ಶಿಕ್ಷಕರು ಮುಂದಿನ ಜನಾಂಗವನ್ನು ರೂಪಿಸುವವರು : ಡಾ. ಶ್ರೀಪತಿ ಕಲ್ಲೂರಾಯ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಶಿಕ್ಷಕರು ಮುಂದಿನ ಜನಾಂಗವನ್ನು ರೂಪಿಸುವವರು. ಅವರು ತಾವು ಬೋಧಿಸುವ ವಿ?ಯದ ಸೂಕ್ಷ್ಮಗಳನ್ನು ಅರಿತುಕೊಳ್ಳಬೇಕು. ಅವುಗಳನ್ನು ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ವಿವರಿಸುವ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು. ಯಾವುದೇ ಸಂದರ್ಭದಲ್ಲಿ ಕಲಿಕೆಯಲ್ಲಿ ಅನಾಸಕ್ತಿಯುಳ್ಳ ವಿದ್ಯಾರ್ಥಿಗಳನ್ನು ಬದಲಾಯಿಸಬಹುದು. ಅಂತಹ ಸಂದರ್ಭಗಳನ್ನು ಶಿಕ್ಷಕರು ಸೃಷ್ಟಿಸಬೇಕು. ವಿದ್ಯಾರ್ಥಿ ದೆಸೆಯಲ್ಲಿ ಪಡೆದುಕೊಂಡ ಅನುಭವ ನಮ್ಮ ಅಧ್ಯಾಪನ ವೃತ್ತಿಗೂ ಸಹಕಾರಿ ಎಂದು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಹೇಳಿದರು.


ಅವರು ಕಾಲೇಜಿನ ಐಕ್ಯೂಎಸಿ ಘಟಕದ ವತಿಯಿಂದ ಸಂಸ್ಥೆಗೆ ಸೇರಿದ ನೂತನ ಪ್ರಾಧ್ಯಾಪಕರಿಗಾಗಿ ಆಯೋಜಿಸಲಾದ ಮಾಹಿತಿ ಕಾರ್ಯಾಗಾರದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಕಾಲದೊಂದಿಗೆ ಪರಿಸ್ಥಿತಿಯೂ ಬದಲಾಗುತ್ತದೆ. ವಿದ್ಯಾರ್ಥಿಗಳ ಮನಸ್ಥಿತಿಯೂ ಅದಕ್ಕೆ ಹೊರತಲ್ಲ. ಅಧ್ಯಾಪಕರು ಪರಿಸ್ಥಿತಿ ಬದಲಾದ ಹಾಗೆ ಅದಕ್ಕೆ ಹೊಂದಿಕೊಳ್ಳಲು ಕಲಿಯಬೇಕು. ತಮ್ಮ ಭೋಧನ ಸಾಮರ್ಥ್ಯವನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕು. ಆದರ್ಶಮಯ ಗುಣಗಳನ್ನು ರೂಢಿಸಿಕೊಳ್ಳಬೇಕು. ನೇರ ಸಂಪರ್ಕವಿಲ್ಲದೆಯೂ ವಿದ್ಯಾರ್ಥಿಗಳು ನಮ್ಮನ್ನು ಅನುಸರಿಸುತ್ತಾರೆ. ನಮ್ಮಿಂದ ಕಲಿಯುತ್ತಾರೆ ಎಂದು ತಿಳಿಸಿದರು. ನಮಗೆ ತಿಳಿದ ವಿ?ಯವನ್ನು ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ವಿವರಿಸುವುದು ಒಂದು ಕಲೆ. ಈ ಸಂವಹನ ಕಲೆಯನ್ನು ಶಿಕ್ಷಕರು ಕರಗತ ಮಾಡಿಕೊಳ್ಳಬೇಕು. ಜನಪ್ರಿಯ ಶಿಕ್ಷಕರಾಗುವುದಕ್ಕಿಂತ ಆದರ್ಶ ಶಿಕ್ಷಕರಾಗಲು ಪ್ರಯತ್ನಿಸಬೇಕು. ಆದರ್ಶ ಶಿಕ್ಷಕರಾದಾಗ ಜನಪ್ರಿಯತೆ ತಾನಾಗೇ ಒಲಿದು ಬರುತ್ತದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿವೇಕಾನಂದ ಸಂಶೋಧನ ಕೇಂದ್ರದ ನಿರ್ದೇಶಕ ಡಾ. ಶ್ರೀಧರ್ ಹೆಚ್. ಜಿ. ಮಾತನಾಡಿ, ಅಧ್ಯಾಪಕರ ಜ್ಞಾನದ ಜೊತೆಗೆ ಅವರ ಹಾವ ಭಾವ, ಆಂಗಿಕ ಭಾಷೆ, ಮಾತು ಕೂಡ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ಎರಡು ಕಣ್ಣುಗಳು ಐವತ್ತು ವಿದ್ಯಾರ್ಥಿಗಳನ್ನು ಗಮನಿಸುತ್ತಿದ್ದರೆ, ಅವರ ನೂರು ಕಣ್ಣುಗಳು ನಮ್ಮನ್ನೇ ನೋಡುತ್ತಿರುತ್ತದೆ ಎಂಬುವುದನ್ನು ನಾವು ಮರೆಯಬಾರದು. ತರಗತಿಗಳನ್ನು ಮಾಡುವಾಗ ನಮ್ಮ ನಡವಳಿಕೆ, ಭಾಷೆ ಬಳಕೆಗಳ ಮೇಲೆ ಒಳ್ಳೆಯ ಹಿಡಿತವಿರಬೇಕು. ಎಲ್ಲಕ್ಕಿಂತಲೂ ಮುಖ್ಯವಾಗಿ ನಾವು ಗಳಿಸಿದ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಯಾವಾಗ ಹೇಗೆ ನೀಡಬೇಕು ಎನ್ನುವ ಪರಿಜ್ಞಾನ ನಮಗಿರಬೇಕು ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ವಿ? ಗಣಪತಿ ಭಟ್ ಮಾತನಾಡಿ ಶುಭಹಾರೈಸಿದರು. ಐಕ್ಯುಎಸಿ ಘಟಕದ ಸಂಯೋಜಕ ಶಿವಪ್ರಸಾದ್ ಕೆ. ಎಸ್. ಕಾರ್ಯಕ್ರಮ ನಿರ್ವಹಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.