ನೂರಕ್ಕೆ ನೂರು ಲಸಿಕೆ ಹಾಕಿಸಿಕೊಳ್ಳುವ ಮೂಲಕ ಆರೋಗ್ಯ ಕಾಪಾಡಿ, ಮಾದರಿಯಾಗಿ 15  ರಿಂದ18ರ ವರ್ಷದ ಮಕ್ಕಳ ತಾಲೂಕು ಮಟ್ಟದ ಕೋವಿಡ್ ಲಸಿಕಾ ಶಿಬಿರದಲ್ಲಿ ಶಾಸಕ ಸಂಜೀವ ಮಠಂದೂರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಮನಸ್ಸಿನಲ್ಲಿ ಭಯದ ಭಾವನೆ ಬಿಟ್ಟು ಬಿಡಿ – ಹೇಮನಾಥ ಶೆಟ್ಟಿ ಕಾವು
  • ನಗರಸಭೆಯಿಂದ ಮನೆ ಮನೆ ಭೇಟಿ – ಕೆ.ಜೀವಂಧರ್ ಜೈನ್
  • ಮೊದಲಿನ ತೀವ್ರತೆ ಇಲ್ಲದಿದ್ದರೂ ಮುನ್ನೆಚ್ಚರಿಕೆ ಇರಲಿ – ಡಾ. ಶ್ರೀಪ್ರಕಾಶ್

ಪುತ್ತೂರು: ಸಿಡುಬು, ಪೊಲೀಯೋ ಮುಕ್ತ ಸಮಾಜ ಹೇಗೆ ಮಾಡಿದ್ದೇವೋ ಅದೇ ರೀತಿಯಲ್ಲಿ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಕೋವಿಡ್ ಮುಕ್ತ ಸಮಾಜ ಮಾಡಬೇಕು ನಮ್ಮೆಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಲಸಿಕೆಯನ್ನು ಹಾಕಿಸಿಕೊಳ್ಳುವ ಮೂಲಕ ಆರೋಗ್ಯ ಕಾಪಾಡಿ, ಇತರರಿಗೆ ಮಾದರಿಯಾಗಬೇಕೆಂದು ಶಾಸಕ ಸಂಜೀವ ಮಠಮದೂರು ಹೇಳಿದರು.


