ನಮ್ಮನ್ನು ಸರಕಾರಿ ನೌಕರರನ್ನಾಗಿ ಪರಿಗಣಿಸಿ, ಕನಿಷ್ಠ ವೇತನ, ಪಿಂಚಣಿ ನೀಡಿ- ರಾಜ್ಯಾಧ್ಯಕ್ಷೆ ಜಯಲಕ್ಷ್ಮೀ

0

  • ಅಂಗನವಾಡಿ, ಕಾರ್ಯಕರ್ತೆ ಸಹಾಯಕಿಯರ ಸಂಘದ ಮಹಾಸಭೆ

ಪುತ್ತೂರು:ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರನ್ನು ಸರಕಾರಿ ನೌಕರರನ್ನಾಗಿ ಪರಿಗಣಿಸಿ, ಕನೀಷ್ಠ ವೇತನ ನಿಗದಿಪಡಿಸಬೇಕು. ನಿವೃತ್ತಿಯ ನಂತರ ಪಿಂಚಣಿ ನೀಡಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಯಾಯಕಿಯರ ಸಂಘದ ರಾಜ್ಯಾಧ್ಯಕ್ಷ ಜಯಲಕ್ಷ್ಮೀ ಮಂಗಳೂರು ಆಗ್ರಹಿಸಿದರು.

ಪುತ್ತೂರು ಕೋ-ಆಪರೇಟಿವ್ ಟೌನ್‌ಬ್ಯಾಂಕ್‌ನ ಸಭಾಂಗಣದಲ್ಲಿ ಜ.೨ರಂದು ನಡೆದ ತಾಲೂಕು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘದ ಮಹಾಸಭೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಕಳೆದ ೪೦ ವರ್ಷಗಳಿಂದ ಕಾರ್ಯಕರ್ತೆಯಾಗಿದ್ದವರು ಈಗಲೇ ಅದೇ ಪರಿಸ್ಥಿತಿಯಲ್ಲಿದ್ದೇವೆ. ಸಂಘಟಿತ ಹೋರಾಟದಿಂದಾಗಿ ಇಂದು ಹತ್ತು ಸಾವಿರ ರೂಪಾಯಿ ಗೌರವಧನ ಪಡೆಯುತ್ತಿದ್ದೇವೆ. ಸರಕಾರಿ ನೌಕರರಿಗೆ ಹಂತ ಹಂತವಾಗಿ ವೇತನ ಸೌಲಭ್ಯಗಳು ಏರಿಕೆಯಾಗುತ್ತಾ ಹೋಗುತ್ತದೆ. ಆದರೆ ನಮ್ಮ ಇಂದಿಗೂ ಗೌರವ ಕಾರ್ಯಕರ್ತೆಯಾಗಿಯೇ ಉಳಿಸಿಕೊಂಡಿದ್ದಾರೆ. ಸರಕಾರ ಸಾಕಷ್ಟು ಒತ್ತಡ ಕೆಲಸಗಳನ್ನು ನಮ್ಮ ಮೂಲಕ ಮಾಡಿಸುತ್ತಾರೆ. ಆದರೆ ಅದಕ್ಕೆ ಪೂರಕವಾದ ವೇತನ ನೀಡುತ್ತಿಲ್ಲ. ಬೇಡಿಕೆ ಈಡೇರಿಸುವಂತೆ ನಾವು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹೋರಾಟ ನಡೆಸಿದ್ದೇವೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಈಗಿನ ಕೆಲಸಕ್ಕೆ ಮಾನದಂಡ ಮಾಡುವಂತೆ ಮಹಿಳಾ ಸಂಸದರು ಪಾರ್ಲಿಮೆಂಟ್‌ನಲ್ಲಿ ಒತ್ತಡ ತಂದಿರುವುದಲ್ಲದೆ ಸುಪ್ರೀಂಕೋರ್ಟ್ ಇದಕ್ಕೆ ಅನುಮೋದನೆ ನೀಡಿದೆ. ಆದರೂ ಯಾವುದೇ ಸರಕಾರ ಆಡಳಿತ ನಡೆಸಿದರೂ ನಮ್ಮ ಬೇಡಿಕೆ ಈಡೇರಿಲ್ಲ. ನಮಗೂ ನಿವೃತ್ತಿಯ ವಯಸ್ಸು ಘೋಷಿಸಿದ ಸರಕಾರ ನಿವೃತ್ತಿಯ ನಂತರ ಪಿಂಷಣಿ ನೀಡುತ್ತಿಲ್ಲ. ನಮ್ಮ ಶ್ರಮಕ್ಕೆ ಬೆಲೆ ಇಲ್ಲದಂತಾಗಿದೆ. ನಮ್ಮನ್ನು ಸೇವಕರನ್ನಾಗಿಯೇ ದುಡಿಸಿಕೊಳ್ಳುತ್ತಿದ್ದಾರೆ. ಕೊರೋನಾ ಸಂದರ್ಭದಲ್ಲಿ ಆರೋಗ್ಯ ಇಲಾಖೆಯವರ ಕರ್ತವ್ಯಕ್ಕೆ ಪೂರಕವಾಗಿ ಅವರಿಗಿಂತ ಹತ್ತುಪಟ್ಟು ಕೆಲಸ ಮಾಡಿದ ನಾವು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದೇವೆ. ಆದರೆ ಆಶಾ ಕಾರ್ಯಕರ್ತೆಯರಿಗೆ ದೊರೆತ ಗೌರವ ನಮಗೆ ದೊರೆತಿಲ್ಲ ಎಂದು ಬೇಸರ ವ್ಯಕ್ತಡಿಸಿದರು.
ಮುಖ್ಯ ಅತಿಥಿಯಾಗಿದ್ದ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭಾರತಿ ಮಾತನಾಡಿ, ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಯಾವುದೇ ರೀತಿಯ ಸಮಸ್ಯೆಗಳು ಉಂಟಾಸದಲ್ಲಿ ಇಲಾಖೆಯ ಗಮನಕ್ಕೆ ತರಬೇಕು. ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಸಹಕರಿಸಲಾಗುವುದು. ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಂಘಟಿತ ಹೋರಾಟ ಅವಶ್ಯಕ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಮಲ್ಲಿಕಾ ಎಸ್ ಆಳ್ವ ಮಾತನಾಡಿ, ತಾಲೂಕಿನ ಅಸಾಯಹಕ ಕಾರ್ಯಕರ್ತೆ, ಸಹಾಯಕಿಯರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡುವ ನಿಟ್ಟಿನಲ್ಲಿ ಸೇವಾಂಜಲಿ ಟ್ರಸ್ಟ್‌ನಲ್ಲಿ ರೂ.೨೫,೦೦೦ ಠೇವಣಿಯಿಡಲಾಗುವುದು. ಇದರ ಬಡ್ಡಿ ಹಣದಲ್ಲಿ ಓರ್ವ ವಿದ್ಯಾರ್ಥಿಯ ವಿದ್ಯಭ್ಯಾಸಕ್ಕೆ ನೆರವು ನೀಡಲಾಗುವುದು ಎಂದು ಹೇಳಿದ ಅವರು ರೂ.೨೫,೦೦೦ದ ಚೆಕ್‌ನ್ನು ರಾಜ್ಯಾಧ್ಯಕ್ಷೆ ಜಯಲಕ್ಷ್ಮೀಯವರಿಗೆ ಹಸ್ತಾಂತರಿಸಿದರು.

