ದ.ಕ ಜೇನು ವ್ಯವಸಾಯಗಾರರ ಸಹಕಾರಿ ಸಂಘದ ನಿರ್ದೇಶಕ ಸ್ಥಾನಗಳಿಗೆ ಅವಿರೋಧ ಅಯ್ಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯಿರುವ, ಪುತ್ತೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ದ.ಕ ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಆಡಳಿತ ಮಂಡಳಿಯ ಮುಂದಿನ ಐದು ವರ್ಷಗಳ ಅವಧಿಯ ನೂತನ ಆಡಳಿತ ಮಂಡಳಿಯ ಎಲ್ಲಾ 18  ನಿರ್ದೇಶಕ ಸ್ಥಾನಗಳಿಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಾಮಪತ್ರ ಸಲ್ಲಿಸಲು ಜ.1 ಅಂತಿಮ ದಿನವಾಗಿತ್ತು ಜ.2ರಂದು ನಾಮಪತ್ರಗಳ ಪರಿಶೀಲನೆ, ಜ.3ರಂದು ನಾಮಪತ್ರ ಹಿಂತೆಗೆದುಕೊಳ್ಳಲು ಅಂತಿಮ ದಿನವಾಗಿತ್ತು. ಎಲ್ಲಾ 18 ಸ್ಥಾನಗಳಿಗೆ ತಲಾ ಒಂದೊಂದು ನಾಮಪತ್ರ ಸಲ್ಲಿಕೆಯಾಗಿದ್ದು ಎಲ್ಲಾ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಎ’ ತರಗತಿ ಸದಸ್ಯ ಸ್ಥಾನಕ್ಕೆ ಸಾಮಾನ್ಯ ಮೀಸಲಾತಿಯಲ್ಲಿ ದ.ಕ ಜಿಲ್ಲೆಯ ಸುಳ್ಯ ತಾಲೂಕಿನಿಂದ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಅಧ್ಯಕ್ಷ ಚಂದ್ರ ಕೋಲ್ಚಾರ್, ನಿರ್ದೇಶಕ ಜನಾರ್ದನ ಚೂಂತಾರು, ಪುಟ್ಟಣ್ಣ ಗೌಡ ಕಾಡುತೋಟ, ಪುತ್ತೂರು ತಾಲೂಕಿನಿಂದ ಪಾಂಡುರಂಗ ಹೆಗ್ಡೆ, ಸುಂದರ ಗೌಡ, ಗೋವಿಂದ ಭಟ್, ಬೆಳ್ತಂಗಡಿ ತಾಲೂಕಿನಿಂದ ಜಿ.ಪಿ ಶ್ಯಾಮ ಭಟ್, ಬಂಟ್ವಾಳ ತಾಲೂಕಿನಿಂದ ರಾಜಾರಾಮ ಶೆಟ್ಟಿ, ಹರೀಶ್ ಕೊಡ್ಲಾ, ಮಂಗಳೂರಿನಿಂದ ಪುರುಷೋತ್ತಮ ಭಟ್, ಉಡುಪಿ ಜಿಲ್ಲೆಯ ಕಾರ್ಕಳ, ಉಡುಪಿ ಮತ್ತು ಕುಂದಾಪುರ ತಾಲೂಕು `ಎ’ ತರಗತಿ ಸ್ಥಾನದಿಂದ ನಿರ್ದೇಶಕ ಶ್ರೀಶ ಕೊಡವೂರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಿಂದ `ಎ’ ತರಗತಿ ಮಹಿಳಾ ಮೀಸಲು ಸ್ಥಾನಗಳಿಗೆ ಉಡುಪಿ ಜಿಲ್ಲೆಯಿಂದ ಇಂದಿರಾ ಕುಂದಾಪುರ, ದ.ಕ ಸ್ಥಾನದಿಂದ ಸುಶೀಲ ಸೋಣಂಗೇರಿ, ದ.ಕ ಉಡುಪಿ ಜಿಲ್ಲೆಯಿಂದ `ಎ’ ತರಗತಿ ಪ.ಪಂಗಡ ಸ್ಥಾನಕ್ಕೆ ಶಂಕರ ಪೆರಾಜೆ, ಪ.ಜಾತಿಯಿಂದ ಮಾಜಿ ನಿರ್ದೇಶಕ ಶಿವಾನಂದ ನಾಯ್ಕ, ಹಿಂದುಳಿದ ವರ್ಗ `ಎ’ ಸ್ಥಾನಕ್ಕೆ ಮನಮೋಹನ ಅರಂಬ್ಯ, ಹಿಂದುಳಿದ ವರ್ಗ `ಬಿ’ಯಲ್ಲಿ ಸರಸ್ವತಿ ವೈ.ಪಿ., ಹಾಗೂ ದ.ಕ ಮತ್ತು ಉಡುಪಿ ಜಿಲ್ಲೆಯ `ಬಿ’ ತರಗತಿ (ಸಹಕಾರಿ ಸಂಘಗಳ) ಸ್ಥಾನದಲ್ಲಿ ತನಿಯಪ್ಪ ಡಿ. ಆಯ್ಕೆಯಾಗಿದ್ದಾರೆ. ಸಹಕಾರ ಇಲಾಖೆಯ ಸಹಕಾರ ಅಭಿವೃದ್ಧಿ ಅಧಿಕಾರಿ ಶಿವಲಿಂಗಯ್ಯ ಎಂ ಚುನಾವಣಾಧಿಕಾರಿಯಾಗಿದ್ದರು. ಆಡಳಿತ ನಿರ್ದೇಶಕ ತಿಮ್ಮಯ್ಯ ಪಿಂಡಿಮನೆ ಹಾಗೂ ಸಿಬಂದಿಗಳು ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.