ಸಿರಿಕಡಮಜಲು ಕೃಷಿ ಕ್ಷೇತ್ರದಲ್ಲಿ ದೇಶಭಕ್ತ ಎನ್. ಎಸ್. ಕಿಲ್ಲೆ 120 ಜನ್ಮ ವರ್ಷಾಚರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 

ಪುತ್ತೂರು: ಸ್ವಾತಂತ್ರ್ಯ ಹೋರಾಟಗಾರ ದೇಶಭಕ್ತ ಎನ್. ಎಸ್. ಕಿಲ್ಲೆಯವರ ೧೨೦ನೇ ಜನ್ಮವರ್ಷಾಚರಣೆ ಮತ್ತು ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವ ಕಾರ್ಯಕ್ರಮ ಸಿರಿಕಡಮಜಲು ಕೃಷಿ ಕ್ಷೇತ್ರದಲ್ಲಿ ಜ. ೨ ರಂದು ನಡೆಯಿತು. ದೇಶಭಕ್ತ ಎನ್.ಎಸ್. ಕಿಲ್ಲೆ ಪ್ರತಿಷ್ಠಾನದ ಅಧ್ಯಕ್ಷ ಕಡಮಜಲು ಸುಭಾಸ್ ರೈಯವರು ಮಾತನಾಡಿ `ದೇಶಭಕ್ತರ ಸಾಲಿನಲ್ಲಿ ಕಿಲ್ಲೆಯವರು ಮಾಡಿದ ಸೇವೆ ಅನವರತ ಜನಮಾನಸ ನೆನಪಿನಲ್ಲಿ ಇಡಬೇಕಾಗಿದೆ. ಕಿಲ್ಲೆಯವರ ಸಮಾಜಸೇವೆ, ಸಾಹಿತ್ಯ ಸೇವೆ, ಸಾಂಸ್ಕೃತಿಕ ಸೇವೆ ಅನನ್ಯವಾಗಿದೆ. ಕಿಲ್ಲೆ ಕುಟಂಬಿಕರು ಪುಣ್ಯಾತ್ಮರು ಅವರ ನೆನಪನ್ನು ಉಳಿಸುವ ಮಹಾಕಾರ್ಯ ಭಾಗ್ಯವಂತರಾದ ಕಿಲ್ಲೆ ಕುಟುಂಬಿಕರಿಗೆ ಮತ್ತು ಸಮಾಜದ ಎಲ್ಲಾ ಸ್ತರದ ಜನರಿಗೆ ಲಭಿಸಿದೆ. ಇದು ನಮ್ಮ ಯೋಗ. ಯೋಗವನ್ನು ಭಾಗ್ಯವಾಗಿ ಪರಿವರ್ತಿಸುವುದು ಅವರವರ ಕೈಯಲ್ಲಿದೆ ಎಂದು ಹೇಳಿ ಭ್ರಷ್ಟಾಚಾರ ರಹಿತ ಸಮಾಜ ನಿರ್ಮಾಣಕ್ಕೆ ನಾವೆಲ್ಲ ಶ್ರಮಿಸೋಣ. ಆಶೆ, ಆಮಿಷಕ್ಕೆ ಬಲಿ ಬೀಳದೆ ದೇಶಭಕ್ತರಾಗೋಣ ಎಂದರು. ಕಿಲ್ಲೆ ಪ್ರತಿಷ್ಠಾನದ ಗೌರವ ಅಧ್ಯಕ್ಷೆ ಶಾಂತ ವಿಠಲ ಶೆಟ್ಟಿ ಮುಂಬಯಿ ದೀಪಬೆಳಗಿಸಿ ನಮನ ಸಲ್ಲಿಸಿದರು. ಶಿಬರೂರು ಗುತ್ತು ಸದಾಶಿವ ಶೆಟ್ಟಿ ಮುಂಬಯಿ, ಪ್ರೀತಿ ಸುಭಾಸ್ ರೈ, ರೂಪಾ ವಿವೇಕ್ ರೈ ಮುಂಬಯಿ, ಕಿಲ್ಲೆ ಕುಟುಂಬಿಕರಾದ ಶಶಿಕಲಾ ಸದಾಶಿವ ಶೆಟ್ಟಿ ಮುಂಬಯಿ, ವೀಣಾ ಸತೀಶ್ ಶೆಟ್ಟಿ ಮಂಗಳೂರು, ಶಿಕ್ಷಕಿ ವಿದ್ಯಾ ಆಪ್ರೇಶ್ ನಾಯಕ್, ವಿಂದ್ಯಾ ದುರ್ಗಾಪ್ರಸಾದ್, ಡಿ.ಆರ್.ಡಿ.ಒ. ವಿಜ್ಞಾನಿ ದುರ್ಗಾಪ್ರಸಾದ್ ಎಂ., ಮೋಕ್ಷಕೃಷ್ಣ, ನಿತಾಯ್ ಕೃಷ್ಣ, ಬೇಬಿ ನಿಶ್ಚಿತ ಕಾರ್‍ಯಕ್ರಮದಲ್ಲಿ ಭಾಗವಹಿಸಿಸದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.