ವೃದ್ಧ, ನಿರ್ಗತಿಕರಿಗೆ ಆಸರೆಯಾಗಲಿದೆ ಕರ್ನಾಟಕ ಮುಸ್ಲಿಂ ಜಮಾಅತ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಪುತ್ತೂರು ತಾಲೂಕು ಸಮಿತಿಯಿಂದ `ಅವರ್ ಗೆಸ್ಟ್’ ಯೋಜನೆಗೆ ಚಾಲನೆ

@ಯೂಸುಫ್ ರೆಂಜಲಾಡಿ

 

ಪುತ್ತೂರು: ಸಾಮಾಜಿಕ ಚಟುವಟಿಕೆಗಳ ಮೂಲಕ ಸದಾ ಸುದ್ದಿಯಲ್ಲಿರುವ ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ತಾಲೂಕು ಸಮಿತಿಯು ಮಹತ್ವದ ಯೋಜನೆಯೊಂದಕ್ಕೆ ಚಾಲನೆ ನೀಡಿದೆ. ಪುತ್ತೂರು ತಾಲೂಕಿನ ವಿವಿಧೆಡೆಗಳಲ್ಲಿ ಇರುವ ನಿರ್ಗತಿಕ, ಅಶಕ್ತ ಹಾಗೂ ನಿರ್ಲಕ್ಷ್ಯಕ್ಕೆ ಒಳಗಾದ ವೃದ್ಧರಿಗೆ ಪರಿಪಾಲನೆ ಮಾಡುವ ಯೋಜನೆಯನ್ನು ಹಾಕಿಕೊಂಡಿದೆ.

ಮಕ್ಕಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿ ಅಥವಾ ಕುಟುಂಬದ ತುಳಿತಕ್ಕೆ ಒಳಗಾಗಿ ಸರಿಯಾಗಿ ಆರೈಕೆದಾರರಿಲ್ಲದೇ ನೋವು ಅನುಭವಿಸುತ್ತಿರುವ, ವಿವಿಧ ರೋಗಗಳಿಗೆ ತುತ್ತಾಗಿ ಶುಶ್ರೂಷೆ ಮಾಡಲು ಸರಿಯಾದ ವ್ಯವಸ್ಥೆಗಳಿಲ್ಲದೇ ಕಂಗಾಲಾಗಿರುವ ವೃದ್ಧ ಪುರುಷ/ಮಹಿಳೆಯರಿಗೆ ಆರೈಕೆ ಮಾಡಿ ಅವರಿಗೆ ಒಂದಷ್ಟು ನೆಮ್ಮದಿ ನೀಡುವ ಯೋಜನೆ ಇದಾಗಿದೆ.  ಆರೈಕೆದಾರರಿಲ್ಲದೇ ಇರುವ ಅಂತಹ ವಯೋವೃದ್ಧರಿಗೆ ಔಷಧಿ ಮತ್ತಿತರ ಅವಶ್ಯಕತೆಗಳನ್ನು ಸಕಾಲದಲ್ಲಿ ಮುಸ್ಲಿಂ ಜಮಾಅತ್ ಪೂರೈಸಲಿದೆ. ಇದೀಗ ಮೊದಲ ಹಂತವಾಗಿ ಮುಂದಿನ ಒಂದು ವರ್ಷಗಳ ಕಾಲ ಈ ಯೋಜನೆಯನ್ನು ಕಾರ್ಯಗತಗೊಳಿಸಲು ಉದ್ದೇಶಿಸಲಾಗಿದ್ದು ಪ್ರಾರಂಭದಲ್ಲಿ ವಲಯ ಮಟ್ಟದಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ನಂತರ ಈ ಯೋಜನೆಯ ವಿವಿಧ ಆಯಾಮಗಳನ್ನು ಗ್ರಹಿಸಿಕೊಂಡು ಮುಂದಿನ ಕಾರ್ಯಯೋಜನೆಗಳನ್ನು ಸಿದ್ದಪಡಿಸಲಾಗುತ್ತದೆ. ಈ ಮಹತ್ವದ ಯೋಜನೆಗೆ ಮುಸ್ಲಿಂ ಜಮಾಅತ್ ಪುತ್ತೂರು ಕಚೇರಿಯಲ್ಲಿ ಚಾಲನೆ ನೀಡಲಾಗಿದೆ.

