ಕಿಲ್ಲೆ ಮೈದಾನದಲ್ಲಿ ನಡೆದ ಶಾಂತಿ-ಸೌಹಾರ್ದತೆಯ ಕ್ರಿಕೆಟ್ ಹವಾ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಅಮರ್ ಅಕ್ಬರ್ ಅಂತೋನಿ ಟ್ರೋಫಿಗೆ ಸಂಭ್ರಮದ ತೆರೆ
  • ಆರು ದಿನಗಳ ನಿರಂತರ ಕ್ರಿಕೆಟ್ | ಜಿದ್ದಾಜಿದ್ದಿನ ಕ್ರಿಕೆಟ್ | ಐದು ಸಾವಿರಕ್ಕೂ ಮಿಕ್ಕಿ ಕ್ರಿಕೆಟ್ ಪ್ರಿಯರು

ಪುತ್ತೂರು: ಸಿಟಿ ಫ್ರೆಂಡ್ಸ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಪುತ್ತೂರು ಇದರ ಗೌರವಾಧ್ಯಕ್ಷರಾದ ಮನ್ವಿತ್ ರೈ ಒಲೆಮುಂಡೋವುರವರ ಸಾರಥ್ಯದಲ್ಲಿ, ೨೦೧೧ರಲ್ಲಿ ಕ್ರೀಡಾ ಪ್ರೇಮಿ ಉದ್ಯಮಿ ರಝಾಕ್ ಬಿ.ಎಚ್‌ರವರ ಆಯೋಜನೆ ಮೂಲಕ ಪುತ್ತೂರಿನಲ್ಲಿ ಶಾಂತಿ-ಸೌಹಾರ್ದತೆಯ ಹೆಸರಿನಲ್ಲಿ ಹುಟ್ಟುಹಾಕಿದ ಅಮರ್ ಅಕ್ಬರ್ ಅಂತೋನಿ ಅಂಡರ್ ಆರ್ಮ್ ಕ್ರಿಕೆಟ್ ಟ್ರೋಫಿಗೆ ಇದೀಗ ೧೧ ವರ್ಷದ ಸಂಭ್ರಮವಾಗಿದ್ದು, ಈ ಹಿನ್ನೆಲೆಯಲ್ಲಿ ಕಿಲ್ಲೆ ಮೈದಾನದಲ್ಲಿ ಆರು ದಿನಗಳ ಕಾಲ ಹಗಲು-ರಾತ್ರಿ `ಅಮರ್ ಅಕ್ಬರ್ ಅಂತೋನಿ ಟ್ರೋಪಿ’, ಗ್ರಾಮಾಂತರ ತಂಡಗಳಿಗೆ `ಹಳ್ಳಿ ಹುಡುಗ್ರು ಪೇಟೆ ಕಪ್’, ವಿವಿಧ ಸರಕಾರಿ ಇಲಾಖೆಗಳ `ಸ್ನೇಹ ಸೌಹಾರ್ದ ಟ್ರೋಫಿ’ ಕ್ರಿಕೆಟ್ ಪಂದ್ಯಾಟವು ಜ.೨ ರಂದು ಯಶಸ್ವಿಯಾಗಿ ಸಂಭ್ರಮದ ತೆರೆ ಕಂಡಿದೆ.

ಸಿಟಿ ಫ್ರೆಂಡ್ಸ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಪುತ್ತೂರು, ಕ್ಲಾಸಿಕ್ ಫ್ರೆಂಡ್ಸ್ ಸೌದಿ ಅರೇಬಿಯಾ ಇವುಗಳ ಆಶ್ರಯದಲ್ಲಿ ನಡೆದ ಈ ಪಂದ್ಯಾಟವು ಪುತ್ತೂರಿನ ಕ್ರೀಡಾ ಪ್ರೇಮಿಗಳಲ್ಲಿ ಹವಾ ಸೃಷ್ಟಿ ಮಾಡಿದೆ. ಪಂದ್ಯಾವಳಿಯಲ್ಲಿ ಭಾಗವಹಿಸಲು ಸುಮಾರು ೬೦ಕ್ಕೂ ಮಿಕ್ಕಿ ತಂಡಗಳು ಅಮರ್ ಅಕ್ಬರ್ ಅಂತೋನಿ ಟ್ರೋಫಿಯಲ್ಲಿ ಭಾಗವಹಿಸಿತ್ತು. ಅಲ್ಲದೆ ಸ್ನೇಹ ಸೌಹಾರ್ದ ಟ್ರೋಫಿಗಾಗಿ ವಿವಿಧ ಇಲಾಖೆಗಳಿಂದ ಆಯ್ದ ೮ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿ ಜಿದ್ದಾಜಿದ್ದಿನ ಹಣಾಹಣಿ ಸೃಷ್ಟಿ ಮಾಡಲು ಕಾರಣವಾಗಿದೆ. ಪುತ್ತೂರಿನ ಸೌಹಾರ್ದತೆಯನ್ನು ಎತ್ತಿ ಹಿಡಿದ ಪಂದ್ಯಾವಳಿ ಎಂಬಂತೆ ಪಂದ್ಯಾಕೂಟವು ನಿರಂತರ ಯಶಸ್ವಿನತ್ತ ಸಾಗಿತ್ತು.

