ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದಾಳಿ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಮಾನಭಂಗ ಯತ್ನ, ಕೊಲೆ ಯತ್ನ ಪ್ರಕರಣ: ಬಂಧಿತ ಆರೋಪಿಗಳಿಗೆ ಜಾಮೀನು

0

ಪುತ್ತೂರು: ಡಿ.14 ರಂದು  ಕೊಲೆಯತ್ನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ, ವಿಚಾರಣೆಗಾಗಿ ಪಿಎಫ್‌ಐ ಮುಖಂಡರನ್ನು ಕರಕೊಂಡು ಬಂದು, ಬಿಡುಗಡೆ ಮಾಡದಾಗ ಪಿಎಫ್‌ಐ/ ಎಸ್‌ಡಿಪಿಐ ಕಾರ್ಯಕರ್ತರು ಉಪ್ಪಿನಂಗಡಿ ಠಾಣೆಯ ಮುಂಭಾಗ ಪ್ರತಿಭಟನೆ ಮಾಡಿದ ಸಂದರ್ಭದಲ್ಲಿ, ಪೊಲೀಸ್ ಠಾಣಾ ಕರ್ತವ್ಯದಲ್ಲಿದ್ದ ಪೊಲೀಸ್ ಉಪ ನಿರೀಕ್ಷಕಿ ಹಾಗೂ ಸಿಬ್ಬಂದಿಗಳ ಮೇಲೆ, ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಮಾನಭಂಗಕ್ಕೆ ಯತ್ನಿಸಿ, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಉಂಟು ಮಾಡಿದ ಬಗ್ಗೆ ಆರೋಪಕ್ಕೆ ಸಂಬಂಧಿಸಿ ಬಂಧನಕ್ಕೊಳಗಾದ 10 ಮಂದಿ ಆರೋಪಿಗಳಿಗೆ ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ.
ಪೊಲೀಸ್ ಠಾಣಾ ಕರ್ತವ್ಯದಲ್ಲಿದ್ದ ಪೊಲೀಸ್ ಉಪ ನಿರೀಕ್ಷಕಿ ಹಾಗೂ ಸಿಬ್ಬಂದಿಗಳ ಮೇಲೆ, ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಮಾನಭಂಗಕ್ಕೆ ಯತ್ನಿಸಿ, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಉಂಟು ಮಾಡಿದ ಬಗ್ಗೆ ಆರೋಪಕ್ಕೆ ಸಂಬಂಧಿಸಿ ಪೊಲೀಸರು 10 ಮಂದಿ ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿತ್ತು. ಈ ಪ್ರಕರಣದಲ್ಲಿ ಬಂಧಿತ ಆರೋಪಿಗಳಾದ ಕಾರಿಂಜದ ಮೊಹಮ್ಮದ್ ತ್ವಾಹಿರ್, ಮಚ್ಚಿನ ನಿವಾಸಿ ಸಾಧಿಕ್, ಬಂಟ್ವಾಳದ ಅಬ್ದುಲ್ ಮುಬಾರಕ್, ಅಬ್ದುಲ್, ಪಾಲ್ತಾಡಿಯ ಮೊಹಮ್ಮದ್ ಜಾಹಿದ್, ಬಾರ್ಯದ ಸ್ವಾಜೀರ್ ಮೊಹಮ್ಮದ್ ಫೈಜಲ್, ಮಂಗಳೂರು ಬೊಳಿಯೂರಿನ ಮೊಹಮ್ಮದ್ ಹನೀಫ್, 34 ನೆಕ್ಕಿಲಾಡಿಯ ಎನ್.ಕಾಸಿಂ, ಬಂಟ್ವಾಳದ ಮೊಹಮ್ಮದ್ ಆಶೀಫ್, ಕಡಬ ಕೊಲದ ತೌಫೀಲ್ ಮೊಹಮ್ಮದ್ ಅವರ  ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ 5 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗಳಿಗೆ ಶರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ವಿಚಾರಣೆಯಲ್ಲಿ  5 ನೇ ಆರೋಪಿ ಮೊಹಮ್ಮದ್ ಜಾಹಿದ್ ಪರ ನ್ಯಾಯವಾದಿ ನೂರುದ್ದೀನ್ ಸಾಲ್ಮರ ಮತ್ತು ಉಳಿದ 9  ಮಂದಿ ಅರೋಪಿಗಳಿಗೆ ನ್ಯಾಯವಾದಿಗಳಾದ ಅಶ್ರಫ್ ಕೆ ಅಗ್ನಾಡಿ,ಅಬ್ದುಲ್ ಮಜೀದ್ ಖಾನ್ ಮತ್ತು ಅಬ್ದುಲ್ ರಹಿಮಾನ್ ಹಿರೇಬಂಡಾಡಿ ವಾದಿಸಿದರು.

LEAVE A REPLY

Please enter your comment!
Please enter your name here