ಜಾತ್ಯಾತೀತ, ಸಂವಿಧಾನಬದ್ಧವಾಗಿರುವ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬ್ಲಾಕ್ ಕಾಂಗ್ರೆಸ್ ಎಸ್.ಟಿ ಘಟಕದ ಪದಪ್ರದಾನದಲ್ಲಿ ರಾಜ್ಯಾಧ್ಯಕ್ಷ ಪಾಲಯ್ಯ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೇವಲ ಧರ್ಮದ ಆಧಾರದಲ್ಲಿ ನಮ್ಮದು ದೇಶಾಭಿಮಾನ ಎಂಬಂತೆ ಜನರ ಧಿಕ್ಕು ತಪ್ಪಿಸಿ ಮರುಳು ಮಾಡುವ ಬಿಜೆಪಿ ಪಕ್ಷವು ಡಾ.ಅಂಬೇಡ್ಕರ್‌ರವರಿಂದ ಸರ್ವ ಜನಾಂಗದ ಹಿತಕ್ಕಾಗಿ ರಚಿತವಾದ ಸಂವಿಧಾನವನ್ನೇ ತಿದ್ದಲು ಹೊರಟಿದ್ದಾರೆ. ಕಾಂಗ್ರೆಸ್ ಪಕ್ಷವು ಹಿಂದಿನಿಂದಲೂ ಜಾತ್ಯಾತೀತವಾಗಿ ಹಾಗೂ ಸಂವಿಧಾನಬದ್ಧವಾಗಿ ಕೆಲಸ ಮಾಡುತ್ತಾ ಜನರ ಏಳಿಗೆಗೆ ದುಡಿಯುತ್ತಿದೆ. ಆದ್ದರಿಂದ ಬಿಜೆಪಿಯ ಕಪಟತನಕ್ಕೆ ಜನರು ಮುಂದಿನ ವರ್ಷ ತಕ್ಕ ಉತ್ತರ ನೀಡುವ ಮೂಲಕ ಮತ್ತೇ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಕೆ.ಪಿ.ಸಿ.ಸಿ ಪರಿಶಿಷ್ಟ ಪಂಗಡ ಘಟಕದ ಅಧ್ಯಕ್ಷರಾದ ಪಾಲಯ್ಯ ದಾವಣಗೆರೆರವರು ಹೇಳಿದರು.


ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಪಂಗಡ ಘಟಕದ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಪದ ಪ್ರದಾನ ಸಮಾರಂಭವು ಜ.೨ ರಂದು ಬೆಳಿಗ್ಗೆ ಎಪಿಎಂಸಿ ರಸ್ತೆಯಲ್ಲಿನ ಕ್ರಿಸ್ಟೋಫರ್ ಕಾಂಪ್ಲೆಕ್ಸ್‌ನಲ್ಲಿ ಜರಗಿದ್ದು, ಪದ ಪ್ರದಾನ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಬಳಿಕ ಇದರ ನೂತನ ಅಧ್ಯಕ್ಷರಾದ ಮಹಾಲಿಂಗ ನಾಯ್ಕ ಹಾಗೂ ಇತರ ಪದಾಧಿಕಾರಿಗಳಿಗೆ ಪದ ಪ್ರದಾನ ನೆರವೇರಿಸುತ್ತಾ ಅವರು ಮಾತನಾಡಿದರು. ಸಿದ್ಧರಾಮಯ್ಯ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಸುಮಾರು ನಾಲ್ಕರಿಂದ ಒಂಭತ್ತು ಕೋಟಿಯವರೆಗೆ ಎಸ್ಟಿ ಪಂಗಡದ ಅಭಿವೃದ್ಧಿಗೆ ಅನುದಾನ ನೀಡಿದ್ದರು. ದೇಶದಲ್ಲಿ ಎಸ್.ಸಿ, ಎಸ್.ಟಿ, ಒಬಿಸಿ ಹಾಗೂ ಮೈನಾರಿಟಿ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷವು ಮಹತ್ತರ ಕೊಡುಗೆಯನ್ನು ನೀಡಿದೆ. ಆದರೆ ಈಗ ಅವೆಲ್ಲವನ್ನೂ ಮರೆತುಬಿಟ್ಟು ಕೇವಲ ಬಿಜೆಪಿ ಪಕ್ಷವು ಮಾಡಿರುವುದು ಎಂದೇಳಿ ಜನರ ಧಿಕ್ಕು ತಪ್ಪಿಸುವ ಕಾರ್ಯ ನಡೀತಿದೆ. ಕಾಂಗ್ರೆಸ್ ಪಕ್ಷವು