ವಿಟ್ಲದಲ್ಲಿ ವೀಕೆಂಡ್ ಕರ್ಫ್ಯೂವಿಗೆ  ಮಿಶ್ರ ಪ್ರತಿಕ್ರಿಯೆ: ಗ್ರಾಮೀಣ ಭಾಗಕ್ಕೆ ತಟ್ಟದ  ಬಿಸಿ..!!

0


ವಿಟ್ಲ: ಕೊರೊನಾ ಸೋಂಕು ನಿಯಂತ್ರಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದ ವಾರಾಂತ್ಯ ಕರ್ಫ್ಯೂ ವಿಟ್ಲದಲ್ಲಿ ಮಿಶ್ರ ಪ್ರತಿಕ್ರೀಯೆ ವ್ಯಕ್ತವಾಗಿದ್ದು, ಇತರ ದಿನಕ್ಕೆ ಹೋಲಿಸಿದರೆ  ಜನ ಮತ್ತು ವಾಹನ ಸಂಚಾರ ಕಡಿಮೆ ಇದೆ. ಆದರೆ ಗ್ರಾಮೀಣ ಭಾಗದ ಅಂಗಡಿಗಳೆಲ್ಲವೂ ತೆರೆದುಕೊಂಡಿದ್ದು ವಾರಾಂತ್ಯ ಕರ್ಫ್ಯೂವಿನ ಬಿಸಿ ತಟ್ಟಿದಂತೆ ಕಂಡು ಬರುತ್ತಿಲ್ಲ.

ವಿಟ್ಲ ಪೇಟೆಯಲ್ಲಿ ಬೆಳಿಗ್ಗೆ ನಿಂದಲೇ ಎಲ್ಲಾ ಅಂಗಡಿಗಳ ಮಾಲಕರು ಬಾಗಿಲು ತೆರೆದು ವ್ಯಾಪಾರ ಮಾಡುತ್ತಿದ್ದರು. 11 ಗಂಟೆ ಬಳಿಕ  ವಿಟ್ಲ ಪೊಲೀಸರು ಪೇಟೆಗೆ ಆಗಮಿಸಿ, ಅಗತ್ಯ ವಸ್ತುಗಳ ಅಂಗಡಿಗಳನ್ನು ಹೊರತುಪಡಿಸಿ, ಉಳಿದೆಲ್ಲ ಅಂಗಡಿಗಳನ್ನು ಬಂದ್ ಮಾಡಿಸಿದರು. ಬಸ್, ಕಾರು, ಆಟೋ ರಿಕ್ಷಾ ಮತ್ತು ಇನ್ನಿತರ ಖಾಸಗಿ ವಾಹನಗಳ ಸಂಚಾರ  ಅಲ್ಪ  ಕಡಿಮೆ ಇದೆ.ಅಗತ್ಯ ವಸ್ತುಗಳಾದ ತರಕಾರಿ, ಹಾಲು, ದಿನಸಿ, ಮೆಡಿಕಲ್ ವ್ಯಾಪಾರ ಮಾಡುತ್ತಿದ್ದು, ಹೆಚ್ಚಿನ ಜನರು ಆಗಮಿಸಿ ವಸ್ತುಗಳನ್ನು ಖರೀದಿಸುತ್ತಿರುವುದು.  ಪೊಲೀಸರು ಪೇಟೆಯಿಂದ ನಿರ್ಗಮಿಸಿದ ಬಳಿಕ ಕೆಲ ಬೆರಳೆಣಿಯಷ್ಟು ಅಂಗಡಿಗಳು ಅರ್ಧ ಬಾಗಿಲು ಹಾಕಿದ್ದು,  ಇನ್ನೂ ಕೆಲವರು ಸಂಪೂರ್ಣವಾಗಿ ಬಾಗಿಲು ತೆರೆದು ವ್ಯಾಪಾರ ಮಾಡುತ್ತಿರುವುದು ಕಂಡು ಬಂದಿದೆ. ಉಳಿದಂತೆ ಗ್ರಾಮೀಣ ಭಾಗದಲ್ಲಿ ವೀಕ್ ಎಂಡ್ ಕರ್ಪ್ಯೂ ಅಷ್ಟೊಂದು ಪರಿಣಾಮ ಬೀರಿದಂತೆ ಕಂಡುಬಂದಿಲ್ಲ. ಎಲ್ಲಾ ಅಂಗಡಿಗಳು ಭಾಗಿಲು ತೆರೆದು ವ್ಯವಹಾರ ನಡೆಸುತ್ತಿದ್ದು, ವಾಹನ ಸಂಚಾರವೂ ಎಂದಿನಂತೆ ಇದೆ.

LEAVE A REPLY

Please enter your comment!
Please enter your name here