ಅಮರ್ ಅಕ್ಬರ್ ಅಂತೋನಿ ರೋಲಿಂಗ್ ಟ್ರೋಫಿ ಪಂದ್ಯಾವಳಿಯಲ್ಲಿ ಯಂಗ್ ಫ್ರೆಂಡ್ಸ್ ವಾಮದಪದವು ವಿನ್ನರ್‍ಸ್, ಬಂಟ್ವಾಳ ಜಿ.ಡಿ ಬಾಯ್ಸ್ ರನ್ನರ್ಸ್, ಹಳ್ಳಿ ಹುಡುಗ್ರು ಪೇಟೆ ಕಪ್ ಪಂದ್ಯಾವಳಿಯಲ್ಲಿ ಅರಮನೆ ವಾರಿಯರ್‍ಸ್ ಸಂಪ್ಯ ವಿನ್ನರ್‍ಸ್, ವೈಎಫ್‌ಸಿ ಮುಕ್ವೆ ರನ್ನರ್ಸ್, ಕಿಲ್ಲೆ ಕಪ್ ಪಂದ್ಯಾವಳಿಯಲ್ಲಿ ಇಚ್ಛಾ ಯುನೈಟೆಡ್ ವಿನ್ನರ್‍ಸ್, ವಿಜಯಲಕ್ಷ್ಮೀ ಫ್ರೆಂಡ್ಸ್ ಕ್ರಿಕೆಟರ್‍ಸ್ ರನ್ನರ್ಸ್ ಹಾಗೂ ಸ್ನೇಹ ಸೌಹಾರ್ದ ಟ್ರೋಫಿ ಪಂದ್ಯಾವಳಿಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಇಲೆವೆನ್ ವಿನ್ನರ್‍ಸ್, ಪೊಲೀಸ್ ಇಲೆವೆನ್ ರನ್ನರ್ಸ್ ಆಗಿ ಹೊರಹೊಮ್ಮಿತು.

ಕಿಲ್ಲೆ ಪ್ರತಿಷ್ಟಾನ ಸಮಿತಿಯ ಅಧ್ಯಕ್ಷ ಕಡಮಜಲು ಸುಭಾಶ್ ರೈ ಹಾಗೂ ಪುತ್ತೂರು ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್‌ರವರು ಪಂದ್ಯಾಕೂಟವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಗಣ್ಯರಾದ ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ರಾಜ್ಯ ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮರಿಲ್ ರೇಗೋ, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಗಿರೀಶ್ ಆಳ್ವ, ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ನಗರಸಭಾ ಸದಸ್ಯರಾದ ವಿದ್ಯಾ ಆರ್.ಗೌರಿ, ಯಶೋಧ ಹರೀಶ್, ಗೌರಿ ಬನ್ನೂರು, ಯೂಸುಫ್ ಡ್ರೀಮ್ಸ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಎನ್.ಕೆ ಜಗನ್ನೀವಾಸ್ ರಾವ್, ಸಿಟಿ ಫ್ರೆಂಡ್ಸ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಪುತ್ತೂರು ಅಧ್ಯಕ್ಷ ಶಮ್ಮೂನ್ ಪರ್ಲಡ್ಕ, ಉಪಾಧ್ಯಕ್ಷ ಉದ್ಯಮಿ ಅಶೋಕ್ ರಾವ್ ಬಪ್ಪಳಿಗೆ, ಸಂಚಾಲಕ ರಝಾಕ್ ಬಿ.ಎಚ್, ಮಾಜಿ ಗೌರವಾಧ್ಯಕ್ಷ ಹರೀಶ್ ಕಾಮತ್, ಅರುಣಾ ಬಪ್ಪಳಿಗೆ, ಸಾದಿಕ್ ಬಪ್ಪಳಿಗೆ, ಇರ್ಫಾನ್ ಬಪ್ಪಳಿಗೆ, ಇಕ್ಬಾಲ್, ಶಮಾಮ್, ವೈದ್ಯಕೀಯ ಸಮಿತಿಯ ನಝೀರ್ ಬಲ್ನಾಡು, ಹಂಝ ಬಪ್ಪಳಿಗೆ, ಅಶ್ರಫ್ ಬನ್ನೂರು, ಅನೀಶ್ ಮೋನು ಬಪ್ಪಳಿಗೆ, ಪೊಪ್ಯುಲರ್ ಸ್ವೀಟ್ಸ್‌ನ ನಾಗೇಂದ್ರ ಕಾಮತ್, ನರೇಂದ್ರ ಕಾಮತ್, ಸೂಫಿ ಬಪ್ಪಳಿಗೆ, ಹೆಗ್ಡೆ ಪ್ಲಾಸ್ಟಿಕ್ಸ್‌ನ ದಾಮೋದರ್ ಹೆಗ್ಡೆ, ಫ್ಲವರ್ ಗೈಯ್ಸ್‌ನ ಹರೀಶ್ ಕುಮಾರ್ ಸಹಿತ ಹಲವರು ಆಗಮಿಸಿ ಶುಭ ಹಾರೈಸಿದ್ದಾರೆ.

