ಸುಳ್ಯ ಗಣೇಶೋತ್ಸವದಲ್ಲಿ ರಂಜಿಸಿದ ವಿವೇಕಾನಂದ ವಿದ್ಯಾಸಂಸ್ಥೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ

0

 

ಸುಳ್ಯ ಚೆನ್ನಕೇಶವ ದೇವಸ್ಥಾನ ಆವರಣದಲ್ಲಿ ಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿ ಹಾಗೂ ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿ ಇವರ ಆಶ್ರಯದಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಆ.31 ರಂದು‌ ಸಂಜೆ ಸಭಾ ಕಾರ್ಯಕ್ರಮದ ಬಳಿಕ ಜಾಲ್ಸೂರು ವಿನೋಬಾನಗರ ವಿವೇಕಾನಂದ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೋಡುಗರ ‌ಮನ ರಂಜಿಸಿತು.

ಸಣ್ಣ ಮಕ್ಕಳಿಂದ ಶ್ಲೋಕ, ಗಣೇಶನ ಹಾಡಿಗೆ ನೃತ್ಯ, ದೇಶ ಭಕ್ತಿ ಗೀತೆಯ ನೃತ್ಯ, ಭರತನಾಟ್ಯ, ಕುಣಿತ ಭಜನೆ, ಹಾಡು, ಜಾನಪದ ನೃತ್ಯ, ಯಕ್ಷಗಾನ, ಯೋಗ ಹೀಗೆ ವಿವಿಧ ವಿನೋದಾವಳಿಗಳು ಮಕ್ಕಳಿಂದ ಮೂಡಿಬಂದವು.

 

 

LEAVE A REPLY

Please enter your comment!
Please enter your name here