ಉಪ್ಪಿನಂಗಡಿಯಲ್ಲಿ ಜನರ ಓಡಾಟ ವಿರಳ – ವ್ಯಾಪಾರವಿಲ್ಲದೆ ಬಣಗುಟ್ಟುತ್ತಿವೆ ಅಂಗಡಿಗಳು

0

ಉಪ್ಪಿನಂಗಡಿ: ವೀಕೆಂಡ್ ಕರ್ಫ್ಯೂನ ಮೊದಲ ದಿನವಾದ ಶನಿವಾರ ಉಪ್ಪಿನಂಗಡಿಯಲ್ಲಿ ಜನರ ಓಡಾಟ ತೀರಾ ವಿರಳವಾಗಿದ್ದು, ಇದರಿಂದಾಗಿ ಬಾಗಿಲು ತೆರೆಯಲು ಅವಕಾಶವಿದ್ದ ಅಂಗಡಿಗಳ ಬಾಗಿಲು ತೆರಿದಿದ್ದರೂ, ವ್ಯಾಪಾರವಿಲ್ಲದೆ ಬಣಗುಟ್ಟುವಂತಾಗಿದೆ.


ವೀಕೆಂಡ್ ಕರ್ಫ್ಯೂನ ದಿನ ದಿನಸಿ ಸಾಮಗ್ರಿ, ಮೀನು, ಮಾಂಸ ಸೇರಿದಂತೆ ಇನ್ನಿತರ ಮಾರಾಟಗಳ ಅಂಗಡಿಗಳನ್ನು ತೆರೆಯಲು ಜಿಲ್ಲಾಡಳಿತ ಅವಕಾಶ ನೀಡಿತ್ತು. ಅಲ್ಲದೇ, ಸಾರಿಗೆ ವ್ಯವಸ್ಥೆಗೂ ಯಾವುದೇ ನಿರ್ಬಂಧ ವಿಧಿಸಿರಲಿಲ್ಲ. ಆದರೆ ಬೆಳಗ್ಗಿನ ಹೊತ್ತು ಪೇಟೆಯಲ್ಲಿ ಸ್ವಲ್ಪ ಮಟ್ಟಿನ ಜನರ ಓಡಾಟ ಕಂಡು ಬಂದಿತ್ತಾದರೂ, ಆಮೇಲೆ ಜನರ ಸಂಖ್ಯೆ ತೀರಾ ವಿರಳವಾಯಿತು. ಬಾಗಿಲು ತೆರೆದಿದ್ದರೂ ಗ್ರಾಹಕರಿಲ್ಲದೆ, ಅಂಗಡಿಗಳಿಗೆ ಎಂದಿನ ವ್ಯಾಪಾರವಾಗಲಿಲ್ಲ. ಬಸ್‌ಗಳು ಪ್ರಯಾಣಿಕರಿಲ್ಲದೆ ಬಸ್ ನಿಲ್ದಾಣದಲ್ಲೇ ಬೀಡು ಬಿಡುವಂತಾಯಿತು. ಎರಡನೇ ಶನಿವಾರದ ರಜಾದಿನವಾದ ಕಾರಣ ಸರಕಾರಿ ಕಚೇರಿಗಳನ್ನೂ ಮುಚ್ಚಲಾಗಿತ್ತು. ವ್ಯಾಪಾರವಿಲ್ಲವೆಂದು ಕೆಲವು ಅಂಗಡಿಗಳವರು ಮಧ್ಯಾಹ್ನವಾಗುತ್ತಲೇ ಬಂದ್ ಮಾಡಿ ತೆರಳಿದರು. ರಾಷ್ಟ್ರೀಯ ಹೆದ್ದಾರಿಯಲ್ಲೂ ಎಂದಿನ ಜನಸಂಚಾರ ಕಂಡು ಬರಲಿಲ್ಲ. ವೀಕೆಂಡ್ ಕರ್ಫ್ಯೂ ಸಂದರ್ಭ ಕೆಲವು ಸೀಮಿತ ವ್ಯಾಪಾರಗಳಿಗೆ ಮಾತ್ರ ನಿರ್ಬಂಧವಿಧಿಸಿ ಉಳಿದೆಲ್ಲದ್ದಕ್ಕೂ ಅವಕಾಶ ನೀಡಿರುವುದು ಕೆಲವರ ಆಕ್ರೋಶಕ್ಕೂ ಕಾರಣವಾಯಿತ್ತಲ್ಲದೆ, ಇಂತಹ ಕರ್ಫ್ಯೂ ವಿಧಿಸಿದ್ದಾದರೂ ಏತಕ್ಕೆ ಎಂಬ ಗೊಂದಲ ಹಲವರದ್ದಾಗಿತ್ತು.

LEAVE A REPLY

Please enter your comment!
Please enter your name here