ದೇಶಕ್ಕೆ ಏನು ನೀಡಿದೆ ಎಂಬುದನ್ನು ಕಾಂಗ್ರೆಸ್ ಪಕ್ಷದ ಪ್ರತಿಯೋರ್ವರು ಮನೆ-ಮನೆಗೆ ಭೇಟಿ ತಿಳಿಸಬೇಕಾಗಿದೆ ಎಂದ ಅವರು ಕೇವಲ ಕೇಸರಿ ಹಾಕಿಕೊಂಡವರು ಮಾತ್ರ ಭಾರತೀಯರು ಎಂದು ತಿಳಿದುಕೊಂಡಿರುವುದು ತಪ್ಪು. ಆರನೇ ತರಗತಿಯಲ್ಲಿ ಓದುತ್ತಿರುವಾಗಲೇ ಯೋಗಾಸನ ಎಂಬ ನಾಟಕವಾಡಿ ಪ್ರತಿ ವಿದ್ಯಾರ್ಥಿಯ ಮನಸ್ಸಿನಲ್ಲಿ ವಿಷ ಬೀಜವನ್ನು ಭಿತ್ತುತ್ತಿರುವುದು ಇಂದಿನ ಶೋಚನೀಯ ಸಂಗತಿಯಾಗಿದೆ. ಪ್ರಸ್ತುತ ತಾಲೂಕು ಎಸ್.ಟಿ ಸಂಘನೆಯಲ್ಲಿ ಮಹಿಳೆಯರೇ ಹೆಚ್ಚಾಗಿ ಕಾಣಿಸುತ್ತಿರುವುದು ಪುತ್ತೂರಿನಲ್ಲಿಯೇ ಮೊದಲು, ಎಲ್ಲರೂ ಪಕ್ಷ ಸಂಘಟನೆ ಮಾಡುತ್ತಾ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೇ ಅಧಿಕಾರಕ್ಕೆ ಬರಲು ಪ್ರತಿಯೋರ್ವರು ಕೆಲಸ ಮಾಡಬೇಕಾಗಿದೆ ಎಂದು ಅವರು ಹೇಳಿದರು.


ಸಮಪಾಲು, ಸಮಬಾಳು ಸಿಗಬೇಕಿದ್ದರೆ ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತನ್ನಿ-ಹರೀಶ್‌ಕುಮಾರ್:
ಡಿಸಿಸಿ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್‌ರವರು ಮಾತನಾಡಿ, ೧೩೭ ವರ್ಷ ಇತಿಹಾಸವಿರುವ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಹುಟ್ಟಿಕೊಂಡ ಪಕ್ಷವಲ್ಲ. ಪಕ್ಷಕ್ಕೋಸ್ಕರ ಪ್ರಾಣ ತ್ಯಾಗ ಮಾಡಿದ ಜಾತ್ಯಾತೀತ ಪಕ್ಷವಾಗಿದ್ದು, ಜನಸಾಮಾನ್ಯರ ನೊಂದ ಧ್ವನಿಯಾಗಿ ಸೇವೆ ಮಾಡುವಂತಹ ಪಕ್ಷವಾಗಿ ಬೆಳೆದಿದೆ ಕಾಂಗ್ರೆಸ್ ಪಕ್ಷ. ಜಿಲ್ಲೆಯಲ್ಲಿ ಎಸ್.ಟಿ ಪರಿಶಿಷ್ಟ ಪಂಗಡದವರು ಬಹಳ ಕಡಿಮೆ. ಸರಕಾರಿ ಕೆಲಸದಲ್ಲಿದ್ದುಕೊಂಡು ಇತ್ತೀಚೆಗೆ ನಿವೃತ್ತರಾದ ಮಹಾಲಿಂಗ ನಾಯ್ಕರವರು ಎಸ್.ಟಿ ಪಂಗಡ ಘಟಕದ ಚುಕ್ಕಾಣಿ ಹಿಡಿದಿರುವುದು ಶ್ಲಾಘನೀಯ. ಮಹಾಲಿಂಗ ನಾಯ್ಕರವರಲ್ಲಿ ಪಕ್ಷವನ್ನು ಸಂಘಟಿಸುವ ಕ್ರಿಯಾಶೀಲ ಗುಣಗಳಿವೆ. ಅದೇ ಡಬಲ್ ಇಂಜಿನ್ ಎನಿಸಿರುವ ಬಿಜೆಪಿ ಪಕ್ಷಕ್ಕೆ ಬಲವಿಲ್ಲ, ಮೊದಲಾಗಿ ಸ್ವಂತ ಅಡಿಪಾಯವಿಲ್ಲ. ಬೇರೆ ಪಕ್ಷದವರನ್ನು ಸೆಳೆದುಕೊಂಡು ಬೆಳೆಯುತ್ತಿದೆ ಅಷ್ಟೇ ಎಂದ ಅವರು ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆಯೇರಿಕೆ, ಕೃಷಿ ಕಾಯ್ದೆಯಿಂದ ಜನರು ಬೇಸತ್ತಿರುವುದು ಎಲ್ಲರಿಗೂ ಗೊತ್ತಿದ್ದ ವಿಷಯವೇ. ದೇವರ ಹೆಸರಿನಲ್ಲಿ ಜನರನ್ನು ಮೂರ್ಖರನ್ನಾಗಿಸಲು ಹೊರಟಿದೆ ಬಿಜೆಪಿ ಸರಕಾರ. ಅಲ್ಲದೆ ಲಿಂಗಾಯತ, ಒಕ್ಕಲಿಗ ಹೀಗೆ ಬಲಿಷ್ಟ ಸಮುದಾಯದವರಿಗೇ ಉನ್ನತ ಹುದ್ದೆಯನ್ನು ನೀಡುವತ್ತ ಸಾಗುತ್ತಿದೆ. ಆದಷ್ಟು ಯುವಸಮೂಹ ಎನ್‌ಎಸ್‌ಯುಐ, ಯೂತ್ ಕಾಂಗ್ರೆಸ್‌ನಲ್ಲಿ ತೊಡಗಿಸಿಕೊಳ್ಳುವಂತೆ ಮತ್ತು ದೇಶದ ನೈಜ ವಿಷಯವನ್ನು ಯುವಸಮೂಹಕ್ಕೆ ತಿಳಿ ಹೇಳುವ ಕಾರ್ಯ ನಿಜವಾಗಿಯೂ ಆಗಬೇಕಿದೆ. ಎಲ್ಲರಿಗೂ ಸಮಪಾಲು, ಸಮಬಾಳು ಸಿಗಬೇಕಿದ್ದರೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ ಎಂದು ಅವರು ಹೇಳಿದರು.

ಕಾಂಗ್ರೆಸ್ ಸರಕಾರದ ಕಾರ್ಯವನ್ನು ತನ್ನ ಕಾರ್ಯವೆಂಬಂತೆ ಬಿಜೆಪಿ ಹೇಳುತ್ತಿದೆ-ಶಕುಂತಳಾ ಶೆಟ್ಟಿ:
ಪುತ್ತೂರು ಕ್ಷೇತ್ರದ ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿಯವರು ಮಾತನಾಡಿ, ಪುತ್ತೂರು ಭಾಗದಲ್ಲಿನ ಕೆಲವು ಕಡೆ ರಸ್ತೆಗಳು ಆಗುತ್ತಿವೆಯಾದರೆ ಅವುಗಳು ಇಂದಿನ ಶಾಸಕರು ಮಾಡಿದ್ದಲ್ಲ. ಅಂದು ಸಿದ್ಧರಾಮಯ್ಯ ಸರಕಾರ ಇರುವಾಗ `ನಮ್ಮ ಗ್ರಾಮ, ನಮ್ಮ ರಸ್ತೆ’ ಎಂಬ ಯೋಜನೆಯಡಿಯಲ್ಲಿ ಪ್ರತೀ ೬ಕಿ.ಮೀಗೆ ರೂ.೮೬ ಲಕ್ಷ ಹಣವನ್ನು ಬಿಡುಗಡೆ ಮಾಡಿತ್ತು. ಮಾತ್ರವಲ್ಲದೆ ಮುಂದಿನ ಐದು ವರುಷದಲ್ಲಿ ಕಾಮಗಾರಿಯನ್ನು ವಹಿಸಿಕೊಂಡಿರುವ ಕಾಂಟ್ರಾಕ್ಟರ್ ಟೆಂಡರ್‌ನ್ನು ಮುಗಿಸಿಕೊಡಬೇಕು ಎನ್ನುವಂತೆ ಈಗ ರಸ್ತೆ ಕಾಮಗಾರಿಗಳು ಆಗುತ್ತಿವೆ ಮಾತ್ರವಲ್ಲದೆ ಬಹುತೇಕ ಕಡೆ ಪೂರ್ಣಗೊಂಡಿದೆ ಕೂಡ. ಆದರೆ ಕಾಂಗ್ರೆಸ್ ಸರಕಾರ ಮಾಡಿದ್ದನ್ನೇ ತಾನೇ ಮಾಡಿದ್ದು ಎಂಬಂತೆ ಬಿಜೆಪಿ ಪಕ್ಷವು ಹಾಡಿ ಹೊಗಳುತ್ತಿದೆ ಎಂದ ಅವರು ಕಾಂಗ್ರೆಸ್ ಪಕ್ಷದ ಯಾರೇ ಆಗಲಿ, ವಾಸ್ತವ ವಿಚಾರವನ್ನು ಜನರ ಮುಂದಿಡಲು ಯಾವುದೇ ಹಿಂಜರಿಕೆ ಮಾಡಬಾರದು. ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ್ ರೈಯವರು ತಾಲೂಕಿನ ಯಾವುದೇ ಮುಂಚೂಣಿ ಘಟಕಗಳಲ್ಲಿನ ಪದಾಧಿಕಾರಿಗಳು ಹಾಗೂ ಸದಸ್ಯರು ನಿರಂತರ ಮೂರು ಸಭೆಯಲ್ಲಿ ಪಾಲ್ಗೊಳ್ಳದಿದ್ದರೆ ಅಂಥವರುಗಳ ಹೆಸರನ್ನು ಪದಾಧಿಕಾರಿಗಳ ಪಟ್ಟಿಯಿಂದ ಹೊರಗಿಡಲಾಗುವುದು, ಅವರುಗಳು ಕೇವಲ ಕಾರ್ಯಕರ್ತರಂತೆ ಗುರುತಿಸಿಕೊಳ್ಳಲಾಗುವುದು ಎಂಬ ಶಿಸ್ತನ್ನು ಶ್ಲಾಘಿಸಲೇಬೇಕಾಗಿದೆ ಎಂದು ಅವರು ಹೇಳಿದರು.