ತೀರ್ಪುಗಾರರಾಗಿ ಸಲೀಂ ಬಪ್ಪಳಿಗೆ, ಇಮ್ಮಿ ಉಪ್ಪಿನಂಗಡಿ, ಮೋನು ಕೂರ್ನಡ್ಕ, ಪುರುಷೋತ್ತಮ್ ಬೆಳ್ಳಾರೆ, ರವಿ ಕೃಷ್ಣನಗರ, ವೀಕ್ಷಕ ವಿವರಣೆಗಾರರಾಗಿ ಶಾಫಿ ಪರ್ಪುಂಜ, ಅಕ್ಬರ್ ಆಲಿ ನಂದಾವರ, ರಮೇಶ್ ಬೆಳ್ಳಾರೆ, ಸ್ಕೋರರ್ ಆಗಿ ಯಾಹ್ಯಾ ಮುಕ್ವೆ, ಪೈಜಲ್ ಸಾಲ್ಮರ, ಸಲೀಂ ಸಾಲ್ಮರರವರು ಸಹಕರಿಸಿದರು. ಆಯೋಜಕ ರಝಾಕ್ ಬಿ.ಎಚ್ ಸ್ವಾಗತಿಸಿ, ದರ್ಬೆ ಲಿಟ್ಲ್ ಫ್ಲವರ್ ಶಾಲೆಯ ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು. ನಿರಂತರ ಆರು ದಿನಗಳ ಹಗಲು ರಾತ್ರಿಯ ಈ ಪಂದ್ಯಾಕೂಟದಲ್ಲಿ ಸುಮಾರು ಐದು ಸಾವಿರಕ್ಕೂ ಮಿಕ್ಕಿ ಕ್ರಿಕೆಟ್ ಪ್ರಿಯರು ಕ್ರಿಕೆಟ್ ಪಂದ್ಯಾಟವನ್ನು ವೀಕ್ಷಿಸಿದ್ದಾರೆ.

ಜನಸ್ನೇಹಿ ಪುತ್ತೂರ ಮುತ್ತು ಗೌರವ ಪ್ರಶಸ್ತಿ..
ಈ ಸಂದರ್ಭದಲ್ಲಿ ಉದ್ಯಮಿ ಮಹಮ್ಮದ್ ಹಾಜಿ ಕುಕ್ಕುವಳ್ಳಿ, ಡಿವೈಎಸ್‌ಪಿ ಡಾ.ಗಾನ ಪಿ.ಕುಮಾರ್, ಮಹಿಳಾ ಠಾಣಾ ಎಸ್.ಐ ತಿಮ್ಮಪ್ಪ ಕಾಯ್ಕ, ಐಎಂಎ ಅಧ್ಯಕ್ಷ ಡಾ.ನರಸಿಂಹ ಶರ್ಮ, ವೈದ್ಯರುಗಳಾದ ಡಾ.ಜೆ.ಸಿ ಅಡಿಗ, ಡಾ.ಶ್ರೀಕಾಂತ್ ರಾವ್, ಡಾ.ರವಿನಾರಾಯಣ ಮುರ, ಡಾ.ಸುರೇಶ್ ಪುತ್ತೂರಾಯ, ಡಾ.ಪ್ರದೀಪ್ ಬೋರ್ಕರ್, ಡಾ.ಅಜಯ್, ಕೆಪಿಸಿಸಿ ಸಂಯೋಜಕ ಹೇಮನಾಥ ಶೆಟ್ಟಿ ಕಾವು, ಮೆಸ್ಕಾಂನ ರಾಮಚಂದ್ರ, ತಿರುಮಲ ಹೋಂಡಾದ ಕೃಷ್ಣಕಿಶೋರ್ ಎನ್.ಟಿರವರಿಗೆ ಜನಸ್ನೇಹಿ ಪುತ್ತೂರ ಮುತ್ತು ಗೌರವ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಅಲ್ಲದೆ ಬಾಂಧವ್ಯ ಟ್ರೋಫಿಯ ಸಂಘಟಕರಾದ ಕಾನ್‌ಸ್ಟೇಬಲ್‌ಗಳಾದ ಸ್ಕರಿಯ, ಪ್ರಶಾಂತ್ ರೈ ಹಾಗೂ ಸುದ್ದಿ ಬಿಡುಗಡೆಯ ಫಾರೂಕ್ ಶೇಖ್‌ರವರನ್ನು ಅಭಿನಂದಿಸಲಾಯಿತು.

