ಮಾನವನ ಒಳಿತಿಗಾಗಿ ನೂರೇ ಅಜ್ಮೀರ್ ಆಧ್ಯಾತ್ಮ ಮಜ್ಲಿಸ್ ಸ್ಥಾಪನೆಯಾಗಿದೆ: ವಲಿಯ್ಯುದ್ದೀನ್ ಫೈಝಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಜನಸಾಗರಕ್ಕೆ ಸಾಕ್ಷಿಯಾದ ನೂರೇ ಅಜ್ಮೀರ್ ಆಧ್ಯಾತ್ಮ ಮಜ್ಲಿಸ್, ಪುನೀತಗೊಂಡ ಸಾದಾತ್ ನಗರ 

ಪುತ್ತೂರು: ಮಜ್ಲಿಸುನ್ನೂರು ಆಧ್ಯಾತ್ಮ ಮಜ್ಲಿಸ್ ಮಾನವನ ಒಳಿತಿಗಾಗಿ ಮಾಡಿದ್ದೇವೆಯೋ ಹೊರತು ಬೇರೆ ಯಾವುದೇ ಉದ್ದೇಶದಿಂದ ಮಾಡಿದ್ದಲ್ಲ , ಜನರ ಭಾಗವಹಿಸುವಿಕೆಯಿಂದ ಅವರು ಸನ್ಮಾರ್ಗದ ಕಡೆ ಬಂದರೆ ಅದುವೇ ನಮಗೆ ದೊರೆಯುವ ಪ್ರತಿಫಲವಾಗಿದೆ ಎಂದು ನೂರೇ ಅಜ್ಮೀರ್‌ನ ವಲಯ್ಯುದ್ದೀನ್ ಫೈಝಿ ವಾಝಕ್ಕಾಡ್ ಹೇಳಿದರು. ಅವರು ಸಂಪ್ಯ ಮುಹಿಯುದ್ದೀನ್ ಜುಮಾ ಮಸೀಧಿ ಅಧೀನದಲ್ಲಿ ಸಂಪ್ಯ ಸಾದಾತ್ ನಗರದಲ್ಲಿ ನಡೆಯುತ್ತಿರುವ ಸಂಪ್ಯ ಮಖಾಂ ಉರೂಸ್ ಕಾರ್ಯಕ್ರಮದ ಎರಡನೇ ದಿನದಂದು ನೂರೇ ಅಜ್ಮೀರ್ ಆಧ್ಯಾತ್ಮ ಮಜ್ಲಿಸ್ ನಲ್ಲಿ ನೇತೃತ್ವ ವಹಿಸಿದರು.


ಮಜ್ಲಿಸ್‌ನಲ್ಲಿ ಹೆಚ್ಚಿನ ಸಂಖ್ಯೆಲ್ಲಿ ಭಾಗವಹಿಸಿ ಇಹಪರದಲ್ಲಿ ವಿಜಯಿಗಳಾಗಿರಿ, ಅಲ್ಲಾಹನ ಪ್ರೀತಿಗೆ ಪಾತ್ರರಗಿ, ನಾವು ಮಾಡಿರುವ ತಪ್ಪುಗಳನ್ನು ಕ್ಷಮಿಸುವಂತೆ ಅಲ್ಲಾಹನಲ್ಲಿ ಪ್ರತಿ ನಿತ್ಯವೂ ಬೇಡಿಕೊಳ್ಳಿ, ಅಲ್ಲಾಹನು ಕರುಣಾಮಯಿಯಾಗಿದ್ದು ನಾವು ಮಾಡಿದ ತಪ್ಪುಗಳನ್ನು ಅವನು ಕ್ಷಮಿಸುವನು ಎಂದು ಹೇಳಿದರು.

