ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಗೆ ಭಾರತೀಯ ಸೇನೆಯ ರೆಜೆಮೆಂಟಲ್ ಮೆಡಿಕಲ್‌ ಆಫೀಸರ್ ಭೇಟಿ

0

ಪುತ್ತೂರು:  ಜನವರಿ ೬ ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಗೆ ಶಾಲೆಯ ಹಿರಿಯ ವಿದ್ಯಾರ್ಥಿ ಹಾಗೂ ಪ್ರಸ್ತುತ ಭಾರತೀಯ ಸೇನೆಯ ೧೫ನೇ ಬೆಟಾಲಿಯನ್‌ನ ಜಾಟ್‌ರೆಜಿಮೆಡ್‌ನ ಮೇಡಿಕಲ್‌ ಆಫೀಸರ್, ಪ್ರಸ್ತುತ ಕಾರ್ಗಿಲ್ ಬೆಟಾಲಿಯನ್ ಸೆಕ್ಟರ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ. ಅನಿತೇಜ್‌ರಾವ್‌ರವರು ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿದರು.

ನಂತರ ಮಾತನಾಡಿದಅವರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಳೆದ ಬಾಲ್ಯದ ದಿನಗಳು ನಿಜಕ್ಕೂಅದ್ಭುತವಾದುದು, ಇಲ್ಲಿನ ಆಚಾರ-ವಿಚಾರ , ಶಿಕ್ಷಕರ ಮಾರ್ಗದರ್ಶನ , ಸಂಸ್ಕಾರ, ಸಂಸ್ಕೃತಿಗಳು ಇಂದು ನನ್ನನು ಈ ಮಟ್ಟಕ್ಕೆ ಏರುವುದಕ್ಕೆ ಕಾರಣವಾಗಿದೆ. ನಿಜಕ್ಕೂ ನನ್ನನ್ನು ತಿದ್ದಿತೀಡಿ ನನ್ನನ್ನು ಆರ್ಶಿವದಿಸಿ, ಮಾರ್ಗದರ್ಶನ ನೀಡಿದ ಎಲ್ಲಾ ಅಧ್ಯಾಪಕರ ವೃಂದಕ್ಕೆ ಚಿರಖುಣಿಯಾಗಿದ್ದೇನೆ ಎಂದು ಹೇಳಿದರು. ನಂತರ ಶಾಲಾ ವತಿಯಿಂದ ಸನ್ಮಾನಿಸಿ ಶುಭ ಹಾರೈಸಲಾಯಿತು. ವೇದಿಕೆಯಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಕೃಷ್ಣ ಮೋಹನ್, ಹಿರಿಯ ಶಿಕ್ಷಕರಾದ  ಪ್ರಶಾಂತ್ ಹಾಗೂ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ, ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರಾರ್ಥಿಸಿ, ಶಿಕ್ಷಕಿ ಅನುರಾಧರವರು ವಂದಿಸಿದರು.

LEAVE A REPLY

Please enter your comment!
Please enter your name here