ಜ.5: ಶ್ರೀ ವಿಶ್ವೇಶತೀರ್ಥರ ಆರಾಧನಾ ಮಹೋತ್ಸವ ಟಿ. ನಾರಾಯಣ ಭಟ್ ರಚಿಸಿದ ಶ್ರೀಗಳ ವ್ಯಕ್ತಿತ್ವ ಕೃತಿ ಬಿಡುಗಡೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 


ರಾಮಕುಂಜ: ವಿಶ್ವ ಕಂಡ ಸಂತ ಶ್ರೇಷ್ಠ, ಬಡವ ಬಲ್ಲಿದರಾದಿಯಾಗಿ ಧಾರ್ಮಿಕ, ಸಾಮಾಜಿಕ, ಆಧ್ಯಾತ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಜೀವನಪರ್ಯಂತ ವಿಶಿಷ್ಠ ಸಾಧನೆಗೈದು ಮನಗೆದ್ದವರು ಉಡುಪಿ ಪೇಜಾವರ ಮಠಾಧೀಶ, ವೃಂದಾವನಸ್ಥ ಶ್ರೀ ವಿಶ್ವೇಶತೀರ್ಥ ಶ್ರೀಪಾದರು. ಯಾವುದೇ ಕ್ಲಿಷ್ಟಕರ ಸಮಸ್ಯೆಗಳಿಗೂ ಪರಿಹಾರ ಹುಡುಕಬಲ್ಲ ಶ್ರೇಷ್ಠ ಚಿಂತಕರಾಗಿದ್ದರು. ಪತ್ರಿಕಾ ಮಾಧ್ಯಮ, ದೃಶ್ಯ ಮಾಧ್ಯಮಗಳು ಶ್ರೀಗಳ ಅಭಿಪ್ರಾಯಕ್ಕೆ ಮಹತ್ವದ ಸ್ಥಾನ ನೀಡುತ್ತಿದ್ದವು. ತನ್ನ ಜೀವಿತದ ಕೊನೆಗಾಲದವರೆಗೂ ದೇಶದಾದ್ಯಂತ ಭಕ್ತರ ಜೊತೆ ಬೆರೆತು ಚಿಕಿತ್ಸಾಲಯ, ವಿದ್ಯಾಲಯ, ದೇವಾಲಯಗಳ ನಿರ್ಮಾಣದತ್ತ ಚಿತ್ತ ಹರಿಸಿದವರು. ಬದುಕಿನ ಕೊನೆಯ ದಿನವೂ ತೀವ್ರ ಅಸೌಖ್ಯದ ನಡುವೆಯೂ ಹುಟ್ಟೂರಿಗೆ ಆಗಮಿಸಿ ತಾನು ಕಲಿತ ಶ್ರೀ ರಾಮಕುಂಜೇಶ್ವರ ಸಂಸ್ಕೃತ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಹರಸಿದ ನೆನಪು ಊರವರಲ್ಲಿ ಇಂದಿಗೂ ನೆಲೆನಿಂತಿದೆ. ಜನವರಿ 5ರಂದು ಬೆಂಗಳೂರಿನ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಶ್ರೀಗಳ ಪಟ್ಟದ ಶಿಷ್ಯರಾದ ಪೇಜಾವರ ಮಠಾಧೀಶ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಆರಾಧನಾ ಮಹೋತ್ಸವ ಕೋವಿಡ್ ನಿಯಮಗಳಡಿಯಲ್ಲಿ ಜರಗಲಿದೆ.


ಶ್ರೀ ವಿಶ್ವೇಶತೀರ್ಥರು ಕಲಿತ, ಅವರ ಆಡಳಿತದ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಶ್ರೀಗಳ ವಿವಿಧ ಕೆಲಸ ಕಾರ್ಯಗಳಲ್ಲಿ ತನ್ನನ್ನು ಸದಾ ತೊಡಗಿಸಿಕೊಂಡಿದ್ದ ಟಿ. ನಾರಾಯಣ ಭಟ್ ರಾಮಕುಂಜ ಇವರು ರಚಿಸಿದ “ಶ್ರೀ ವಿಶ್ವೇಶತೀರ್ಥರ ಬಹುಮುಖಿ ವ್ಯಕ್ತಿತ್ವ” ಹಾಗೂ ಶ್ರೀಗಳ ಜೀವನಚರಿತ್ರೆಯನ್ನಾಧರಿಸಿ ಬರೆದ ನಾಟಕ “ವಿಶ್ವೇಶತೀರ್ಥ ವಿಜಯ” ಈ ಎರಡೂ ಕೃತಿಗಳು ಆರಾಧನಾ ದಿನದಂದು ಗಣ್ಯರು ಹಾಗೂ ವಿವಿಧ ಪೀಠಾಧಿಪತಿಗಳ ಸಮ್ಮುಖದಲ್ಲಿ ಬೆಂಗಳೂರಿನ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಬಿಡುಗಡೆಗೊಳ್ಳಲಿದೆ. ಬಹುಮುಖಿ ವ್ಯಕ್ತಿತ್ವ ಕೃತಿ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೂ ಅರ್ಥವಾಗಬಲ್ಲಂತಿದ್ದರೆ, ಜೀವನಾಧರಿತ ನಾಟಕವು ಮುಂದೊಂದು ದಿನ ಚಲನಚಿತ್ರವಾಗಿ ಜನಮಾನಸ ತಟ್ಟಬಲ್ಲಂತಾಗಲೆಂಬ ಆಶಯದೊಂದಿಗೆ ಬರೆಯಲಾಗಿದೆ. ಇದು ನಾನು ಶ್ರೀಗಳ ಕುರಿತು ಬರೆದ ಏಳನೆಯ ಕೃತಿಯಾಗಿದೆ ಎಂದು ಟಿ. ನಾರಾಯಣ ಭಟ್‌ರವರು ತಿಳಿಸುತ್ತಾಯೆಂದು ತಿಳಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.