ರಾಜ್ಯ ಅಲ್ಪ ಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಪುತ್ತೂರು ಕಮ್ಯೂನಿಟಿ ಸೆಂಟರ್‌ಗೆ ಭೇಟಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಪುತ್ತೂರಿನ ಕಮ್ಯೂನಿಟಿ ಸೆಂಟರ್‌ನ ಸೇವೆ ರಾಜ್ಯಕ್ಕೆ ಮಾದರಿ-ಮುಕ್ತಾರ್ ಹುಸೇನ್


ಪುತ್ತೂರು: ಕರ್ನಾಟಕ ರಾಜ್ಯ ಅಲ್ಪ ಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಕ್ತಾರ್ ಹುಸೇನ್ ಪಠಾಣ ಅವರು ಜ.೩ರಂದು ಪುತ್ತೂರು ಕಮ್ಯೂನಿಟಿ ಸೆಂಟರ್‌ಗೆ ಭೇಟಿ ನೀಡಿದರು.

  

ಈ ಸಂದರ್ಭದಲ್ಲಿ ಪುತ್ತೂರು ಕಮ್ಯುನಿಟಿ ಸೆಂಟರ್‌ನ ಮುಖ್ಯಸ್ಥ ಹನೀಫ್ ಪುತ್ತೂರು ಅವರು ಮುಕ್ತಾರ್ ಹುಸೇನ್ ಅವರಿಗೆ ಸೆಂಟರ್‌ನ ಸೇವಾ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಸಂಸ್ಥೆಯ ವತಿಯಿಂದ ಅಧ್ಯಕ್ಷರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮುಕ್ತಾರ್ ಹುಸೇನ್ ಅವರು ಬಡವರ, ಮಹಿಳೆಯರ, ವಿಧವೆಯರ ಹಾಗೂ ವಿಶೇಷವಾಗಿ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ವಹಿಸುತ್ತಿರುವ ಪುತ್ತೂರಿನ ಕಮ್ಯುನಿಟಿ ಸೆಂಟರ್ ಸೇವೆಯು ರಾಜ್ಯಕ್ಕೇ ಮಾದರಿಯಾಗಿದೆ. ಬಡ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಫ್ ನೀಡಿ ಶಿಕ್ಷಣದಿಂದ ವಂಚಿತರಾಗದಂತೆ ಕಾರ್ಯ ನಿರ್ವಹಿಸುತ್ತಿರುವ ಈ ಸಂಸ್ಥೆಗೆ ನಾವು ಮಾರ್ಗದರ್ಶನ ನೀಡುವುದರ ಬದಲು ಇಲ್ಲಿಂದ ನಾವು ಕಲಿಯುವಂತಹ ಸಾಕಷ್ಟು ವಿಚಾರಗಳಿವೆ. ಮುಸ್ಲಿಂ ಸಮುದಾಯವು ಆದ್ಯಾತ್ಮಿಕವಾಗಿ ಅಂಟಿಕೊಳ್ಳದೆ ಜಗತ್ತನ್ನು ಅರಿಯುವ ಪ್ರಯತ್ನ ನಡೆಸಬೇಕು. ಸರ್ಕಾರದಿಂದ ಸಮುದಾಯಕ್ಕೆ ಸಾಕಷ್ಟು ಯೋಜನೆಗಳಿದ್ದರೂ ಅವು ಸಮರ್ಪಕವಾಗಿ ಕಟ್ಟ ಕಡೆಯ ಸಮುದಾಯಕ್ಕೆ ತಲುಪುತ್ತಿಲ್ಲ. ಯಾವುದೇ ಗುರಿ ತಲುಪಲು ಅದಕ್ಕೆ ಗುರುಗಳು ಬೇಕಾಗಿದೆ. ಕಮ್ಯುನಿಟಿ ಸೆಂಟರ್ ಗುರುವಿನ ಸ್ಥಾನದಲ್ಲಿ ಕೆಲಸ ಮಾಡುತ್ತಿದೆ. ಹನೀಫ್ ಪುತ್ತೂರು ಮತ್ತು ತಂಡದ ಈ ಕಾರ್ಯಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿ ಮೆಚ್ಚುಗೆ ವ್ಯಕ್ತಪಡಿಸಿದರು.