ಸಂವಿಧಾನ ಉಳಿಯಬೇಕಾದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು-ಜಯಣ್ಣ ಚೆನ್ನಗಿರಿ:
ಕೆಪಿಸಿಸಿ ಪರಿಶಿಷ್ಟ ಪಂಗಡ ಘಟಕದ ಪ್ರಧಾನ ಕಾರ್ಯದರ್ಶಿ ಜಯಣ್ಷ ಚೆನ್ನಗಿರಿರವರು ಮಾತನಾಡಿ, ಮುಂದಿನ ಚುನಾವಣೆಯಲ್ಲೂ ಬಿಜೆಪಿ ಪಕ್ಷವು ಅಧಿಕಾರಕ್ಕೆ ಬಂದ್ರೆ ಡಾ.ಅಂಬೇಡ್ಕರ್‌ರವರ ಸಂವಿಧಾನ ಬದಲಾಗುವುದಂತೂ ಗ್ಯಾರಂಟಿ. ನಮ್ಮ ಸಂವಿಧಾನ ಉಳಿಯಬೇಕಾದರೆ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರಬೇಕು. ಕಾಂಗ್ರೆಸ್ ಪಕ್ಷವನ್ನು ಎಲ್ಲೆಡೆ ಬಲಿಷ್ಟ ಪಕ್ಷವಾಗಿ ಹೊರಹೊಮ್ಮುವಂತೆ ಮಾಡಬೇಕು ಮಾತ್ರವಲ್ಲದೆ ಈ ಭಾಗದಲ್ಲಿ ಶಕುಂತಳಾ ಶೆಟ್ಟಿರವರು ಮತ್ತೇ ಶಾಸಕರಾಗಿ ಆಯ್ಕೆ ಮಾಡಿ ಶಕುಂತಳಾ ಶೆಟ್ಟಿರವರ ಕೈ ಬಲಪಡಿಸಬೇಕಾಗಿದೆ ಎಂದರು.

ಹಣದ ಆಮಿಷಕ್ಕೆ ಬಲಿಯಾಗದೆ ಪಕ್ಷದ ಸಂಘಟನೆಗೆ ನಿಷ್ಠೆಯಿಂದ ದುಡಿಯಿರಿ-ಎಂ.ಬಿ ವಿಶ್ವನಾಥ್ ರೈ:
ಪ್ರಾಸ್ತಾವಿಕವಾಗಿ ಮಾತನಾಡಿದ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ್ ರೈ ಮಾತನಾಡಿ, ತಾಲೂಕು ಎಸ್.ಟಿ ಘಟಕದ ಅಧ್ಯಕ್ಷರಾಗಿರುವ ಅಬಕಾರಿ ನಿವೃತ್ತ ಆದಿಕಾರಿಯಾಗಿರುವ ಮಹಾಲಂಗ ನಾಯ್ಕರವರದ್ದು ಮೃದು ಸ್ವಭಾವ ಆದರೂ ಕೆಲವೊಂದು ವಿಚಾರದಲ್ಲಿ ಕಠಿಣ ನಿರ್ಧಾರ ತಳೆಯುವ ವ್ಯಕ್ತಿತ್ವವೂ ಅವರದಾಗಿದೆ. ಅಬಕಾರಿ ಇಲಾಖೆಯಲ್ಲಿ ಇನ್ಸ್‌ಪೆಕ್ಟರ್ ಆಗಿ ನಿವೃತ್ತರಾದರೂ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ತಂದು ಕೂರಿಸಿದ್ದು ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಮೌರಿಸ್ ಮಸ್ಕರೇನ್ಹಸ್‌ರವರು ಎಂದ ಅವರು ಪ್ರಸ್ತುತ ಪುತ್ತೂರು ಬ್ಲಾಕ್ ಕಾಂಗ್ರೆಸ್‌ನಲ್ಲಿ ಎಲ್ಲಾ ಮುಂಚೂಣಿ ಘಟಕಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ನಮ್ಮ ಹಣೆಬರಹವನ್ನು ಚೇಂಜ್ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಪಂಚಾಯತ್ ಸದಸ್ಯನೂ ಮುಂದಿನ ದಿನಗಳಲ್ಲಿ ಉನ್ನತ ಹುದ್ದೆಗೆ ಏರಬಲ್ಲ. ಯಾರೇ ಆಗಲಿ ವಿರೋಧ ಪಕ್ಷದ ಹಣದ ಆಮಿಷಕ್ಕೆ ಬಲಿಯಾಗದೆ ಪಕ್ಷದ ಸಂಘಟನೆಗೆ ನಿಷ್ಠೆಯಿಂದ ದುಡಿಯಿರಿ ಎಂದು ಅವರು ಹೇಳಿದರು.

