ಸಂಪ್ಯ ಸಾದಾತ್‌ನಗರ ಮಖಾಂ ಉರೂಸ್ ಸಮಾರೋಪ ಸಮಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಭಾರತದಲ್ಲಿ ಪ್ರವಾದಿಯವರ ಅನುಯಾಯಿಗಳಿಗೆ ನೆರವು ನೀಡಿದವರು ಹಿಂದೂಗಳಾಗಿದ್ದರು: ಸಂಪ್ಯ ದಾರಿಮಿ

ಪುತ್ತೂರು; ಭಾರತದಲ್ಲಿ ಎಷ್ಟೊಂದು ಜಾತ್ಯಾತೀತತೆ ಅಥವಾ ಸೌಹಾರ್ಧತೆಯಿತ್ತು ಎಂಬುದಕ್ಕೆ ಪ್ರವಾದಿಯವರ ಅನುಯಾಯಿಗಳಿಗೆ ಭಾರತದಲ್ಲಿದ್ದ ಹಿಂದೂ ಬಂಧುಗಳು ನೀಡಿದ ಸ್ವಾಗತವೇ ಸಾಕ್ಷಿಯಾಗಿದೆ ಎಂದು ಸಂಪ್ಯ ಜುಮಾ ಮಸೀದಿ ಖತೀಬ್ ಅಬ್ದುಲ್‌ಹಮೀದ್ ದಾರಿಮಿ ಹೇಳಿದರು.

ಅವರು ಸಂಪ್ಯ ಸಾದಾತ್ ನಗರದಲ್ಲಿ ನಡೆದ ಸಂಪ್ಯ ಮಖಾಂ ಉರೂಸ್ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಭಾಷಣ ಮಾಡಿದರು.
ಸಂಪ್ಯ ಮುಹಿಯುದ್ದೀನ್ ಜುಮ ಮಸೀದಿ ಹಾಗೂ ಉರೂಸ್ ಕಮಿಟಿ ಅಧ್ಯಕ್ಷರಾದ ಎಸ್ ಅಬ್ದುಲ್ ಜಲೀಲ್ ಹಾಜಿ ಅಧ್ಯಕ್ಷತೆ ವಹಿಸಿದ್ದರು.

ಅರಬ್ ದೇಶದಿಂದ ೧೪ ಮಂದಿ ಪ್ರವಾದಿ ಅನುಯಾಯಿಗಳು ಹಡಗಿನ ಮೂಲಕ ಕೇರಳದ ಕೊಡುಂಗಲ್ಲೂರಿಗೆ ಬಂದಿಳಿದಾಗ ಅವರನ್ನು ಸ್ವಾಗತಿಸಿದ್ದು ಹಿಂದೂಗಳಾಗಿದ್ದರು.ಅದೇ ಹಿಂದೂ ಬಂಧುಗಳು ೧೪ ಮಂದಿ ಪ್ರವಾದಿ ಅನುಯಾಯಿಗಳಿಗೆ ಇಲ್ಲಿ ವಾಸ ಮಾಡಲು ವ್ಯವಸ್ಥೆ ಮಾಡಿದ್ದು ಮಾತ್ರವಲ್ಲದೆ ಕೊಡುಂಗಲ್ಲೂರಿನಲ್ಲಿ ದೇಶದ ಮೊದಲ ಮಸೀದಿ ನಿರ್ಮಾಣಕ್ಕೆ ನೆರವು ನೀಡಿದ್ದರು. ಪ್ರವಾದಿ ಅನುಯಾಯಿಗಳ ಗುಣನಡತೆಯನ್ನು ಕಂಡು ಮೂಕ ವಿಸ್ಮಿತರಾಗಿದ್ದ ಹಿಂದೂ ಬಂಧುಗಳು ಅವರಿಗೆ ನಮಾಜ್ ಮಾಡಲು ಬೇಕಾದ ವ್ಯವಸ್ಥೆಯನ್ನು ಮಾಡಿದ್ದರು . ಆರಂಭ ಕಾಲದಲ್ಲಿ ಭಾರತದಲ್ಲಿ ಎಷ್ಟೊಂದು ಸೌಹಾರ್ಧತೆ ಇತ್ತು ಎಂಬುದಕ್ಕೆ ಇದುವೇ ಸಾಕ್ಷಿಯಾಗಿದೆ. ಕೋಮುವಾದವನ್ನು ಇಸ್ಲಾಂ ಎಂದಿಗೂ ಸಹಿಸುವುದಿಲ್ಲ. ಯಾವುದೇ ಕಾರಣಕ್ಕೂ ಕೋಮುವಾದಕ್ಕೆ ಬಂಬಲ ನೀಡಬಾರದು. ಭಾರತದಲ್ಲಿ ಎಲ್ಲಾ ಧರ್ಮಿಯವರು, ಜಾತಿಯವರೂ ಒಂದೇ ತಾಯಿಯ ಮಕ್ಕಳಂತೆ ಬಾಳಿ ಬದುಕಬೇಕು ಅದು ನಮ್ಮ ಬಾರತವಾಗಲು ಎಲ್ಲರೂ ಶ್ರಮಿಸಬೇಕು ಎಂದು ಹೇಳಿದರು.