ಯೋಜನೆ ಹೀಗಿರಲಿದೆ:
ಅರ್ಹ ವಯೋವೃದ್ಧರಿಗೆ ತಿಂಗಳು ಪೂರ್ತಿ ಔಷದ ನೀಡುವುದು, ಪಾಕೆಟ್ ಮನಿ ನೀಡುವುದು, ತಿಂಗಳಿಗೊಮ್ಮೆ ಫ್ರೂಟ್ ಕಿಟ್ ನೀಡುವುದು, ನಿಗದಿತ ವೇಳೆಯಲ್ಲಿ ಅವರ ಸಂಕಷ್ಟಗಳನ್ನು ಆಲಿಸಿ ಸಾಂತ್ವನ ನೀಡುವ ಮೂಲಕ ಮನೋಸ್ಥೈರ್ಯ ನೀಡುವುದು. ವರ್ಷಕ್ಕೆರಡು ಸಲ ಮಾಂಸ ದಾನ ನೀಡುವುದು. ತರಕಾರಿ ವಿತರಿಸುವುದು. ತಪಾಸಣೆಗಾಗಿ ವೈದ್ಯರ ಬಳಿ ಕರೆದುಕೊಂಡು ಹೋಗುವುದು. ವರ್ಷದ ೨ ಹಬ್ಬಗಳಿಗೆ ಹೊಸ ಬಟ್ಟೆ ನೀಡುವುದು, ಉಚಿತ ಕಿಟ್ ದೊರಕಿದಾಗ ಇವರನ್ನು ಒಳಪಡಿಸುವುದು. ಬೆಡ್‌ಶೀಟ್, ಚಾಪೆ ಮುಂತಾದ ಪ್ರಾಥಮಿಕ ಸೌಲಭ್ಯಗಳನ್ನು ಒದಗಿಸುವುದು. ಹೀಗೇ ನಾನಾ ವಿಧದ ಸೇವಾ ಕಾರ್ಯಗಳನ್ನು ವ್ಯವಸ್ಥೆಗಳನ್ನು ಅರ್ಹ ವೃದ್ಧರಿಗೆ ಒದಗಿಸಲಾಗುತ್ತದೆ.

ಈಗಾಗಲೇ ಯತೀಂ ಕಿಟ್ ಯೋಜನೆ ಅರ್ಹರಿಗೆ ನೀಡಲಾಗುತ್ತಿದ್ದು ಅದರ ಜೊತೆ ಈ ಯೋಜನೆಯನ್ನು ಮುಸ್ಲಿಂ ಜಮಾಅತ್ ತಾಲೂಕಿನಲ್ಲಿ ವಿಸ್ತರಿಸಲಿದ್ದು ಇದಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಕೆಎಂಜೆಪಿಟಿಆರ್ ಡಿಜಿಟಲ್ ಕಾರ್ಡ್‌ನ್ನು ಅರ್ಹ ಫಲಾನುಭವಿಗಳಿಗೆ ನೀಡಲಿದ್ದು ಅದರ ಮೂಲಕ ಸಾಂತ್ವನ ಸೇವೆಯನ್ನು ಅರ್ಹರು ಪಡೆಯಬಹುದಾಗಿದೆ. ಈ ಯೋಜನೆಯನ್ನು ಮುಂದಿನ ದಿನಗಳಲ್ಲಿ ಜಾತಿ, ಧರ್ಮಗಳನ್ನು ನೋಡದೆ ಅರ್ಹರಿಗೆ ಒದಗಿಸಲು ಚಿಂತನೆ ನಡೆಸಲಾಗಿದೆ.