ಪದಾಧಿಕಾರಿಗಳಿಗೆ ಅಭಿನಂದನೆ:
ಎಸ್.ಟಿ ಘಟಕದ ನೂತನ ಉಪಾಧ್ಯಕ್ಷರುಗಳಾಗಿ ಸದಾನಂದ ಭರಣ್ಯ ಪಾಣಾಜೆ, ಗೋಪಾಲ ನಾಯ್ಕ ಪಡುಮಲೆ ಬಡಗನ್ನೂರು, ತಮ್ಮಣ್ಣ ನಾಯ್ಕ ನಡುಕಟ್ಟ ಪಾಣಾಜೆ, ಮಾಲಿಂಗ ನಾಯ್ಕ್ ಇರ್ದೆ, ತಾರಾನಾಥ ನುಳಿಯಾಲು ನಿಡ್ಪಳ್ಳಿ, ವೆಂಕಪ್ಪ ನಾಯ್ಕ ಕೊಳ್ತಿಗೆ, ಮಂಜುನಾಥ ಬಿಜತ್ರೆ ಒಳಮೊಗ್ರು, ಅಶೋಕ್ ಸೊರಕೆ, ಜಯಂತಿ ಬಲ್ನಾಡು, ಆನಂದ ರೆನ್ಯ, ಪ್ರಧಾ ಕಾರ್ಯದರ್ಶಿಗಳಾಗಿ ವಿಮಲ ದೈತೋಟ ಪಾಣಾಜೆ, ರವಿ ದೂಮಡ್ಕ ಇರ್ದೆ, ಲಕ್ಷ್ಮಣ ಕೋಡಿ ನಿಡ್ಪಳ್ಳಿ, ಸುರೇಶ ಮೇನಾಲ ನೆಟ್ಟಣಿಗೆ ಮುಡ್ನೂರು, ಕಾರ್ಯದರ್ಶಿಗಳಾಗಿ ರಾಮಣ್ಣ ನಾಯ್ಕ ಕೋಟೆ ಪಾಣಾಜೆ, ನಾರಾಯಣ ನಾಯ್ಕ ನಡುಮನೆ ಪಾಣಾಜೆ, ಬಾಲಕೃಷ್ಣ ನಿಡ್ಪಳ್ಳಿ, ಗಣೇಶ ಶೇಡಿಗುರಿ ಕೊಳ್ತಿಗೆ, ಹರಿಣಾಕ್ಷಿ ಬೊಳ್ಳಾಡ್ಕ ನರಿಮೊಗರು, ಮೋಹನ್ ನಾಯ್ಕ್ ಕಾಳಿಂಗಹಿತ್ಲು, ಪ್ರಶಾಂತ್ ತೂಂಬಡ್ಕ ಪಾಣಾಜೆ ವೆಂಕಪ್ಪ ಮುಂಡಕೊಚ್ಚಿ ನಿಡ್ಪಳ್ಳಿ, ಗೋಪಾಲಕೃಷ್ಣ ನೆಲ್ಲಿತ್ತಡ್ಕ ಕೊಳ್ತಿಗೆ, ಭಾಸ್ಕರ ಕೊಡಂಕಿರಿ ತಿಂಗಳಾಡಿ, ರಾಮಚಂದ್ರ ನಾಯ್ಕ ಮಂಜಲ್ಪಡ್ಪು, ಖಜಾಂಜಿಯಾಗಿ ಕಿರಣ್ ಕುಮಾರ್ ನಡುಮನೆ ಪಾಣಾಜೆ, ಸಂಘಟನಾ ಕಾರ್ಯದರ್ಶಿಗಳಾಗಿ ರಮೇಶ್ ಗುರಿಕ್ಕೇಲು ಪಾಣಾಜೆ, ರವಿ ಕಟೀಲ್ತಡ್ಕ ಇರ್ದೆ, ಜಲಜಾಕ್ಷಿ ಕಾಯರ್ತೋಡಿ ನಿಡ್ಪಳ್ಳಿ, ಸುಬ್ರಾಯ ನಾಯ್ಕ್ ನಿರುಕ್ಕು ನಿಡ್ಪಳ್ಳಿ, ಪದ್ಮಯ್ಯ ನಾಯ್ಕ್ ಬಂಡಿಕಾನ, ಗೋವಿಂದ ನಾಯ್ಕ ಕುಟ್ಟಿನೋಪಿನಡ್ಕ ಒಳಮೊಗ್ರು, ಕುಶಾಲಪ್ಪ ನಾಯ್ಕ್ ಬಿಜತ್ರೆ ಒಳಮೊಗ್ರು, ಗೀತಾ ಪಾರ್ಪಳ ಪಾಣಾಜೆ ಸಹಿತ ಸದಸ್ಯರುಗಳಾಗಿ ಆಯ್ಕೆಯಾದ ೮೫ ಮಂದಿ ಸದಸ್ಯರುಗಳಿಗೆ ಈ ಸಂದರ್ಭದಲ್ಲಿ ನೇಮಕಾತಿ ಆದೇಶದ ಪ್ರತಿಯನ್ನು ವಿತರಿಸಿ ಅಭಿನಂದಿಸಲಾಯಿತು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಎಚ್.