ಓಮಿಕ್ರಾನ್ ಮುನ್ನೆಚ್ಚರಿಕೆ- ವೀಕೆಂಡ್ ಕರ್ಫ್ಯೂ

0

  • ಗ್ರಾಮಾಂತರ ಪ್ರದೇಶದಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು, ಜನಸಂಖ್ಯೆ ವಿರಳ

 

ಪುತ್ತೂರು: ಓಮಿಕ್ರಾನ್ ಮುನ್ನೆಚ್ಚರಿಕೆಯ ಕಾರಣದಿಂದಾಗಿ ರಾಜ್ಯ ಸರಕಾರ ಹೊರಡಿಸಿದ್ದ ವೀಕೆಂಡ್ ಕರ್ಫ್ಯೂಗೆ ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚಿನ ಬೆಂಬಲ ಕಂಡುಬಂದಂತೆ ಕಾಣಲಿಲ್ಲ, ಎಂದಿನಂತೆ ವ್ಯಾಪಾರ ವಹಿವಾಟುಗಳು ನಡೆದಿದೆಯಾದರೂ ಜನಸಂಖ್ಯೆ ಮಾತ್ರ ವಿರಳವಾಗಿತ್ತು. ದಿನಸಿ ಸೇರಿದಂತೆ ಕೆಲವು ಅಗತ್ಯದ ವ್ಯಾಪಾರ ಮಳಿಗೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತಾದರೂ ಬಹುತೇಕ ಎಲ್ಲಾ ವ್ಯಾಪಾರ ಮಳಿಗೆಗಳೂ ಓಪನ್ ಆಗಿರುವುದು ಕಂಡು ಬಂದಿತ್ತು. ಎರಡನೇ ಶನಿವಾರ ಆಗಿರುವುದರಿಂದ ಸರಕಾರಿ ಕಛೇರಿಗಳಿಗೆ ಬಂದ್ ಆಗಿದ್ದವು ಉಳಿದಂತೆ ವೀಕೆಂಡ್ ಕರ್ಫ್ಯೂನ ಹವಾ ಗ್ರಾಮಾಂತರ ಪ್ರದೇಶದಲ್ಲಿ ಕಂಡು ಬರಲಿಲ್ಲ. ವಾಹನ ಸಂಚಾರ ವಿರಳವಾಗಿತ್ತಾದರೂ ಸರಕಾರಿ ಬಸ್, ಆಟೋ, ಟ್ಯಾಕ್ಸಿ ಇತ್ಯಾದಿಗಳು ಎಂದಿನಂತೆ ಓಡಾಟ ನಡೆಸಿದ್ದವು.

 


ಜನಸಂಖ್ಯೆ ವಿರಳ
ಅಂಗಡಿಮುಂಗಟ್ಟುಗಳು ತೆರೆದಿದ್ದರೂ ಜನ ಸಂಖ್ಯೆ ಮಾತ್ರ ವಿರಳವಾಗಿತ್ತು. ಕುಂಬ್ರ ಪೇಟೆಯಲ್ಲಿ ಬೆರಳೆಣಿಕೆಯ ಜನರು ಮಾತ್ರ ಕಂಡುಬರುತ್ತಿದ್ದರು. ಜನ ಇಲ್ಲದೆ ಕುಂಬ್ರ ಜಂಕ್ಷನ್ ಬಿಕೋ ಎನ್ನುತ್ತಿತ್ತು.

 

LEAVE A REPLY

Please enter your comment!
Please enter your name here