ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಪ್ರವಾಸಿ ಮಂದಿರ ಜಾಗದಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ನಿರ್ಮಾಣಕ್ಕೆ ಆಗ್ರಹ-ನಿರ್ಣಯ
  • ಶಾಸಕರು, ಸಾರಿಗೆ ಸಚಿವರಿಗೆ ಪತ್ರ ಬರೆಯಲು ನಿರ್ಧಾರ
  • ನದಿಗೆ ತ್ಯಾಜ್ಯ ನೀರು ಬಿಡುವುದರ ವಿರುದ್ಧ ಕ್ರಮ ಕೈಗೊಳ್ಳದ ಬಗ್ಗೆ ಅಸಮಾಧಾನ
  • ಪೇಟೆಯೊಳಗಿನ ರಸ್ತೆ ದುರಸ್ಥಿಗೆ ಆಗ್ರಹ


ಉಪ್ಪಿನಂಗಡಿ: ಪಂಚಾಯಿತಿ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಗಾಂಧಿಪಾರ್ಕು ಬಳಿ ಇರುವ ಪ್ರವಾಸಿ ಮಂದಿರ ನಿಷ್ಪ್ರಯೋಜಕವಾಗಿ ಪಾಳು ಬಿದ್ದಿದ್ದು, ಈ ಜಾಗದಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ನಿರ್ಮಾಣ ಮಾಡುವ ಬಗ್ಗೆ, ಅದಕ್ಕಾಗಿ ಅಗತ್ಯ ಕ್ರಮಕೈಗೊಳ್ಳುವ ಬಗ್ಗೆ ಸರ್ಕಾರವನ್ನು ಕೋರಿ ನಿರ್ಣಯ ಅಂಗೀಕರಿಸಲಾಯಿತು.


ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ  ಉಷಾ ಮುಳಿಯ ಅಧ್ಯಕ್ಷತೆಯಲ್ಲಿ ಜ. ೪ರಂದು ನಡೆದ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಅಂಗೀಕರಿಸಲಾಯಿತು. ಸಭೆಯಲ್ಲಿ ಸದಸ್ಯ ಸುರೇಶ್ ಅತ್ರಮಜಲು ವಿಷಯ ಪ್ರಸ್ತಾಪಿಸಿ, ಉಪ್ಪಿನಂಗಡಿಯಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಅತೀ ಅಗತ್ಯವಾಗಿ ಆಗಬೇಕಾಗಿದೆ. ಇದೀಗ ಗಾಂಧಿಪಾರ್ಕು ಬಳಿ ಇರುವ ಪ್ರವಾಸಿ ಮಂದಿರ ಪಾಳು ಬಿದ್ದಿದ್ದು, ಇದರಲ್ಲಿ ೧.೯೭ ಎಕ್ರೆ ಜಾಗ ಇದೆ, ಇದನ್ನು ಸಂಪೂರ್ಣವಾಗಿ ಬಳಸಿಕೊಂಡು ಸುಸಜ್ಜಿತ ಬಸ್ ನಿಲ್ದಾಣ ಮಾಡಬಹುದಾಗಿದೆ ಎಂದರು.