ದ.ಕ.ಜಿ.ಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಪುತ್ತೂರ್‍ದ ಮುತ್ತು ಲಯನ್ಸ್ ಕ್ಲಬ್ ಮತ್ತು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಹಯೋಗದಲ್ಲಿ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವಠಾರದಲ್ಲಿರುವ ಬಂಟರ ಭವನದಲ್ಲಿ ೧೫ ರಿಂದ ೧೮ ವರ್ಷದ ಮಕ್ಕಳಿಗೆ ತಾಲೂಕು ಮಟ್ಟದ ಕೋವಿಡ್ ಲಸಿಕಾ ಶಿಬಿರವನ್ನು ಅವರು ಉದ್ಘಾಟಿಸಿ ಮಾತನಾಡಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಬ್ಬರಿಗೆ ಸಾಂಕೆತಿಕವಾಗಿ ವೇದಿಕೆಯಲ್ಲೇ ಲಸಿಕೆ ನೀಡಿಲಾಯಿತು. ಜಗತ್ತು ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡುತ್ತದೆ. ಆದರೆ ಮೊದಲು ಮೂಲಭೂತ ಸೌಕರ್ಯಕ್ಕೆ ಗಮನವಿತ್ತು. ಇವತ್ತು ಆರೋಗ್ಯದ ಕಡೆ ಇದೆ ಎಂದಾದರೆ ಅದಕ್ಕೆ ಕಾರಣ ಸಾಂಕ್ರಾಮಿಕ ರೋಗ ಎಂದರು. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ನಾಗರಿಕನಿಗೆ ಆರೋಗ್ಯ ಕೊಡುವುದು ಸರಕಾರದ ಜವಾಬ್ದಾರಿ. ಹಾಗಾಗಿ ಸರಕಾರ ಕೋವಿಡ್-೧೯ ಸೋಂಕು ನಿಯಂತ್ರಣಕ್ಕೆ ಲಸಿಕೆ ನೀಡಿದೆ. ಇದಕ್ಕಾಗಿ ರಾತ್ರಿ ಹಗಲಿರುಳನ್ನದೆ ಆರೋಗ್ಯ ಕಾಪಾಡಿದ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತರು, ಸಮಾಜ ಸೇವಾ ಕಾರ್ಯಕರ್ತರು ಇವರೆಲ್ಲ ಒಬ್ಬ ಸೈನಿಕನಿಗಿಂತ ಕಡಿಮೆ ಇಲ್ಲವೆಂಬಂತೆ ಸೇವೆ ಮಾಡಿದ್ದಾರೆ. ಆರೋಗ್ಯದ ದೃಷ್ಟಿಯಿಂದ ಜನರ ರಕ್ಷಣೆ ಮಾಡಿದ್ದಾರೆ. ಅವರನ್ನು ಗುರುತಿಸುವ ಕೆಲಸ ಸರಕಾರ ಮಾಡಿದೆ. ಕೋವಿಡ್ ನಿಯಂತ್ರಣಕ್ಕಾಗಿ ಆರಂಭದಲ್ಲಿ ೬೦ ವರ್ಷ ಮೆಲ್ಪಟ್ಟವರ, ೪೦ ವರ್ಷ ಮೇಲ್ಪಟ್ಟವಿರೆ, ಆಮೇಲೆ ೧೮ ವರ್ಷ ಮೇಲ್ಪಟ್ಟವರಿಗೆ ಕೊಡುವ ಕೆಲಸ ಮಾಡಿದೆ. ಹಾಗಾಗಿ ಇವತ್ತು ಶೇ.ಶೇ.೭೪ ಮಂದಿ ಸೆಕೆಂಡ್ ಡೋಸ್ ಪಡೆದಿದ್ದಾರೆ. ಆರೋಗ್ಯ ದೃಷ್ಟಿಯಿಂದ ದೇಶ ಮಹತ್ತರವಾದ ಸ್ಥಾನ ಪಡೆದು ಕೊಂಡಿದೆ. ಮೂಲಭೂತ ಸೌಕರ್ಯ ಒದಗಿಸಿದೆ. ಸರಕಾರಿ ಆಸ್ಪತ್ರೆಯಲ್ಲಿ ಜಾಗ ಇಲ್ಲದಷ್ಟು ವೈದ್ಯರಿದ್ದಾರೆ. ವೈದ್ಯಕೀಯ ಇಲಾಖೆ ಆರೋಗ್ಯದ ಬಗ್ಗೆ ಹೆಚ್ಚು ಮಹತ್ವ ಕೊಟ್ಟು ಎಲ್ಲರ ಆರೋಗ್ಯದ ಬಗ್ಗೆ ನಿಗಾ ವಹಿಸಿದೆ. ಸಿಡುಬು, ಪೊಲೀಯೋ ದೇಶದಿಂದ ನಿರ್ನಾಮ ಆಗಿ ಕಾಯಿಲೆ ಮುಕ್ತರಾಗಿದ್ದೇವೆ. ಅದೇ ರೀತಿ ಕೋವಿಡ್ ಮುಕ್ತ ಸಮಾಜ ಆಗಬೇಕು. ಹಾಗಾಗಿ ಇವತ್ತು ೧೫ ವರ್ಷದಿಂದ ಮೇಲ್ಪಟ್ಟ ಎಲ್ಲಾ ಯುವಕ ಯುವತಿಯವರು ನೂರಕ್ಕೆ ನೂರು ನಮ್ಮೆಲ್ಲಾ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಲಸಿಕೆ ಹಾಕಸಿಕೊಳ್ಳುವ ಮೂಲಕ ತಮ್ಮ ಆರೋಗ್ಯ ಕಾಪಾಡಬೆಕು. ಎಲ್ಲರಿಗೂ ನಾವು ಮಾದರಿಯಾಗಬೇಕು. ನಮ್ಮ ಮನೆಯಲ್ಲಿ ೧೮ ವರ್ಷ ಮೆಲ್ಪಟ್ವವರು ಲಸಿಕೆ ಹಾಕಿಸಿಕೊಳ್ಳದವರಿದ್ದರೆ ಅವರಿಗೂ ನೀವು ಪ್ರೇರಣೆ ಕೊಡಬೇಕು ಎಂದ ಅವರು ಇವತ್ತು ಜನ ಜೀವನ ಸಹಜ ಸ್ಥಿತಿಗೆ ಬರುವ ಸಂದರ್ಭದಲ್ಲಿ ಒಮಿಕ್ರೋನ್ ಎಂಬ ಸಣ್ಣ ಭಯವಿದೆ. ಅದರ ಬಗ್ಗೆ ಎಚ್ಚರವಾಗಿ ಇರಬೇಕು ಎಂದರು.

