ಅರೆಸೈನಿಕಾ ಪಡೆಯ ಎಎಸ್‌ಐ ರಘುನಾಥ ಶೆಟ್ಟಿ ನಿವೃತ್ತಿ

0

ಪುತ್ತೂರು : ಕೇಂದ್ರ ಸರಕಾರದ ಅರೆಸೈನಿಕಾ ಭದ್ರತಾ ಪಡೆಯಲ್ಲಿ ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್ ಆಗಿ ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೇರಾಲುಗುತ್ತು ರಘುನಾಥ ಶೆಟ್ಟಿಯವರು ಡಿ.೩೧ರಂದು ಕರ್ತವ್ಯದಿಂದ ನಿವೃತ್ತಿ ಹೊಂದಿದ್ದಾರೆ.

೧೯೮೩ರಲ್ಲಿ ಕೇಂದ್ರ ಸರಕಾರದ ಅರೆಸೈನಿಕಾ ಪಡೆಯಲ್ಲಿ ನೇಮಕಗೊಂಡ ಇವರು ಪಶ್ಚಿಮ ಬಂಗಾಳ, ಅಸ್ಸಾಂ, ಜಾರ್ಖಂಡ್, ಆಂದ್ರಪ್ರದೇಶ, ತಮಿಳುನಾಡು, ಚಂಡಿಗಢ, ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಸುಮಾರು ಮೂವತ್ತೆಂಟುವರೆ ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ. ಸುಳ್ಯ ತಾಲೂಕಿನ ಪೇರಾಲುಗುತ್ತು ದಿ.ವಿಠಲ ಶೆಟ್ಟಿ ಮತ್ತು ರೇವತಿ ಶೆಟ್ಟಿ ದಂಪತಿ ಪುತ್ರರಾದ ಇವರು ಪ್ರಸ್ತುತ ಕೆದಂಬಾಡಿ ಗ್ರಾಮದ ಪಂಜಿಗುಡ್ಡೆಯಲ್ಲಿ ಪತ್ನಿ ಕೆದಂಬಾಡಿ ಗ್ರಾಮ ಪಂಚಾಯತ್ ಸದಸ್ಯೆ ಸುಜಾತ ಶೆಟ್ಟಿ, ಪುತ್ರರಾದ ಸೂರಜ್ ಶೆಟ್ಟಿ, ಮಿಥುನ್ ಶೆಟ್ಟಿಯೊಂದಿಗೆ ವಾಸವಾಗಿದ್ದಾರೆ.

LEAVE A REPLY

Please enter your comment!
Please enter your name here