ಹಂತ, ಹಂತವಾಗಿ ಯೋಜನೆ ವಿಸ್ತರಣೆ:
ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ತಾಲೂಕು ಸಮಿತಿ ವತಿಯಿಂದ ಈಗಾಗಲೇ ಅನೇಕ ಜನಪರವಾದ ಯೋಜನೆಗಳನ್ನು ಹಾಕಿಕೊಂಡು ಅವುಗಳನ್ನು ಒಂದೊಂದಾಗಿ ಅನುಷ್ಠಾನಕ್ಕೆ ತರುತ್ತಿದ್ದೇವೆ. ಮುಖ್ಯವಾಗಿ ಅರ್ಹ ಆಯ್ದ ಕುಟುಂಗಳಿಗೆ ಪ್ರತೀ ತಿಂಗಳು ಯತೀಂ ಕಿಟ್ ನೀಡುತ್ತಿದ್ದು ಇದೀಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ ನಿರ್ಗತಿಕ, ಅಶಕ್ತ ಹಾಗೂ ನಿರ್ಲಕ್ಷ್ಯಕ್ಕೆ ಒಳಗಾದ ವೃದ್ಧರಿಗೆ ಪರಿಪಾಲನೆ ಮಾಡುವ ಯೋಜನೆಯನ್ನು ಹಾಕಿಕೊಂಡು ಅದಕ್ಕೆ ಚಾಲನೆ ನೀಡಿದ್ದೇವೆ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ತಾಲೂಕು ಅಧ್ಯಕ್ಷ ಬಿ.ಪಿ ಇಸ್ಮಾಯಿಲ್ ಹಾಜಿ ಬೈತಡ್ಕ ಹೇಳಿದ್ದಾರೆ. ಈ ಯೋಜನೆಯನ್ನು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ತಾಲೂಕಿನ ವಿವಿಧೆಡೆ ಇದನ್ನು ವಿಸ್ತರಿಸಲಿದ್ದೇವೆ. ಮುಂದಿನ ದಿನಗಳಲ್ಲಿ ಜಾತಿ ಮತ ಬೇಧವಿಲ್ಲದೆ ಅರ್ಹವಾದವರಿಗೆ ಈ ಯೋಜನೆಯನ್ನು ವಿಸ್ತರಿಸಲು ಚಿಂತನೆ ನಡೆಸಲಾಗಿದೆ. ಇದಕ್ಕೆ ಮುಸ್ಲಿಂ ಜಮಾಅತ್‌ನ ನಾಯಕರು, ಪದಾಧಿಕಾರಿಗಳು, ಸದಸ್ಯರು, ವಲಯ, ಮೊಹಲ್ಲಾ ವ್ಯಾಪ್ತಿಯ ಸದಸ್ಯರು ಸಹಕಾರ ನೀಡುತ್ತಿದ್ದಾರೆ. ಮುಂದಕ್ಕೆ ಇನ್ನಷ್ಟು ಯೋಜನೆಗಳನ್ನು ಸಮಾಜಕ್ಕೆ ಸಮರ್ಪಿಸಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಸಮಾಜ ಸೇವೆಯಲ್ಲಿ ಸಕ್ರಿಯ:
ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ತಾಲೂಕು ಸಮಿತಿ ಸಮಾಜ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದು ಇದಕ್ಕಾಗಿ ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿಯಿಂದ ಅಭಿನಂದನೆಗೂ ಪಾತ್ರವಾಗಿದೆ. ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಜಾತಿ, ಮತ, ಪಂಗಡಗಳನ್ನು ನೋಡದೇ ಅವಶ್ಯವಿರುವವರಿಗೆ ಔಷಧಿಗಳನ್ನು ಮನೆ ಬಾಗಿಲಿಗೆ ತಲುಪಿಸಿ ಮಾನವೀಯ ಕಾರ್ಯವನ್ನು ಮಾಡುವ ಮೂಲಕ ಸುದ್ದಿಯಾಗಿತ್ತು. ಅಲ್ಲದೇ ತಾಲೂಕಿನ ಆಯ್ದ ಯತೀಂ ಕುಟುಂಬಗಳಿಗೆ ತಿಂಗಳ ಕಿಟ್ ವಿತರಣೆ ಜಾರಿಗೆ ತಂದು ಅದನ್ನು ಈಗಲೂ ಮುಂದುವರಿಸುತ್ತಿದೆ. ಇತ್ತೀಚೆಗೆ ಸಾರ್ವಜನಿಕ ಆರೋಗ್ಯ ಸೇವೆಯ ದೃಷ್ಟಿಯಿಂದ ಆಂಬ್ಯುಲೆನ್ಸ್ ಲೋಕಾರ್ಪಣೆ ಮಾಡಲಾಗಿತ್ತು. ಅಲ್ಲದೇ ಇನ್ನಿತರ ಅನೇಕ ಯೋಜನೆಗಳನ್ನು ಕೂಡಾ ಮುಂದಿನ ದಿನಗಳಲ್ಲಿ ಕಾರ್ಯಗತಗೊಳಿಸಲು ಯೋಜನೆಗಳನ್ನು ಸಿದ್ದಪಡಿಸಲಾಗುತ್ತಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.