ಇಂದು ಇಸ್ಲಾಮಿನ ಹೆಸರಿನಲ್ಲಿ ಅನಾಚಾರಗಳು ನಡೆಯುತ್ತಿದೆ. ಮುಸ್ಲಿಂ ನಾಮದಾರಿಗಳು ಇಸ್ಲಾಮಿನ ಸಂಸ್ಕೃತಿಯನ್ನು ಹಾಳುಗೆಡವುತ್ತಿದ್ದಾರೆ. ಅಂದು ಭಾರತಕ್ಕೆ ಬಂದ ಪ್ರವಾದಿ ಅನುಯಾಯಿಗಳನ್ನು ಕಂಡು ಅವರಿಗೆ ಹಿಂದೂಗಳು ನೆರವು ನೀಡಲು ಅವರ ಸ್ವಭಾವವೇ ಕಾರಣವಾಗಿತ್ತು, ಆದರೆ ಇಂದು ನಮ್ಮ ಸ್ವಭಾವ ಹೇಗಿದೆ ಎಂಬುದನ್ನು ನಾವು ಪ್ರತೀಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು. ನಾವು ಮಾಡುವ ಪ್ರತೀಯೊಂದು ಕಾರ್ಯವನ್ನು ಅಲ್ಲಾಹನು ಕಾಣುತ್ತಾನೆ, ಪ್ರವಾದಿಯವರು ಕಾಣುತ್ತಾರೆ ಎಂಬ ಅರಿವು ನಮಗಿರಬೇಕು. ಅಲ್ಲಾಹನಿಗೆ ವಿರುದ್ದವಾಗಿ ನಾವು ದುಷ್ಕೃತ್ಯಗಳನ್ನು ಮಾಡಿದರೆ ಅದನ್ನೂ ಅಲ್ಲಾಹನು ಕಾಣುತ್ತಾನೆ ಎಂಬ ಅರಿವು ನಮ್ಮ ಮನಸ್ಸಿನಲ್ಲಿರಬೇಕು ಆಗ ಮಾತ್ರ ನಾವು ಅಜ್ಜನರಾಗಲು ಸಾಧ್ಯವಾಗುತ್ತದೆ. ನಾವು ಮಾಡುವ ತಪ್ಪುಗಳ ಬಗ್ಗೆ ನಮಗೆ ಪಾಪ ಪ್ರಜ್ಞೆ ಇರಬೇಕು. ಅಲ್ಲಾಹನು ಕರುಣಾಮಯಿಯಾಗಿದ್ದು ಉತ್ತಮ ಗುಣನಡತೆಯುಳ್ಳ ಅಲ್ಲಾಹನ ಇಷ್ಟದಾಸರಾಗಿ ನಾವು ಬಾಳಬೇಕು ಆಗ ಮಾತ್ರ ನಾವು ಉತ್ತಮರಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕೊರಗ ವೇಷ ಹಾಕಿದ್ದು ಖಂಡನೀಯ
