ಫೆ.1ರ ಮೊದಲು ಮೀಟರ್ ಅಳವಡಿಸದವರ ನೀರಿನ ಸಂಪರ್ಕ ಕಟ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಕೆಟ್ಟು ಹೋಗಿರುವ ಬೀದಿ ದೀಪಗಳ ದುರಸ್ತಿಗೆ ಸದಸ್ಯರ ಆಗ್ರಹ
  • ಮುಂಡೂರು ಗ್ರಾ.ಪಂ ಸಾಮಾನ್ಯ ಸಭೆ


ಪುತ್ತೂರು: ಗ್ರಾ.ಪಂ ನೀರಿನ ಸಂಪರ್ಕ ಹೊಂದಿದವರು ತಿಂಗಳೊಳಗಾಗಿ ಮೀಟರ್ ಅಳವಡಿದೇ ಇದ್ದಲ್ಲಿ ಅಂತವರ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಎಂದು ಮುಂಡೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಸಭೆ ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ಎನ್ ಅಧ್ಯಕ್ಷತೆಯಲ್ಲಿ ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು. ನೀರಿನ ಮೀಟರ್ ವಿಚಾರವಾಗಿ ಸುಮಾರು ಹೊತ್ತು ಚರ್ಚೆ ನಡೆಯಿತು. ಫೆ.1ರ ಮೊದಲು ಮೀಟರ್ ಅಳವಡಿಸದಿದ್ದವರ ನೀರಿನ ಸಂಪರ್ಕ ಕಡಿತಗೊಳಿಸುವುದು ಹಾಗೂ ದಂಡ ವಿಧಿಸುವುದಾಗಿ ತೀರ್ಮಾನಿಸಲಾಯಿತು. ಸರ್ವ ಸದಸ್ಯರು ಇದಕ್ಕೆ ಸಹಮತ ಸೂಚಿಸಿದರು.


ಸದಸ್ಯ ಅಶೋಕ್ ಕುಮಾರ್ ಪುತ್ತಿಲ ಮಾತನಾಡಿ ನೀರಿನ ಬಿಲ್ ಬಾಕಿಯಾಗದಂತೆ ಕ್ರಮ ಕೈಗೊಳ್ಳಬೇಕು. ದುಬಾರಿ ವಿದ್ಯುತ್ ಬಿಲ್ ಬಾಕಿಯಿರುವಾಗ ನೀರಿನ ಬಿಲ್ ವಸೂಲಿಯಾಗದಿದ್ದರೆ ಸಮಸ್ಯೆಯಾಗಲಿದೆ ಎಂದು ಹೇಳಿದರು.

ಗ್ರಾ.ಪಂ ವ್ಯಾಪ್ತಿಯ ಬಹುತೇಕ ಕಡೆಗಳಲ್ಲಿ ಬೀದಿ ದೀಪಗಳು ಕೆಟ್ಟು ಹೋಗಿದ್ದು ಇದ್ದೂ ಉಪಯೋಗಕ್ಕಿಲ್ಲದಂತಾಗಿದ್ದು ಕೂಡಲೇ ದುರಸ್ತಿಗೊಳಿಸಲು ತುರ್ತು ಕ್ರಮ ವಹಿಸಬೇಕೆಂದು ಸದಸ್ಯರಾದ ಬಾಬು ಕಲ್ಲಗುಡ್ಡೆ, ಉಮೇಶ್ ಗೌಡ ಅಂಬಟ, ಅಶೋಕ್ ಕುಮಾರ್ ಪುತ್ತಿಲ, ಪ್ರವೀಣ್ ನಾಯ್ಕ ನೆಕ್ಕಿತ್ತಡ್ಕ ಮೊದಲಾದವರು ಆಗ್ರಹಿಸಿದರು. ಈ ಬಗ್ಗೆ ಶೀಘ್ರದಲ್ಲೇ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಪಿಡಿಓ ಗೀತಾ ಬಿ.ಎಸ್ ಹೇಳಿದರು.

