ಸಾಲೆತ್ತೂರು ಮದುವೆ ಮನೆಯಲ್ಲಿ  ಮದುಮಗನಿಗೆ ಕೊರಗಜ್ಜನನ್ನು ಹೋಲುವ ವೇಷ ಧರಿಸಿ ಕುಣಿಸಿದ ವಿಚಾರ

0

  • ವಿಶ್ವಹಿಂದೂ ಪರಿಷತ್,  ಬಜರಂಗದಳದಿಂದ ಖಂಡನೆ, ಆರೋಪಿಯನ್ನು ಬಂಧಿಸದಿದ್ದಲ್ಲಿ ಠಾಣೆಗೆ ಮುತ್ತಿಗೆ ನಿರ್ಧಾರ

ವಿಟ್ಲ: ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಘಟನೆಯೊಂದು ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದಲ್ಲಿ ನಡೆದಿದ್ದು, ಈ ಘಟನೆಯನ್ನು‌ವಿರೋಧಿಸಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ವತಿಯಿಂದ ವಿಟ್ಲದಲ್ಲಿ ಸಭೆ ನಡೆಸಲಾಯಿತು.


ಸಭೆಯಲ್ಲಿ ಘಟನೆಯನ್ನು  ತೀವ್ರವಾಗಿ ಖಂಡಿಸಲಾಯಿತು ಮಾತ್ರವಲ್ಲದೆ ಆರೋಪಿಗಳನ್ನು ಶೀಘ್ರ ಬಂಧಿಸದಿದ್ದಲ್ಲಿ ಠಾಣೆಗೆ ಮುತ್ತಿಗೆಹಾಕುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಕೊಳ್ನಾಡು ಗ್ರಾಮದ ಅಝೀಝ್ ಎಂಬವರ ಮಗಳ ಮದುವೆ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಉಪ್ಪಳ ಸಮೀಪದ ಯುವಕನ ಜೊತೆ ನಡೆದಿತ್ತು. ವಿವಾಹ ಸಮಾರಂಭ ಮಧ್ಯಾಹ್ನ ನಡೆದಿತ್ತು. ಅದೇ ದಿನ ರಾತ್ರಿ ಮುಸ್ಲಿಂ ಸಂಪ್ರದಾಯದಂತೆ ವರ ತನ್ನ 50ಕ್ಕೂ ಹೆಚ್ಚು ಸ್ನೇಹಿತರೊಂದಿಗೆ ವಧುವಿನ ಮನೆಗೆ ಔತಣಕೂಟಕ್ಕೆ ಆಗಮಿಸಿದ್ದರು. ರಾತ್ರಿ ವೇಳೆ  ಆಗಮಿಸಿದ ವರನ ಬಳಗದವರು ವಧುವಿನ ಮನೆ ಪಕ್ಕದ ರಸ್ತೆಯಲ್ಲಿ ವರನಿಗೆ ಅಡಿಕೆ ಹಾಳೆಯ ಟೋಪಿ ಹಾಕಿ ಮೆರವಣಿಗೆಯಲ್ಲಿ ಕರೆತಂದಿದ್ದರು. ಬಳಿಕ ಮದುಮಗನಿಗೆ ಬಣ್ಣ ಹಚ್ಚಿ ಕೊರಗಜ್ಜನನ್ನು ಹೋಲುವ ವೇಶ ದರಿಸಿ ಕುಣಿಸಿದ ದೃಶ್ಯವೊಂದು  ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ಸಾರ್ವಜನಿಕರ ವ್ಯಾಪಕ ಆಕ್ರೋಶಕ್ಕೂ ಕಾರಣವಾಗಿತ್ತು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ವಿಟ್ಲ ಪ್ರಖಂಡದ ಅಧ್ಯಕ್ಷರಾದ ಪದ್ಮನಾಭ ಕಟ್ಟೆ , ಸಂಚಾಲಕರಾದ ಚಂದ್ರಹಾಸ ಕನ್ಯಾನ ಹಾಗೂ ಮತ್ತಿತರ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here