ಸದಸ್ಯ ಕೆ. ಅಬ್ದುಲ್ ರಹಿಮಾನ್ ಪೂರಕವಾಗಿ ಮಾತನಾಡಿ ಈ ಹಿಂದೆಯೇ ಈ ಬಗ್ಗೆ ಇಲ್ಲಿ ನಿರ್ಣಯ ಅಂಗೀಕರಿಸಲಾಗಿ ಇಲಾಖೆಗೆ ಕಳುಹಿಸಿಕೊಡಲಾಗಿದೆ. ಇದು ಬಸ್ ನಿಲ್ದಾಣ ನಿರ್ಮಾಣಕ್ಕೆ ಸೂಕ್ತವಾದ ಜಾಗವಾಗಿದ್ದು, ಇದೇ ಪರಿಸರದಲ್ಲಿ ಪದವಿ ಕಾಲೇಜು, ಪದವಿ ಪೂರ್ವ ಕಾಲೇಜು, ಸರ್ಕಾರಿ ಪ್ರೌಢ ಶಾಲೆ, ಖಾಸಗಿ ಪ್ರೌಢ ಶಾಲೆ ಮತ್ತು ಪ್ರಾಥಮಿಕ ಶಾಲೆ ಇದ್ದು, ಶಾಲಾ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳಿಗೂ ಇದು ಅನುಕೂಲ ಆಗಲಿದೆ. ಆದ ಕಾರಣ ಈ ಜಾಗದಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡುವ ಬಗ್ಗೆ ಸರ್ಕಾರವನ್ನು ಕೋರಿ ನಿರ್ಣಯ ಅಂಗೀಕರಿಬಹುದಾಗಿದೆ. ಅದಾಗ್ಯೂ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ, ಸಾರಿಗೆ ಸಚಿವರಿಗೆ, ಶಾಸಕರಿಗೆ ಮನವಿ ಪತ್ರ ಸಲ್ಲಿಸಬೇಕು ಎಂದರು. ಇದಕ್ಕೆ ಎಲ್ಲರೂ ಸಹಮತ ವ್ಯಕ್ತಪಡಿಸಿ, ಅದರಂತೆ ನಿರ್ಣಯ ಅಂಗೀಕರಿಸಲಾಯಿತು.

ನದಿಗೆ ತ್ಯಾಜ್ಯ ನೀರು ಬಿಡುವುದರ ವಿರುದ್ಧ ಕ್ರಮ ಏನಾಯಿತು?
ಕಳೆದ ಸಭೆಯಲ್ಲಿ ವಸತಿ ಸಮುಚ್ಚಯಗಳ ಮಲೀನ ನೀರು ನದಿಗೆ ಹರಿಯಬಿಡುವವರ ವಿರುದ್ಧ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ನೈರ್ಮಲ್ಯ ಸಮಿತಿಗೆ ಅಧಿಕಾರ ನೀಡಲಾಗಿ ಅಲ್ಲಿ ಆಗಿರುವ ನಿರ್ಣಯದಂತೆ ನದಿಗೆ ಮಲೀನ ನೀರು ಹರಿಯ ಬಿಟ್ಟಿರುವ ಪೈಪ್‌ಗಳಿಗೆ ಕಾಂಕ್ರೀಟು ಹಾಕಲು ತೀರ್ಮಾನಿಸಿ ಅದರಂತೆ ಎಲ್ಲಾ ಸಿದ್ಧತೆಯೊಂದಿಗೆ ಕಾರ್‍ಯಾಚರಣೆಗೆ ಇಳಿಯಲಾಗಿ ಒಬ್ಬರು ಬಡಪಾಯಿ ಹೊಟೇಲ್‌ನವರ ಮೇಲೆ ಮಾತ್ರ ಕ್ರಮ ಜರಗಿಸಿದ್ದು, ಕ್ಷಣಾರ್ಧದಲ್ಲಿ ಪಿಡಿಒ.ರವರಿಗೆ ಫೋನ್ ಕರೆಯೊಂದು ಬರುತ್ತದೆ, ಆ ಕ್ಷಣದಿಂದ ಅವರು ಅಲ್ಲಿಂದ ಮರಳಿ ಬಂದಿದ್ದೀರಿ, ಯಾಕೆ ಹೀಗಾಯಿತು. ಎಂದು ಸದಸ್ಯರು ಪಿಡಿಒ.