ನೈತ್ತಾಡಿ-ಇಡಬೆಟ್ಟು ರಸ್ತೆ ಅವ್ಯವಸ್ಥೆಯಿಂದಾಗಿ ಆ ಭಾಗದ ಜನತೆ ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಸಿದ್ದಾರೆ ಎನ್ನುವ ವಿಚಾರ ಪ್ರಸ್ತಾಪಗೊಂಡಿತು. ಈ ಬಗ್ಗೆ ಬಾಬು ಕಲ್ಲಗುಡ್ಡೆ ಮತ್ತು ಇತರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಆ ರಸ್ತೆಯ ಅವ್ಯವಸ್ಥೆ ಬಗ್ಗೆ ವಿಧಾನಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ್ ಪೂಜಾರಿ ಹಾಗೂ ಮಂಜುನಾಥ ಭಂಡಾರಿಯವರಿಗೆ ಬರೆದುಕೊಳ್ಳುವುದಾಗಿ ತೀರ್ಮಾನಿಸಲಾಯಿತು.

ಕಡ್ಯ-ತೌಡಿಂಜ ರಸ್ತೆ ಮಧ್ಯೆ ಮಳೆ ನೀರು ಶೇಖರಣೆಗೊಳ್ಳುತ್ತಿರುವ ದೂರಿನ ಬಗ್ಗೆ ಚರ್ಚೆ ನಡೆಯಿತು. ಸದಸ್ಯೆ ಕಾವ್ಯ ಕಡ್ಯ ಮಾತನಾಡಿ ಮಳೆ ಬಂದಾಗ ಕಡ್ಯ-ತೌಡಿಂಜ ರಸ್ತೆ ಮಧ್ಯೆ ನೀರು ನಿಲ್ಲುವುದರಿಂದ ಆ ಭಾಗದ ಜನರಿಗೆ ಸಮಸ್ಯೆಯಾಗುತ್ತಿದೆ ಇದಕ್ಕೆ ಪರಿಹಾರ ಕಲ್ಪಿಸಬೇಕಾಗಿದೆ ಎಂದು ಹೇಳಿದರು.

ಮುಂಡೂರಿನಲ್ಲಿ ಕೊಳವೆಬಾವಿ ಕೊರೆಯುವ ವಿಚಾರದಲ್ಲಿ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ನನಗೆ ಅವಾಚ್ಯವಾಗಿ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ಉಮೇಶ್ ಗೌಡ ಅಂಬಟ ಹೇಳಿದರು. ಈ ಬಗ್ಗೆ ಚರ್ಚೆ ನಡೆಯಿತು. ನಿಂದಿಸಿದವರಿಗೆ ಪೊಲೀಸ್ ದೂರು ನೀಡಬೇಕೆಂದು ಕರುಣಾಕರ ಗೌಡ ಎಲಿಯ ಹೇಳಿದರು. ಆ ಪ್ರಕರಣ ಒಂದು ಹಂತದಲ್ಲಿ ಮುಗಿದುಹೋದ ಕಾರಣ ಪುನಃ ದೂರು ನೀಡಿ ದೊಡ್ಡದು ಮಾಡುವುದು ಬೇಡ ಎಂದು ಸಲಹೆ ನೀಡಿದರು.

