ಸಂಪ್ಯ ಸಾದಾತ್‌ನಗರ ಮಖಾಂ ಉರೂಸ್ ಮುಬಾರಕ್- ಧಾರ್ಮಿಕ ಪ್ರವಚನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • `ಅಮ್ಮಾ’ ಎಂಬ ಶಬ್ದಕ್ಕೆ ಜಗತ್ತಿನಲ್ಲಿ ಬೆಲೆ ಕಟ್ಟಲು ಯಾರಿದಂಲೂ ಸಾಧ್ಯವಿಲ್ಲ; ನೌಶಾದ್ ಬಾಖವಿ

ಪುತ್ತೂರು: “ಅಮ್ಮಾ” ಎಂಬ ಶಬ್ದ ಜಗತ್ತಿನಲ್ಲಿ ಯಾವಾಗ ಹುಟ್ಟಿಕೊಂಡಿತೋ ಅಂದಿನಿಂದ ಇಂದಿನ ತನಕ ಆ ಶಬ್ದಕ್ಕೆ ಬೆಲೆ ಕಟ್ಟಲು ಯಾರಿದಂಲೂ ಸಾಧ್ಯವಾಗಿಲ್ಲ, ಮುಂದಕ್ಕೆ ಸಾಧ್ಯವೂ ಇಲ್ಲ ಎಂದು ಪ್ರಖ್ಯಾತ ಧಾರ್ಮಿಕ ವಿದ್ವಾಂಸ ಎ ಎಂ ನೌಶಾದ್ ಬಾಖವಿ ಚೆರಿಯಂಗೀಝ್ ಹೇಳಿದರು.


ಅವರು ಸಂಪ್ಯ ಮುಹಿಯುದ್ದೀನ್ ಜುಮಾ ಮಸೀದಿಯ ಆಶ್ರಯದಲ್ಲಿ ಸಂಪ್ಯ ಸಾದಾತ್ ನಗರದಲ್ಲಿ ನಡೆಯುತ್ತಿರುವ ಸಂಪ್ಯ ಮಖಾಂ ಉರೂಸ್ ಮುಬಾರಕ್ ಇದರ ಮೂರನೇ ದಿನ ಉರೂಸ್ ಪ್ರಭಾಷಣದಲ್ಲಿ ಮುಖ್ಯ ಭಷಣ ಮಾಡಿದರು.

ತಾಯಿಯ ಸೇವೆ ಮಾಡದವರು ಎಂದಿಗೂ ಉದ್ದಾರವಾಗಲು ಸಾಧ್ಯವಿಲ್ಲ. ಮಕ್ಕಳ ಮೇಲೆ ಅಮ್ಮಾ ಆದವಳಿಗೆ ಅಪಾರ ಪ್ರೀತಿ ಇರುತ್ತದೆ. ಮಗು ಹುಟ್ಟಿದಾಗಿನಿಂದ ದೊಡ್ಡವನಾಗುವ ತನಕ ತನ್ನ ಮಕ್ಕಳ ಲಾಲನೆ ಪಾಲನೆಯಲ್ಲೇ ಇಡೀ ಜೀವನವನ್ನು ಕಳೆಯುತ್ತಾಳೆ, ತನ್ನ ಮಕ್ಕಳಿಗೆ ನೋವಾದಾಗ ಆಕೆ ಕಣ್ಣೀರು ಹಾಕುತ್ತಾಳೆ ಆದರೆ ಅದೇ ತಾಯಿಯನ್ನು ವೃದ್ದಾಪ್ಯ ಪ್ರಾಯದಲ್ಲಿ ಆಶ್ರಮಕ್ಕೆ ಸೇರಿಸಿ ಆಕೆಯನ್ನು ಒಂಟಿಯನ್ನಾಗಿ ಮಾಡುವ ಮಕ್ಕಳೂ ನಮ್ಮೊಳಗಿದ್ದಾರೆ. ವೃದ್ದಾಪ್ಯದಲ್ಲಿ ತಾಯಿಯನ್ನು ಆರೈಕೆ ಮಾಡುವುದು, ತಯಿಗೆ ಬೇಕಾದ ಎಲ್ಲಾ ಸೌಕರ್ಯಗಳನ್ನು ಮಾಡಿಕೊಡುವುದು ಮಕ್ಕಳ ಕರ್ತವ್ಯವಾಗಿದೆ ಎಂದು ಹೇಳಿದರು.