ಮಹಮ್ಮದ್ ಆಲಿ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ವಿ.ಎಚ್ ಶಕೂರ್ ಹಾಜಿ, ಬ್ಲಾಕ್ ಕಾಂಗ್ರೆಸ್ ಕೋಶಾಧಿಕಾರಿ ವಲೇರಿಯನ್ ಡಾಯಸ್, ಉಪಾಧ್ಯಕ್ಷ ಮಹಾಬಲ ರೈ ಒಳತ್ತಡ್ಕ, ಎಸ್‌ಸಿ ಘಟಕದ ಅಧ್ಯಕ್ಷ ಕೇಶವ ಪಡೀಲುರವರು ಅತಿಥಿಗಳಿಗೆ ಶಾಲು ಹೊದಿಸಿ ಸ್ವಾಗತಿಸಿದರು. ಉದ್ಯಮಿ ಶಿವರಾಂ ಆಳ್ವ, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ದಾಮೋದರ್ ಭಂಡಾರ್ಕರ್, ರಝಾಕ್ ಆರ್.ಪಿ, ಬ್ಲಾಕ್ ಕಾರ್ಯದರ್ಶಿ ಡಿ.ಕೆ ಅಬ್ದುಲ್ ರಹಿಮಾನ್, ಬ್ಲಾಕ್ ಕಾಂಗ್ರೆಸ್ ಸದಸ್ಯ ಭಾಸ್ಕರ ಕರ್ಕೇರ, ಬ್ಲಾಕ್ ಕಾರ್ಮಿಕ ಘಟಕದ ಅಧ್ಯಕ್ಷ ಶರೂನ್ ಸಿಕ್ವೇರಾ, ಬ್ಲಾಕ್ ಹಿಂದುಳಿದ ವರ್ಗ ಘಟಕದ ಅಧ್ಯಕ್ಷ ಹರೀಶ್ ಕೋಟ್ಯಾನ್, ಪಂಚಾಯತ್‌ರಾಜ್ ಸಂಘಟನೆಯ ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ ಚಿಲ್ಮೆತ್ತಾರ್, ಬ್ಲಾಕ್ ಅಸಂಘಟಿತ ಕಾರ್ಮಿಕ ಘಟಕದ ಅಧ್ಯಕ್ಷ ಮೆಲ್ವಿನ್ ಮೊಂತೇರೋ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ವೇದನಾಥ ಸುವರ್ಣ, ಜಿಲ್ಲಾ ಹಿಂದುಳಿದ ವರ್ಗ ಘಟಕದ ಪ್ರಧಾನ ಕಾರ್ಯದರ್ಶಿ ನಾರಾಯಣ ನಾಕ್, ಜಿಲ್ಲಾ ಕಾಂಗ್ರೆಸ್ ಸದಸ್ಯ ಐತ್ತಪ್ಪ ಪೇರಲ್ತಡ್ಕ, ಬ್ಲಾಕ್ ಉಪಾಧ್ಯಕ್ಷರಾದ ಮೌರಿಸ್ ಮಸ್ಕರೇನ್ಹಸ್, ಯಾಕೂಬ್ ಮುಲಾರ್, ಮಹಾಬಲ ರೈ ಒಳತ್ತಡ್ಕ, ದಿನೇಶ್ ಪಿ.ವಿ, ಆಲಿ ಕುಂಞ ಕೊರಿಂಗಿಲ, ವಿಶಾಲಾಕ್ಷಿ ಬನ್ನೂರು, ಬ್ಲಾಕ್ ಪ್ರಧಾನ ಕಾರ್ಯದರ್ಶಿಗಳಾದ ಅಮಲ ರಾಮಚಂದ್ರ, ಪೂರ್ಣೇಶ್ ಭಂಡಾರಿ, ಭಾಸ್ಕರ ಕೋಡಿಂಬಾಳ, ಕಾರ್ಯದರ್ಶಿಗಳಾದ ಅಬೀಬ್ ಕಣ್ಣೂರು, ರೋಶನ್ ರೈ ಬನ್ನೂರು, ರಾಮಚಂದ್ರ ನಾಯ್ಕ್, ಯಂಗ್ ಬ್ರಿಗೇಡ್‌ನ ಶರೀಪ್ ಬಲ್ನಾಡು, ಬ್ಲಾಕ್ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೀತಾ ಉದಯಶಂಕರ್ ಭಟ್, ನಗರಸಭಾ ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡು, ಪಾಣಾಜೆ ಗ್ರಾಮ ಪಂಚಾಯತ್ ಸದಸ್ಯೆ ಮೈಮುನತ್ ಮೆಹರಾ, ಆರ್ಯಾಪು ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರಜ್ವಲ್ ರೈ ತೊಟ್ಲ, ಬೆಟ್ಟಂಪಾಡಿ ವಲಯ ಕಾಂಗ್ರೆಸ್ ಅಧ್ಯಕ್ಷ ನವೀನ್ ರೈ ಚೆಲ್ಯಡ್ಕ ಸಹಿತ ಹಲವರು ಉಪಸ್ಥಿತರಿದ್ದರು.

ಬ್ಲಾಕ್ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ವಿಶ್ವಜಿತ್ ಅಮ್ಮುಂಜರವರು ವಂದೇಮಾತರಂ ಗೀತೆಯನ್ನು ಹಾಡುವ ಮೂಲಕ ಸಭೆಗೆ ಚಾಲನೆ ನೀಡಲಾಯಿತು. ಕು|ಸೌಪರ್ಣಿಕ ಬೆಡೇಕರ್ ಪ್ರಾರ್ಥಿಸಿದರು. ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಸ್ವಾಗತಿಸಿ, ಪಾಣಾಜೆ ಪಂಚಾಯತ್ ಸದಸ್ಯೆ ವಿಮಲ ನಾಯ್ಕ್ ವಂದಿಸಿದರು. ಸಿದ್ಧಿಕ್ ಸುಲ್ತಾನ್ ಕಾರ್ಯಕ್ರಮ ನಿರೂಪಿಸಿದರು.

ಪಕ್ಷದ ಘನತೆ ಎತ್ತಿ ಹಿಡಿಯುತ್ತೇನೆ…
ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷದಲ್ಲಿ ಹುದ್ದೆಯನ್ನು ಗಿಟ್ಟಿಸಿಕೊಳ್ಳುವುದು ಸುಲಭವೇನಲ್ಲ. ಕಳೆದ ಹಲವಾರು ವರ್ಷಗಳಿಂದ ಬ್ಲಾಕ್ ಕಾಂಗ್ರೆಸ್‌ನಲ್ಲಿ ಇಲ್ಲದ ಘಟಕವನ್ನು ಸೃಷ್ಟಿಸಿ ಇತಿಹಾಸ ಸೃಷ್ಟಿಯಾಗಿದೆ. ಸಂಸ್ಥೆಯಾಗಲಿ, ಘಟಕವಾಗಲಿ, ಅಂಗ-ಸಂಸ್ಥೆಗಳನ್ನು ಸ್ಥಾಪಿಸಿ ಅವನ್ನು ಮುನ್ನೆಡೆಸುವುದು ಅಷ್ಟೊಂದು ಸುಲಭವಲ್ಲ. ಜಿಲ್ಲೆಯಲ್ಲಿ ಸುಮಾರು ೮೦ ಸಾವಿರ ಎಸ್.ಟಿ ಸಮುದಾಯದವರಿದ್ದು, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಹೀಗೆ ಯಾವುದೇ ಕ್ಷೇತ್ರದಲ್ಲಿ ಕರಾವಳಿ ಪ್ರದೇಶಕ್ಕೆ ಎಸ್.ಟಿ ಸಮುದಾಯದ ಗಂಡಸರಿಗೂ ರಾಜಕೀಯವಾಗಿ ಸೂಕ್ತ ಸ್ಥಾನಮಾನ ಸಿಗಬೇಕು ಎಂದು ರಾಜ್ಯಾಧ್ಯಕ್ಷರಲ್ಲಿ ನನ್ನ ಮನವಿಯಾಗಿದೆ. ಎಸ್.