ನೆಹರುನಗರ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದ ಸುತ್ತು ಪೌಳಿ, ದೈವಗಳ ಚಾವಡಿಯ ಕೆಂಪು ಕಲ್ಲಿನ ಗೋಡೆ ಕಟ್ಟುವ ಕೆಲಸಕ್ಕೆ ಮುಹೂರ್ತ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಜೀರ್ಣೋದ್ದಾರಗೊಳ್ಳುತ್ತಿರುವ ನೆಹರೂನಗರದ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದ ಸುತ್ತು ಪೌಳಿ ಹಾಗೂ ದೈವಗಳ ಚಾವಡಿಯ ಕೆಂಪು ಕಲ್ಲಿನ ಗೋಡೆ ಕಟ್ಟುವ ಕೆಲಸದ ಮುಹೂರ್ತ ಜ.6ರಂದು ನಡೆಯಿತು.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಅವರು ಆವರಣ ಗೋಡೆ ಕಲ್ಲು ಇಡುವ ಮೂಲಕ ಚಾಲನೆ ನೀಡಿದರು. ಬಳಿಕ ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್, ಹಿಂದೂ ಧಾರ್ಮಿಕ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ, ನಗರಸಭಾ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯೆ ಸುಧಾ ಎಸ್ ರಾವ್, ರಕ್ತೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಾಗೂ ಜೀರ್ಣೋದ್ಧಾರ-ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಸಂತೋಷ್ ನಾಯ್ಕ್’ರವರು ಜೊತೆಗೂಡಿ ಆವರಣ ಗೋಡೆಗೆ ಕಲ್ಲುಗಳನ್ನು ಇಟ್ಟು ಸಾಂಕೇತಿಕವಾಗಿ ಚಾಲನೆ ನೀಡಿದರು. ಕ್ಷೇತ್ರದ ಪ್ರಧಾನ ಅರ್ಚಕ ಶ್ರೀಕೃಷ್ಣ ರಾವ್’ರವರು ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿಕೊಟ್ಟರು.

ದೇವಳದ ಜಂಟಿ ಸಮಿತಿಗಳ ಅಧ್ಯಕ್ಷರಾದ ಸಂತೋಷ್ ಎ ಅವರು ಅತಿಥಿಗಳನ್ನು ಗೌರವಿಸಿದರು. ಕಾರ್ಯಕ್ರಮದಲ್ಲಿ ಸುದಾನ ಶಾಲೆಯ ಮುಖ್ಯೋಪಾಧ್ಯಾಯಿನಿ ಶೋಭಾ ನಾಗರಾಜ್, ದೇವಸ್ಥಾನದ ಸಮಿತಿಗಳ ಪದಾಧಿಕಾರಿಗಳಾದ ಶ್ಯಾಮಪ್ರಸಾದ್, ಕೃಷ್ಣಾನಂದ ಸೂರ್ಯ, ಶಶಿಧರ್ ಕಲ್ಲೇಗ,ಶಿವಪ್ಪ ನಾಯ್ಕ್, ವಿನೋದ್ ಕುಮಾರ್, ಸಂದೇಶ್ ಮತ್ತಿತರರು ಹಾಗೂ ಸ್ಥಳೀಯರಾದ ಜೀವನ್,ಶಂಕರ್, ಚಂದ್ರಶೇಖರ ನಾಯ್ಕ್,ಚಂದ್ರಶೇಖರ್, ವಾಣಿ ಚಂದ್ರಶೇಖರ್,ಭವಾನಿ ವಾಸು ಸಪಲ್ಯ,ರಾಜೀವಿ, ಸುಶ್ಮಾ, ಅರುಣಾ ರಾಜಶೇಖರ್, ಪ್ರೇಮಾ, ಪ್ರಕಾಶಿನಿ, ಗೀತಾ ನಾಯ್ಕ್,ದಯಾನಂದ್, ಕಲಾವಿದ ಕೃಷ್ಣಪ್ಪ, ಅಮೃತರಾಜ್, ಸುಧೀರ್ ನಾಯ್ಕ್, ಅಶೋಕ್ ಶಿವನಗರ ಮತ್ತಿತರರು ಭಾಗವಹಿಸಿದ್ದರು. ವಿನೋದ್ ಆಚಾರ್ಯರವರು ಪ್ರಾರ್ಥಿಸಿದರು. ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ರಾಜೇಶ್ ಬನ್ನೂರುರವರು ಸ್ವಾಗತಿಸಿ ವಂದಿಸಿದರು.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.