ಪುತ್ತೂರು: ಮುಖಾರಿ ಸಮುದಾಯವನ್ನು ಕರ್ನಾಟಕ ಸರಕರದ ಜಾತಿಗಳ ಪಟ್ಟಿಯಲ್ಲಿ ಸೇರಿಸುವ ಕುರಿತು ಸದನದಲ್ಲಿ ಅಂಗೀಕರ ನೀಡುವ ಕುರಿತು ಸರಕಾರ ನಿರ್ಧಾರ ಕೈಗೊಳ್ಳಲಿದ ಎಂದು ಹಿಂದುಳಿದ ವರ್ಗಗಳ ಆಯೋಗದ ರಾಜ್ಯಾಧ್ಯಕ್ಷ ಜಯಪ್ರಕಾಸ್ ಹೆಗ್ಡೆ ಅವರು ಹೇಳಿದರು.
ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಇತ್ತೀಚೆಗೆ ನಡೆದ ಮುಖಾರಿ ಸಂಘದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ಆರಂಭದಲ್ಲಿ ಮುಖಾರಿ ಸಮಾಜದದವರ ಮನೆಗಳಿಗೆ ಆಯೋಗದ ಸದಸ್ಯರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಸಭೆಯಲ್ಲಿ ಅವರು ಮಾತನಾಡಿ ಮುಖಾರಿ ಮುದಾಯದವರ ಪಟ್ಟಿಯನ್ನು ಸರಕಾರದ ಜಾತಿಗಳ ಪಟ್ಟಿಯಲ್ಲಿ ಸೇರಿಲು ಎಲ್ಲಾ ಪೂರಕ ವಿಚಾರಗಳ ಬಗ್ಗೆ ಸಭೆಯಲ್ಲಿ ಮಾತುಕತೆ ನಡೆಸಿ, ಮುಂದಿನ ದಿನಗಳಲ್ಲಿ ಆಯೋಗಕ್ಕೆ ಒದಗಿಸಿ ಕೊಡುವ ಬಗ್ಗೆ ಮಾತನಾಡಿದರು. ಎಲ್ಲಾ ವರದಿಗಳ ಆನುಸಾರ ಮುಂದೆ ಸದನದಲ್ಲಿ ಅಂಗೀಕರಾ ನೀಡುವ ಬಗ್ಗೆ ಸರಕಾರ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು. ಸಭೆಯಲ್ಲಿ ಮುಖಾರಿ ಸಂಘದ ಅಧ್ಯಕ್ಷ ಶಂಕರ ಮುಖಾರಿ ಪಟ್ರೋಡಿ, ಕಾರ್ಯದರ್ಶಿ ಶ್ರೀನಿವಾಸ ಹಿರಿಯಣ, ಹಿಂದುಳಿದ ಆಯೋಗ ಸದಸ್ಯರಾದ ಕೆ.ಟಿ. ಸುವರ್ಣ, ಅರುಣ್ ಕುಮಾರ್, ಡಾ.ಎಂ.ಕೆ.ಪ್ರಸಾದ್, ಕೃಷಿಕರಾದ ಕೃಷ್ಣ ಭಟ್ ಮುಂಡ್ಯ, ಉದ್ಯಮಿ ಸಹಜ್ ರೈ ಬಳಜ್ಜ, ಮುಖಾರಿ ಸಂಘದ ಸಮಾಜ ಬಾಂಧವರು ಹಾಜರಿದ್ದರು.