ಟಿ ಪಂಗಡ ಘಟಕಕ್ಕೆ ಆಯ್ಕೆಯಾದ ಪ್ರತಿ ಪದಾಧಿಕಾರಿಗಳು ಹಾಗೂ ಸದಸ್ಯರು ಘಟಕವು ನಿಗದಿಪಡಿಸಿದ ಸಭೆಯಂದು ಕಾಂಗ್ರೆಸ್ ಕಾರ್ಯಕರ್ತರಲ್ಲದೆ, ಕಾಂಗ್ರೆಸ್ ಜಾತ್ಯಾತೀತ ನೀಲುವನ್ನು ಹೊಂದಿರುವ ಒಬ್ಬರನ್ನಾದರೂ ಕರೆ ತರಬೇಕು ಎನ್ನುವ ನಿಲುವನ್ನು ತಳೆದಾಗ ಕಾಂಗ್ರೆಸ್ ಪಕ್ಷವು ಮುನ್ನಡೆಯಬಲ್ಲುದು. ಆದ್ದರಿಂದ ಪಕ್ಷದ ಹಿರಿಯರು ನನ್ನನ್ನು ಎಸ್.ಟಿ ಘಟಕದ ಅಧ್ಯಕ್ಷರನ್ನಾಗಿ ನೇಮಿಸಿದ್ದು, ತಾನು ಪಕ್ಷದ ಘನತೆಗೆ ಎಂದಿಗೂ ಚ್ಯುತಿ ಬಾರದಂತೆ ಪಕ್ಷವನ್ನು ಎತ್ತಿ ಹಿಡಿಯುತ್ತೇನೆ  – ಮಹಾಲಿಂಗ ನಾಯ್ಕ್, ನೂತನ ಅಧ್ಯಕ್ಷರು, ತಾಲೂಕು ಪರಿಶಿಷ್ಟ ಪಂಗಡ ಘಟಕ

ಸನ್ಮಾನ..
ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಪಂಗಡ ಘಟಕದ ನೂತನ ಪದಾಧಿಕಾರಿಗಳ ಪದ ಪ್ರದಾನ ಕಾರ್ಯಕ್ರಮಕ್ಕೆ ಆಗಮಿಸಿರುವ ಕೆ.ಪಿ.ಸಿ.ಸಿ ಪರಿಶಿಷ್ಟ ಪಂಗಡ ಘಟಕದ ಅಧ್ಯಕ್ಷರಾದ ಪಾಲಯ್ಯ ದಾವಣಗೆರೆರವರನ್ನು ಈ ಸಂದರ್ಭದಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಮುಂದಿನ ದಿನಗಳಲ್ಲಿ ತಾಲೂಕು ಎಸ್.ಟಿ ಘಟಕದ ಕೋರಿಕೆಯಂತೆ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ಸತೀಶ್ ಜಾರಕಿಹೊಳಿರವರನ್ನು ಪುತ್ತೂರಿಗೆ ಕರೆಯಿಸಿಕೊಳ್ಳುವ ಕುರಿತು ಮಾತನಾಡುವೆ ಎಂದು ಪಾಲಯ್ಯರವರು ಈ ಸಂದರ್ಭದಲ್ಲಿ ಹೇಳಿದರು.

ಶಕುಂತಳಾ ಶೆಟ್ಟಿಯವರನ್ನು ಶಾಸಕರನ್ನಾಗಿ ಮಾಡಿ..
ಈ ಭಾಗದಲ್ಲಿ ಶಕುಂತಳಾ ಟಿ.ಶೆಟ್ಟಿರವರನ್ನು ಮತ್ತೆ ಶಾಸಕರಾಗಿ ಆಯ್ಕೆ ಮಾಡಿ ಶಕುಂತಳಾ ಟಿ.ಶೆಟ್ಟಿರವರ ಕೈ ಬಲಪಡಿಸುವಂತಾಗಿದೆ ಎಂದು ಕೆಪಿಸಿಸಿ ಎಸ್.ಟಿ ಘಟಕದ ಪ್ರಧಾನ ಕಾರ್ಯದರ್ಶಿ ಜಯಣ್ಣ ಚೆನ್ನಗಿರಿ ಹೇಳಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.