ಗ್ರಾ.ಪಂ ವ್ಯಾಪ್ತಿಯುದ್ದಕ್ಕೂ ರಸ್ತೆ ಬದಿಯಲ್ಲಿ ಹುಲ್ಲು, ಗಿಡ ಗಂಟಿ, ಪೊದೆಗಳು ಬೆಳೆದು ಸಂಚಾರಕ್ಕೆ ತೊಡಕುಂಟಾಗುತ್ತಿರುವ ಬಗ್ಗೆ ಅಶೋಕ್ ಕುಮಾರ್ ಪುತ್ತಿಲ ಸಭೆಯ ಗಮನಕ್ಕೆ ತಂದರು. ಮುಖ್ಯ ರಸ್ತೆಗಳಲ್ಲದೇ ಒಳ ರಸ್ತೆಗಳ ಬದಿಯಲ್ಲೂ ಹುಲ್ಲು, ಪೊದೆಗಳು ಬೆಳೆದು ರಸ್ತೆಯನ್ನೇ ಅತಿಕ್ರಮಿಸಿಕೊಂಡಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದಕ್ಕೆ ಸದಸ್ಯರು ಧ್ವನಿಗೂಡಿಸಿದರು. ಗ್ರಾ.ಪಂ ವ್ಯಾಪ್ತಿಯ ಅನೇಕ ವಾರ್ಡ್‌ಗಳಲ್ಲಿ ರಸ್ತೆ ಬದಿಯಲ್ಲಿ ಹುಲ್ಲು, ಗಿಡ ಗಂಟಿಗಳು ಬೆಳೆದುಕೊಂಡಿರುವ ಬಗ್ಗೆ ಗ್ರಾಮಸ್ಥರೂ ಇತ್ತೀಚೆಗೆ ಅಸಮಾಧಾನ ವ್ಯಕ್ತಪಡಿಸಿದ್ದು ಗ್ರಾ.ಪಂನಿಂದ ಅದನ್ನು ತೆರವುಗೊಳಿಸುವಂತೆ ಆಗ್ರಹಿಸಿದ್ದರು.

ಸರ್ವೆ ಗ್ರಾಮದ ಕಾಡಬಾಗಿಲು ರಸ್ತೆಯಲ್ಲಿ ಸಂಚರಿಸುವವರಿಗೆ ಸ್ಥಳೀಯ ಕೆಲವರು ಬೆದರಿಕೆಯೊಡ್ಡುತ್ತಿರುವ ಬಗ್ಗೆ ಬಂದ ದೂರಿನ ಬಗ್ಗೆ ಚರ್ಚೆ ನಡೆಯಿತು. ಅಲ್ಲಿನ ಸಮಸ್ಯೆಯನ್ನು ಆದಷ್ಟು ಬೇಗ ಮುಗಿಸುವಂತೆ ಅಶೋಕ್ ಕುಮಾರ್ ಪುತ್ತಿಲ, ಪ್ರವೀಣ್ ನಾಯ್ಕ ಮೊದಲಾದವರು ಹೇಳಿದರು. ಕರುಣಾಕರ ಗೌಡ ಎಲಿಯ ಅಭಿಪ್ರಾಯ ವ್ಯಕ್ತಪಡಿಸಿದರು. ಗ್ರಾ.ಪಂ ರಸ್ತೆಗೆ ತಡೆಯೊಡ್ಡಲು ಯಾರಿಗೂ ಅವಕಾಶವಿಲ್ಲ ಎಂದು ಸದಸ್ಯರು ಹೇಳಿದರು.

ಕಲ್ಪಣೆ ಪ್ರೌಢ ಶಾಲೆಯ ಎದುರು ೫೦ ಸೆಂಟ್ಸ್ ಸರಕಾರಿ ಜಾಗವಿದ್ದು ಅದನ್ನು ಗ್ರಾ.ಪಂಗೆ ಕಾಯ್ದಿರಿಸಬೇಕೆಂದು ಸದಸ್ಯ ಕರುಣಾಕರ ಗೌಡ ಎಲಿಯ ಮನವಿ ಮಾಡಿದರು. ಈ ಬಗ್ಗೆ ಪರಿಶೀಲಿಸುವುದಾಗಿ ಪಿಡಿಓ ಗೀತಾ ಬಿ.ಎಸ್ ಹೇಳಿದರು.