ಮನಸ್ಸಿನಲ್ಲಿ ಭಯದ ಭಾವನೆ ಬಿಟ್ಟು ಬಿಡಿ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕರೂ ಲಯನ್ಸ್ ಕ್ಲಬ್ ಪ್ರಾಂತೀಯ ೭ರ ಅಧ್ಯಕ್ಷರೂ ಆಗಿರುವ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ ಆರಂಭದಲ್ಲಿ ಲಸಿಕೆ ಬರುವ ಸಂದರ್ಭದಲ್ಲಿ ಮನಸ್ಸಿನಲ್ಲಿ ಭಯವಿತ್ತು. ಆದರೆ ಲಸಿಕೆ ಪಡೆದ ಬಳಿಕ ಆ ಭಯ ಯಾರಲ್ಲೂ ಇರಲಿಲ್ಲ. ಇವತ್ತು ಪ್ರಪಂಚ ಬಹಳಷ್ಟು ಸಮಸ್ಯೆ ಎದುರಿಸುತ್ತಿದೆ. ನಮಗೇನಾದರೂ ಆದರೂ ಮಕ್ಕಳಿಗೆ ಯಾವುದೇ ಸಮಸ್ಯೆ ಆಗರಬಾರದು ಎಂದು ಶಿಕ್ಷಣ ಇಲಾಖೆ ಮುಂಜಾಗ್ರತೆ ಕ್ರಮ ವಹಿಸಿದೆ. ಕೋವಿಡ್‌ನ ೩ನೇ ಅಲೆಯಲ್ಲಿ ಸರಕಾರ ದಿಟ್ಟ ಕ್ರಮ ಕೈಗೊಳ್ಳುವ ಮೂಲಕ ವ್ಯವಸ್ಥಿತವಾಗಿ ಮಕ್ಕಳಿಗೆ ಲಸಿಕೆ ಯೋಜನೆ ತಂದಿದೆ. ಆದರೆ ಮಕ್ಕಳ ಮನಸ್ಸಿನಲ್ಲಿ ಧೈರ್ಯ ಬೇಕಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಮನಸ್ಸಿನ ಭಯದ ಭಾವನೆ ಬಿಟ್ಟು ಬಿಡಿ. ಲಸಿಕೆ ಪಡೆದು ಇತರರಿಗೆ ಮಾದರಿಯಾಗಿ ಎಂದರು.

ನಗರಸಭೆಯಿಂದ ಮನೆ ಮನೆ ಭೇಟಿ:
ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ಮಾತನಾಡಿ ಆರೋಗ್ಯದ ಬಗ್ಗೆ ನಿಗಾ ವಹಿಸುವ ನಿಟ್ಟಿನಲ್ಲಿ ಬಹಳಷ್ಟು ಕಾರ್ಯಕ್ರಮ ಹಾಕಿಕೊಂಡಿದ್ದೇವೆ. ನಗರಸಭೆಯಿಂದ ಮನೆ ಮನೆ ಭೇಟಿ ಮಾಡುವ ಮೂಲಕ ಎಲ್ಲರ ಲಸಿಕೆ ಪಡೆದವರ ಮತ್ತು ಪಡೆದಯವರ ಮಾಹಿತಿ ಪಡೆದು ಕೊಂಡಿದ್ದೇವೆ. ಲಸಿಕೆ ಪಡೆದಯವರನ್ನು ಮನವೊಲಿಸುವ ಕೆಲಸ ಮಾಡುತ್ತೇವೆ ಎಂದರು.

ಶಿಕ್ಷಕರು, ಪೋಷಕರಿಗೆ ಲಸಿಕೆ ಆಗಿದೆ. ಉಳಿದಿರುವುದು ವಿದ್ಯಾರ್ಥಿಗಳು:
ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೋಕೇಶ್ ಅವರು ಮಾತನಾಡಿ ವಿದ್ಯಾರ್ಥಿಗಳು ರಾಷ್ಟ್ರದ ಸಂಪತ್ತು. ಅವರ ರಕ್ಷಣೆ ಸುರಕ್ಷತೆಗಾಗಿ ಹಲವು ಕಾರ್ಯಕ್ರಮ ಹಾಕಿಕೊಳ್ಳುತ್ತೇವೆ. ಕೋವಿಡ್‌ಗೆ ಸಂಬಂಧಿಸಿ ಶಿಕ್ಷಕರು ಮತ್ತು ಪೋಷಕರಿಗೆ ಶೇ.೧೦೦ ಲಸಿಕೆ ಆಗಿದೆ. ಇನ್ನು ಉಳಿದಿರುವುದು ವಿದ್ಯಾರ್ಥಿಗಳು ಮಾತ್ರ. ಯಾರೂ ಕೂಡ ಭಯ ಪಡೆದೆ ಲಸಿಕೆ ಹಾಕಿಸಿ ಕೊಳ್ಳಿ ಎಂದರು.

