ವಿದ್ಯುತ್ ಮೀಟರ್ ಕೊರತೆ , ಮೀಟರ್‌ಗೆ ಅರ್ಜಿ ಹಾಕಿ ಕೂತ ಕೃಷಿಕನ ಕೃಷಿ ಕರಟಿತು,ಗೃಹ ಪ್ರವೇಶಕ್ಕೆ ದಿನ ನಿಗದಿ ಮಾಡಿದಾತ ಹೈರಾಣ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ಸವಣೂರು : ಮೆಸ್ಕಾಂ ಮೂಲಕ ಪೂರೈಕೆ ಮಾಡುವ ವಿದ್ಯುತ್ ಮೀಟರ್‌ನ ಕೊರತೆ ಎದುರಾಗಿದ್ದು,ಜನರು ದೊಡ್ಡ ಸಮಸ್ಯೆಗೆ ಸಿಲುಕಿದ್ದಾರೆ. ಅಡಿಕೆ ಗಿಡ ನಾಟಿ ಮಾಡಿ ಕೃಷಿ ಪಂಪ್‌ ಸೆಟ್ ಖರೀದಿಸಿ ಮೀಟರ್ ಗೆ ಅರ್ಜಿ ಹಾಕಿ ಕೂತ ಕೃಷಿಕನಿಗೆ ಇನ್ನೂ ಮೀಟರ್ ಸಿಗದೆ ಆತ ತೋಟಕ್ಕೆ ನೀರು ಬಿಡಲು ಸಾಧ್ಯವಾಗದೆ ತನ್ನ ತೋಟ ಕಣ್ಣಾರೆ ಕರಟಿ ಹೋಗುತ್ತಿರುವುದನ್ನು ನೋಡಿ ಮಮ್ಮಳ ಮರುಗಿದ್ದಾನೆ‌.
ಯಾಕೆ ಕೊರತೆ
ಮಾಹಿತಿ ಪ್ರಕಾರ ಕಳೆದ ಅಕ್ಟೋಬರ್ ವರೆಗೆ ಮೀಟರ್ ವಿತರಣೆಗೆ ಟೆಂಡರ್ ಪಡೆದ ಸಂಸ್ಥೆಯ ಅವಧಿ ಮೀರಿದೆ.ಆ ಬಳಿಕ ಯಾವುದೇ ಸಂಸ್ಥೆಗೆ ಟೆಂಡರ್ ಆಗದೆ ಮೀಟರ್ ಪೂರೈಕೆ ಸ್ಥಗಿತಗೊಂಡಿದೆ.ಕಳೆದ ಒಂದೂವರೆ ತಿಂಗಳಿನಿಂದ ಮೀಟರ್ ಪೂರೈಕೆಯಾಗದೇ ದೊಡ್ಡ ಸಮಸ್ಯೆಯಾಗಿದೆ. ಮೆಸ್ಕಾಂ ನೂತನ ಟೆಂಡರ್ ಪ್ರಕ್ರಿಯೆ ನಡೆಸದೇ ಇರುವುದರಿಂದ ಮೀಟರ್ ಪೂರೈಕೆ ಸ್ಥಗಿವಾಗಿದೆ.
ಕರಟಿ ಹೋದ ಕೃಷಿ
ಹೊಸದಾಗಿ ಅಡಿಕೆ ತೋಟ ನಿರ್ಮಾಣ ಮಾಡಿ ಕೊಳವೆ ಬಾವಿ,ಕೃಷಿ ಪಂಪ್‌ ಸೆಟ್ ಖರೀದಿ ಮಾಡಿ ವಿದ್ಯುತ್ ಮೀಟರ್ ಗೆ ಅರ್ಜಿ ಹಾಕಿ  ಮೀಟರ್ ಅಳವಡಿಕೆ ಮೀಟರ್ ಸಿಗುತ್ತದೆ ಎಂದು ಕಾದು ಕೂತವನಿಗೆ ಮೀಟರ್ ಸಿಗದೆ ದೊಡ್ಡ ಶಾಕ್ ನೀಡಿದೆ.ಬೇಸಿಗೆಯ ತಾಪ ದಿನೇ ದಿನೇ ಏರುತ್ತಿರುವುದರಿಂದ ತೋಟಗಳಿಗೆ ನೀರು ಬಿಡುವುದು ಅನಿವಾರ್ಯವಾಗಿದೆ‌.ಮೀಟರ್ ಸಿಗದೇ ಇರುವುದರಿಂದ ವಿದ್ಯುತ್ ಸಂಪರ್ಕವಿಲ್ಲದೆ ನೀರು ಬಿಡಲು ತೊಂದರೆಯಾಗಿದ್ದು,ತೋಟ ಕರಟಿ ಹೋಗುತ್ತಿದೆ.
ಗೃಹ ಪ್ರವೇಶಕ್ಕೆ ದಿನ ನಿಗದಿ ಮಾಡಿದವನಿಗೆ ಶಾಕ್
ನೂತನ ಮನೆ ನಿರ್ಮಿಸಿ ವಿದ್ಯುತ್ ಮೀಟರ್ ಗೆ ಅರ್ಜಿ ಸಲ್ಲಿಸಿ ಗೃಹಪ್ರವೇಶಕ್ಕೆ ದಿನ ನಿಗದಿ ಮಾಡಿದವರಿಗೆ ಸಕಾಲದಲ್ಲಿ ಮೀಟರ್ ಸಿಗದೆ ನೂತನ ಮನೆಗೆ ವಿದ್ಯುತ್ ಸಂಪರ್ಕ ಮಾಡದೆ ಸಮಸ್ಯೆ ಎದುರಿಸುವಂತಾಗಿದೆ.
ಕೂಡಲೇ ಇಲಾಖೆ ಸ್ಪಂದಿಸಲಿ
ಮೆಸ್ಕಾಂನಲ್ಲಿರುವ ಮೀಟರ್ ಸಮಸ್ಯೆಗೆ ಇಲಾಖೆ ಹಾಗೂ ಸಚಿವರು ಕೂಡಲೇ ಸ್ಪಂದಿಸಿ ಈಗಿರುವ ತೊಂದರೆ ಸರಿಪಡಿಸಬೇಕು – ಪೂವಪ್ಪ , ಸವಣೂರು
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.