ಗಂಡಿಬಾಗಿಲು ಶಾಲಾ ಮುಖ್ಯ ಶಿಕ್ಷಕ ಶೇಖರ್ ಅತ್ನಿ, ಸಹ ಶಿಕ್ಷಕಿ ನಾಗರತ್ನ, ಅಡುಗೆ ಸಹಾಯಕಿ ಮರಿಯಮ್ಮರಿಗೆ ಬೀಳ್ಕೊಡುಗೆ ಸಮಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಗಂಡಿಬಾಗಿಲು ಸರ್ಕಾರಿ ದ.ಕ.ಜಿ.ಪ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರೂವರೆ ವರ್ಷಗಳ ಕಾಲ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ಬಂಟ್ರ-ಮರ್ಧಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿ ವರ್ಗಾವಣೆ ಹೊಂದಿರುವ ಶೇಖರ್ ಅತ್ನಿ, 2ವರ್ಷ ಕಾಲ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಮಂಗಳೂರು ಕಾಪಿಕಾಡು ಸರ್ಕಾರಿ ದ.ಕ.ಜಿ.ಪ. ಶಾಲೆಗೆ ವರ್ಗಾವಣೆ ಹೊಂದಿರುವ ನಾಗರತ್ನ ಹಾಗೂ ಸುಮಾರು 18 ವರ್ಷಗಳ ಕಾಲ ಅಕ್ಷರ ದಾಸೋಹ ಅಡುಗೆ ಸಹಾಯಕಿಯಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದುಕೊಂಡಿರುವ ಮರಿಯಮ್ಮ ಇವರುಗಳ ಬೀಳ್ಕೊಡುಗೆ ಸಮಾರಂಭ ಜ. 7ರಂದು ಜರಗಿತು.

ಗಂಡಿಬಾಗಿಲು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಬಾಬು ಅಗರಿ ಅಧ್ಯಕ್ಷತೆ ವಹಿಸಿ ಮಾತನಾಡಿ ವರ್ಗಾವಣೆಯೊಂದಿರುವ ಮುಖ್ಯ ಶಿಕ್ಷಕರನ್ನು ಒಳಗೊಂಡಂತೆ ಶಾಲೆಯಲ್ಲಿರುವ ಎಲ್ಲಾ ಶಿಕ್ಷಕರು ಸೇವಾಮನೋಭಾವದಿಂದ ಕೆಲಸ ಮಾಡುತ್ತಿದ್ದುದರಿಂದಾಗಿ ಶಾಲೆಯಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸ ಸಾಧ್ಯವಾಗಿದ್ದು, ಇಲ್ಲಿಂದ ವರ್ಗಾವಣೆ ಹೊಂದಿ ತೆರಳುವ ಶಿಕ್ಷಕರು ತಮ್ಮ ಜೀವನದಲ್ಲಿ ಇನ್ನಷ್ಟು ಸಾಧಿಸುವಂತಾಗಲಿ ಎಂದು ಹಾರೈಸಿದರು.

ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ, ಪತ್ರಕರ್ತ ಸಿದ್ದಿಕ್ ನೀರಾಜೆ ಮಾತನಾಡಿ ಮುಖ್ಯ ಶಿಕ್ಷಕ ಶೇಖರ್ ಅತ್ನಿಯವರು ಇಲ್ಲಿ ಕೇವಲ ಮುಖ್ಯ ಶಿಕ್ಷಕರಾಗಿ ಕೆಲಸ ಮಾಡುತ್ತಿರಲಿಲ್ಲ, ಬದಲಾಗಿ ಇಲ್ಲಿ ಯಾವುದೋ ಸಂದರ್ಭದಲ್ಲಿ ಶಾಲೆಯ ಸುತ್ತಮುತ್ತ ಏನೇ ಕೆಲಸ ಆಗಬೇಕಿದ್ದರೂ ಕೆಲಸಗಾರರನ್ನು ನೇಮಿಸಿಕೊಳ್ಳುತ್ತಿರಲಿಲ್ಲ, ತಾವಾಗಿಯೇ ಮಾಡುತ್ತಿದ್ದರು. ಮತ್ತು ವಿದ್ಯಾರ್ಥಿಗಳಲ್ಲೂ ಆತ್ಯಂತ ಪ್ರೀತಿ ತೋರುತ್ತಾ ಅವರನ್ನೂ ಕೌಶಲ್ಯ ತರಬೇತಿ ರೀತಿಯಲ್ಲಿ ಅವರನ್ನು ಬಳಸಿಕೊಳ್ಳುತ್ತಿದ್ದರು, ಹೀಗಾಗಿಯೂ ವಿದ್ಯಾರ್ಥಿಗಳು ಮತ್ತು ಪೋಷಕರಿಂದಲೂ ಇವರ ವಿಶೇಷ ಗುಣವನ್ನು ಗುರುತಿಸಿಕೊಂಡು ಪ್ರಶಂಸೆಗೆ ಪಾತ್ರರಾಗಿದ್ದರು ಎಂದು ಹೇಳಿದರು.

