ಪ್ರಧಾನಿಯವರ ಯೋಗಕ್ಷೇಮಕ್ಕಾಗಿ ಬಿಜೆಪಿ ವತಿಯಿಂದ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಪ್ರಧಾನಿ ನರೇಂದ್ರ ಮೋದಿಯವರಿಗೆ ಪಂಜಾಬ್‌ನಲ್ಲಿ ನೀಡಿದ ಭದ್ರತಾ ಲೋಪದಿಂದ ಅವರ ಜೀವಕ್ಕೆ ಅಪಾಯ ತಂದೊಡ್ಡುವ ಷಡ್ಯಂತ್ರದ ಬಗ್ಗೆ ಕಳವಳ ವ್ಯಕ್ತಪಡಿಸಿ ವಿಶ್ವ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಪ್ರಧಾನಿಯವರಿಗೆ ಶ್ರೀ ದೇವರ ಕೃಪಾ ರಕ್ಷೆಯನ್ನು ಬಯಸಿ ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾ ಪುತ್ತೂರು ಗ್ರಾಮಾಂತರ ಮಂಡಲದ ವತಿಯಿಂದ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ಶುಕ್ರವಾರ ರಾತ್ರಿ ವಿಶೇಷ ಪ್ರಾರ್ಥನೆ ನೆರವೇರಿಸಲಾಯಿತು.

ಶ್ರೀ ದೇವಳದ ಅರ್ಚಕ ಶಂಕರ್ ನಾರಾಯಣ ಭಟ್‌ರವರು ಪ್ರಾರ್ಥನೆ ನೆರವೇರಿಸಿ, ದೇಶದ ಜನತೆಯ ಅಭ್ಯುದಯಕ್ಕಾಗಿ ಹಗಳಿರುಲು ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ನಡೆಯುವ ಯಾವುದೇ ಕುಟಿಲ ಯತ್ನಗಳು ವಿಫಲವಾಗಿ ಅವರಿಗೆ ದೈವೀ ಶಕ್ತಿಯ ಕೃಪಾ ಕಟಾಕ್ಷ ಸದಾ ಇರುವಂತಾಗಲಿ. ದೇಶವಾಸಿ ಕೋಟ್ಯಾಂತರ ಜನತೆಯ ಪ್ರಾರ್ಥನೆಯ ಬಲ ಅವರನ್ನು ಸದಾ ಕಾಪಾಡಲಿ ಎಂದು ಶ್ರೀ ದೇವರಲ್ಲಿ ಪ್ರಾರ್ಥಿಸಿದರು.

ಬಿಜೆಪಿ ಹಿಂದುಳಿದ ಮೋರ್ಚಾದ ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷ ಸುನಿಲ್ ದಡ್ಡು ನೇತೃತ್ವದಲ್ಲಿ ಈ ಸಂದರ್ಭ ಬಿಜೆಪಿ ಮುಖಂಡರಾದ ಸುರೇಶ್ ಅತ್ರಮಜಲು, ಮುಕುಂದ ಗೌಡ, ಉಮೇಶ್ ಶೆಣೈ, ಸುಜಾತ ಕೃಷ್ಣ ಆಚಾರ್ಯ, ಶೋಭಾ ದಯಾನಂದ್, ಸೌಮ್ಯ, ರುಕ್ಮಿಣಿ, ಚಂದ್ರಶೇಖರ್ ಮಡಿವಾಳ, ಪ್ರಸಾದ್ ಭಂಡಾರಿ, ಕೆ ಜಗದೀಶ್ ಶೆಟ್ಟಿ, ಗಂಗಾಧರ ಟೈಲರ್, ಜಯಂತ ಪೊರೋಳಿ, ಸುಧಾಕರ ಶೆಟ್ಟಿ, ರಾಜಗೋಪಾಲ ಹೆಗ್ಡೆ, ಚಿದಾನಂದ ಹಿರೆಬಂಡಾಡಿ, ರಾಜೀವ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.