ಸೈನಿಕರಿಗೆ ಸನ್ಮಾನ..
ಆದಿತ್ಯವಾರ ಮಾಜಿ ಸೈನಿಕರ ಸಂಘದ ಅಧ್ಯಕ್ಷ ರಾಮಚಂದ್ರ ಪುಚ್ಚೇರಿ, ನಿವೃತ್ತ ಸೈನಿಕರಾದ ರಮೇಶ್‌ಬಾಬು, ಚಿದಾನಂದ ನಾಡಾಜೆ, ಜ್ಯೋ ಡಿ’ಸೋಜ, ವಸಂತ್, ಸುಂದರ ಗೌಡ, ನಾಗಪ್ಪ ಗೌಡ, ಶಿವಪ್ಪ ಗೌಡ ಬಿ, ಭಾಸ್ಕರ್ ನಾಕ್, ಅಮ್ಮಣ್ಣ ರೈ, ರಾಧಾಕೃಷ್ಣ ಗೌಡ, ಜಗನ್ನಾಥ್, ಸುಬ್ರಹ್ಮಣ್ಯ ಕೆಮ್ಮಿಂಜೆ, ಸುರೇಶ್ ಕೆ.ಯು, ಗಣೇಶ್ ಡಿ.ಎಸ್‌ರವರನ್ನು ಮೈದಾನದ ಮಧ್ಯಭಾಗದಲ್ಲಿ ಶಾಲು ಹೊದಿಸಿ ಗೌರವಾರ್ಪಣೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ನಿವೃತ್ತ ಸೈನಿಕರ ನೇತೃತ್ವದಲ್ಲಿ ಅಮರ್ ಜವಾನ್ ಜ್ಯೋತಿಗೆ ದೀಪ ಸಮರ್ಪಿಸಿ ಬಿಗ್ ಸೆಲ್ಯೂಟ್‌ನೊಂದಿಗೆ ಗೌರವ ಸಲ್ಲಿಸಲಾಯಿತು.

ಅಮರ್ ಅಕ್ಬರ್ ಅಂತೋನಿ ಟ್ರೋಫಿ: ವಾಮದಪದವು ವಿನ್ನರ್‍ಸ್, ಬಂಟ್ವಾಳ ರನ್ನರ್ಸ್
ಹಳ್ಳಿ ಹುಡುಗ್ರು ಪೇಟೆ ಕಪ್: ಅರಮನೆ ವಾರಿಯರ್‍ಸ್ ಸಂಪ್ಯ ವಿನ್ನರ್‍ಸ್, ವೈಎಫ್‌ಸಿ ಮುಕ್ವೆ ರನ್ನರ್ಸ್
ಕಿಲ್ಲೆ ಕಪ್: ಇಚ್ಛಾ ಯುನೈಟೆಡ್ ವಿನ್ನರ್‍ಸ್, ವಿಜಯಲಕ್ಷ್ಮೀ ಫ್ರೆಂಡ್ಸ್ ರನ್ನರ್ಸ್
ಸ್ನೇಹ ಸೌಹಾರ್ದ ಟ್ರೋಫಿ: ದೈ.ಶಿ.ಶಿ ಇಲೆವೆನ್ ವಿನ್ನರ್‍ಸ್, ಪೊಲೀಸ್ ಇಲೆವೆನ್ ರನ್ನರ್ಸ್

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.