ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಏರೊ ಮಾಡೆಲಿಂಗ್ ಕಾರ್ಯಾಗಾರ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು:   ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ವಿವೇಕ ನಗರ, ತೆಂಕಿಲ ಶಾಲೆಯಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್‌ನ ವತಿಯಿಂದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಎರಡು ದಿನಗಳ ಏರೊ ಮಾಡೆಲಿಂಂಗ್ ಕಾರ್ಯಾಗಾರವನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಲೆಯ ಸಂಚಾಲಕರಾದ ರವಿನಾರಯಣ ಎಂ ಇವರು ಕೇಂದ್ರ ಸರಕಾರದ ಮಹಾತ್ವಾಂಕಾಕ್ಷೆಯ ಯೋಜನೆಯ ಭಾಗವಾದ ಅಟಲ್ ಟಿಂಕರಿಂಗ್ ಲ್ಯಾಬ್‌ಗಳು ವಿದ್ಯಾರ್ಥಿಗಳಲ್ಲಿ ಕೌಶಲ್ಯಗಳನ್ನು ವೃದ್ದಿಸಲು ಸಹಕಾರಿಯಾಗಿದ್ದು ವಿದ್ಯಾರ್ಥಿಗಳ ಕುತೂಹಲಗಳಿಗೆ ಸೂಕ್ತ ಉತ್ತರಗಳು ದೊರಕುವುದರೊಂದಿಗೆ ವಿಮಾನಗಳ ತಯಾರಿಕೆಯ ಕುರಿತಾಗ ಕೌಶಲ್ಯಗಳು ವೃದ್ಧಿಯಾಗಲಿ ಎಂದು ಹರಸಿದರು.

ಕಾರ್ಯಕ್ರಮದ ಅಧ್ಯಕ್ಷತೆನ್ನು ವಹಿಸಿದ್ದ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಶಿವಪ್ರಕಾಶ್ ಎಂ ಮಾತನಾಡಿ ಪುರಾಣಗಳಲ್ಲಿ ವಿಮಾನಗಳ ಆವಿಷ್ಕಾರದ ಹಿನ್ನೆಲೆಯನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಕಾರ್ಯಾಗಾರದ ತರಬೇತುದಾರರುಗಳಾದ ಮಿಥುಲ್ ದಾಸ್, ನಿಹಾಲ್ ರಾಜೇಶ್ ,  ಅಶ್ವಥರಾಮ ಪ್ರಭು,  ಕೆಲ್ವಿನ್ ಜೋಸೆಫ್ ಶಾಲಾ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.