ರನ್ನು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಲು ಪಿಡಿಒ. ಹಿಂದೇಟು ಹಾಕಿದಾಗ ಅಸಮಾಧಾನಗೊಂಡ ಸದಸ್ಯೆ ವಿದ್ಯಾಲಕ್ಷ್ಮಿ ಪ್ರಭು ತೆಗೆದುಕೊಂಡ ನಿರ್ಣಯದಂತೆ ಕಾರ್‍ಯಾಚಾರಣೆಗೆ ನಮ್ಮನ್ನು ಕರೆದು ಅಲ್ಲಿ ಹೋದ ಬಳಿಕ ತಾವು ಯಾಕೆ ವಾಪಾಸು ಬಂದಿದ್ದು ಎಂದು ಇಲ್ಲಿ ಸ್ಪಷ್ಠಪಡಿಸಬೇಕು ಎಂದು ಪಟ್ಟುಹಿಡಿದು, ಇಲ್ಲಿನ ಸದಸ್ಯರು ಯಾರಾದರೂ ಕರೆ ಮಾಡಿ ಕಾರ್‍ಯಾಚರಣೆ ಮಾಡಬೇಕು ಎಂದಿದ್ದರೇ ಎಂದು ಮರು ಪ್ರಶ್ನಿಸಿದರು. ಆಗ ಪಿಡಿಒ. ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್ ಪ್ರತಿಕ್ರಿಯಿಸಿ ಸದಸ್ಯರು ಯಾರೂ ಕರೆ ಮಾಡಿ ಹೇಳಿದ್ದು ಅಲ್ಲ, ಹೊರಗಡೆಯಿಂದ ಬಂದ ಕರೆ ಅದಾಗ್ಯೂ ಕಾಂಕ್ರೀಟ್ ಹಾಕುವುದಕ್ಕೆ ಅಲ್ಲಿ ಕೆಲವೊಂದು ಸಮಸ್ಯೆ ಎದುರಾಯಿತು ಹಾಗಾಗಿ ಅನಿವಾರ್‍ಯವಾಗಿ ಮರಳಿ ಬರಬೇಕಾಯಿತು. ಮುಂದೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪೇಟೆಯೊಳಗೆ ರಸ್ತೆ ದುರಸ್ಥಿ ಆಗದೆ ಹಲವು ವರ್ಷಗಳು ಆಗಿದೆ. ಇದೀಗ ಹಳೆ ಬಸ್ಟೇಂಡ್, ಸಿಂಡಿಕೇಟ್ ಬ್ಯಾಂಕ್ ಬಳಿ ಮೊದಲಾದ ಕೆಲವು ಕಡೆಯಲ್ಲಿ ರಸ್ತೆಯಲ್ಲಿ ಹೊಂಡ ನಿರ್ಮಾಣ ಆಗಿದೆ. ಆದ ಕಾರಣ ರಸ್ತೆ ಮರು ಡಾಂಬರೀಕರಣ ಮಾಡುವುದು ಅಥವಾ ಕನಿಷ್ಠ ಗುಂಡಿ ಮುಚ್ಚುವ ದುರಸ್ಥಿ ಕಾಮಗಾರಿಯನ್ನಾದರೂ ಮಾಡಬೇಕು ಎಂಬ ಸಲಹೆ ಸಭೆಯಲ್ಲಿ ವ್ಯಕ್ತವಾಯಿತು. ಪೇಟೆಯಲ್ಲಿ ಅಂಗಡಿಗಳವರು ಮತ್ತೆ ಫುಟ್‌ಫಾತ್ ಮೇಲೆ ಸರಕುಗಳನ್ನು ಇಡಲು ಆರಂಭಿಸಿದ್ದು, ರಸ್ತೆ ಅತಿಕ್ರಮಣ ಆಗುತ್ತಿದೆ, ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿದೆ, ಈ ಬಗ್ಗೆ ಅಂಗಡಿ ಮಾಲಕರಿಗೆ ಮತ್ತೆ ತಿಳಿಸಿ ಹೇಳಿ ಪಾದಚಾರಿಗಳು ನಡೆದು ಹೋಗುವ ಜಾಗವನ್ನು ಬಿಟ್ಟು ಅಂಗಡಿಯ ಒಳಗಡೆಯೇ ವಸ್ತುಗಳನ್ನು ಇರಿಸಿಕೊಳ್ಳುವಂತೆ ತಿಳಿಸಬೇಕು ಎಂಬ ಸಲಹೆ ವ್ಯಕ್ತವಾಯಿತು.

