ಬಜತ್ತೂರು ಗ್ರಾ.ಪಂ.ಸಾಮಾನ್ಯ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಕಾನೂನು ಉಲ್ಲಂಘಿಸಿ 94ಸಿ ಅಡಿ ಜಾಗ ಮಂಜೂರುಗೊಳಿಸಿರುವುದಕ್ಕೆ ಖಂಡನೆ

ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿಯಿಂದ 45 ಮೀಟರ್ ಅಂತರದಲ್ಲಿ ಜಾಗ ಮಂಜೂರಾತಿಗೆ ಅವಕಾಶವಿಲ್ಲದಿದ್ದರೂ ವ್ಯಕ್ತಿಯೋರ್ವರಿಗೆ 94ಸಿ ಯಡಿ ಜಾಗ ಮಂಜೂರುಗೊಳಿಸಿ ಹಕ್ಕುಪತ್ರ ನೀಡಿರುವುದಕ್ಕೆ ಬಜತ್ತೂರು ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ಸದಸ್ಯರಿಂದ ಖಂಡನೆ ವ್ಯಕ್ತವಾಗಿದೆ.


ಸಭೆ ಗ್ರಾ.ಪಂ.ಅಧ್ಯಕ್ಷೆ ಪ್ರೇಮಾ ಬಿ.,ರವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ರಾಷ್ಟ್ರೀಯ ಹೆದ್ದಾರಿಯಿಂದ 45 ಮೀಟರ್ ಅಂತರದಲ್ಲಿ ಜಾಗ ಮಂಜೂರಾತಿಗೆ ಕಾನೂನಿನಲ್ಲಿ ಅವಕಾಶವಿಲ್ಲ. ಆದರೂ ಬೆದ್ರೋಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ 45 ಮೀಟರ್ ಅಂತರದೊಳಗೆ ಇರುವ ಸರಕಾರಿ ಜಮೀನನ್ನು 94 ಸಿ ಯಡಿಯಲ್ಲಿ ವ್ಯಕ್ತಿಯೋರ್ವರ ಹೆಸರಿಗೆ ಮಂಜೂರುಗೊಳಿಸಿ ಹಕ್ಕುಪತ್ರ ನೀಡಲಾಗಿದೆ. ಇಲ್ಲಿ ಗ್ರಾ.ಪಂ.ಗೆ ಜಾಗ ಕಾದಿರಿಸಲು ಈ ಹಿಂದೆ ಪ್ರಸ್ತಾವನೆ ಸಹ ಸಲ್ಲಿಸಲಾಗಿತ್ತು. ಆದರೂ ಕಂದಾಯ ಇಲಾಖೆಯವರು ಕಾನೂನು ಉಲ್ಲಂಘಿಸಿ 94ಸಿ ಯಡಿಯಲ್ಲಿ ಜಾಗ ಮಂಜೂರುಗೊಳಿಸಿರುವುದನ್ನು ಆಕ್ಷೇಪಿಸಿ ಖಂಡನೆ ವ್ಯಕ್ತಪಡಿಸಿದ ಗ್ರಾ.ಪಂ.ಸದಸ್ಯರು, ಹಕ್ಕುಪತ್ರ ರದ್ದುಗೊಳಿಸಿ ಸದ್ರಿ ಜಾಗವನ್ನು ಗ್ರಾಮ ಪಂಚಾಯತ್‌ಗೆ ಕಾದಿರಿಸಬೇಕೆಂದು ಆಗ್ರಹಿಸಿದರು. ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

