ಸಂಪ್ಯ ಮಖಾಂ ಉರೂಸ್ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಸಹೃದಯಿಗಳಾಗಿ ಬಾಳಿಬದುಕಿರಿ ಅಲ್ಲಾಹನ ಕೃಪೆ ನಿಮ್ಮ ಮೇಲಿರಲಿದೆ: ಲುಕ್ಮಾನುಲ್ ಹಕೀಂ ಸಖಾಫಿ

ಪುತ್ತೂರು; ನಾವು ಮಾಡುವ ಯಾವುದೇ ಪುಣ್ಯ ಕೆಲಸಗಳು ಅಲ್ಲಾಹನು ಸ್ವೀಕರಿಸಬೇಕಾದರೆ ನಮ್ಮ ಹೃದಯ ಶುದ್ದಿ ಬೇಕು, ಚಂಚಲ ಮನಸ್ಸು ಇದ್ದವರ ಯಾವ ಪುಣ್ಯ ಕರ್ಮಗಳು ಅಲ್ಲಾಹನ ಬಳಿ ಸ್ವೀಕಾರವಲ್ಲ ಎಂದು ಲುಕ್ಮಾನುಲ್ ಹಕೀಂ ಸಖಾಫಿ ಪುಲ್ಲಾರ ಹೇಳಿದರು.
ಅವರು ಸಂಪ್ಯ ಮುಹಿಯುದ್ದೀನ್ ಜಮಾತ್ ಕಮಿಟಿ ಆಶ್ರಯದಲ್ಲಿ ನಡೆಯುತ್ತಿರುವ ಸಂಪ್ಯ ಮಖಾಂ ಉರೂಸ ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣ ಮಾಡಿದರು.

ಸ್ವರ್ಗ , ನರಕ ಮತ್ತು ಮರಣಾನಂತರದ ಜೀವನದಲ್ಲಿ ವಿಶ್ವಾಸ ಇಡುವುದು ಪ್ರತೀಯೊಬ್ಬ ಮುಸ್ಲಿಮನ ಕರ್ತವ್ಯವಾಗಿದೆಯಲ್ಲದೆ ಅದು ವಿಶ್ವಾಸದ ಒಂದು ಭಾಗವಾಗಿದೆ. ಸ್ವರ್ಗದ ಸುಖಾನುಭವ ಮತ್ತು ನರಕದ ಭಯಾನಕತೆಯನ್ನು ಪವಿತ್ರ ಕುರ್‌ಆನಿನಲ್ಲಿ ಅಲ್ಲಾಹನು ಪರಿಪರಿಯಾಗಿ ವಿವಿರಿಸಿದ್ದಾನೆ ಎಂದು ಹೇಳಿದ ಅವರು ನಾವು ಸಜ್ಜನರಾದರೆ , ಧರ್ಮ ಮಾರ್ಗದಲ್ಲಿ ನಡೆದು ಅಲ್ಲಾಹನು ನಿಷಿಧ್ದಗೊಳಿಸಿದ ಕಾರ್ಯವನ್ನು ವಿರೋಧಿಸಿ ಬಾಳಿ ಬದುಕಿದರೆ ನಮಗೆ ಸ್ವರ್ಗ ಪ್ರಾಪ್ತಿಯಾಗಲು ಸಾಧ್ಯವಾಗುತ್ತದೆ. ಕುರ್‌ಆನ್ ಎಂಬುದು ಬರೇ ಗ್ರಂಥವಲ್ಲ ಅದು ಅಲ್ಲಾಹನ ದೃಷ್ಟಾಂತವಾಗಿದೆ. ವಿಶ್ವದಲ್ಲಿರುವ ಪ್ರತೀಯೊಂದು ಜೀವಜಲ, ವಸ್ತುಗಳು ಅಲ್ಲಾಹನ ಸೃಷ್ಟಿಯಾಗಿದೆ ಆದರೆ ಕುರ್‌ಆನ್ ಅಲ್ಲಾಹನ ಸೃಷ್ಟಿಯಲ್ಲ ಅದು ಅಲ್ಲಾಹನ ದೃಷ್ಟಾಂತವಾಗಿದೆ ಅದರಲ್ಲಿರುವ ಪ್ರತೀಯೊಂದು ಶಬ್ದವೂ ಅಲ್ಲಾಹನ ಮಾತಾಗಿದೆ ಎಂದು ಹೇಳಿದರು. ಕುರ್‌ಆನ್ ಮತ್ತು ಹದೀಸ್ ಬಗ್ಗೆ ನಾವು ತಿಳಿದುಕೊಳ್ಳಬೇಕು. ನಮ್ಮ ಧರ್ಮದ ಬಗ್ಗೆ ನಾವು ತಿಳಿದುಕೊಳ್ಳದೆ , ಸರಿಯಾವುದು , ತಪ್ಪು ಯಾವುದು ಎಂಬ ಅರಿವು ಇಲ್ಲದೇ ಇದ್ದಲ್ಲಿ ಅದು ನಮ್ಮ ಕೊರತೆಯಾಗಲಿದೆ. ಧರ್ಮದ ಆಚಾರದ ಬಗ್ಗೆ ನನಗೆ ಗೊತ್ತಿಲ್ಲದೆ ತಪ್ಪು ಮಾಡಿದೆ ಎಂಬ ಸಮಜಾಯಿಷಿಕೆಯನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಸಂಪ್ಯ ಮುಹಿಯುದ್ದೀನ್ ಜುಮಾ ಮಸೀದಿ ಮತ್ತು ಉರೂಸ್ ಕಮಿಟಿ ಅಧ್ಯಕ್ಷರಾದ ಎಸ್ ಅಬ್ದುಲ್ ಜಲೀಲ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಉರೂಸ್ ಕಮಿಟಿ ಗೌರವಾಧ್ಯಕ್ಷರಾದ ಸಯ್ಯಿದ್ ಇಸ್ಮಾಯಿಲ್ ಅಲ್‌ಬುಖಾರಿ ಕೋಯಕುಟ್ಟಿ ತಂಙಳ್ ದುವಾ ನೆರವೇರಿಸಿದರು.
ಸಂಪ್ಯ ಖತೀಬ್ ಅಬ್ದುಲ್ ಹಮೀದ್ ದಾರಿಮಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.

ವೇದಿಕೆಯಲ್ಲಿ ಹಮೀದ್ ಹಾಜಿ ಬೈತಡ್ಕ, ಪಿ ಬಿ ಇಕ್ಬಾಲ್ ಬೈತಡ್ಕ, ಇಬ್ರಾಹಿಂ ಅಲೆಕ್ಕಾಡಿ, ನೌಫಲ್ ದರ್ಬೆ, ಮನ್ಸೂರ್ ಆರ್ಲಪದವು, ಅಝೀಝ್ ಕಟ್ಟತ್ತಾರು, ಸಂಪ್ಯ ಸ್ವಲಾತ್ ಕಮಿಟಿ ಅಧ್ಯಕ್ಷ ಸಂಶುದ್ದೀನ್ ಸಂಪ್ಯ,ಸಂಪ್ಯ ಎನ್‌ಎಚ್‌ವೈಎ ಅಧ್ಯಕ್ಷ ಕೈಸರ್ ಸಂಪ್ಯ, ಅಶ್ರಫ್ ಸರ್ವೆ ಶಮೀಮ್ ಅರ್ಫತ್ ದರ್ಬೆ ಮೊದಲಾದವರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.