ಮೊದಲಿನ ತೀವ್ರತೆ ಇಲ್ಲದಿದ್ದರೂ ಮುನ್ನೆಚ್ಚರಿಕೆ ಇರಲಿ:
ಶಾಲೆಯ ಶಿಕ್ಷಕ, ರಕ್ಷಕ ಸಮಿತಿ ಅಧ್ಯಕ್ಷ ಡಾ. ಶ್ರೀಪ್ರಕಾಶ್ ಅವರು ಮಾತನಾಡಿ ಕೋವಿಡ್ ಸೋಂಕು ಮೊದಲಿನಂತೆ ತೀವ್ರತೆ ಇಲ್ಲದಿದ್ದರೂ ಮುಂಜಾಗ್ರತೆ ಇರಲಿ ಎಂದರು. ವೇದಿಕೆಯಲ್ಲಿ ನಗರಸಭೆ ಉಪಾಧ್ಯಕ್ಷೆ ವಿದ್ಯಾ ಗೌರಿ, ನಗರಸಭಾ ಸದಸ್ಯ ಪಿ.ಜಿ ಜಗನ್ನಿವಾಸ ರಾವ್, ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ, ಪುತ್ತೂರ್‍ದ ಮುತ್ತು ಲಯನ್ಸ್ ಕ್ಲಬ್ ಅಧ್ಯಕ್ಷ ಲ್ಯಾನ್ಸಿ ಮಸ್ಕರೆನಸ್, ಶಾಲಾ ಮುಖ್ಯಗುರು ಜಯಲಕ್ಷ್ಮೀ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಶಿಕ್ಷಣ ಸಂಯೋಜಕ ಹರಿಪ್ರಸಾದ್ ಸ್ವಾಗತಿಸಿದರು. ಹಿರಿಯ ಶಿಕ್ಷಕಿ ವಂದಿಸಿದರು. ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಸುಹೈಲಾ, ಹಿರಿಯ ಆರೋಗ್ಯ ನಿರೀಕ್ಷಕಿ ಪದ್ಮಾವತಿ ಸೇರಿದಂತೆ ಆರೋಗ್ಯ ಕಾರ್ಯಕರ್ತೆಯರು ಲಸಿಕೆ ನೀಡುವಲ್ಲಿ ಸಹಕರಿಸಿದರು.

28 ದಿನದ ನಂತರ ಸೆಕೆಂಡ್ ಡೋಸ್ ಕಡ್ಡಾಯ:
15 ರಿಂದ18ವರ್ಷದ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲಾಗುತ್ತದೆ. ತಾಲೂಕಿನಲ್ಲಿ ೧0,೯೫೫ ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ ನಗರಸಭೆ ವ್ಯಾಪ್ತಿಯಲ್ಲಿ ೪,೬೨೫ ಮಂದಿ ಮಕ್ಕಳಿದ್ದಾರೆ. ಇವತ್ತು ೧೨೦ ವಿದ್ಯಾರ್ಥಿಗಳಿಗೆ ಲಸಿಕೆ ಕೊಡಿಸಲಾಗುತ್ತಿದೆ. ಲಸಿಕೆ ಪಡೆದು ಕೊಂಡವರು ೨೮ ದಿನದ ನಂತರ ಸೆಕೆಂಡ್ ಡೋಸ್ ಕಡ್ಡಾಯವಾಗಿ ಪಡೆದು ಕೊಳ್ಳಬೇಕು. ಲಸಿಕೆಯಿಂದ ಸೈಡ್ ಇಪೆಕ್ಟ್ ಇಲ್ಲ. ಹಾಗಾಗಿ ಭಯ ಪಡದೆ ಲಸಿಕೆ ಹಾಕಿಸಿಕೊಳ್ಳಿ – ಡಾ. ದೀಪಕ್ ರೈ ತಾಲೂಕು ಆರೋಗ್ಯಾಧಿಕಾರಿ ಪುತ್ತೂರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.