ಸಾಲೆತ್ತೂರು ಸಮೀಪ ನಡೆದ ಮದುವೆ ಸಮಾರಂಭದಲ್ಲಿ ಮದುಮಗ ಹಿಂದೂಗಳು ಆರಾಧಿಸುವ ಕೊರಗಜ್ಜನ ವೇಷವನ್ನು ಹಾಕಿದ್ದು ಅಕ್ಷಮ್ಯ ಅಪರಾಧವಾಗಿದೆ, ಇದನ್ನು ಅಲ್ಲಾಹನು ಕ್ಷಮಿಸಲಾರ. ಇಸ್ಲಾಂ ಶರೀಅತ್ ಜಾರಿಯಲ್ಲಿರುವ ದೇಶದಲ್ಲಾಗಿದ್ದರೆ ಆತನಿಗೆ ಕೊಡುವ ಶಿಕ್ಷೆಯ ಪ್ರಮಾನವೇ ಬೇರೆಯಾಗುತ್ತಿತ್ತು. ಸಹೋದರ ಧರ್ಮಿಯರ ಆರಾಧನೆಯನ್ನು ವ್ಯಂಗ್ಯವಾಡುವುದು, ಅಪವಿತ್ರಗೊಳಿಸುವುದು ಇಸ್ಲಾಮಿನಲ್ಲಿ ನಿಷಿಧ್ದವಾಗಿದೆ. ಭಾರತದಲ್ಲಿ ಎಲ್ಲರಿಗೂ ಅವರವರ ಧರ್ಮಾನುಸಾರ ಬದುಕುವ ಹಕ್ಕನ್ನು ಸಂವಿಧಾನ ನೀಡಿದೆ. ಕೊರಗಜ್ಜನ ವೇಷ ಹಾಕಿದ ಮದುಮಗ ಹಾಗೂ ಅವನ ತಂಡದ ವಿರುದ್ದ ಕಟ್ಟುನಿಟ್ಟಿನ ಕಾನೂನುಕ್ರಮಕೈಗೊಳ್ಳಬೇಕಿದೆ. ಇಂಥಹ ಘಟನೆಗಳು ಇನ್ನು ಮರುಕಳಿಸಬಾರದು ಎಂದು ಅಬ್ದುಲ್ ಹಮೀದ್ ದಾರಿಮಿ ಹೇಳಿದರು.
ಕೋಝಿಕ್ಕೋಡು ಖಾಝಿ ಸಯ್ಯದ್ ಜಮಾಲುಲ್ಲೈಲಿ ತಂಙಳ್ ಸಾಮೂಹಿಕ ಪ್ರಾರ್ಥನೆಗೆ ನೇತೃತ್ವಹಿಸಿದರು. ಬಳಿಕ ಸಂದರ್ಭೋಚಿತವಾಗಿ ಮಾತನಾಡಿ ಅಲ್ಲಾಹನು ಗೌರವಿಸುವ ವ್ಯಕ್ತಿ, ಸ್ಥಗಳನ್ನು ಗೌರವಿಸುವುದು ನಮ್ಮ ಕರ್ತವ್ಯವಾಗಿದೆ. ಅಲ್ಲಾಹನು ನಮ್ಮ ಪುಣ್ಯ ಕರ್ಮಗಳನ್ನು ಸ್ವೀಕರಿಸಬೇಕಾದರೆ ನಮ್ಮ ಹೃದಯ ಶುದ್ದಿಬೇಕಿದೆ. ಕಲ್ಮಶ ಹೃದಯ, ಚಂಚಲತೆಯುಳ್ಳ ಹೃದಯಿಗಳ ಪ್ರಾರ್ಥನೆಯನ್ನು ಅಲ್ಲಾಹನು ಸ್ವೀಕರಿಸಲಾರ. ದ್ವೇಷ ಅಸೂಯೆ, ವಂಚನೆಗಳಿಂದ ನಾವು ದೂರವಿರಬೇಕು ಎಂದು ಹೇಳಿದರು.

