ಶಿಕ್ಷಣದ ಜೊತೆಯಲ್ಲಿ ಬದುಕು ಕೊಡುವ ಕಾರ್ಯ ಜಿಲ್ಲಾ ಮಟ್ಟದ ಕೌಶಲ್ಯ ಅಭಿವೃದ್ದಿ ತರಬೇತಿ ಯೋಜನೆಯನ್ನು ಉದ್ಘಾಟಿಸಿದ ಶಾಸಕ ಸಂಜೀವ ಮಠಂದೂರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಯಾಂತ್ರಿಕ ಯುಗದಲ್ಲಿ ದೇಶದ ಪ್ರತಿಯೊಬ್ಬ ನಾಗರಿಕ ಉದ್ಯೋಗವನ್ನು ಪಡೆದು ದೇಶವನ್ನು ಮುನ್ನಡೆಸಬೆಕು. ಈ ದೇಶದ ಪ್ರಧಾನಿಯವರು ಒಂದಷ್ಟು ಯುವಜನತೆಗೆ ತಾಂತ್ರಿಕ ಶಿಕ್ಷಣ ಕೊಡುವ ಮೂಲಕ ವಿದ್ಯಾರ್ಥಿ ದೆಸೆಯಲ್ಲೇ ತಾಂತ್ರಿಕತೆ ಬಳಸಿಕೊಂಡು ಸ್ವಾಭಿಮಾನದ ಉದ್ಯೋಗವನ್ನು ಮಾಡಿಕೊಡುವ ವ್ಯವಸ್ಥೆ ಕಲ್ಪಿಸಿದ್ದಾರೆ. ಒಟ್ಟಿನಲ್ಲಿ ಶಿಕ್ಷಣ ಜೊತೆಯಲ್ಲಿ ಬದುಕು ಕೊಡುವ ಕಾರ್ಯ ನಡೆಯುತ್ತಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.


ಕೇಂದ್ರ ಸರಕಾರದ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ ಮತ್ತು ಕೌಶಲ ಅಭಿವೃದ್ಧಿ ಕೇಂದ್ರದ ಸಹಯೋಗದಿಂದ ಕೋವಿಡ್ ಸಂದರ್ಭದಲ್ಲಿ ಲಭ್ಯ ಇರುವ ಪ್ರಯೋಗಾಲಯ ಬಳಸಿಕೊಂಡು ವಿದ್ಯಾರ್ಥಿಗಳಿಗೆ ಕೌಶಲ್ಯ ಅಭಿವೃದ್ಧಿ ಶಿಕ್ಷಣ ಕೊಡಲು ರಾಜ್ಯದಲ್ಲಿ ೧೨ ಶಾಲೆಗಳನ್ನು ಆಯ್ಕೆಯಾದ ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪುತ್ತೂರಿನ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ವಿಭಾಗದ ಪ್ರೌಢಶಾಲೆ ಆಯ್ಕೆಗೊಂಡಿದ್ದು, ಜ.೩ರಂದು ಶಾಸಕ ಸಂಜೀವ ಮಠಂದೂರು ಕೌಶಲ್ಯ ಅಭವೃದ್ಧಿ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಸರಕಾರದ ಶಿಕ್ಷಣ ಸಂಪನ್ಮೂಲ ಇಲಾಖೆ ಆರಂಭದಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ ಜಾರಿಗೆ ತಂದಿದ್ದು, ಅದರ ಉದ್ದೇಶದಂತೆ ವಿದ್ಯಾರ್ಥಿಯೂ ತಾನು ಎಸ್.ಎಸ್.ಎಲ್.