ಬೆಟ್ಟಂಪಾಡಿ ನವೋದಯ ಪ್ರೌಢಶಾಲೆಯ ಅನಿರುದ್ಧ ಶರ್ಮಾ ಇನ್ಸ್ಪೈರ್ ಅವಾರ್ಡ್ ಗೆ ಆಯ್ಕೆ 

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 ಬೆಟ್ಟಂಪಾಡಿ : ಡಿಪಾರ್ಟ್ಮೆಂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ ಮತ್ತು ನ್ಯಾಷನಲ್ ಇನ್ನೋವೇಶನ್ ಫೌಂಡೇಶನ್ ಆಫ್ ಇಂಡಿಯಾ, ನವದೆಹಲಿ, ಇದರ ವತಿಯಿಂದ , ವಿಜ್ಞಾನ ಹಾಗೂ ತಂತ್ರಜ್ಞಾನದ ಪ್ರಗತಿಗೋಸ್ಕರ ಮತ್ತು ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಪ್ರಕ್ರಿಯೆಯಲ್ಲಿ ವೈಜ್ಞಾನಿಕ ಆವಿಷ್ಕಾರಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಲು ಇನ್ಸ್ಪೈರ್ ಅವಾರ್ಡ್ ಮಾನಕ್ [Inspire Award] ಸ್ಪರ್ಧೆಯನ್ನು ಆಯೋಜಿಸಿತ್ತು.

 

2021-2022ರ ಈ ಸ್ಪರ್ಧೆಯಲ್ಲಿ ನಮ್ಮ ನವೋದಯ ಪ್ರೌಢ ಶಾಲೆಯ 4 ವಿದ್ಯಾರ್ಥಿಗಳು ಭಾಗವಹಿಸಿದ್ದು,ಶಾಲಾ ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷರಾದ ಬಟ್ಯಮೂಲೆ ಶ್ರೀಕೃಷ್ಣ ಭಟ್ ಮತ್ತು ಲತಾ ಎಸ್ ಭಟ್ ಇವರ ಪುತ್ರ, ಹತ್ತನೇ ತರಗತಿಯ ವಿದ್ಯಾರ್ಥಿಯಾದ ಅನಿರುದ್ಧ ಶರ್ಮಾ ಇವನು ಆವಿಷ್ಕರಿಸಿದ ” Multi purpose umbrella” ವಿಜ್ಞಾನ ಮಾದರಿಯು 10,000 ₹ ಪುರಸ್ಕಾರಗಳೊಂದಿಗೆ ಮುಂದಿನ ಹಂತದ ಸ್ಪರ್ಧೆಗೆ ಆಯ್ಕೆ ಆಗಿರುತ್ತದೆ. ಈ ವಿಜ್ಞಾನ ಮಾದರಿಯ ಉಪಯೋಗ, ಮಾರುಕಟ್ಟೆಯಲ್ಲಿ ಮತ್ತು ರಸ್ತೆ ಬದಿಯಲ್ಲಿ ತಮ್ಮ ದಿನನಿತ್ಯದ ಜೀವನ ಸಾಗಿಸಲು ಕಷ್ಟಪಡುವ ಸಣ್ಣಪುಟ್ಟ ವ್ಯಾಪಾರಮಾಡುವವರಿಗೆ, ಮಳೆ,ಬಿಸಿಲಿನಿಂದ ರಕ್ಷಣೆ ಪಡೆಯಲು, ಮತ್ತು ಇದರಲ್ಲಿನ ಸೌರಪ್ಯಾನೆಲ್ ಮುಖಾಂತರ ವಿದ್ಯುತ್ತನ್ನು ಪಡೆದು, ಲೈಟ್, ಫ್ಯಾನ್,ರೇಡಿಯೋ,ಮೊಬೈಲ್ ಚಾರ್ಜ್, ಇತ್ಯಾದಿಗಳ ಉಪಯೋಗವನ್ನು ಪಡೆಯಲು, ಹಾಗೂ ಸುಲಭವಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸುಲಭವಾಗಿ ಸಾಗಿಸಿ ದುಬಾರಿ ವೆಚ್ಚವನ್ನು ಕಡಿಮೆ ಮಾಡಿ,ಉಳಿತಾಯ ಮಾಡಬಹುದು,ಈ ಬಹೂಪಯೋಗಿ ಆವಿಷ್ಕಾರವನ್ನು ಶಾಲಾ ವಿಜ್ಞಾನ ಶಿಕ್ಷಕಿ ಶ್ರೀಮತಿ ಭುವನೇಶ್ವರಿ ಎಂ.ಇವರ ಮಾರ್ಗದರ್ಶನದಲ್ಲಿ ಮಾಡಿರುತ್ತಾನೆ, ಎಂದುಶಾಲಾ ಮುಖ್ಯಗುರುಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.