ಕಾನೂನಿಗೆ ಗೌರವನೀಡಿ ಎರಡು ದಿನದ ಕಾರ್ಯಕ್ರಮ ರದ್ದು: ಜಲೀಲ್ ಹಾಜಿ
ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಉರೂಸಿನ ಎರಡು ದಿನದ ಕಾರ್ಯವನ್ನು ಮೊಠಕುಗೊಳಿಸಿ ಶುಕ್ರವಾರದಂದು ಉರೂಸ್ ಸಮಾರೋಪ ನಡೆಸಲಾಗಿದೆ. ಕಾನೂನಿಗೆ ಗೌರವ ಕೊಟ್ಟು ನಾವು ಎರಡುದಿನದ ಕಾರ್ಯಕ್ರಮ ರದ್ದು ಮಾಡಿದ್ದೇವೆ. ಉರೂಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಕೃತಜ್ಞತೆ ಅಲ್ಲಿಸುವುದಾಗಿ ಸಂಪ್ಯ ಮಸೀದಿ ಹಾಗೂ ಉರೂಸ್ ಕಮಿಟಿ ಅಧ್ಯಕ್ಷ ಅಬ್ದುಲ್ ಜಲೀಲ್ ಹಾಜಿ ಹೇಳಿದರು.

ವೇದಿಕೆಯಲ್ಲಿ ಅಝೀಝ್ ಮುಸ್ಲಿಯಾರ್ ಮಾಡಾವು, ಪರ್ಪುಂಜ ಮಸೀದಿ ಮಾಜಿ ಅಧ್ಯಕ್ಷ ಶರೀಫ್ ಹಾಜಿ, ಎಲ್ ಟಿ ಹಸೈನಾರ್ ಹಾಜಿ, ಇಬ್ರಾಹಿಂ ಹಾಜಿ ಸುಳ್ಯ, ಹನೀಫ್ ಮಾಡಾವು, ಝಕರಿಯ್ಯಾ ಮಾಂತೂರು, ಟಿ ಕೆ ಇಸ್ಮಾಯಿಲ್ ತಿಂಗಳಾಡಿ, ತಂಬುತ್ತಡ್ಕ ಮಸೀದಿ ಅಧ್ಯಕ್ಷ ರಫೀಕ್ ಹಾಜಿ, ಹನೀಫ್ ಕಡಬ, ರಝಾಕ್ ಚೆನೈ, ಶಾಫಿಕುಂಬ್ರ, ಸಂಪ್ಯ ಆರ್‌ಡಿಸಿ ಅಧ್ಯಕ್ಷ ಇಬ್ರಾಹಿಂ ಕಲ್ಲರ್ಪೆ ಉಪಸ್ಥಿತರಿದ್ದರು.

ಸಂಜೆ ನಡೆದ ಸೌಹಾರ್ಧ ಕೂಟದಲ್ಲಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಆರ್ಯಾಪು ಗ್ರಾಪಂ ಸದಸ್ಯ ನೇಮಾಕ್ಷ ಸುವರ್ಣ, ಸದಾನಂದ ಶೆಟ್ಟಿ ಕೂರೇಲು, ಅಶ್ರಫ್ ಹಾಜಿ ಕಮ್ಮಾಡಿ, ರವಿ ಸಂಪ್ಯ ಮೊದಲಾದವರು ಉಪಸ್ತಿತರಿದ್ದರು.

