ಪಡುಮಲೆ: ಕೂವೆ ಶಾಸ್ತಾರ ವಿಷ್ಣುಮೂರ್ತಿ ಹಾಗೂ ಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ಜಾತ್ರೋತ್ಸವದ ಗೊನೆ ಮುಹೂರ್ತ

0

ಬಡಗನ್ನೂರುಃ ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನ ಹಾಗೂ ಶ್ರೀ ಪೂಮಾಣಿ ಕಿನ್ನಿಮಾಣಿ (ಉಳ್ಳಾಕುಲು) ದೈವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಅಂಗವಾಗಿ ಜ. 2 ರಂದು   ನಾರಾಯಣ ಕುದ್ಕಾಡಿ ಇವರ ತೋಟದಲ್ಲಿ   ಗೊನೆ ಮುಹೂರ್ತ ಮಾಡಲಾಯಿತು.

ಉದಯ ಕುಮಾರ್ ಪಡುಮಲೆ ಗೊನೆ ಮುಹೂರ್ತ ಮಾಡಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮನೋಜ್‌ ರೈ ಪೇರಾಲು, ಸದಸ್ಯ ಚಂದ್ರಶೇಖರ ಆಳ್ವ , ಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ಉಪಾಧ್ಯಕ್ಷ ರವಿರಾಜ ರೈ ಸಜಂಕಾಡಿ, 
ಜೀರ್ಣೋದ್ಧಾರ ಸಮಿತಿ ಸದಸ್ಯ ವಿಷ್ಣು ಭಟ್ ಪಡ್ಪು, ಹಾಗೂ ಉತ್ಸವ ಸಮಿತಿ ಅಧ್ಯಕ್ಷ  ರಾಮಣ್ಣ ಗೌಡ ಬಸವ ಹಿತ್ಲು ಹಾಗೂ ಊರಿನವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here