ಸಮೂಹ ಸಂಪನ್ಮೂಲ ವ್ಯಕ್ತಿ ಮಹೇಶ್ ಮಾತನಾಡಿ ಸರ್ಕಾರಿ ಕೆಲಸ ಅಂದ ಮೇಲೆ ವರ್ಗಾವಣೆ, ನಿವೃತ್ತಿ ಇರುವಂತದ್ದೆ, ಆದರೆ ಅವರು ಇರುವಷ್ಟು ಕಾಲ ಏನಾದರೂ ಛಾಪು ಮೂಡಿಸುವ ಕೆಲಸ ಮಾಡಿದರೆ ಊರವರು ಮೆಚ್ಚಿಕೊಳ್ಳುತ್ತಾರೆ, ಆ ಮೂಲಕ ಪರಸ್ಪರ ಸಹಕಾರದಿಂದ ಶಾಲೆ ಅಭಿವೃದ್ಧಿಯೂ ಆಗುವುದರಲ್ಲಿ ಯಾವುದೇ ಸಂದೇಹ ಇಲ್ಲ ಎಂದರು. ಬೀಳ್ಕೊಡುಗೆ ಗೌರವ ಸ್ವೀಕರಿಸಿದ ಶೇಖರ್ ಅತ್ನಿ, ನಾಗರತ್ನರವರು ಮಾತನಾಡಿ ನಾವು ಏನನ್ನಾದರೂ ಮಾಡಿದ್ದರೆ ಅದು ಪೋಷಕರ ಸಹಕಾರದಿಂದ ಆಗಿರುವಂತದ್ದು, ಸೇವಾ ಅವಧಿಯಲ್ಲಿ ಸಹಕರಿಸಿದ ವಿದ್ಯಾರ್ಥಿ ಪೋಷಕರು, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು, ಶಿಕ್ಷಕ ವೃಂದದವರಿಗೆ ಅಭಾರಿ ಆಗಿರುವುದಾಗಿ ತಿಳಿಸಿದರು.

ಶಾಲೆಗೆ ಕೊಡುಗೆ:
ಬೀಳ್ಕೊಡುಗೆ ಸ್ವೀಕರಿಸಿದ ಶೇಖರ್ ಅತ್ನಿಯವರು ಶಾಲೆಗೆ ಫ್ಯಾನ್ ಮತ್ತು ನಾಗರತ್ನರವರು ಗಂಟೆ ಮತ್ತು ಕೊಡುಗೆಯಾಗಿ ನೀಡಿದರು. ಹಾಗೂ ಶೇಖರ್ ಅತ್ನಿಯವರು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಮಾಜಿ ಅಧ್ಯಕ್ಷರು, ಶಾಲಾ ಶಿಕ್ಷಕ ವೃಂದ, ಅಂಗನವಾಡಿ ಕಾರ್‍ಯಕರ್ತೆ, ಅಕ್ಷರ ದಾಸೋಹ ಅಡುಗೆಯವರನ್ನು ಶಾಲು ಹಾಕಿ ಅಭಿನಂದಿಸಿ, ಕೃತಜ್ಞತೆ ಸಲ್ಲಿಸಿದರು.

ಕಾರ್‍ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಸ್ವಪ್ನ ಸದಸ್ಯರಾದ ಮಹಮ್ಮದ್ ಇಸ್ಮಾಯಿಲ್, ಜಿ. ಅಬ್ದುಲ್ ರಜಾಕ್, ಪೆರ್ನು, ಅಬ್ದುಲ್ ಹಮೀದ್, ಹಬೀಬ, ನಸೀಮ ಹನೀಫ್, ಸಾಜಿದಾ, ಸುಶೀಲ, ನಸೀಮಾ, ಭಗವತಿ, ಪಿ. ಮಹಮ್ಮದ್, ಅಂಗನವಾಡಿ ಕಾರ್‍ಯಕರ್ತೆ ಮೋಹಿನಿ, ಅಕ್ಷರ ದಾಸೋಹ ಸಿಬ್ಬಂದಿಗಳಾದ ರುಖ್ಯ, ಸುಶೀಲ, ಸ್ಥಳೀಯರಾದ ಹನೀಫ್ ಎಸ್. ಮತ್ತಿತರರು ಉಪಸ್ಥಿತರಿದ್ದರು.

ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಪೂರ್ಣಿಮಾ ಸ್ವಾಗತಿಸಿ, ಸಹ ಶಿಕ್ಷಕಿ ಚಿತ್ರಾವತಿ ವಂದಿಸಿದರು. ರಂಶೀನಾ, ರೇಖಾ, ಸುಮಿತ್ರಾ ವಿವಿಧ ಕಾರ್‍ಯಕ್ರಮ ನಿರ್ವಹಿಸಿದರು. ಸಹ ಶಿಕ್ಷಕಿ ಪ್ರೇಮಲತಾ, ಸಿದ್ಧಲಿಂಗ ಸ್ವಾಮಿ ಕಾರ್‍ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.