ಸರ್ವೆ ಗ್ರಾಮದಲ್ಲಿ ಸೈಟ್ ಹಂಚಿಕೆ ಆದವರಿಗೆ ಅಲ್ಲಿ ವಾಸ್ತವ್ಯ ಹೊಂದಲು ಆದಷ್ಟು ಬೇಗ ವ್ಯವಸ್ಥೆ ಮಾಡಿಕೊಡಬೇಕೆಂದು ಅಶೋಕ್ ಕುಮಾರ್ ಪುತ್ತಿಲ ಹೇಳಿದರು. ಅಲ್ಲಿ ನಿವೇಶನ ಪಡೆದ ಹಲವರು ಇನ್ನೂ ಬಾಡಿಗೆ ಮನೆಯಲ್ಲೇ ಇದ್ದಾರೆ ಎಂದು ಅವರು ಹೇಳಿದರು.

ಮುಂಡೂರು ಗ್ರಾಮದ ಮರ್ತಡ್ಕ, ನಡುಬೈಲು ಎಂಬಲ್ಲಿ ಸ್ಥಳೀಯ ವ್ಯಕ್ತಿಯೋರ್ವರು ರಸ್ತೆ ವಿಚಾರವಾಗಿ ಸಾರ್ವಜನಿಕರಿಗೆ ತೊಂದರೆ ನೀಡಿದ್ದಾರೆ. ಮುಂದಕ್ಕೂ ಇದೇ ರೀತಿ ತೊಂದರೆ ನೀಡುವುದನ್ನು ಮುಂದುವರಿಸಿದರೆ ಅದರ ವಿರುದ್ಧ ನಾವು ತಾಲೂಕು ಮಟ್ಟದಲ್ಲಿ ಪ್ರತಿಭಟನೆ ನಡೆಸುವುದು ಅನಿವಾರ್ಯಾವಾದೀತು ಎಂದು ಅಶೋಕ್ ಕುಮಾರ್ ಪುತ್ತಿಲ ಹೇಳಿದರು.

ಗ್ರಾ.ಪಂ ವ್ಯಾಪ್ತಿಯಲ್ಲಿ ಸಮಾರೋಪಾದಿಯಲ್ಲಿರುವ ಅಭಿವೃದ್ಧಿ ಕಾಮಗಾರಿಗಳನ್ನು ಕೂಡಲೇ ಪೂರ್ತಿಗೊಳಿಸಿ ಒಂದೇ ದಿನದಲ್ಲಿ ಉದ್ಘಾಟನೆ ಮಾಡುವಂತಾಗಬೇಕು ಎಂದು ಅಶೋಕ್ ಕುಮಾರ್ ಪುತ್ತಿಲ ಹೇಳಿದರು.

ಉಪಾಧ್ಯಕ್ಷೆ ಪ್ರೇಮಾ ಎಸ್, ಸದಸ್ಯರಾದ ಬಾಲಕೃಷ್ಣ ಪೂಜಾರಿ, ದುಗ್ಗಪ್ಪ ಕಡ್ಯ, ಅರುಣಾ ಎ.ಕೆ, ಯಶೊಧ ಅಜಲಾಡಿ, ಕಮಲ ನೇರೋಳ್ತಡ್ಕ, ವಿಜಯ ಕರ್ಮಿನಡ್ಕ, ಸುನಂದ ಬೊಳ್ಳಗುಡ್ಡೆ ಉಪಸ್ಥಿತರಿದ್ದರು. ಸಿಬ್ಬಂದಿ ದೇವಪ್ಪ ನಾಯ್ಕ ವರದಿ ವಾಚಿಸಿದರು. ಸಿಬ್ಬಂದಿಗಳಾದ ಕೊರಗಪ್ಪ ನಾಯ್ಕ, ಶಶಿಧರ ಕೆ ಮಾವಿನಕಟ್ಟೆ, ಮೋಕ್ಷಾ, ಕವಿತ, ಸತೀಶ ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.