ವಿಟ್ಲದಲ್ಲಿ  ಉಚಿತ ಗ್ಯಾಸ್ ಸಂಪರ್ಕ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಉಜ್ವಲ ಯೋಜನೆ ಪ್ರಧಾನಿಯ ಮಹತ್ವಾಕಾಂಕ್ಷಿ ಯೋಜನೆ: ಮಠಂದೂರು

ವಿಟ್ಲ:  ಉಜ್ವಲ ಯೋಜನೆ ಪ್ರದಾನಿಯ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾಗಿದೆ. ಸಾಮಾಜಿಕ ಕಳಕಳಿಯನ್ನು ಇಟ್ಟುಕೊಂಡು ಉಜ್ವಲ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ದೇಶದ ಪ್ರತಿಯೊಬ್ಬರನ್ನೂ ವಿವಿಧ ಯೋಜನೆಗಳ ಮೂಲಕ ತಲುಪುವ ಕಾರ್ಯ ಮೋದೀಜಿಯವರಿಂದ ಆಗಿದೆ ಎಂದು  ಶಾಸಕ ಸಂಜೀವ ಮಠಂದೂರು ಹೇಳಿದರು.


ಅವರು ಜ.4ರಂದು ವಿಟ್ಲದ ಅಕ್ಷಯ ಸಮುದಾಯ ಭವನದಲ್ಲಿ ನಡೆದ ಪ್ರಧಾನ ಮಂತ್ರಿ ಉಜ್ವಲ ಯೋಜನೆ 2 ಅನ್ವಯ ಬಿ. ಪಿ. ಎಲ್. ಕಾರ್ಡ್ ದಾರರಿಗೆ ಉಚಿತ ಗ್ಯಾಸ್ ಸಂಪರ್ಕ ವಿತರಣೆ ಮಾಡಿ  ಮಾತನಾಡಿದರು.

ಸಮಾಜದ ಕಟ್ಟಕಡೇಯ ವ್ಯಕ್ತಿಗೂ ಬದುಕಲು ಬೇಕಾದ ಮೂಲಭೂತ ಸೌಲಭ್ಯವನ್ನು ನೀಡಿದ್ದಾರೆ. ಕೋವಿಡ್ ನಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಜನರಿಗೆ ಆರೋಗ್ಯದ ಜೊತೆಗೆ ಬದುಕು ನೀಡುವ ಕೆಲಸ ಮಾಡಿದ್ದಾರೆ. ದೇಶ  ಬ್ರಷ್ಟಾಚಾರ ಮುಕ್ತವಾಗಬೇಕೆನ್ನುವ ಉದ್ದೇಶದಿಂದ ಎಲ್ಲವನ್ನೂ ಡಿಜಿಟಲೀಕರಣ ಮಾಡುತ್ತಿದ್ದಾರೆ. ಗ್ಯಾಸ್ ವಿತರಣೆ ಇದೊಂದು ಜನಪರ ಯೋಜನೆಯಾಗಿದೆ‌. ಮೋದೀಜಿಯ ಈ ಯೋಜನೆಯಿಂದ 99% ಜನರ‌ ಮನೆಯಲ್ಲಿ ಗ್ಯಾಸ್ ಇದೆ ಎಂದರು. ಪುತ್ತೂರು ಹಾಗೂ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಸುಮಾರು 150 ಫಲಾನುಭವಿಗಳಿಗೆ ಉಚಿತ ಗ್ಯಾಸ್ ಸಂಪರ್ಕ ವಿತರಣೆ ಕಾರ್ಯ ನಡೆಯಿತು.

ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಬೆಳ್ತಂಗಡಿ ಮಂಜು ಇಂಡೇನ್ ಗ್ಯಾಸ್ ವಿತರಕ ಶಿವಕುಮಾರ, ವಿಟ್ಲ ಲಯನ್ಸ್ ಅಧ್ಯಕ್ಷ ಮೋಹನ ಗೌಡ ಶಿವಾಜಿನಗರ, ಸಿಟಿ ಲಯನ್ಸ್ ನ ಸಂದೇಶ್ ಶೆಟ್ಟಿ, ಸುದರ್ಶನ ಪಡಿಯಾರ್ ಉಪಸ್ಥಿತರಿದ್ದರು. ಸಾಯಿಗಣೇಶ್ ಇಂಡೇನ್ ಗ್ಯಾಸ್ ಏಜೆನ್ಸ್ ಮಾಲೀಕ ಸತೀಶ್ ಕುಮಾರ್ ಆಳ್ವ ಸ್ವಾಗತಿಸಿದರು. ಮೋಹನದಾಸ ಉಕ್ಕುಡ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.