ಮಜ್ಲಿಸ್‌ಗಳ ಮೂಲಕ ನಮ್ಮ ಹೃದಯವನ್ನು ಶುದ್ದಗೊಳಿಸೋಣ, ನಾವು ಉತ್ತಮರಾಗೋಣ, ಅಲ್ಲಾಹನ ಧರ್ಮದಲ್ಲಿ ನಾವು ಬಾಳಿ ಬದುಕೋಣ ಎಂಬ ಉದ್ದೇಶವು ನಮ್ಮಲ್ಲಿ ಪ್ರತೀಯೊಬ್ಬರಲ್ಲೂ ಇರಬೇಕು ಎಂದು ಹೇಳಿದರು. ಸಂಪ್ಯ ಮುಹಿಯುದ್ದೀನ್ ಜುಮಾ ಮಸೀದಿ ಮತ್ತು ಉರೂಸ್ ಕಮಿಟಿಯ ಅಧ್ಯಕ್ಷರಾ ಎಸ್ ಅಬ್ದುಲ್ ಜಲೀಲ್ ಹಾಜಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.

ದ್ಸಿಕ್ರುಗಳಿಂ ಆತ್ಮ ಶುದ್ದೀಕರಣವಾಗುತ್ತದೆ; ದಾರಿಮಿ
ಇಂದು ಆಧ್ಯಾತ್ಮ ಮಜ್ಲಿಸ್‌ಗಳು ಯಥೇಚ್ಚವಾಗಿ ಆರಂಭಗೊಂಡಿದೆ. ಪ್ರಾರಂಭದಲ್ಲಿ ಕೇರಳದಲ್ಲಿ ಮಾತ್ರ ಇದ್ದು ಈಗ ಕರ್ನಾಟಕದಲ್ಲೂ ಮಜ್ಲಿಸ್ ವೇದಿಕೆಗಳು ನಡೆಯುತ್ತಿದೆ. ದಾರಿ ತಪ್ಪುತ್ತಿರುವ ಯುವಕ ಮತ್ತು ಯುವತಿಯರನ್ನು ದ್ಸಿಕ್ರ್ ಮಜ್ಲಿಸ್‌ಗಳು ಸನ್ಮಾರ್ಗದೆಡೆಗೆ ಕೊಂಡೊಯ್ಯುತ್ತಿದೆ. ಹರಾಂ ವೀಕ್ಷಣೆಯಿಂದ ಸಮುದಾಯದ ಮಂದಿಯನ್ನು ರಕ್ಷಣೆ ನೀಡುತ್ತಿದೆ. ಮುಸ್ಸಂಜೆ ವೇಳೆ ದೂರದರ್ಶನದಲ್ಲಿ ದಾರವಾಹಿ, ಸಿನಿಮಾ ವೀಕ್ಷಣೆ ಮಾಡುತ್ತಿದ್ದ ಮುಸ್ಲಿಂ ಮಹಿಳೆಯರು ಇಂದು ಸಂಜೆಯಾಗುತ್ತಲೇ ದ್ಸಿಕ್ರ್ ಮಜ್ಲಿಸ್‌ಗೆ ಅಣಿಯಾಗುತ್ತಿರುವುದು ಸಮುದಾಯದ ಉತ್ತಮ ಬೆಳವಣಿಗೆಯಾಗಿದೆ. ನಾವು ಅಲ್ಲಾಹನೆಡೆಗೆ ನಮ್ಮ ಮನಸ್ಸನ್ನು ಕೇಂದ್ರೀಕರಿಸಬೇಕು. ಅಲ್ಲಾಹನ ಸಂಪ್ರೀತಿಗೆ ಪಾತ್ರರಾಗಬೇಕು.ಆಧ್ಯಾತ್ಮ ಮಜ್ಲಿಸ್‌ಮಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ನಾವು ನಮ್ಮ ಆತ್ಮವನ್ನು ಶುದ್ದೀಕರಿಸಬೇಕಿದೆ. ಪರಲೋಕದಲ್ಲಿ ವಿಶ್ವಾಸ ಇರಿಸುವ ಪ್ರತೀಯೊಬ್ಬ ಮುಸ್ಲಿಮನೂ ಅಲ್ಲಾಹನ ನಾಮ ಸ್ಮರಣೆಯನ್ನು ಅಧಿಕಗೊಳಿಸುವ ಮೂಲಕ ನಾವು ಅಲ್ಲಾಹನಿಗೆ ಹತ್ತಿರವಾಗಬೇಕು ಎಂದು ಸಂಪ್ಯ ಖತೀಬ್ ಅಬ್ದುಲ್ ಹಮೀದ್ ದಾರಿಮಿ ಹೇಳಿದರು.