ತಾಯಿಯ ಎದುರು ಛೇ… ಎಂಬ ವಾಕ್ಯವನ್ನು ಹೇಳುವುದನ್ನು ಇಸ್ಲಾಂ ನಿಷೇಧಿಸಿದೆ. ಕುರ್‌ಆನ್‌ನಲ್ಲಿ ಕೂಡಾ ತಾಯಿಯ ಮಹತ್ವವನ್ನು ಸಾರಿ ಹೇಳಿದೆ. ತಾಯಿಯ ಮನಸ್ಸಿಗೆ ನೋವು ಕೊಟ್ಟರೆ ಅದು ಮಕ್ಕಳಿಗೆ ಶಾಪವಾಗಿ ತಟ್ಟಲಿದೆ ಈ ವಿಚಾರದಲ್ಲಿ ಯಾವುದೇ ಸಂಶಯ ಬೇಡ. ನಾವು ಎಷ್ಟೇ ಸಂಪತ್ತು, ಅಂತಸ್ತು, ಸ್ಥಾನ ಮಾನವನ್ನು ಗಳಿಸಿದರೆ ನಾವು ಒಳ್ಳೆಯವರಾಗಲು ಸಾದ್ಯವಿಲ್ಲ, ನಾವು ತಾಯಿಯನ್ನು ತಾಯಿಯಾಗಿ ಕಂಡರೆ ಮಾತ್ರ ನಮಗೆ ಎಲ್ಲವೂ ಇದ್ದು ಅದು ಸಾಕಾರವಾಗುತ್ತದೆ. ಪ್ರವಾದಿಯವರ ಬಳಿಕ ಪ್ರತೀಯೊಬ್ಬ ಮುಸ್ಲಿಮನಾದವನು ತನ್ನ ತಾಯಿಯನ್ನು ಪ್ರೀತಿಸಬೇಕು, ತಾಯಿಯ ಪ್ರೀತಿ, ತಾಯಿ ಆಶೀರ್ವಾದ ಇಲ್ಲದೇ ಹೋದಲ್ಲಿ ನಾವು ಮಾಡುವ ಸತ್ಕರ್ಮವನ್ನು ಅಲ್ಲಾಹನು ಸ್ವೀಕರಿಸಲಾರ ಎಂಬುದನ್ನು ಪ್ರತೀಯೊಬ್ಬರೂ ತಿಳಿದುಕೊಳ್ಳಬೇಕು.