ಸಭೆಯಲ್ಲಿ ಸದಸ್ಯರಾದ ಕೆ. ಅಬ್ದುಲ್ ರಹಿಮಾನ್, ಸುರೇಶ್ ಅತ್ರಮಜಲು, ಯು.ಟಿ. ತೌಸೀಫ್, ಲೋಕೇಶ್ ಬೆತ್ತೋಡಿ, ಧನಂಜಯ ಕುಮಾರ್, ಸಣ್ಣಣ್ಣ, ಅಬ್ದುಲ್ ರಶೀದ್ ಮಾತನಾಡಿದರು. ಮೈಸಿದಿ ಇಬ್ರಾಹಿಂ,  ವಿದ್ಯಾಲಕ್ಷ್ಮಿ,  ಲಲಿತಾ,  ಉಷಾ ನಾಯ್ಕ್, ರುಕ್ಮಿಣಿ,  ಶೋಭಾ, ಜಯಂತಿ,  ವನಿತಾ,  ನೆಬಿಸಾ,  ಸೌದ ಉಪಸ್ಥಿತರಿದ್ದರು. ಪಂಚಾಯಿತಿ ಪಿಡಿಒ. ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್ ಸ್ವಾಗತಿಸಿ, ಕಾರ್‍ಯದರ್ಶಿ ದಿನೇಶ್ ವಂದಿಸಿದರು.

ಪೊಲೀಸರು ಪಡೆದುಕೊಂಡಿರುವ ಡಿವಿಆರ್.
ಮರುಕಳಿಸದಿರುವ ಬಗ್ಗೆ ಅಸಮಾಧಾನ…!!!
ಈಚೆಗೆ ಪೊಲೀಸ್ ಠಾಣೆ ಮುಂದೆ ಪಿಎಫ್‌ಐ. ವತಿಯಿಂದ ನಡೆದ ಪ್ರತಿಭಟನೆ ಬಗ್ಗೆ ಪೊಲೀಸರು ತನಿಖೆ ಸಲುವಾಗಿ ಗ್ರಾಮ ಪಂಚಾಯಿತಿಯ ಸಿಸಿ ಕೆಮಾರಾಗಳ ಡಿವಿಆರ್.ನ್ನು ಪಡೆದುಕೊಂಡಿದ್ದು, ಈ ತನಕ ಪಂಚಾಯಿತಿಗೆ ಹಿಂತಿರುಗಿಸದೇ ಇರುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾಗಿ ಪೊಲೀಸ್ ನಡವಳಿಕೆ ಬಗ್ಗೆ ಅಸಮಾಧಾನ ವ್ಯಕ್ತವಾಯಿತು. ಸಭೆಯಲ್ಲಿ ಸದಸ್ಯರು “ಪಂಚಾಯಿತಿಯ ಸಿಸಿ ಕೆಮಾರಾಗಳ ಡಿವಿಆರ್.ನ್ನು ಪೊಲೀಸರು ತೆಗೆದುಕೊಂಡು ಹೋಗಿದ್ದಾರೆ ಎನ್ನುವ ಮಾಹಿತಿ ಇದೆ, ಅದು ಹೌದೇ” ಎಂದು ಪ್ರಶ್ನಿಸಿದರು. ಆಗ ಪಿಡಿಒ. ಪ್ರತಿಕ್ರಿಯಿಸಿ ತೆಗೆದುಕೊಂಡು ಹೋಗಿದ್ದಾರೆ, ಇನ್ನೂ ವಾಪಾಸು ತಂದು ಕೊಟ್ಟಿಲ್ಲ ಎಂದರು. ಇದರಿಂದ ಆಕ್ರೋಶಿತರಾದ ಸದಸ್ಯರುಗಳು ಯಾವುದೇ ಪತ್ರ ಕೊಡದೆ
ಅದನ್ನು ಕೊಟ್ಟಿದ್ದಾದರೂ ಯಾಕೆ? ತಕ್ಷಣ ಅದನ್ನು ತರಿಸಿಕೊಳ್ಳಿ ಎಂದು ಪಿಡಿಒ.ರವರಿಗೆ ತಿಳಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.