾಶ್ ಮೊಂತೆರೋರವರು ಭಾಜನರಾಗಿದ್ದಾರೆ. ಪ್ರಸ್ತುತ ನ್ಯೂಕ್ಲಿಯರ್ ಮತ್ತು ಕಣ ಭೌತ ವಿಜ್ಞಾನ ಕ್ಶೇತ್ರದಲ್ಲಿ ಸೈದ್ಧಾಂತಿಕ ಸಂಶೋಧನಾ ಕೇಂದ್ರವನ್ನು ಕಾಲೇಜಿನಲ್ಲಿ ಸ್ಥಾಪಿಸಲು ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಿಂದ ಅನುದಾನ ಪಡೆದಿರುತ್ತಾರೆ. ಮೈಸೂರಿನ ಮುಕ್ತ ವಿಶ್ವ ವಿದ್ಯಾಲಯದಿಂದ ಕನ್ನಡದಲ್ಲಿ ಎಂಎ ಪದವಿಯನ್ನೂ ಪಡೆದ ಇವರು ಕೊಂಕಣಿ ಮತ್ತು ಕನ್ನಡದಲ್ಲಿ ಲೇಖನಗಳನ್ನು ಮತ್ತು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಬೈಬಲ್ ಕುರಿತು ಕನ್ನಡ, ಇಂಗ್ಲೀಷ್ ಮತ್ತು ಕೊಂಕಣಿಯಲ್ಲಿ ರಸಪ್ರಶ್ನೆ, ಪುಸ್ತಗಳನ್ನು ಕೂಡ ಪ್ರಕಟಿಸಿದ್ದಾರೆ.

ಅಧಿಕಾರ ಹಸ್ತಾಂತರ ಸಂದರ್ಭದಲ್ಲಿ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಂವಿಜಯ್ ಲೋಬೋ, ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋ, ಫಿಲೋಮಿನಾ ಕಾಲೇಜು ಪುರುಷರ ವಸತಿನಿಲಯದ ವಾರ್ಡನ್ ವಂ|ಅಶೋಕ್ ರಾಯನ್ ಕ್ರಾಸ್ತಾ, ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ಆರ್ಥಿಕ ಸಮಿತಿಯ ಸದಸ್ಯರಾದ ವಲೇರಿಯನ್ ಫೆರ್ನಾಂಡೀಸ್, ಪ್ರೊ|ಝೇವಿಯರ್ ಡಿ’ಸೋಜ, ಕಾಲೇಜು ಆಡಳಿತ ಸಮಿತಿ ಸದಸ್ಯರಾದ ಜೋನ್ ಕುಟಿನ್ಹಾ, ಜೋನ್ ಡಿ’ಸೋಜ, ಹಿರಿಯ ವಿದ್ಯಾರ್ಥಿ ಸಂಘದ ಎ.ಜೆ ರೈ ಮತ್ತು ಜಯಕುಮಾರ್ ರೈ ಎಂ.ಆರ್ ಹಾಗೂ ಕಾಲೇಜಿನ ಬೋಧಕ ಮತ್ತು ಆಡಳಿತ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಪ್ರೊ|ಲಿಯೋ ನೊರೊನ್ಹಾರವರಿಗೆ ವಿದಾಯ…
ಕಾಲೇಜಿನ ಕಛೇರಿಯಲ್ಲಿ ನಡೆದ ವಿದಾಯ ಸಭೆಯಲ್ಲಿ ಕಾಲೇಜಿನ ಸಂಚಾಲಕರಾದ ವಂ|ಜೆರೊಮ್ ಲಾರೆನ್ಸ್ ಮಸ್ಕರೇನ್ಹಸ್‌ರವರು ಮಾತನಾಡಿ, ಪ್ರೊ|ಲಿಯೋ ನೊರೊನ್ಹಾರವರು ಕಾಲೇಜಿಗೆ ಪ್ರಾಂಶುಪಾಲರಾಗಿ ಅಮೂಲ್ಯ ಕೊಡುಗೆ ನೀಡಿದ್ದಾರೆ ಮತ್ತು ಅವರ ಕಾರ್ಯತತ್ಪರತೆ, ಶಿಸ್ತು, ಸೇವಾ ಮನೋಭಾವ ಸದಾ ಸ್ಮರಣೀಯ ಮತ್ತು ಅನುಕರಣೀಯ ಎಂದರು. ಈ ಸಂದರ್ಭದಲ್ಲಿ ಶಿಕ್ಷಕ ಸಂಘದ ಕಾರ್ಯದರ್ಶಿ ಪ್ರೊ|ಗಣೇಶ್ ಭಟ್‌ರವರು ಪ್ರೊ|ಲಿಯೋ ನೊರೋನ್ಹಾರವರ ಕೊಡುಗೆಯನ್ನು ಶ್ಲಾಘಿಸಿದರು. ಫಿಲೋಮಿನಾ ಕಾಲೇಜಿನಲ್ಲಿ ತಾನು ಪ್ರಾಧ್ಯಾಪಕನಾಗಿ, ಪ್ರಾಂಶುಪಾಲನಾಗಿ ಕಳೆದ ದಿನಗಳನ್ನು ಭಾವುಕರಾಗಿ ಸ್ಮರಿಸಿಕೊಂಡ ಪ್ರೊ|ಲಿಯೋ ನೊರೊನ್ಹಾ, ಕಾಲೇಜಿನ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ತನ್ನ ಕರ್ತವ್ಯದ ಹೆಚ್ಚಿನ ಸಮಯವನ್ನು ಫಿಲೋಮಿನಾ ಕಾಲೇಜಿನಲ್ಲಿಯೇ ಕಳೆದಿದ್ದೇನೆ ಮತ್ತು ಅದು ನನ್ನ ಎರಡನೇಯ ಮನೆಯೇ ಆಗಿತ್ತು ಎಂದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.