ಆಧ್ಯಾತ್ಮ ಮಜ್ಲಿಸ್ ಸಮುದಾಯದ ಶ್ರೀ ರಕ್ಷೆಯಾಗಿದೆ: ಕರೀಂ ದಾರಿಮಿ
ಪ್ರಾಸ್ತಾವಿಕವಾಗಿ ಮಾತನಾಡಿದ ಬೊಳುವಾರು ಮಸೀದಿಯ ಖತೀಬ್ ಕರೀಂ ದಾರಿಮಿ ಮಾತನಾಡಿ ೨೩೬ ನೇ ನೂರೇ ಅಜ್ಮೀರ್ ಆಧ್ಯಾತ್ಮ ಮಜ್ಲಿಸ್ ಸಂಪ್ಯದ ಸಾದಾತ್ ನಗರದ ಮಖಾಂ ಆವರಣದಲ್ಲಿ ನಡೆಯುತ್ತಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಧಾರ್ಮಿಕ ಮಜ್ಲಿಸ್‌ಗಳನ್ನು ನಡೆಸಲು ಅಸಾಧ್ಯವಾದ ಸಂದರ್ಭದಲ್ಲಿ ಆನ್ ಲೈನ್ ಮೂಲಕ ಮಜ್ಲಿಸ್‌ಗಳು ಪ್ರಾರಂಭವಾಗಿದ್ದು ಇದರಿಂದ ಲಕ್ಷಾಂತರ ಜನರು ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಜನರೆಡೆಗೆ ಧಾರ್ಮಿಕ ಬೋಧನೆಯನ್ನು ನೀಡಬೇಕಾಗಿರುವುದು ಉಲಮಾಗಳ ಕರ್ತವ್ಯವಾಗಿರುವ ಕಾರಣ ಎಲ್ಲಾ ಕಾರ್ಯಕ್ರಮಗಳು ಆನ್‌ಲೈನ್ ಮೂಲಕವೇ ನಡೆಯುವಂತಾಗಿತ್ತು, ಇದು ಅನಿಂವಾರ್ಯವೂ ಅಗಿತ್ತು. ಕೊರೊನಾ ಬಳಿಕ ಮಜ್ಲಿಸ್‌ಗಳಿಗೆ ವೇದಿಕೆಯನ್ನು ಕಲ್ಪಿಸುವ ಮೂಲಕ ನೇರವಾಗಿ ದ್ಸಿಕ್ರ್ ಮಜ್ಲಿಸ್‌ಗಳಲ್ಲಿ ಭಾಗವಹಿಸುವಂತೆ ವ್ಯವಸ್ಥೆಯನ್ನು ಮಾಡುತ್ತಿರುವುದು ಅಲ್ಲಾಹನ ಸಂಪ್ರೀತಿಯ ಕಾರ್ಯಕ್ರಮವಾಗಿದೆ.ಅನೇಕ ಮಾನಸಿಕ, ಆರೋಗ್ಯ ಹಾಗೂ ಬೌತಿಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಂಡ ಸಾವಿರಾರು ಮಂದಿ ನಮ್ಮ ನಡುವೆ ಇದ್ದಾರೆ. ಅತ್ಯಂತ ಮಹತ್ವವಾದ ಈ ಆಧ್ಯಾತ್ಮ ಮಜ್ಲಿಸ್‌ಗಳು ಸಮುದಾಯದ ಆಧ್ಯಾತ್ಮ ಬಂಧವನ್ನು ಗಟ್ಟಿಗೊಳಿಸಿದೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ನಮೂರಾರು ಮಂದಿ ಮಜ್ಲಿಸ್‌ನಲ್ಲಿ ಭಾಗವಹಿಸಿ ತಮ್ಮ ರೋಗದಿಂದ ಉಪಶಮನ ಹೊಂದಿದ್ದಾರೆ, ಮಕ್ಕಳಿಲ್ಲದವರಿಗೆ ಮಕ್ಕಳಾಗಿದೆ, ಮನೆ ಇಲ್ಲದವರಿಗೆ ಮನೆ ಭ ಆಗ್ಯ ದೊರೆತಿದೆ ಇದು ದ್ಸಿಕ್ರ್‌ನ ಪ್ರತಿಫಲದಿಂದ ಸಾಧ್ಯವಾಗಿದೆ ಎಂದು ಹೇಳಿದರು.

