ಮಳೆಗಾಲದಲ್ಲಿ ಕಿತ್ತು ಹೋದ ಡಾಮರು ರಸ್ತೆಗೆ ನಗರಸಭೆಯಿಂದ ತೇಪೆ ಹಾಕುವ ಕಾಮಗಾರಿ ಶುರು

0

ಪುತ್ತೂರು: ಮಳೆಗಾಲದಲ್ಲಿ ಕಿತ್ತು ಹೋದ ಡಾಮರು ರಸ್ತೆಗೆ ನಗರಸಭೆ ವತಿಯಿಮದ ತೇಪೆ ಹಾಕುವ ಕಾಮಗಾರಿ ಆರಂಭಗೊಂಡಿದ್ದು, ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ಪರಿಶೀಲಿಸಿದರು.

ಈ ಭಾರಿಯ ಅತಿಯಾದ ಮಳೆಯಿಂದಾಗಿ ಬಹುತೇಕ ಕಡೆ ಡಾಮರು ರಸ್ತೆ ಕಿತ್ತು ಹೋಗಿದ್ದು, ಅದರ ದುರಸ್ಥಿ ಕಾರ್ಯಕ್ಕೆ ಕೆಲವು ಕಡೆ ಮರುಡಾಮೀಕರಣ ಮತ್ತು ತೇಪೆ ಹಾಕುವ ಕಾಮಗಾರಿ ನಗರಸಭೆಯಿಂದ ಆರಂಭಗೊಳಿಸಲಾಗಿದೆ. ಜ.೬ರಂದು ಎಪಿಎಂಸಿ ರಸ್ತೆಯಲ್ಲಿ ನಡೆದ ತೇಪೆ ಕಾಮಗಾರಿ ಸಂದರ್ಭ ನಗರಸಭೆ ಇಂಜಿನಿಯರ್ ಶ್ರೀಧರ್ ಮತ್ತು ಅಧಿಕಾರಿಗಳು ಡಾಮರೀಕರಣ ನಡೆಯವ ಸ್ಥಳ ಪರಿಶೀಲಿಸಿದರು.

ಪ್ರತಿ ವಾರ್ಡ್‌ಗಳಲ್ಲೂ ಗುಂಡಿ ಬಿದ್ದ ರಸ್ತೆಗೆ ತೇಪೆ
ಮಳೆಯಿಂದಾಗಿ ಹಲವು ಕಡೆ ಡಾಮರು ರಸ್ತೆ ಹಾನಿಯಾಗಿದ್ದು, ಅದರ ದುರಸ್ಥಿ ಕಾರ್ಯ ನಡೆಸಲಾಗುತ್ತಿದೆ. ಈಗಾಗಲೇ ಪ್ರತಿ ವಾರ್ಡ್‌ಗಳಲ್ಲೂ ತೇಪೆ ಕಾರ್ಯ ನಡೆಯುತ್ತಿದೆ. ಎಪಿಎಂಸಿ ರಸ್ತೆ ಅಗತ್ಯ ಬಿದ್ದಲ್ಲಿ ತೇಪೆ ಕಾಮಗಾರಿ ನಡೆಸಲಾಗಿದೆ.
ಕೆ.ಜೀವಂಧರ್ ಜೈನ್, ಅಧ್ಯಕ್ಷರು ನಗರಸಭೆ ಪುತ್ತೂರು

LEAVE A REPLY

Please enter your comment!
Please enter your name here