ಸಿ ಆಗಬೇಕಾದರೆ ಸ್ವಂತ ಉದ್ಯೋಗ ಮಾಡುವುದಲ್ಲದೆ ಯಾವ ಕ್ಷೇತ್ರಕ್ಕೆ ಆದ್ಯತೆ ಕೊಡಬಹುದು ಎಂಬುದನ್ನು ಖಚಿತ ಪಡಿಸಿಕೊಳ್ಳಬಹದು ಎಂಬುದನ್ನು ದೇಶದ ಪ್ರಧಾನಿಯವರು ಯೋಚನೆ ಮಾಡಿ ಶಿಕ್ಷಣ ವ್ಯಸ್ಥೆಯಲ್ಲಿ ಅಮೂಲಾಗ್ರಹ ಬದಲಾವಣೆ ತಂದಿದ್ದರೆ ಜೊತೆಗೆ ಬದುಕು ಕೊಡುವ ಶಿಕ್ಷಣ ಕೊಡಬೇಕು ಚಿಂತನೆ ಮೂಡಿಸಿದ್ದಾರೆ ಎಂದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊಂಬೆಟ್ಟು ಶಾಲೆ ಮಾತ್ರ ಈ ಕೌಶಲ್ಯಾಭಿವೃದ್ಧಿ ತರಬೇತಿಗೆ ಆಯ್ಕೆಯಾಗಿದೆ. ಶಿಕ್ಷಣ ಜೊತೆಯಲ್ಲಿ ಬದುಕುವ ತಾಂತ್ರಿಕ ಜೀವನೋಪಾಯದ ತರಬೇತಿಯಾಗಲಿ ಎಂದರು.

ಉದ್ಯೋಗದ ಭರವಸೆಯೂ ಇದೆ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೋಕೇಶ್ ಅವರು ಮಾತನಾಡಿ ಕೇಂದ್ರ ಸರಕಾರದ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ ಮತ್ತು ಕೌಶಲ ಅಭಿವೃದ್ಧಿ ಕೇಂದ್ರದ ಸಹಯೋಗದಿಂದ ೧೫ ರಿಂದ ೨೯ ವರ್ಷದೊಳಗಿನ ವಿದ್ಯಾಭ್ಯಾಸದಿಂದ ವಂಚಿತರಾದ ವಿದ್ಯಾರ್ಥಿಗಳಿಗೆ ಹಾಗೂ ಶಾಲೆ ಬಿಟ್ಟ ಮಕ್ಕಳನ್ನು ಮುಖ್ಯ ವಾಹನಿಗೆ ತರುವ ಉದ್ದೇಶದಿಂದ ಇನ್ ಪಾರ್ಮೇಶನ್ ಟೆಕ್ನಾಲಜಿ ಮತ್ತು ಅಟೋಮೊಬೈಲ್ ಎನ್ನುವ ೬ ತಿಂಗಳ ಕೋರ್ಸುಗಳನ್ನು ಉಚಿತವಾಗಿ ನೀಡಲು ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗ ಲಭಿಸಿದೆ. ತರಗತಿ ಮುಗಿದ ಬಳಿಕ ಸಂಜೆ ಕೋರ್ಸುಗಳಿಗೆ ತರಬೇತಿ ನೀಡಲಾಗುವುದು. ತರಬೇತಿಯ ನಂತರ ಕೇಂದ್ರ ಸರಕಾರದಿಂದ ಪುಮಾಣ ಪತ್ರ ನೀಡಲಾಗುವುದು. ತರಬೇತಿ ಮುಗಿದ ನಂತರ ಕೌಶಲ, ಅಭಿವೃದ್ಧಿ ಕೇಂದ್ರದಿಂದ ಉದ್ಯೋಗವಕಾಶವನ್ನು ಕಲ್ಪಿಸಲಾಗುತ್ತದೆ ಎಂದರು. ಐಟಿ ಉಪಾನ್ಯಾಸಕ ಆಶ್ಲೇಷ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊಂಬೆಟ್ಟು ಸರಕಾರಿ ಪ್ರೌಢಶಾಲೆಯ ಎಸ್.ಡಿ.ಎಂಸಿ. ಕಾರ್ಯಾಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುರೇಶ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಉಪ ಪ್ರಾಂಶುಪಾಲ ವಸಂತ ಮೂಲ್ಯ ಸ್ವಾಗತಿಸಿದರು. ಮಮತಾ ರೈ ವಂದಿಸಿದರು. ರಶ್ಮಿ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.