ಗ್ರಾ.ಪಂ.ಪ್ರಸ್ತಾವನೆಗೆ ಸ್ಪಂದನೆ ಇಲ್ಲ:
ಬಜತ್ತೂರು ಗ್ರಾಮ ಪಂಚಾಯತ್‌ಗೆ ಸ್ಥಳ ಕಾದಿರಿಸುವ ಬಗ್ಗೆ 5 ವರ್ಷಕ್ಕಿಂತ ಮೊದಲೇ ಗ್ರಾಮಕರಣಿಕರಿಗೆ ಪ್ರಸ್ತಾವನೆ ಸಲ್ಲಿಸಿದ್ದರೂ ಈ ತನಕ ಜಾಗ ಗುರುತಿಸಲಾಗಿಲ್ಲ. ಹೊಸಗದ್ದೆ ಅಂಗನವಾಡಿ ಜಾಗದ ಪಹಣಿ ದಾಖಲಿಸಲು ಪ್ರಸ್ತಾವನೆ ಸಲ್ಲಿಸಿ 10 ವರ್ಷವಾದರೂ ಈ ತನಕ ಅಂಗನವಾಡಿ ಹೆಸರಿಗೆ ಪಹಣಿ ಆಗಿರುವುದಿಲ್ಲ. ಕೊರಗರಿಗೆ ಜಮೀನು ಮಂಜೂರು ಮಾಡಲು 6 ತಿಂಗಳ ಹಿಂದೆ ನಕ್ಷೆ ತಯಾರಿಸಲಾಗಿದ್ದರೂ ಈ ತನಕ ಪಹಣಿ ತಯಾರಿಸಿ ಗ್ರಾ.ಪಂ.ಗೆ ಹಸ್ತಾಂತರವಾಗಿಲ್ಲ. ಈ ಮಧ್ಯೆ ಖಾಸಗಿ ವಿದ್ಯಾಸಂಸ್ಥೆಯವರು ಜಾಗ ಗುರುತಿಸಿ ನಕ್ಷೆ ತಯಾರಿಸಿ ಗ್ರಾ.ಪಂ.ನಿಂದ ನಿರಾಕ್ಷೇಪಣಾ ಪತ್ರ ಕೇಳಿರುವ ಬಗ್ಗೆ ಸಭೆಯಲ್ಲಿ ಚರ್ಚಿಸಿದ ಸದಸ್ಯರು, ಗ್ರಾ.ಪಂ.ಗೆ ಸಂಬಂಧಿಸಿದ ಸ್ಥಳ ಕಾದಿರಿಸುವ ಕೆಲಸ ತಾಲೂಕು ಕಚೇರಿಯಿಂದ ಆಗುವುದು ಯಾವಾಗ ಎಂದು ಪ್ರಶ್ನಿಸಿದರು. ಈ ಬಗ್ಗೆ ಗ್ರಾ.ಪಂ.ನಿಂದ ಸಲ್ಲಿಸಿದ ಪ್ರಸ್ತಾವನೆಯೊಂದಿಗೆ ತಹಶೀಲ್ದಾರ್‌ಗೆ ಪತ್ರ ಬರೆಯಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಹಳೆ ಕಚೇರಿ ಕಟ್ಟಡ ಏಲಂಗೆ ನಿರ್ಣಯ:
ಗ್ರಾ.ಪಂ.ನ ಹಳೆ ಕಚೇರಿ ಕಟ್ಟಡವನ್ನು ಏಲಂ ಮಾಡಿ ತೆರವುಗೊಳಿಸಲು ನಿರ್ಣಯಿಸಲಾಯಿತು. ಗ್ರಾಮದ ಅಭಿವೃದ್ಧಿ ಬಗ್ಗೆ ಚರ್ಚಿಸಿ ಜನರ ಮೂಲಭೂತ ಸೌಕರ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಲು ನಿರ್ಧರಿಸಲಾಯಿತು. ದೂರು ಅರ್ಜಿಗಳ ಬಗ್ಗೆ ಸ್ಥಳ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ನಿರ್ಣಯಿಸಲಾಯಿತು. ಉಪಾಧ್ಯಕ್ಷೆ ಸ್ಮಿತಾ, ಸದಸ್ಯರುಗಳಾದ ಸಂತೋಷ್ ಪಿ., ಗಂಗಾಧರ ಕೆ.ಎಸ್., ಉಮೇಶ ಓಡ್ರಪಾಲು, ನಝೀರ್ ಬೆದ್ರೋಡಿ, ಮೋನಪ್ಪ ಗೌಡ, ವಿಮಲ, ಪ್ರೆಸಿಲ್ಲಾ ಡಿ.ಸೋಜ, ಯಶೋಧ ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು. ಪಿಡಿಒ ಪ್ರವೀಣ್‌ಕುಮಾರ್ ಸ್ವಾಗತಿಸಿ, ಅಭಿವೃದ್ಧಿ ವರದಿ, ಸರಕಾರದ ಸುತ್ತೋಲೆಗಳ ಬಗ್ಗೆ ಸಭೆಗೆ ತಿಳಿಸಿದರು. ಕಾರ್ಯದರ್ಶಿ ಗಿರಿಯಪ್ಪ ಗೌಡ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.