ವಿದ್ಯಾರಶ್ಮಿಯಲ್ಲಿ ವಿದ್ಯಾರ್ಥಿಗಳಿಗೆ ವ್ಯಾಕ್ಸಿನೇಶನ್

0

ಪುತ್ತೂರು: ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ 15ರಿಂದ 18ರ ವಯೋಮಾನದವರಿಗೆ ಕೋವಿಡ್ ವ್ಯಾಕ್ಸಿನ್ ನೀಡುವ ಕಾರ್ಯಕ್ರಮ ಜರುಗಿತು. ಸಂಚಾಲಕರಾದ ಕೆ. ಸೀತಾರಾಮ ರೈ ಸವಣೂರು ಅವರು ಉಪಸ್ಥಿರಿದ್ದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿ ಎಲ್ಲಾ ಅರ್ಹ ಮಕ್ಕಳು ವ್ಯಾಕ್ಸಿನೇಶನ್ ಪಡೆದುಕೊಳ್ಳುವಂತೆ ಸಲಹೆ ನೀಡಿದರು. ಈ ಅಭಿಯಾನದ ಮೂಲಕವಾಗಿ ಭಾರತ ಸರಕಾರದ ವ್ಯಾಕ್ಸಿನೇಶನ್ ಅಭಿಯಾನಕ್ಕೆ ವಿದ್ಯಾರಶ್ಮಿಯ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.

ವೈದ್ಯಾಧಿಕಾರಿ ಡಾ. ಅಮಿತ್ ತುದಿಯಡ್ಕ ಖುದ್ದಾಗಿ ಸಕಲ ಮಾರ್ಗದರ್ಶನ ನೀಡಿದರು. ಹಿರಿಯ ಆರೋಗ್ಯ ಸಹಾಯಕಿ ಜಸಿಂತಾ, ಆರೋಗ್ಯ ಸಹಾಯಕಿಯರಾದ ವಾಗೀಶ್ವರಿ, ಚೈತ್ರಾ, ನಿಶ್ಮಿತಾ ಮತ್ತು ಸಾವಿತ್ರಿ, ಆಶಾ ಕಾರ್ಯಕರ್ತೆಯರಾದ ಅನಿತಾ ಮತ್ತು ಸುಮತಿ, ದತ್ತಾಂಶ ನಮೂದಕರಾದ ಲಿಖಿಲ್ ಸಹಕರಿಸಿದರು. ಯುವಜನ ಸಂಯುಕ್ತ ಮಂಡಳಿಯ ಪೂರ್ವಾಧ್ಯಕ್ಷರಾದ ಸುರೇಶ್ ರೈ ಸೂಡಿಮುಳ್ಳು ವಿಶೇಷ ಸಹಕಾರ ನೀಡಿದರು. ವಿದ್ಯಾರಶ್ಮಿಯ ಪ್ರಾಂಶುಪಾಲ ಸೀತಾರಾಮ ಕೇವಳ ಮತ್ತು ಸಿಬ್ಬಂದಿಯವರು ವಿವಿಧ ಸಹಕಾರ ನೀಡಿದರು.

LEAVE A REPLY

Please enter your comment!
Please enter your name here