ಹೆತ್ತವರಿಗೂ ಕೌನ್ಸೆಲಿಂಗ್ ಆಗಲಿ:
ಕೊರೊನಾ ಬಳಿಕ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗೆ ಮೊಬೈಲ್ ನೀಡುವುದು ಅನಿವಾರ್ಯವಾಗಿತ್ತು. ಅದರೆ ಇದೀಗ ಬಹುತೇಕ ಮಕ್ಕಳು ಮೊಬೈಲ್ ಗೀಳಿಗೆ ಒಳಗಾಗಿದ್ದಾರೆ. ಇದನ್ನು ತಡೆಯುವ ನಿಟ್ಟಿನಲ್ಲಿ ಮಕ್ಕಳಿಗೆ ಹಾಗೂ ಹೆತ್ತವರಿಗೆ ಕೌನ್ಸಿಲ್‌ನ ಅಗತ್ಯವಿದೆ. ಕಮ್ಯುನಿಟಿ ಸೆಂಟರ್ ಈ ಬಗ್ಗೆಯೂ ಕೌನ್ಸಿಲಿಂಗ್ ವ್ಯವಸ್ಥೆಯನ್ನು ಮಾಡಬೇಕು. ಕೌಶಲ್ಯ ಆಧಾರಿತ ಕಲಿಕೆ ಪ್ರೋತ್ಸಾಹ, ಮಹಿಳಾ ಶಿಕ್ಷಣಕ್ಕೆ ಸಹಕಾರ, ಸ್ವಸಹಾಯ ಸಂಘಗಳಿಗೆ ಪ್ರೋತ್ಸಾಹ ನೀಡುವ ಕೆಲಸವಾಗಲಿ ಎಂದು ಮುಕ್ತಾರ್ ಹುಸೇನ್ ಸಲಹೆ ನೀಡಿದರು.

ನೆರವು ನೀಡುವ ಭರವಸೆ:
ಕಮ್ಯುನಿಟಿ ಸೆಂಟರ್ ದಾಖಲಿಸಿದ ಪ್ರಗತಿ, ಡಾಟಾಗಳನ್ನು ವೀಕ್ಷಿಸಿದ ಮುಕ್ತಾರ್ ಹುಸೇನ್ ಅವರು ಸರಕಾರ ಅಥವಾ ಇಲಾಖೆಯ ಮೂಲಕ ಯಾವ ರೀತಿಯಲ್ಲಿ ಇದಕ್ಕೆ ನೆರವು ನೀಡಬೇಕು ಎಂಬುವುದನ್ನು ಪರಿಶೀಲಿಸಿಕೊಂಡು ಮುಂದಿನ ದಿನಗಳಲ್ಲಿ ನೆರವು ನೀಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಮನವಿ ಸಲ್ಲಿಕೆ:
ಸಂಸ್ಥೆಯ ಪರವಾಗಿ ಕೆಲವೊಂದು ಬೇಡಿಕೆಗಳ ಪಟ್ಟಿಯನ್ನು ಉಪನ್ಯಾಸಕ ನವಾಝ್ ವಾಚಿಸಿದರು. ನಂತರ ಉದ್ಯಮಿ ರಫೀಕ್ ಹಾಜಿ ಸುಲ್ತಾನ್ ಅವರ ನೇತೃತ್ವದಲ್ಲಿ ಮನವಿಯನ್ನು ಅಧ್ಯಕ್ಷರಿಗೆ ನೀಡಲಾಯಿತು.

ಅಲ್ಪಸಂಖ್ಯಾತ ನಿಗಮದ ನಿರ್ದೇಶಕರಾದ ಸಿರಾಜುದ್ದೀನ್, ಇಲಾಖಾಧಿಕಾರಿ ಮಂಜುನಾಥ್, ಮುನೀರ್ ವಿಟ್ಲ, ಬಿಜೆಪಿ ಮುಖಂಡ ರಫೀಕ್ ದರ್ಬೆ, ಶಾನವಾಝ್ ಮಂಗಳೂರು, ವಿಲ್ಫರ್ಡ್ ಸಾಲ್ಯಾನ್, ಅಶ್ರಫ್ ಹರೇಕಳ, ಅಝೀಝ್ ಬೈಕಂಪಾಡಿ, ಹಮೀದ್ ಕೂಳೂರು, ಸಾದಿಕ್ ವಳಚ್ಚಿಲ್, ನ್ಯಾಯವಾದಿ ಮಹಮ್ಮದ್ ಆಸ್ಗರ್ ಮುಡಿಪು ಮತ್ತಿತರರು ಉಪಸ್ಥಿತರಿದ್ದರು.
ಕಮ್ಯುನಿಟಿ ಸೆಂಟರ್‌ನ ಇಮ್ತಿಯಾಝ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.