“ತಾಯಿಯ ಶಾಪ ನಮ್ಮನ್ನು ಸರ್ವನಾಶ ಮಾಡಲಿದೆ ”
ಯಾವುದೇ ಕಾರಣಕ್ಕೂ ನಾವು ತಾಯಿಯ ಮನಸ್ಸಿಗೆ ನೋವು ಕೊಡಬಾರದು. ತಾಯಿ ನಿಮ್ಮ ವಿರುದ್ದವಾಗಿ ಏನಾದರೂ ಮಾಡಿದರೆ ಅದಕ್ಕೆ ನೀವು ಪ್ರತೀಕಾರ ತೀರಿಸುವ ಕೆಲಸ ಮಾಡಬೇಡಿ. ತಾಯಿ ಎಂದಿಗೂ ತಾಯಿಯೇ.. ಆಕೆ ನಮ್ಮನ್ನು ಹೆತ್ತು ,ಹೊತ್ತು ಸಾಕಿದವಳು. ತಾಯಿ ಶಾಫ ತಟ್ಟಿದರೆ ನಾವು ಜೀವನದಲ್ಲಿ ಉದ್ದಾರ ಆಗಲು ಸಾಧ್ಯವೇ ಇಲ್ಲ, ಅಲ್ಲಾಹನ ಬಳಿಯೂ ಅಪಾರ ಶಿಕ್ಷೆಯೂ ಇದೆ. ಮದುವೆಯಾದ ಬಳಿಕ ತಾಯಿಯಿಂದ ದೂರವಾಗಬೇಡಿ. ವೃದ್ದಾಪ್ಯ ಕಾಲದಲ್ಲಿ ಅವರ ಮನಸ್ಸಿಗೆ ಸಂತೋಷವನ್ನು ನೀಡಿ ನಾಳೆ ನಮಗೂ ಒಳ್ಳೆಯದಾಗುತ್ತದೆ. ತಾಯಿಯನ್ನು ಹೃದಯದಲ್ಲಿಟ್ಟು ಪ್ರೀತಿಸುವ ಮನಸ್ಸು ನಮ್ಮದಾಗಲಿ. ತಾಯಿ ಮರಣಹೊಂದಿದ ಮಕ್ಕಳು ಅವರ ಹೆಸರಿನಲ್ಲಿ ದಾನ ಧರ್ಮವನ್ನು ನೀಡಿ ಅವರಿಗಾಗಿ ಪ್ರಾರ್ಥಿಸಿ ಎಂದು ಬಾಖವಿ ಹೇಳಿದರು.

ಸಂಪ್ಯ ಮುಹಿಯುದ್ದೀನ್ ಜುಮಾ ಮಸೀದಿ ಹಾಗೂ ಉರೂಸ್‌ಕಮಿಟಿ ಅಧ್ಯಕ್ಷರಾದ ಎಸ್ ಅಬ್ದುಲ್ ಜಲೀಲ್ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಂಪ್ಯ ಮಸೀದಿ ಖತೀಬ್ ಅಬ್ದುಲ್‌ಹಮೀದ್ ದಾರಿಮಿ ಪ್ರಸ್ತಾವಿಕವಾಗಿ ಮತನಡಿ ಅತಿಥಿಗಳನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ಸಯ್ಯದ್ ಇಸ್ಮಾಯಿಲ್ ತಂಙಳ್ ಅಲ್‌ಬುಖಾರಿ, ಪಿಡಬ್ಲ್ಯುಡಿ ಗುತ್ತಿಗೆದಾರರಾದ ಉಸ್ಮಾನ್ ಹಾಜಿ ಚೆನ್ನಾವರ, ಕಾವು ಬುಶ್ರಾ ವಿದ್ಯಾ ಸಂಸ್ಥೆಯ ಸಂಚಾಲಕರಾದ ಅಬ್ದುಲ್ ಅಝೀಝ್ ಬುಶ್ರಾ, ಕೊಡಾಜೆ ಸುಲ್ತಾನ್ ಗ್ರೂಪ್‌ನ ರಫೀಕ್ ಹಾಜಿ ಕೊಡಾಜೆ, ಉಪ್ಪಿನಂಗಡಿ ಮಾಲಿಕುದ್ದೀನಾರ್ ಮಸೀದಿ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ, ಕರ್ನಾಟಕ ಮುಸ್ಲಿಂ ಜಮಾತ್ ಸದಸ್ಯ ಮೂಸಕುಂಞಿ ಕಣ್ಣೂರು, ಹಜಾಜ್ ಬೀಡಿ ಮಾಲಕರಾದ ಹನೀಫ್ ಹಾಜಿ ಗೋಳ್ತಮಜಲು, ಉದ್ಯಮಿ ಆಸಿಫ್ ಡೀಲ್, ಪುತ್ತು ಹಾಜಿ ಬಾಯಾರ್, ಹಿರಾ ಅಬ್ದುಲ್ ಖಾದರ್ ಹಾಜಿ ಈಶ್ವರಮಂಗಲ, ಪುತ್ತೂರು ಟಿಂಬರ್ ಮಾಲಕ ಮಹಮ್ಮದ್ ಹಾಜಿ ಕಲ್ಲೆಗ ಮೊದಲಾದವರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.