ಎಸ್ಕೆಎಸ್ಸೆಸ್ಸೆಫ್ ಮುಖಂಡ ಇಕ್ಬಾಲ್ ಬಾಳಿಲ ಮಾತನಾಡಿ ಜನರ ದುಖ ದುಮ್ಮಾನಗಳಿಗೆ ಆಧ್ಯಾತ್ಮ ಮಜ್ಲಿಸ್ ಪರಿಹಾರವಾಗಿದೆ.ಬೆಳಿಗ್ಗಿನ ನಮಾಜ್ ಬಳಿಕ ಮಲಗದೆ ಸುಮಾರು ಒಂದು ಲಕ್ಷ ಮಂದಿ ಆನ್‌ಲೈನ್ ಮೂಲಕ ದ್ಸಿಕ್ರ್ ಮಜ್ಲಿಸ್‌ನಲ್ಲಿ ಭಾಗವಹಿಸುತ್ತಿರುವುದು ಅತ್ಯಂತ ಸಂತೋಷದ ವಿಚಾರವಾಗಿದೆ. ಹಲವಾರು ಮಂದಿಗೆ ಕ್ಯಾನ್ಸರ್ ರೋಗ ಕಮ್ಮಿಯಾಗಿದೆ.ಸಾವಿರಾರು ಮಂದಿಯನ್ನು ಸೇರಿಸಿ ನಿಷ್ಕಲಂಕವಾಗಿ ಮಾಡುವ ಪ್ರಾರ್ಥನೆಯ ಫಲವಾಗಿದೆ , ಸಾಮೂಹಿಕ ಪ್ರಾರ್ಥನೆಯನ್ನು ಅಲ್ಲಾಹನು ಸ್ವೀಕರಿಸುತ್ತಾನೆ ಎಂಬುದಕ್ಕೆ ಮಜ್ಲಿಸ್ ಸಾಕ್ಷಿಯಾಗಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಮಾಡನ್ನೂರು ಖತೀಬ್ ಸಿರಾಜುದ್ದೀನ್ ಫೈಝಿ, ಮೊಟ್ಟೆತ್ತಡ್ಕ ಖಲತೀಬ್ ಅಬೂಬಕ್ಕರ್ ಸಿದ್ದಿಕ್ ಫೈಝಿ, ಸಂಟ್ಯಾರ್ ಖತೀಬ್ ಅಶ್ರಫ್ ದಾರಿಮಿ, ಮುಕ್ರಂಪಾಡಿ ಖತೀಬ್ ಹಸನ್ ಬಾಖವಿ, ಈಡನ್ ಗ್ಲೋಬಲ್ ಸ್ಕೂಲ್‌ನ ಪುತ್ತುಬಾವ ಹಾಜಿ, ಪರ್ಪುಂಜ ಎಬ್ರೋಡ್ ಹಾಲ್ ಮಾಲಕ ಮದಕ ಇಬ್ರಾಹಿಂ ಹಾಜಿ, ಉದ್ಯಮಿ ಫೈರೋಝ್ ಹಾಜಿ ಪಲ್ಡ್ಕ, ಅಬ್ದುಲ್ ರಶೀದ್ ಹಾಜಿ ನೈತಾಡಿ, ಅಬೂಬಕ್ಕರ್ ಮುಲಾರ್, ಅರ್ಷದ್ ದರ್ಬೆ, ಚೆನ್ನಾವರ ಉಸ್ಮಾನ್ ಹಾಜಿ, ಹುಸೈನಾರ್ ಮಾಡಾವು, ಹಾಜಿ ಅಝೀಝ್ ಮೊಟ್ಟೆತ್ತಡ್ಕ, ಜಮಾಲುದ್ದೀನ್ ಹಾಜಿ ಮುಕ್ವೆ ಮೊದಲಾದವರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.