ಗಾಂಧಿ ಕಟ್ಟೆ ಬಳಿ ಕುಳಿತ ಅಯ್ಯಪ್ಪ ವೃತಧಾರಿಯ ಧರಣಿ ಮಿನಿ ವಿಧಾನ ಸೌಧದದಲ್ಲಿ ಕೊನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಎಸಿ ಭರವಸೆ ಹಿನ್ನಲೆ ಧರಣಿ ತಾತ್ಕಾಲಿಕ ಹಿಂತೆಗೆತ – ಮಂಜುನಾಥ್ ಕುಕ್ಕುಜೆ

ಪುತ್ತೂರು: ಧಾರ್ಮಿಕ ಧತ್ತಿ ಇಲಾಖೆಯ ಅಡಿಯಲ್ಲಿರುವ ಚೊಕ್ಕಾಡಿ ಉಳ್ಳಾಕುಲು ದೈವಸ್ಥಾನವನ್ನು ಮೂಲ ವಂಶಸ್ಥರಿಗೆ ಬಿಟ್ಟುಕೊಡಬೇಕು ಮತ್ತು ದೈವಸ್ಥಾನದ ಜೀರ್ಣೋದ್ಧಾರ ಮಾಡಬೇಕೆಂದು ನೀಡಿದ ಮನವಿಗೆ ಸಹಾಯಕ ಕಮೀಷನರ್ ಸ್ಥಳ ತನಿಖೆ ಮಾಡಲು ಬರಲಿಲ್ಲ ಎಂದು ಜ.6ರಂದು ಸಂಜೆಯಿಂದ ಪುತ್ತೂರು ಗಾಂಧಿ ಕಟ್ಟೆ ಬಳಿ ಅಮರಣಾಂತ ಉಪವಾಸ ಮಾಡುತ್ತೇನೆಂದು ಕುಳಿತ ಅಯ್ಯಪ್ಪ ವೃತಧಾರಿ ಜ.7ರಂದು ಬೆಳಿಗ್ಗೆ ಮಿನಿ ವಿಧಾನ ಸೌಧಕ್ಕೆ ತೆರಳಿ ಅಲ್ಲಿ ಕಚೇರಿ ಮುಂದೆ ಧರಣಿ ಕುಳಿತವರು ಎಸಿ ನೀಡಿದ ಭರವಸೆ ಮತ್ತು ಕೋವಿಡ್ -19 ರೂಪಾಂತರಕ್ಕೆ ಸರಕಾರದ ಮಾರ್ಗಸೂಚಿಯಂತೆ ಧರಣಿ ಹಿಂಪಡೆದಿದ್ದಾರೆ.

ಸುಳ್ಯ ಅಮರಮುಡ್ನೂರು ಗ್ರಾಮದ ಹಿಂದುಳಿದ ವರ್ಗಗಳ ಅನುಸೂಚಿತ ಜಾತಿಗಳ ಬುಡಕಟ್ಟು ಜನಾಂಗದ ಜಾಗೃತಿ ಸಮಿತಿಯ ನಾಮ ನಿರ್ದೇಶಿತ ಸದಸ್ಯರೂ ಅಯ್ಯಪ್ಪ ವೃತಧಾರಿಯೂ ಆಗಿರುವ ಮಂಜುನಾಥ್ ಕುಕ್ಕುಜೆ ಎಂಬವರು ದೈವಸ್ಥಾನದ ಜಾಗದ ಸ್ಥಳ ತನಿಖೆಗೆ ಸಹಾಯಕ ಕಮೀಷನರ್ ಬರಬೇಕೆಂದು ಪಟ್ಟು ಹಿಡಿದು ಪುತ್ತೂರು ಗಾಂಧಿ ಕಟ್ಟೆಯಲ್ಲಿ ಅಮರಣಾಂತ ಉಪವಾಸ ಕೈಗೊಂಡಿದ್ದರು. ಆದರೆ ಅವರು ಜ.7ರಂದು ಬೆಳಿಗ್ಗೆ ತನ್ನ ಧರಣಿಯನ್ನು ಮಿನಿ ವಿಧಾನ ಸೌಧಕ್ಕೆ ಸ್ಥಳಾಂತರಿಸಿದ್ದರು. ಬೆಳಿಗ್ಗೆ ಸಹಾಯಕ ಕಮೀಷನರ್ ಅವರಲ್ಲಿ ತನ್ನ ಮನವಿಯಲ್ಲಿ ಮುಂದಿಟ್ಟಾಗ ಸ್ಥಳ ತನಿಖೆಗೆ ಬರುವುದಾಗಿ ಭರವಸೆ ನೀಡಿದ ಮತ್ತು ಕೋವಿಡ್-19 3ನೇ ಅಲೆಯ ರೂಪಾಂತರಕ್ಕೆ ಸಂಬಂಧಿಸಿ ಸರಕಾರದ ಮಾರ್ಗಸೂಚಿಯಂತೆ ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ.

ತಾತ್ಕಾಲಿಕವಾಗಿ ಧರಣಿ ಹಿಂಪಡೆದಿದ್ದೇನೆ
‘ನಾನು ರಾತ್ರಿ ಗಾಂಧಿ ಕಟ್ಟೆಯ ಬಳಿ ಅಮರಣಾಂತ ಉಪವಾಸ ಕೈಗೊಂಡಿದ್ದೆ. ಮಧ್ಯ ರಾತ್ರಿ ಪೊಲೀಸರು ಬಂದು ನನ್ನನ್ನು ಮಿನಿ ವಿಧಾನ ಸೌಧದಲ್ಲ ಕುಳಿತು ಕೊಳ್ಳಲು ಹೇಳಿದ್ದಾರೆ. ಹಾಗೆ ನಾನು ಅಲ್ಲಿ ಹೋಗಿ ಧರಣಿ ನಿರತರನಾದೆ. ಬೆಳಿಗ್ಗೆ ಸಹಾಯಕ ಕಮೀಷನರ್ ಅವರು ಬಂದು ನಾನು ಸ್ಥಳ ತನಿಖೆಗೆ ಬರುವುದಿಲ್ಲ ಎಂದು ಎಲ್ಲೂ ಹೇಳಿದಲ್ಲ. ಬರುತ್ತೇನೆಂದು ಹೇಳಿದ ಮೇಲೆಯೂ ಇಲ್ಲಿ ಧರಣಿ ಯಾಕೆ ಕೂತಿರುವುದು ಸರಿಯಲ್ಲ ಎಂದಿದ್ದಾರೆ. ಈ ನಡುವೆ ಕೋವಿಡ್ ಮಾರ್ಗಸೂಚಿಯಂತೆ ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆದು ಮುಂದಿನ ದಿನ ಮೇಲಾಧಿಕಾರಿಗಳಿಗೆ ವಿಚಾರ ಪ್ರಸ್ತಾಪ ಮಾಡಿ ಸ್ಪಂದನೆ ಸಿಗದಿದ್ದಲ್ಲಿ ಧರಣಿ ಮಾಡುತ್ತೇನೆ ಎಂದು ಮಂಜುನಾಥ್ ಕುಕ್ಕುಜೆ ಅವರು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.