ಕಾರ್ಯಕ್ರಮದಲ್ಲಿ ಸಂಟ್ಯಾರ್ ಜುಮಾ ಮಸೀದಿ ಖತೀಬ್ ಅಶ್ರಫ್ ದಾರಿಮಿ ಸಂದರ್ಭೋಚಿತವಾಗಿ ಮಾತನಾಡಿದರು. ಸಂಪ್ಯ ಸದರ್ ಮುಅಲ್ಲಿಂ ಶರೀಫ್ ದಾರಿಮಿ, ಮಹಝ್ಜಿನ್ ಮುಸ್ತಫಾ ಫೈಝಿ, ಅಝೀಝ್ ಇಂದ್ರಾಜೆ, ಹಮೀದ್ ದಾರಿಮಿ ಸಂಪ್ಯ ಜಮಾತ್ ಕಮಿಟಿ ಉಪಾಧ್ಯಕ್ಷ ಹಮೀದಾಲೀಸ್ ಸಂಠ್ಯಾರ್, ಅಬೂಬಕ್ಕರ್ ಎಸ್, ಕಾರ್ಯದರ್ಶಿ ಇಸ್ಮಾಯಿಲ್ ಬೈಲಾಡಿ, ಕೋಶಾಧಿಕಾರಿ ಇಡಬೆಟ್ಟು ಇಬ್ರಾಹಿಂ ಹಾಜಿ, ಜೊತೆ ಕಾರ್ಯದರ್ಶಿ ಅಬ್ದುಲ್ ರಝಾಕ್, ಹುಸೈನ್ ದರ್ಬೆ, ಆದಂ ಹಾಜಿ ಸಂಪ್ಯ, ಬಾವುಂಞಿ ಕಲ್ಲರ್ಪೆ, ಅಬ್ದುಲ್ ಅಝೀಝ್ ಸಂಪ್ಯ, ಇಬ್ರಾಹಿಂ ಅಮ್ಮುಂಜ, ಫಾರೂಕ್ ಸಂಟ್ಯಾರ್, ರಫೀಕ್ ದರ್ಬೆ, ಎಸ್ ಪಿ ಖಾದರ್, ಹಸೈನಾರ್ ಸಂಪ್ಯ , ದಾವೂದ್ ಸಂಪ್ಯ, ಇಬ್ರಾಹಿಂ ಟಿಂಬರ್ ಸಂಪ್ಯ, ಹನೀಫ್ ಎಸ್ ಪಿ, ಅಬ್ದುಲ್ ಖಾದರ್ ಮೋನು, ಝಕರಿಯ್ಯಾ ದರ್ಬೆ, ನಾಸಿರ್ ಅಮ್ಮುಂಜ, ಫಾರೂಕ್ ಅಮ್ಮುಂಜ, ಇಬ್ರಾಹಿಂ ಬೊಳ್ಳಾನ, ರಝಾಕ್ ಮೇಸ್ತ್ರಿ, ಇಬ್ರಾಹಿಂ ವಾಗ್ಲೆ, ಬಶೀರ್‌ವಾಗ್ಲೆ, ಸಂಪ್ಯ ಅಬ್ಬಾಸ್, ರಫೀಕ್ ಸಂಪ್ಯ, ನಾಸಿರ್ ಬಹರೈನ್, ರಫೀಕ್ ಐಕಾನ್, ಇಮ್ರಾನ್ ಸಂಪ್ಯ, ಶರೀಫ್ ವಾಗ್ಲೆ, ಇಸಾಕ್ ಸಂಪ್ಯ, ಹನೀಫ್ ಸಂಪ್ಯ, ಅಧ್ಯಕ್ಷ ಹಬೀಬ್ ಕೆಂಪಿ, ಕಾರ್ಯದರ್ಶಿ ಮುನೀರ್ ಸಂಪ್ಯ, ಕೋಶಾಧಿಕಾರಿ ಫಾರೂಕ್ ಸ್ಮಾಶ್, ನಿಸಾರ್ ಖಲೀಜ್, ಶಿಹಾಬ್ ಸಂಪ್ಯ, ಫಾರೂಕ್ ಎಸ್ ಪಿ, ಆರಿಫ್ ಸಂಪ್ಯ, ಮುಸ್ತಫಾ ನೆಕ್ಕರೆ, ಸಿರಾಜ್ ಫ್ಯಾನ್ಸಿಪಾರ್ಕ್, ಆಚಿ ಸಂಪ್ಯ, ಜಾಬಿರ್ ಸಂಪ್ಯ, ಶರೀಫ್ ಕಿಂಗ್ಸ್, ಇಚ್ಚು ಸಂಪ್ಯ,ಜಬ್ಬಾರ್ ಸಂಪ್ಯ, ಇಸ್ಮಾಯಿಲ್ ವಾಗ್ಲೆ,ಕೈಸರ್ ಸಂಪ್ಯ, ಜಲೀಲ್ ಸಂಪ್ಯ, ಮಸೂದ್ ದರ್ಬೆ, ಅಬ್ದುಲ್ರಹಿಮಾನ್ ಪುತ್ತು, ರಿಫಾಯಿ ದಫ್ ಕಮಿಟಿ ಸಂಪ್ಯ ಇದರ ಅಧ್ಯಕ್ಷ ಅಬೂಬಕ್ಕರ್ ಕಲ್ಲರ್ಪೆ, ಕಾರ್ಯದರ್ಶಿ ಅಝೀಝ್ ಸಂಪ್ಯ, ಅಝರ್ ಸಂಪ್ಯ, ಅಶ್ರಫ್ ಕ್ವಾಲಿಸ್, ಅಬೂಬಕ್ಕರ್ ಎಸ್ ಪಿ, ಝಕರಿಯಾ, ಇಸ್ಮಾಯಿಲ್ ಡಿಂಬ್ರಿ, ಆರಿಫ್ ಸಂಪ್ಯ, ಹಕೀಂ ಸಂಪ್ಯ, ಮಹಮ್ಮದ್ ಕೆ ಪಿ, ಶಾಫಿ ಸಂಪ್ಯ, ಇಮ್ರಾನ್ ಸಂಪ್ಯ, ರಝಾಕ್ ಮದೀನಾ, ಹನೀಫ್ ಮುಂಡೂರು, ಹಮೀದ್ ಸಂಪ್ಯ, ಹನೀಫ್ ದುಬೈ, ಖಲಂದರ್ ಸಂಪ್ಯ, ಫಾರೂಕ್ ಸಂಪ್ಯ, ಅಝೀಝ್ ಕಲ್ಲರ್ಪೆ, ಅನ್ಸೀಫ್ ಸಂಪ್ಯ, ಸಫ್ರಾನ್ ಸಂಪ್ಯ, ಬಾತಿಷ್ ಸಂಪ್ಯ, ಉಬೈದ್ ಸಂಪ್ಯ, ರಮೀಝ್ ಸಂಪ್ಯ, ನಿಹಾಲ್ ಸಂಪ್ಯ, ನೌಫಲ್ ಅರಮನೆ, ರಫೀಕ್ ಉದಯಗಿರಿ, ಬಶೀರ್ ಪಿ ಎಂ , ಸಲಾಂ ಎಸ್ ಪಿ, ಮರಝೂಕ್, ನಿಸಾರ್ ಸಂಪ್ಯ , ರಫೀಕ್ ಆರ್ಯಾಪು , ಅರ್ಷದ್ ವಾಗ್ಲೆ, ರಫೀಕ್ ಉದಯಗಿರಿ , ಉಬೈದ್ ಉದಯಗಿರಿ ಮತ್ತಿತರರು ಉಪಸ್ಥಿತರಿದ್ದರು. ರಿಫಾಯಿಯ್ಯ ದಫ್ ಸಂಘದಿಂದ ಆಕರ್ಷಕ ದಫ್ ಪ್ರದರ್ಶನ ನಡೆಯಿತು.

೧೦೦೦೦ ಮಂದಿಗೆ ಅನ್ನದಾನ
ಉರೂಸ್ ಸಮಾರೋಪ ಸಮಾರಂಭದಲ್ಲಿ ೧೦ ಸಾವಿರ ಮಂದಿ ಅನ್ನದಾನದಲ್ಲಿ ಭಾಗವಹಿಸಿದರು. ಉರೂಸ್ ಪ್ರಯುಕ್ತ ಸಂಪ್ಯ ಯುವಕರು ಲೈವ್ ಜ್ಯೂಸಿನ ವ್ಯವಸ್ಥೆಯನ್ನು ಮಾಡಿದ್ದರು. ಸುಮಾರು ೮ ಸಾವಿರ ಮಂದಿಗೆ ಉಚಿತ ಜ್ಯೂಸ್ ವಿತರಿಸಲಾಯಿತು. ೬ ಬಗೆಯ ವಿವಿಧ ಹಣ್ಣುಗಳ ಜ್ಯೂಸ್ ಮಾಡಲಾಗಿತ್ತು.
ಚಿತ್ರ ಸಂಪ್ಯ ಜ್ಯೂಸ್ ; ಲೈವ್ ಜ್ಯೂಸ್ ವಿತರಣೆಯನ್ನು ಸಂಪ್ಯ ಜಲೀಲ್ ಹಾಜಿ ಉದ್ಘಾಟಿಸಿದರು.

ಕೋಝಿಕ್ಕೋಡು ಖಾಝಿ ಸಯ್ಯದ್ ಜಮಾಲುಲ್ಲೈಲಿ ತಂಙಳ್‌ರವರಿಗೆ ಸಂಪ್ಯ ಎಸ್ಕೆ ಎಸ್ಸೆಸ್ಸೆಫ್ ಘಟಕದ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.