ಸನ್ಮಾನ:
ಸಂಘದ ರಾಜ್ಯಾಧ್ಯಕ್ಷ ಜಯಲಕ್ಷ್ಮೀ ಮಂಗಳೂರು, ಅಂಗನವಾಡಿ ನಿವೃತ್ತ ಕಾರ್ಯಕರ್ತೆ ಹಾಗೂ ಸಹಾಯಕಿಯರಾದ ಪುಷ್ಪಾ ಸುಬ್ರಹ್ಮಣ್ಯ ಬನ್ನೂರುಕಟ್ಟೆ, ಪ್ರೇಮ ಕಾಮಣ, ಭವಾನಿ ಕೆಮ್ಮಾಯಿ, ಬಾಲಕ್ಕ ಕೆಯ್ಯೂರು, ಕಮಲ ಕುಡಿಪ್ಪಾಡಿ, ಲೀಲಾವತಿ ಸಂಪ್ಯಾಡಿ, ಗೀತಾ ಕೆದಂಬಾಡಿ, ಲೀಲಾವತಿ ತಿಂಗಳಾಡಿ, ಭವಾನಿ ಕಟ್ಟತ್ತಾರು, ದೇವಕಿ ಪನ್ಯ, ಸರಸ್ವತಿ ಆರ್ಲಪದವು, ಲೀಲಾವತಿ ಒಡ್ಯ, ಲಲಿತಾ ಮರ್ದಾಳ, ಸರಸ್ವತಿ ಕುದ್ರೋಳಿ, ಬೇಬಿ ಆಲಂಕಾರು, ತೆರೇಜಾ ಡಿ’ಸೋಜ, ಕಮಲ ನೆಲ್ಯಾಡಿ, ರಮಾದೇವಿ ಕಡಬ, ನೆಬಿಸಾ ಉಜ್ರುಪಾಡಿ, ಜಯಂತಿ ನೈತ್ತಾಡಿ, ಕುಸುಮಾವತಿ ತಿಂಗಳಾಡಿ, ಹೆಜಲ್ ಫೆರೀಸ್ ಕೇಪುಳು, ಪದಾಧಿಕಾರಿಗಳಾದ ಅಧ್ಯಕ್ಷೆ ಮಲ್ಲಿಕಾ ಎಸ್ ಆಳ್ವ, ಉಪಾಧ್ಯಕ್ಷೆ ಸೀತಮ್ಮ, ಸಲಹೆಗಾರೆ ತಾರಾ ಬಲ್ಲಾಳ್, ಕಾರ್ಯದರ್ಶಿ ಶುಭವತಿ, ಜತೆಕಾರ್ಯದರ್ಶಿ ತುಳಸಿ, ಖಜಾಂಚಿ ರಮಾದೇವಿ, ರಾಜ್ಯ ಸಮಿತಿ ಪ್ರತಿನಿಧಿ ಅರುಣಾ ಬೀರಿಗ, ವಿಜಯ ಈಶ್ವರಗೌಡರವರನ್ನು ಸನ್ಮಾನಿಸಲಾಯಿತು.

ಗೌರವ ಸಲಹೆಗಾರೆ ತಾರಾ ಬಲ್ಲಾಳ್ ಸ್ವಾಗತಿಸಿದರು. ಖಜಾಂಚಿ ರಮಾ ಲೆಕ್ಕಪತ್ರ ಮಂಡಿಸಿದರು. ಕಾರ್ಯದರ್ಶಿ ಶುಭಾವತಿ ವರದಿ ವಾಚಿಸಿದರು. ರಾಜ್ಯ ಸಮಿತಿ ಪ್ರತಿನಿಧಿ ಅರುಣಾ ಬೀರಿಗ, ಶ್ರೀಲತಾ ರಾವ್ ಹಾಗೂ ಮೀನಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ತುಳಸಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ ನಡೆಯಿತು.

LEAVE A REPLY

Please enter your comment!
Please enter your name here