ಪಾಲ್ತಾಡಿ : ಕಾಯರಗುರಿ ರಸ್ತೆ ಸಮಸ್ಯೆ,ಗ್ರಾ.ಪಂ.ನಿಯೋಗದಿಂದ ಪರಿಶೀಲನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ಸವಣೂರು : ಪಾಲ್ತಾಡಿ ಗ್ರಾಮದ ಕಾಯರ್‌ಗುರಿ ನಿವಾಸಿಗಳು  ಹೋಗುವ ರಸ್ತೆಯ ಅವ್ಯವಸ್ಥೆಯ ಬಗ್ಗೆ ಸವಣೂರು ಗ್ರಾ.ಪಂ.ಗೆ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಸವಣೂರು ಗ್ರಾ.ಪಂ.ನಿಯೋಗ ಕಂದಾಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪಾಲ್ತಾಡಿ ಗ್ರಾಮದ ಕಾಯರ್‌ಗುರಿ ಎಂಬಲ್ಲಿ ಸುಮಾರು 40ಕ್ಕೂ ಹೆಚ್ಚು ಮನೆಗಳಿದ್ದು, ಪರಿಶಿಷ್ಠ ಜಾತಿ ಮತ್ತು ಪಂಗಡಕ್ಕೆ ಸೇರಿದ ಸುಮಾರು 30 ಮನೆಗಳಿವೆ ಹಾಗೂ ಇಲ್ಲಿಂದ ಸುಮಾರು 20ರಷ್ಟು ಮಕ್ಕಳು ಪಾಲ್ತಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದು ಅಲ್ಲದೇ ಕೆಯ್ಯೂರು, ನರಿಮೊಗರು ಸಾಂದೀಪನಿ ಶಾಲೆ, ಪುತ್ತೂರು ಸಂತ ಫಿಲೋಮಿನಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ಗ್ರಾಮದಲ್ಲಿ ತಮ್ಮತಮ್ಮ ಉದ್ಯೋಗಗಳಿಗೆ ಹಾಗೂ ಕೂಲಿ ಕೆಲಸಕ್ಕೆ ತೆರಳಲು ಪಾಲ್ತಾಡಿ ಶಾಲೆಯ ಮಾರ್ಗವಾಗಿಯೇ ಸಂಚರಿಸಬೇಕಾಗಿದೆ.
ಕಾಯರಗುರಿ ಎಂಬಲ್ಲಿನ ಕಾಲು ದಾರಿಯ ವ್ಯವಸ್ಥೆ ಸರಿ ಇಲ್ಲದಿರುವುದರಿಂದ ಗ್ರಾಮಸ್ಥರು ಪರದಾಡುವಂತಾಗಿದೆ. ಇಲ್ಲಿ ಸಣ್ಣದಾದ ಕಾಲುದಾರಿ ಇದ್ದು ಅದೂ ಕೂಡಾ ಗಿಡಗಂಟಿಗಳಿಂದ ಹಾಗೂ ಮಳೆನೀರಿನಿಂದ ಗುಂಡಿಗಳಾಗಿ ಮುಚ್ಚಿಹೋಗುವಂತಾಗಿದೆ. ಯಾವುದೇ ತುರ್ತುಪರಿಸ್ಥಿತಿ ಬಂದಾಗಲೂ ಕೇವಲ 400 ಮೀಟರ್ ದೂರವನ್ನು ಸುಮಾರು 5 ಕಿ.ಮೀ.ನಷ್ಟು ಸುತ್ತಾಗಿ ಬಂದು ತಲುಪುವ ಪರಿಸ್ಥಿತಿ ಉಂಟಾಗಿದೆ. ಕಳೆದ ಹಲವಾರು ವರ್ಷಗಳಿಂದ ಇಲ್ಲಿನ ನಿವಾಸಿಗಳಿಗೆ ಇದೇ ಸಮಸ್ಯೆಯಾಗಿದ್ದು ಈ ಸಮಸ್ಯೆಯನ್ನು ಪರಿಹರಿಸುವಂತೆ ಗ್ರಾ.ಪಂ.ಗೆ ನೀಡಿದ ಮನವಿಯಲ್ಲಿ ಉಲ್ಲೇಖಿಸಲಾಗಿತ್ತು.ಅಲ್ಲದೆ ಮುಂದಿನ ಚುನಾವಣಾ ಬಹಿಷ್ಕಾರ ಹಾಕುವ ಕುರಿತು ಮನವಿಯಲ್ಲಿ ತಿಳಿಸಿದ್ದರು.
ಈ ಮನವಿಯಂತೆ ಜ.6ರಂದು ಸ್ಥಳಕ್ಕೆ ಭೇಟಿ ನೀಡಿದ ಗ್ರಾ.ಪಂ.ನಿಯೋಗದವರು ರಸ್ತೆಗೆ ಅಡ್ಡಿಪಡಿಸುತ್ತಿರುವ ಖಾಸಗಿ ವ್ಯಕ್ತಿಯೊಬ್ಬರ ಜತೆ ಮಾತುಕತೆ ನಡೆಸಿ,ರಸ್ತೆಗೆ ಅವಕಾಶ ನೀಡುವಂತೆ ವಿನಂತಿಸಿದರು.ಅದರಂತೆ ಖಾಸಗಿ ವ್ಯಕ್ತಿಯು 7 ದಿನಗಳ ಕಾಲಾವಕಾಶ ನೀಡಿ ಬಳಿಕ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಸವಣೂರು ಗ್ರಾ.ಪಂ.ಅಧ್ಯಕ್ಷೆ ರಾಜೀವಿ.ಶೆಟ್ಟಿ, ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ನೆಕ್ರಾಜೆ, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ನಾರಾಯಣ ಬಿ., ಗ್ರಾಮ ಲೆಕ್ಕಾಧಿಕಾರಿ ರವಿಚಂದ್ರ,ಗ್ರಾಮ ಸಹಾಯಕ ಬಾಬು ಬಿ, ಸವಣೂರು ಗ್ರಾ.ಪಂ.ಸದಸ್ಯರಾದ ಭರತ್ ರೈ ಪಾಲ್ತಾಡಿ, ಹರೀಶ್ ಕಾಯರಗುರಿ, ತಾರಾನಾಥ ಬೊಳಿಯಾಲ, ಚೇತನಾ ಪಾಲ್ತಾಡಿ, ಗಿರಿಶಂಕರ ಸುಲಾಯ,ಸತೀಶ್ ಅಂಗಡಿಮೂಲೆ, ರಫೀಕ್ ಎಂ.ಎ, ಬಾಬು ಎನ್, ಚಂದ್ರಾವತಿ ಸುಣ್ಣಾಜೆ, ತೀರ್ಥರಾಮ ಕೆಡೆಂಜಿ ಸೇರಿದಂತೆ ಊರವರು ಉಪಸ್ಥಿತರಿದ್ದರು.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.