ಪೆರ್ನಾಜೆ ಶ್ರೀ ಸೀತಾರಾಘವ ಪದವಿಪೂರ್ವ ವಿದ್ಯಾಲಯದಲ್ಲಿ ಸ್ನೇಹ ಮಿಲನ, ಹೊಸ ವರ್ಷಾಚರಣೆ, ಸನ್ಮಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪೆರ್ನಾಜೆ ಶ್ರೀ ಸೀತಾರಾಘವ ಪದವಿಪೂರ್ವ ವಿದ್ಯಾಲಯದಲ್ಲಿ ೧೯೯೧-೯೨ ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಸ್ನೇಹ ಮಿಲನ, ಹೊಸ ವರ್ಷಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮ ಜ.೦೧ ರಂದು ನಡೆಯಿತು. ಸಭಾಧ್ಯಕ್ಷತೆ ವಹಿಸಿದ್ದ ಪ.ಪೂ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಶ್ರೀಕೃಷ್ಣ ಭಟ್‌ರವರು ಮಾತನಾಡಿ, ತಾವು ಕಲಿತ ವಿದ್ಯಾಸಂಸ್ಥೆಯ ಏಳಿಗೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು ಆಗಿದೆ. ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನವನ್ನು ಕಿರಿಯರು ಅನುಸರಿಸಿಕೊಂಡು ನಡೆಯಬೇಕು ಎಂದು ಹೇಳಿ ಶುಭ ಹಾರೈಸಿದರು. ಶಾಲೆಯಲ್ಲಿ ೧೯೯೧-೯೨ ನೇ ಸಾಲಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಸಮಾಜದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಸುಮಾರು ೫೦ ಅಕ್ಕೂ ಅಧಿಕ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಒಟ್ಟು ಸೇರಿದ್ದರು. ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ನಿವೃತ್ತಿ ಹೊಂದಿದ ಸುಕನ್ಯಾ ಮತ್ತು ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ ಅರ್ಥಶಾಸ್ತ್ರ ಉಪನ್ಯಾಸಕ ಕೆ.ಆರ್.ಗೋಪಾಲಕೃಷ್ಣರವರನ್ನು ವಿದ್ಯಾರ್ಥಿಗಳ ವತಿಯಿಂದ ಸನ್ಮಾನಿಸಲಾಯಿತು.

ನಿವೃತ್ತ ಸೈನಿಕರಿಗೆ ಸನ್ಮಾನ
ಇದೇ ಶಾಲೆಯಲ್ಲಿ ಕಲಿತು ಸೇನೆಯಲ್ಲಿ ಸೇರಿ ದೇಶ ಸೇವೆ ಮಾಡಿ ನಿವೃತ್ತರಾದ ಸೈನಿಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ನಿವೃತ್ತ ಸೈನಿಕ, ೧೯೯೨ ರ ಬ್ಯಾಚ್‌ನ ಶಾಲಾ ಪ್ರತಿನಿಧಿ ವಿದೀಪ್ ಕುಮಾರ್ ಕುಂಬ್ರ, ಉಮಾನಾಥ್ ಕೆ.ಎಸ್ ಹಾಗೂ ಪ್ರಸ್ತುತ ಸೇನೆಯಲ್ಲಿ ಕರ್ತವ್ಯ ಸಲ್ಲಿಸುತ್ತಿರುವ ನವೀನ್ ರೈರವರನ್ನು ಸನ್ಮಾನಿಸಲಾಯಿತು. ಸನ್ಮನಿತರ ಪರವಾಗಿ ಕೆ.ಆರ್.ಗೋಪಾಲಕೃಷ್ಣ, ಸುಕನ್ಯಾ, ಶಾಲ ಪರವಾಗಿ ಆಂಗ್ಲ ಭಾಷಾ ಉಪನ್ಯಾಸಕ ಮಂಟಯ್ಯಾ, ಹಿರಿಯ ವಿದ್ಯಾರ್ಥಿಗಳ ಪರವಾಗಿ ಈಶ್ವರ ಉಳಿತ್ತಾಯ, ಹರೀಶ್ ರಾವ್ ಮತ್ತು ಜಯಂತಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ವೇದಿಕೆಯಲ್ಲಿ ಕಾಲೇಜು ಪ್ರಾಂಶುಪಾಲೆ ಚಂದ್ರಮುಖಿ, ಪ್ರೌಢ ಶಾಲಾ ಮುಖ್ಯಗುರು ಸುಜಾತ, ಆಡಳಿತ ಮಂಡಳಿ ಸಂಚಾಲಕ ಶಂಕರನಾರಾಯಣ ಭಟ್, ಕಾಲೇಜಿನ ನಿಕಟಪೂರ್ವ ಪ್ರಾಂಶುಪಾಲ ಕೆ.ಆರ್.ಜಿ ಮತ್ತಿತರರು ಉಪಸ್ಥಿತರಿದ್ದರು. ರಮೇಶ್ ರಾವ್ ಪ್ರಾರ್ಥಿಸಿದರು. ದಿನೇಶ್ ಅಡ್ಯಾರ್ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ಶ್ರೀಲತಾ ಪ್ರಸನ್ನ ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ,ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಹೊಸ ವರ್ಷದ ಅಂಗವಾಗಿ ಮಧ್ಯಾಹ್ನ ವಿಶೇಷ ಸಹಭೋಜನದ ವ್ಯವಸ್ಥೆ ಮಾಡಲಾಗಿತ್ತು.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.